ರಕ್ಷಣಾ ಸಚಿವಾಲಯ
‘ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ದೊಡ್ಡ ಉತ್ತೇಜನ
Posted On:
02 JUN 2020 7:38PM by PIB Bengaluru
‘ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ದೊಡ್ಡ ಉತ್ತೇಜನ
1,094 ಕೋ. ರೂಪಾಯಿ ಮೌಲ್ಯದ 156 ಅಪ್ಗ್ರೇಡ್ ಮಾಡಲಾದ ಬಿಎಂಪಿ ಇನ್ಫಾಂಟ್ರಿ ಕಾಂಬ್ಯಾಟ್ ವಾಹನಗಳ ಪೂರೈಕೆಗಾಗಿ
ರಕ್ಷಣಾ ಸಚಿವಾಲಯ ಕೋರಿಕೆ
ಸರ್ಕಾರದ 'ಮೇಕ್ ಇನ್ ಇಂಡಿಯಾ' ಉಪಕ್ರಮಕ್ಕೆ ಪ್ರಮುಖ ಉತ್ತೇಜನದಂತೆ, ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರ ಅನುಮೋದನೆಯೊಂದಿಗೆ ರಕ್ಷಣಾ ಸಚಿವಾಲಯದ ಸ್ವಾಧೀನ ವಿಭಾಗ (ಎಂಒಡಿ) ಇಂದು ಭಾರತೀಯ ಸೈನ್ಯದ ಬಳಕೆಗಾಗಿ ನವೀಕರಿಸಿದ ವೈಶಿಷ್ಟ್ಯಗಳೊಂದಿಗೆ 156 ಬಿಎಂಪಿ ಇನ್ಫಾಂಟ್ರಿ ಕಾಂಬ್ಯಾಟ್ ವಾಹನಗಳ (ಐಸಿವಿ) ಪೂರೈಕೆಗಾಗಿ ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡ್ (ಒಎಫ್ ಬಿ) ಗೆ ಕೋರಿಕೆಯನ್ನು (ಇಂಡೆಂಟ್) ನೀಡಿದೆ. ಈ ಇಂಡೆಂಟ್ ಅಡಿಯಲ್ಲಿ, ಐಸಿವಿಗಳನ್ನು ತೆಲಂಗಾಣದ ಮೆಡಕ್ ನಲ್ಲಿರುವ ಆರ್ಡನೆನ್ಸ್ ಫ್ಯಾಕ್ಟರಿಯಲ್ಲಿ ಅಂದಾಜು 1,094 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಿಸಲಾಗುತ್ತದೆ
ಬಿಎಂಪಿ -2 / 2 ಕೆ ಐಸಿವಿಗಳು 285 ಹೆಚ್ ಪಿ ಎಂಜಿನ್ಗಳಿಂದ ಸಾಮರ್ಥ್ಯವನ್ನು ಹೊಂದಿದ್ದು ಮತ್ತು ತೂಕದಲ್ಲಿ ಕಡಿಮೆ ಇರುತ್ತವೆ ಮತ್ತು ಇದು ಯುದ್ಧಭೂಮಿಯಲ್ಲಿ ಚಲನಶೀಲತೆಯ ಎಲ್ಲಾ ಯುದ್ಧತಂತ್ರದ ಅವಶ್ಯಕತೆಗಳನ್ನು ಪೂರೈಸಲು ಹೆಚ್ಚು ಚಲನಶೀಲವಾಗಿರುತ್ತವೆ. ಈ ಐಸಿವಿಗಳು ಕಡಿದಾದ ಭೂಪ್ರದೇಶದಲ್ಲಿ ಸುಲಭವಾದ ಸ್ಟೀರಿಂಗ್ ಸಾಮರ್ಥ್ಯದೊಂದಿಗೆ ಗಂಟೆಗೆ 65 ಕಿಲೋಮೀಟರ್ (ಕಿಮೀ) ವೇಗವನ್ನು ತಲುಪಲು ಸಾಧ್ಯವಾಗುತ್ತದೆ. ಇದು ನೀರಿನಲ್ಲಿ 07 ಕಿ.ಮೀ ವೇಗದಲ್ಲಿ ಪ್ರಯಾಣಿಸಲು ಉಭಯಚರ ಸಾಮರ್ಥ್ಯ ಹೊಂದಿರುತ್ತದೆ. 0.7 ಮೀಟರ್ನ 35° ಇಳಿಜಾರನ್ನು ದಾಟಲು ಮತ್ತು ಮಾರಕ ಫೈರ್ಪವರ್ ಸಾಮರ್ಥ್ಯವನ್ನು ಹೊಂದಲು ಇವುಗಳನ್ನು ವಿನ್ಯಾಸಗೊಳಿಸಲಾಗಿದೆ.
ಈ 156 ಬಿಎಂಪಿ 2/2 ಕೆ ಐಸಿವಿಗಳ ಸೇರ್ಪಡೆಯು, 2023 ರ ವೇಳೆಗೆ ಪೂರ್ಣಗೊಳ್ಳಲು ಯೋಜಿಸಲಾಗಿದೆ, ಇದರಿಂದಾಗಿ ಯಾಂತ್ರಿಕೃತ ಕಾಲಾಳುಪಡೆ ಬೆಟಾಲಿಯನ್ಗಳಲ್ಲಿ ಇರುವ ಕೊರತೆಯು ಕಡಿಮೆಯಾಗುವುದು ಮತ್ತು ಸೈನ್ಯದ ಯುದ್ಧ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲಾಗುವುದು.
***
(Release ID: 1628966)
Visitor Counter : 208