ಸಂಪುಟ

ಗ್ರಾಮೀಣ ಭಾರತದ ಚಾರಿತ್ರಿಕ ಉತ್ತೇಜನಕ್ಕೆ ಪ್ರಧಾನ ಮಂತ್ರಿ ನೇತೃತ್ವದಲ್ಲಿ ಸಂಪುಟ ಸಭೆ

Posted On: 03 JUN 2020 5:04PM by PIB Bengaluru

ಗ್ರಾಮೀಣ ಭಾರತ ಚಾರಿತ್ರಿಕ ಉತ್ತೇಜನಕ್ಕೆ ಪ್ರಧಾನ ಮಂತ್ರಿ ನೇತೃತ್ವದಲ್ಲಿ ಸಂಪುಟ ಸಭೆ

ರೈತರ ಹಿತ ಮತ್ತು ಕೃಷಿ ವಲಯ ಪರಿವರ್ತನೆಗಳ ಬಗ್ಗೆ  ಪ್ರಮುಖ ನಿರ್ಧಾರಗಳು

ಅವಶ್ಯಕ ವಸ್ತುಗಳ ಕಾಯ್ದೆ ತಿದ್ದುಪಡಿ ಮೂಲಕ ನಿಯಂತ್ರಕ ವ್ಯವಸ್ಥೆಯಿಂದ ರೈತರಿಗೆ ಮುಕ್ತಿ

ಅಡೆ ತಡೆ ರಹಿತ ಅಂತರ ರಾಜ್ಯ ಮತ್ತು ರಾಜ್ಯದೊಳಗೆ ಕೃಷಿ ಉತ್ಪನ್ನಗಳ ವ್ಯಾಪಾರ ಉತ್ತೇಜನ ಅನುಮೋದಿಸಲು ಸುಗ್ರೀವಾಜ್ಞೆ

ಸಂಸ್ಕರಣಗಾರರುಸಂಗ್ರಹಕಾರರುಸಗಟುಚಿಲ್ಲರೆ ವ್ಯಾಪಾರಸ್ಥರುರಫ್ತುದಾರರ ಜೊತೆ ಪಾಲುದಾರಿಕೆಗೆ ರೈತರ ಸಶಕ್ತೀಕರಣ

 

ಅವಶ್ಯಕ ಸಾಮಗ್ರಿಗಳ ಕಾಯ್ದೆಗೆ ಚಾರಿತ್ರಿಕ ತಿದ್ದುಪಡಿ

ಅವಶ್ಯಕ ಸಾಮಗ್ರಿಗಳ ಕಾಯ್ದೆಯ ಚಾರಿತ್ರಿಕ  ತಿದ್ದುಪಡಿಗೆ ಸಂಪುಟವಿಂದು ಅನುಮೋದನೆ ನೀಡಿತುಕೃಷಿಯಲ್ಲಿ ಪರಿವರ್ತನೆ ತರುವ  ಮತ್ತು ರೈತರ ಆದಾಯ ಹೆಚ್ಚಿಸುವ ಮುಂಗಾಣ್ಕೆಯ ಕ್ರಮ ಇದಾಗಿದೆ.

ಹಿನ್ನೆಲೆ:

ಭಾರತವು ಬಹುತೇಕ ಕೃಷಿ ಉತ್ಪನ್ನಗಳಲ್ಲಿ ಹೆಚ್ಚುವರಿ ಉತ್ಪಾದನೆಯನ್ನು ಸಾಧಿಸಿದ್ದರೂ ರೈತರಿಗೆ  ಶೀತಲೀಕೃತ  ದಾಸ್ತಾನುಸಂಸ್ಕರಣೆ ಮತ್ತು ರಫ್ತಿಗೆ ಸಂಬಂಧಿಸಿ  ಅವಶ್ಯಕ ಸಾಮಗ್ರಿಗಳ ಕಾಯ್ದೆಯ ತೂಗುಗತ್ತಿ ತಲೆಯ ಮೇಲೆ ನೇಲುತ್ತಿರುವ ಕಾರಣದಿಂದಾಗಿ ಉದ್ಯಮಶೀಲತ್ವದ ಸ್ಪೂರ್ತಿ ಇಲ್ಲದ ಕಾರಣಕ್ಕಾಗಿ,  ಅವರಿಗೆ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯುತ್ತಿಲ್ಲಶೀಘ್ರವೇ ಹಾಳಾಗುವ ಕೃಷಿ ಉತ್ಪನ್ನಗಳ ಬಂಪರ್ ಬೆಳೆ ಬಂದಾಗ ರೈತರು ಭಾರೀ ನಷ್ಟ ಅನುಭವಿಸುತ್ತಾರೆಸಾಕಷ್ಟು ಸಂಸ್ಕರಣಾ ಸವಲತ್ತುಗಳು ಲಭ್ಯ ಇದ್ದರೆ ಇದರಲ್ಲಿ ಬಹು ಪಾಲು ನಷ್ಟವಾಗುವುದನ್ನು ಹಾಳಾಗುವುದನ್ನು ತಡೆಯಬಹುದು.

ಲಾಭಗಳು:

 

ಅವಶ್ಯಕ ಸಾಮಗ್ರಿಗಳ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮೂಲಕ ಧಾನ್ಯಗಳುಬೇಳೆ ಕಾಳುಗಳುತೈಲ ಬೀಜಗಳುಖಾದ್ಯ ತೈಲಗಳುನೀರುಳ್ಳಿ ಮತ್ತು ಬಟಾಟೆಗಳನ್ನು ಅವಶ್ಯಕ ಸಾಮಗ್ರಿಗಳ ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆಇದು ಖಾಸಗಿ ಹೂಡಿಕೆದಾರರಿಗೆ ಹೆಚ್ಚಿನ ನಿಯಂತ್ರಣ ಮಧ್ಯಪ್ರವೇಶವನ್ನು ನಿವಾರಣೆ ಮಾಡುತ್ತದೆ.

ಉತ್ಪಾದಿಸುವಅದನ್ನು ಹೊಂದುವ ಅದನ್ನು ಸಾಗಿಸುವವಿತರಿಸುವ ಮತ್ತು ಪೂರೈಸುವ ಸ್ವಾತಂತ್ರ್ಯವು ಮಾರಾಟದ ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಮತ್ತು ಕೃಷಿ ವಲಯಕ್ಕೆ ಖಾಸಗಿ ವಲಯದ ವಿದೇಶೀ ನೇರ ಹೂಡಿಕೆಯನ್ನು ಆಕರ್ಷಿಸುತದೆಇದು ಶೀತಲೀಕರಣ ದಾಸ್ತಾನುಗಾರಗಳು ಮತ್ತು ಆಹಾರ ಪೂರೈಕೆ ಸರಪಳಿಯ ಆಧುನೀಕರಣದಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ

ಬಳಕೆದಾರರ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ.

ಸರಕಾರವು ನಿಯಂತ್ರಣ ಪರಿಸರವನ್ನು ಉದಾರೀಕರಣ ಮಾಡುವಾಗ ಬಳಕೆದಾರರ ಹಿತಾಸಕ್ತಿಗಳನ್ನು ಕೂಡಾ ರಕ್ಷಿಸಲ್ಪಡುವಂತೆ ಖಾತ್ರಿಪಡಿಸಿದೆತಿದ್ದುಪಡಿಯಲ್ಲಿ ಯುದ್ದಬರಗಾಲಅಸಾಮಾನ್ಯ ದರ ಏರಿಕೆ ಮತ್ತು ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಕೃಷಿ ಆಹಾರ ಧಾನ್ಯಗಳನ್ನು ನಿಯಂತ್ರಿಸಬಹುದುಆದಾಗ್ಯೂ ಮೌಲ್ಯ ಸರಪಳಿ ಭಾಗೀದಾರರ ಸ್ಥಾಪಿತ ಸಾಮರ್ಥ್ಯ ಮತ್ತು ರಫ್ತುದಾರನ ರಫ್ತು ಬೇಡಿಕೆಗಳಿಗೆ  ಇಂತಹ ದಾಸ್ತಾನು ಮಿತಿ ಹೇರಿಕೆಯಿಂದ ಕೃಷಿ ಕ್ಷೇತ್ರದ ಹೂಡಿಕೆಗಳಿಗೆ ನಿರುತ್ಸಾಹದ ವಾತಾವರಣ ಉಂಟಾಗಬಾರದು  ಎಂಬ ಕಾರಣಕ್ಕಾಗಿ ವಿನಾಯಿತಿ ನೀಡಲಾಗಿದೆ.

ಘೋಷಿಸಲಾದ ತಿದ್ದುಪಡಿಯು ರೈತರಿಗೆ ಮತ್ತು ಬಳಕೆದಾರರಿಗೆ ಬೆಲೆ ಸ್ಥಿರತೆಯನ್ನು ತರುವ ಮೂಲಕ ಸಹಾಯ ಮಾಡಲಿದೆಇದು ಕೃಷಿ-ಉತ್ಪನ್ನಗಳು ದಾಸ್ತಾನು ಸೌಲಭ್ಯಗಳ ಕೊರತೆಯಿಂದ ಹಾಳಾಗುವುದನ್ನು ತಡೆಯುತ್ತದೆ

ಕೃಷಿ ಉತ್ಪನ್ನಗಳ ಗಡಿ ರಹಿತ ವ್ಯಾಪಾರ.

ಸಂಪುಟವು “ ಕೃಷಿ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸವಲತ್ತುಗಳ ಸುಗ್ರೀವಾಜ್ಞೆ ,2020 ಕ್ಕೆ ಅನುಮೋದನೆ ನೀಡಿದೆ.

ಹಿನ್ನೆಲೆ:

ರೈತರು  ಇಂದು ತಮ್ಮ ಉತ್ಪಾದನೆಗಳನ್ನು ಮಾರಾಟ ಮಾಡುವಲ್ಲಿ ವಿವಿಧ ನಿರ್ಬಂಧಗಳನ್ನು ಎದುರಿಸುತ್ತಿದ್ದಾರೆಅಧಿಸೂಚಿತ .ಪಿ.ಎಂ.ಸಿಮಾರುಕಟ್ಟೆ ಪ್ರಾಂಗಣಗಳ ಹೊರಗೆ ರೈತರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೆ ನಿರ್ಬಂಧಗಳಿವೆಮಾತ್ರವಲ್ಲ ರೈತರು ರಾಜ್ಯ ಸರಕಾರಗಳ ನೊಂದಾಯಿತ ಪರವಾನಗಿ ಹೊಂದಿರುವವರಿಗೆ ಮಾತ್ರವೇ ಉತ್ಪನ್ನಗಳನ್ನು ಮಾರಾಟ ಮಾಡಬೇಕಾಗಿರುತ್ತದೆಜೊತೆಗೆ ರಾಜ್ಯಗಳು ಜಾರಿಗೆ ತಂದಿರುವ ವಿವಿಧ .ಪಿ.ಎಂ.ಸಿಕಾಯ್ದೆಗಳ ಅನ್ವಯ ವಿವಿಧ ರಾಜ್ಯಗಳಿಗೆ ಕೃಷಿ ಉತ್ಪನ್ನಗಳ ಮುಕ್ತ ಸಾಗಾಟಕ್ಕೆ ಅಡೆ ತಡೆಗಳಿವೆ.

ಪ್ರಯೋಜನಗಳು

 ಸುಗ್ರೀವಾಜ್ಞೆಯು ರೈತರಿಗೆ ಮತ್ತು ವರ್ತಕರಿಗೆ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿಯಲ್ಲಿ ಆಯ್ಕೆಯ ಸ್ವಾತಂತ್ರ್ಯವನ್ನು ಒದಗಿಸಿಕೊಡುತ್ತದೆಇದು ಗಡಿಯ ಅಡೆತಡೆರಹಿತ ಅಂತಾರಾಜ್ಯ ಮತ್ತು ರಾಜ್ಯದೊಳಗೆ ವ್ಯಾಪಾರ ಮತ್ತು ವಾಣಿಜ್ಯಕ್ಕೆ ಉತ್ತೇಜನ ನೀಡುತ್ತದೆರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಶಾಸನಗಳಡಿ ಅಧಿಸೂಚಿಸಲಾದ ಭೌತಿಕ ಮಾರುಕಟ್ಟೆಯ ಹೊರಗೂ ಮಾರುಕಟ್ಟೆ ಅವಕಾಶ ರೈತರಿಗೆ ದೊರೆಯುತ್ತದೆಇದು ದೇಶದಲ್ಲಿ ವ್ಯಾಪಕವಾಗಿ ನಿಯಂತ್ರಣದಲ್ಲಿರುವ ಕೃಷಿ ಮಾರುಕಟ್ಟೆಗಳನ್ನು ಅನ್ ಲಾಕ್ ’  ಮಾಡುವ ಚಾರಿತ್ರಿಕ ಕ್ರಮವಾಗಿದೆ.

ಇದು ರೈತರಿಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸುತ್ತದೆ., ಅವರಿಗೆ ಮಾರುಕಟ್ಟೆ ಖರ್ಚನ್ನು ಕಡಿಮೆ ಮಾಡುತ್ತದೆಮತ್ತು ಅವರಿಗೆ ಉತ್ತಮ ದರಗಳನ್ನು ಗಳಿಸಿಕೊಳ್ಳಲು ಸಹಾಯ ಮಾಡುತ್ತದೆಇದು ಹೆಚ್ಚುವರಿ ಉತ್ಪನ್ನ ಇರುವ ವಲಯದ ರೈತರು ಕಡಿಮೆ ಉತ್ಪನ್ನ ಇರುವ ವಲಯಗಳ ಬಳಕೆದಾರರಿಗೆ ಉತ್ತಮ ದರದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲು ಸಹಾಯ ಮಾಡುತ್ತದೆಇದರಿಂದ  ವಲಯದ  ಬಳಕೆದಾರರಿಗೆ ಕಡಿಮೆ ದರದಲ್ಲಿ ಉತ್ಪನ್ನಗಳು ಲಭ್ಯವಾದಂತಾಗುತ್ತದೆಸುಗ್ರೀವಾಜ್ಞೆಯು ವರ್ಗಾವಣೆ ವೇದಿಕೆಯಲ್ಲಿ ಇಲೆಕ್ಟ್ರಾನಿಕ್ ವ್ಯಾಪಾರದ ಪ್ರಸ್ತಾಪವನ್ನು ಅಡೆ ತಡೆ ರಹಿತ ಇಲೆಕ್ಟ್ರಾನಿಕ್ ವ್ಯವಸ್ಥೆ ಮೂಲಕದ ವ್ಯಾಪಾರವನ್ನು ಖಾತ್ರಿಗೊಳಿಸುವ ಇರಾದೆಯಿಂದ ಹೊಂದಿದೆ.

ಒಂದು ಭಾರತಒಂದು ಕೃಷಿ ಮಾರುಕಟ್ಟೆ

 ಸುಗ್ರೀವಾಜ್ಞೆಯು ಮೂಲತಹ .ಪಿ.ಎಂ.ಸಿಮಾರುಕಟ್ಟೆಯ ಹೊರಗೆ ಹೆಚ್ಚುವರಿ ವ್ಯಾಪಾರದ ಅವಕಾಶಗಳನ್ನು ರೈತರಿಗೆ ಒಗದಿಸುವ ಉದ್ದೇಶವನ್ನು ಒಳಗೊಂಡಿದೆಹೆಚ್ಚುವರಿ ಸ್ಪರ್ಧೆಯ ಕಾರಣಕ್ಕಾಗಿ ಇದು ರೈತರಿಗೆ ಉತ್ತಮ ಬೆಲೆ ಪಡೆಯಲು ಸಹಾಯ ಮಾಡುತ್ತದೆ.

ಇದು ಖಂಡಿತವಾಗಿಯೂ ಒಂದು ಭಾರತಒಂದು ಕೃಷಿ ಮಾರುಕಟ್ಟೆಯನ್ನು ನಿರ್ಮಿಸಲು ದಾರಿಯನ್ನು ಒದಗಿಸುತ್ತದೆಮತ್ತು ನಮ್ಮ ಪರಿಶ್ರಮಿ ರೈತರಿಗೆ ಉತ್ತಮ ಫಸಲನ್ನು ಖಾತ್ರಿಪಡಿಸಲು ನೆಲೆಗಟ್ಟನ್ನು ಹಾಕುತ್ತವೆ.

ಸಂಸ್ಕರಣಾಗಾರರುಅಗ್ರಿಗೇಟರುಗಳುಸಗಟು ವ್ಯಾಪಾರಿಗಳುಚಿಲ್ಲರೆ ವ್ಯಾಪಾರಸ್ಥರು ರಫ್ತುದಾರರುಗಳ ಜೊತೆ ಕೈಜೋಡಿಸಲು ರೈತರ ಸಶಕ್ತೀಕರಣ.

ಬೆಲೆ ಭರವಸೆಗಾಗಿರುವ ರೈತರ (ಸಶಕ್ತೀಕರಣ ಮತ್ತು ರಕ್ಷಣೆಒಪ್ಪಂದ ಮತ್ತು ಕೃಷಿ ಸೇವೆಗಳ ಸುಗ್ರೀವಾಜ್ಞೆ, 2020 ” ಕ್ಕೆ  ಸಂಪುಟ ಅನುಮೋದನೆ ನೀಡಿದೆ.

ಹಿನ್ನೆಲೆ

ಭಾರತೀಯ ಕೃಷಿಯು ಸಣ್ಣ ಸಣ್ಣ ಗಾತ್ರದ ಭೂ ಹಿಡುವಳಿಗಳಿಂದಾಗಿ ವಿಭಜನಾ ಲಕ್ಷಣಗಳನ್ನು ತೋರ್ಪಡಿಸುತ್ತದೆ ಮತ್ತು ಅದು ಹವಾಮಾನ ಅವಲಂಬನೆಉತ್ಪಾದನಾ ಅನಿಶ್ಚಿತತೆ ಮತ್ತು ಮಾರುಕಟ್ಟೆಯ ಊಹನಾತೀತ ಸ್ಥಿತಿಯ ದೌರ್ಬಲ್ಯಗಳನ್ನು ಒಳಗೊಂಡಿದೆಇದು ಕೃಷಿಯನ್ನು ಅತ್ಯಂತ ಅಪಾಯದ ಮತ್ತು ಒಳಸುರಿ ಮತ್ತು ಉತ್ಪಾದನೆ ನಿರ್ವಹಣೆ ದೃಷ್ಟಿಯಿಂದ ಅದಕ್ಷ ಕ್ಷೇತ್ರವಾಗಿ ಪರಿಗಣಿಸುವಂತೆ ಮಾಡಿದೆ.

ಲಾಭಗಳು

 ಸುಗ್ರೀವಾಜ್ಞೆಯು  ರೈತರಿಗೆ ಸಂಸ್ಕರಣಾಗಾರರುಅಗ್ರಿಗೇಟರುಗಳುಬೃಹತ್ ಚಿಲ್ಲರೆ ವ್ಯಾಪಾರಸ್ಥರುರಫ್ತುದಾರರು ಇತ್ಯಾದಿಯವರ ಜೊತೆಯಲ್ಲಿ ಏಕ ರೀತಿಯ ಸಮಾನ ಮಟ್ಟದಲ್ಲಿ ಯಾವುದೇ ಶೋಷಣೆ ಭಯ ಇಲ್ಲದೆ ವ್ಯವಹರಿಸಲು ಸಶಕ್ತೀಕರಣಗೊಳಿಸುತ್ತದೆಇದು ಮಾರುಕಟ್ಟೆಯ ಅನೂಹ್ಯ ಸ್ಥಿತಿಯ ಅಪಾಯವನ್ನು ಕೃಷಿಕರಿಂದ ಪ್ರಾಯೋಜಕರಿಗೆ ವರ್ಗಾಯಿಸುತ್ತದೆಹಾಗು ರೈತರಿಗೆ ಆಧುನಿಕ ತಂತ್ರಜ್ಞಾನ ಲಭ್ಯವಾಗುವಂತೆ ಉತ್ತಮ ಒಳಸುರಿಗಳು ಲಭಿಸುವಂತೆ ಮಾಡುತ್ತದೆಇದು ಮಾರುಕಟ್ಟೆಯ ಖರ್ಚನ್ನು ಕಡಿಮೆ ಮಾಡುತ್ತದೆ ಮತ್ತು ರೈತರ ಆದಾಯವನ್ನು ಸುಧಾರಿಸುತ್ತದೆ

 ಸುಗ್ರೀವಾಜ್ಞೆಯು ಜಾಗತಿಕ ಮಾರುಕಟ್ಟೆಗೆ ಭಾರತೀಯ ಕೃಷಿ ಉತ್ಪನ್ನಗಳನ್ನು ಪೂರೈಸಲು ಪೂರೈಕೆ ಸರಪಳಿಯನ್ನು ನಿರ್ಮಿಸಲು ಖಾಸಗಿ ಬಂಡವಾಳ ಆಕರ್ಷಿಸಲು ವೇಗವರ್ಧಕವಾಗಿ ಕೆಲಸ ಮಾಡುತ್ತದೆರೈತರಿಗೆ ಉನ್ನತ ಮೌಲ್ಯದ ಕೃಷಿ ಸಲಹೆ ಮತ್ತು ತಂತ್ರಜ್ಞಾನ ಲಭಿಸುತ್ತದೆಮತ್ತು ಇಂತಹ ಉತ್ಪಾದನೆಗಳಿಗೆ ಸಿದ್ಧ ಮಾರುಕಟ್ಟೆಯೂ ಲಭಿಸುತ್ತದೆ.

ರೈತರು ನೇರ ಮಾರುಕಟ್ತೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಮೂಲಕ ಮಧ್ಯವರ್ತಿಗಳನ್ನು ನಿವಾರಿಸಿಕೊಂಡು ದರದ ಪೂರ್ಣ ಪ್ರಯೋಜನ ಪಡೆಯಲು ಅವರಿಗೆ ಸಾಧ್ಯವಾಗುತ್ತದೆರೈತರಿಗೆ ಸಾಕಷ್ಟು ರಕ್ಷಣೆ ಮತ್ತು ಸಮರ್ಪಕ ವಿವಾದ ಪರಿಹಾರ ವ್ಯವಸ್ಥೆಯನ್ನು ಪರಿಹಾರಕ್ಕೆ ಸಂಬಂಧಿಸಿ ಸ್ಪಷ್ಟ ಕಾಲಮಿತಿಯೊಂದಿಗೆ ಒದಗಿಸುತ್ತದೆ.

ರೈತರ ಕಲ್ಯಾಣಕ್ಕೆ ಸರಕಾರ ಬದ್ದವಾಗಿದೆ

ಕೃಷಿ ಮತ್ತು ಪೂರಕ ಚಟುವಟಿಕೆಗಳಲ್ಲಿ ತೊಡಗಿಕೊಂಡವರಿಗೆ ಉತ್ತೇಜನ ನೀಡಲು ಆತ್ಮ ನಿರ್ಭರ ಭಾರತ್ ಅಭಿಯಾನ ಅಡಿಯಲ್ಲಿ ಹಲವಾರು ಕ್ರಮಗಳನ್ನು ಘೋಷಿಸಲಾಗಿದೆಕಿಸಾನ್ ಕ್ರೆಡಿಟ್ ಕಾರ್ಡ್ ಗಳ ಮೂಲಕ ರಿಯಾಯತಿ ದರದಲ್ಲಿ ಸಾಲ ಸೌಲಭ್ಯ ,ಕೃಷಿ ಮೂಲಸೌಕರ್ಯ ಯೋಜನೆ ,ಯೋಜನೆಗಳಿಗೆ ಹಣಕಾಸುಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನಾ ಮತ್ತು ಇತರ ಕ್ರಮಗಳ ಮೂಲಕ ಮೀನುಗಾರಿಕೆ ಬಲಪಡಿಸುವಿಕೆ ಜಾನುವಾರುಗಳಲ್ಲಿ ಕಾಲು ಬಾಯಿ ರೋಗಕ್ಕೆ ಲಸಿಕೆ ಬ್ರುಸೆಲ್ಲೋಸಿಸ್ ಗೆ ಲಸಿಕೆ ಒದಗಣೆಗಿಡಮೂಲಿಕೆಗಳ ಕೃಷಿಗೆ ಉತ್ತೇಜನ ಜೇನು ಸಾಕಾಣಿಕೆಗೆ ಉತ್ತೇಜನ ಹಸಿರು ಕ್ರಾಂತಿ ಇತ್ಯಾದಿ ಕ್ರಮಗಳುಪ್ರಸ್ತಾವಗಳು ಇದರಲ್ಲಿ ಸೇರಿವೆ.

ಪ್ರಧಾನ ಮಂತ್ರಿ ಕಿಸಾನ್ ಮೂಲಕ ಸುಮಾರು 9.25 ಕೋಟಿ ರೈತ ಕುಟುಂಬಗಳು ಪ್ರಯೋಜನ ಪಡೆದಿವೆಲಾಕ್ ಡೌನ್ ಅವಧಿಯಲ್ಲಿ ಇದುವರೆಗೆ 18,517 ಕೋ.ರೂ.ಗಳನ್ನು ವಿತರಿಸಲಾಗಿದೆಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಒಟ್ಟು 6003.6 ಕೋ.ರೂ.ಗಳ ಮೊತ್ತದ ಕ್ಲೇಮುಗಳನ್ನು  ಲಾಕ್ ಡೌನ್ ಅವಧಿಯಲ್ಲಿ ಪಾವತಿ ಮಾಡಲಾಗಿದೆ.

 ಕ್ರಮಗಳು ಸರಕಾರ ಇತ್ತೀಚೆಗೆ ಕೈಗೊಂಡ ಸರಣಿ ಕ್ರಮಗಳಲ್ಲಿ ಸೇರಿದ್ದುಇವು ಭಾರತದ ಪರಿಶ್ರಮಿ ರೈತರ ಪರವಾಗಿ,  ಅವರ ಕಲ್ಯಾಣಕ್ಕಾಗಿ ಸರಕಾರದ ನಿರಂತರ ಬದ್ದತೆಯನ್ನು ತೋರಿಸುತ್ತವೆ.

***

 



(Release ID: 1629325) Visitor Counter : 418