ಬುಡಕಟ್ಟು ವ್ಯವಹಾರಗಳ ಸಚಿವಾಲಯ

ರಾಜಸ್ಥಾನದ ಡಿ.ಎಸ್.ಟಿ, ಬುಡಕಟ್ಟು ವ್ಯವಹಾರಗಳ ಸಚಿವಾಲಯಗಳ ಟ್ರೈಫೆಡ್ ಸಹಯೋಗದೊಂದಿಗೆ “ವನ್ ಧನ್ ಯೋಜನೆ: ಕೋವಿಡ್-19 ಬಳಿಕದ ಕಲಿಕೆಗಳು” ಕುರಿತ ವೆಬಿನಾರ್ ಆಯೋಜನೆ

Posted On: 26 MAY 2020 5:49PM by PIB Bengaluru

ರಾಜಸ್ಥಾನದ ಡಿ.ಎಸ್.ಟಿ, ಬುಡಕಟ್ಟು ವ್ಯವಹಾರಗಳ ಸಚಿವಾಲಯಗಳ ಟ್ರೈಫೆಡ್ ಸಹಯೋಗದೊಂದಿಗೆ
ವನ್ ಧನ್ ಯೋಜನೆ: ಕೋವಿಡ್-19 ಬಳಿಕದ ಕಲಿಕೆಗಳುಕುರಿತ ವೆಬಿನಾರ್ ಆಯೋಜನೆ

 

ನಿಮ್ಮ ಯೋಜನೆಯನ್ನು ತಿಳಿದುಕೊಳ್ಳಿ ಉಪನ್ಯಾಸ ಸರಣಿಯ ಅಡಿಯಲ್ಲಿ ವನ್ ಧನ್ ಯೋಜನಾ: ಕೋವಿಡ್ -19 ಬಳಿಕದ ಕಲಿಕೆಗಳು ಕುರಿತ ವೆಬಿನಾರನ್ನು ಇಂದು ರಾಜಸ್ಥಾನ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಟ್ರೈಫೆಡ್ ಸಹಯೋಗದೊಂದಿಗೆ ಆಯೋಜಿಸಿತ್ತು. ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಟ್ರೈಫೆಡ್ ಆಡಳಿತ ನಿರ್ದೇಶಕ ಶ್ರೀ ಪ್ರವೀರ ಕೃಷ್ಣ ಅವರು ದಿಕ್ಸೂಚಿ ಭಾಷಣಕಾರರಾಗಿದ್ದರು. ಅವರು ಕೋವಿಡೋತ್ತರ ಕಾಲದಲ್ಲಿ ಕಲಿಕೆಗಳ ಕುರಿತಂತೆ ಮಾತನಾಡಿದರು ಮತ್ತು ವೆಬಿನಾರಿನ ಮಾಡರೇಟರ್ ಆಗಿ ರಾಜಸ್ಥಾನ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯದರ್ಶಿ ಶ್ರೀಮತಿ ಮುಗ್ಧಾ ಸಿನ್ಹಾ ಅವರಿದ್ದರು.

ಕೋವಿಡ್ -19 ರಿಂದಾಗಿ ಈಗ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯು ದೇಶಾದ್ಯಂತ ಅಭೂತಪೂರ್ವ ಭಯವನ್ನು ನಿರ್ಮಾಣ ಮಾಡಿದೆ. ಇದರಿಂದ ಭಾರತದ ಎಲ್ಲಾ ರಾಜ್ಯಗಳೂ, ಕೇಂದ್ರಾಡಳಿತ ಪ್ರದೇಶಗಳೂ ವಿವಿಧ ಪ್ರಮಾಣದಲ್ಲಿ ಬಾಧಿತವಾಗಿವೆ. ಪರಿಸ್ಥಿತಿಯು ಬಡವರ ಮತ್ತು ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಜೀವನೋಪಾಯದ ಮೇಲೆ ದೊಡ್ದ ಹೊಡೆತ ನೀಡಿದೆ. ಇಂತಹ ಸಂಕಷ್ಟಮಯ ಪರಿಸ್ಥಿತಿಯಲ್ಲಿ ಬುಡಕಟ್ಟು ಜನರು ಬಹಳ ತೊಂದರೆಗೀಡಾಗಿದ್ದಾರೆ, ಯಾಕೆಂದರೆ ಹಲವು ವಲಯಗಳಲ್ಲಿ ಇದು ಮರಮುಟ್ಟುಗಳೇತರ ಅರಣ್ಯೋತ್ಪತ್ತಿಗಳ (ಎನ್.ಟಿ.ಎಫ್.ಪಿ.) ಸಂಗ್ರಹ ಋತುವಾಗಿದೆ.

ದೇಶದಲ್ಲಿ ಬುಡಕಟ್ಟು ಜನರು ಕೈಗೊಳ್ಳುವ ವಿವಿಧ ಚಟುವಟಿಕೆಗಳ ಬಗ್ಗೆ ಮಾತನಾಡಿದ ಶ್ರೀ ಪ್ರವೀರ ಕೃಷ್ಣ ಅವರು ಸುಮಾರು 5 ಲಕ್ಷ ಬುಡಕಟ್ಟು ಜನರು ತಮ್ಮ ಜೀವನೋಪಾಯವನ್ನು ಕರಕುಶಲ ಕಲೆ ಮತ್ತು ಕೈಮಗ್ಗ, ನೇಕಾರಿಕೆ, ಲೋಹಶಿಲ್ಪ, ಗೃಹಾಲಂಕರಣ , ಆಭರಣ, ಬ್ಲಾಕ್ ಮುದ್ರಣ , ವರ್ಣಾಲಂಕರಣ ಇತ್ಯಾದಿಗಳ ಮೂಲಕ ಮಾಡಿಕೊಳ್ಳುತ್ತಾರೆ. ಬುಡಕಟ್ಟು ಕಲಾವಿದರ ಎದುರು ಇರುವ ದೊಡ್ದ ಸವಾಲೆಂದರೆ ಅವರ ಉತ್ಪಾದನೆಗಳನ್ನು ದಕ್ಷತೆಯಿಂದ ಮಾರುಕಟ್ಟೆ ಮಾಡುವುದು ಹೇಗೆ ಮತ್ತು ಅವರು ತಯಾರಿಸುವ ಉತ್ತಮ ಗುಣ ದರ್ಜೆಯ ಉತ್ಪನ್ನಗಳ ಬಗ್ಗೆ ಜನರಿಗೆ ತಿಳಿಸುವುದು ಹೇಗೆ ಎಂಬುದಾಗಿದೆ. ಟ್ರೈಫೆಡ್ (ಬುಡಕಟ್ಟು ವ್ಯವಹಾರಗಳ ಸಚಿವಾಲಯದಡಿ ) ಬುಡಕಟ್ಟು ಜನರು ಉತ್ಪಾದಿಸುತ್ತಿರುವ ಉತ್ಪನ್ನಗಳನ್ನು ಖರೀದಿಸಿ ಅವುಗಳನ್ನು ಭಾರತದ ಜನ ಸಮೂಹಕ್ಕೆ ಮತ್ತು ವಿಶ್ವ ವ್ಯಾಪ್ತಿಯಲ್ಲಿ ಟ್ರೈಬ್ಸ್ ಇಂಡಿಯಾ ಬ್ಯಾನರಿನಡಿಯಲ್ಲಿ ಮಾರಾಟ ಮಾಡುವ ಮೂಲಕ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ ಎಂದರು.ಗೋ ಟ್ರೈಬಲ್ (#GoTribal campaign ) ಆಂದೋಲನವನ್ನೂ ಆರಂಭಿಸಿ ದೇಶಾದ್ಯಂತ (ವಿಮಾನ ನಿಲ್ದಾಣಗಳೂ ಸಹಿತ ) 120 ಖಾಯಂ ಅಂಗಡಿಗಳನ್ನು , ಆರ್ಥಿಕ ವೇದಿಕೆಗಳನ್ನು, ವಸ್ತುಪ್ರದರ್ಶನಗಳನ್ನು , ಅದ್ದೂರಿಯ ಆದಿ ಮಹೋತ್ಸವಗಳನ್ನುಸಂಘಟಿಸುವ ಮೂಲಕ ಮತ್ತು ಕಲಾವಿದರಿಗೆ ತರಬೇತಿ ನೀಡುವುದಕ್ಕೆ , ಸಾಮರ್ಥ್ಯ ವರ್ಧನೆಗೆ , ಗುಣಮಟ್ಟ ಸುಧಾರಣೆಗೆ ಹಾಗು ಮಾರುಕಟ್ಟೆಯನ್ನು ಜೋಡಿಸಿಕೊಳ್ಳುವುದಕ್ಕೆ ಒಪ್ಪಂದಗಳನ್ನು ಮಾಡಿಕೊಂಡು ಬಲವರ್ಧನೆ ಮಾಡಿಕೊಳ್ಳಲು ಸಹಾಯ ಮಾಡಲಾಗುತ್ತಿದೆ ಎಂದೂ ಅವರು ವಿವರಿಸಿದರು.

ಮುಂದುವರೆದು ಮಾತನಾಡಿದ ಪ್ರವೀರ ಕೃಷ್ಣ ಅವರು ಸುಮಾರು 50 ಲಕ್ಷಕ್ಕೂ ಅಧಿಕ ಬುಡಕಟ್ಟು ಜನರು ಅರಣ್ಯೋತ್ಪತ್ತಿಗಳನ್ನು ಅವಲಂಬಿಸಿದ್ದು, ಅವರು ಅರಣ್ಯೋತ್ಪತ್ತಿ ಕೊಯಿಲಿನ ಬಗ್ಗೆ ಪರಂಪರಾಗತ ಕೌಶಲ್ಯವನ್ನು ಹೊಂದಿದ್ದಾರೆ . ಬುಡಕಟ್ಟು ಜನರು ಸಾಮಾನ್ಯವಾಗಿ ವರ್ಷಕ್ಕೆ ಅರ್ಧದಿಂದ ಒಂದು ಟನ್ ಅರಣ್ಯೋತ್ಪತ್ತಿಗಳನ್ನು ಸಂಗ್ರಹಿಸುತ್ತಾರೆ ಎಂದರು. ಬುಡಕಟ್ಟು ಜನರು ಹೊಂದಿರುವ ಅಪಾರವಾದ ಕೌಶಲ್ಯಗಳ ಕುರಿತು ಮಾತನಾಡಿದ ಶ್ರೀ ಕೃಷ್ಣ ಅವರು ನಾವು ಅವರಿಗೆ ಮೌಲ್ಯ ವರ್ಧನೆಯಲ್ಲಿ ಸಹಾಯ ಮಾಡಿ ಕಿರು ಉದ್ಯಮಿಗಳನ್ನಾಗಿಸಬೇಕು. ಕನಿಷ್ಟ ಬೆಂಬಲ ಬೆಲೆಯ ಮೂಲಕ ಪ್ರತೀ ವ್ಯಕ್ತಿಗೂ ಪ್ರತೀ ವರ್ಷಕ್ಕೆ 20,000 ದಿಂದ 30,000 ರೂಪಾಯಿಗಳವರೆಗೆ ಆದಾಯವನ್ನು ಖಾತ್ರಿಪಡಿಸುವುದು ಸಾಧ್ಯವಿದೆ ಮತ್ತು ವನ್ ಧನ್ ಮೌಲ್ಯವರ್ಧನೆ ಯೋಜನೆಯ ಮೂಲಕ ಅದರ ಎರಡರಿಂದ ಮೂರು ಪಟ್ಟು ಹೆಚ್ಚು ಆದಾಯ ಬರುವಂತೆ ಮಾಡಲು ಸಾಧ್ಯವಿದೆಎಂದವರು ಹೇಳಿದರು.

ಪ್ರಸ್ತುತ ಇರುವ ಮೌಲ್ಯ ಸರಪಳಿಯ ಬಗ್ಗೆ ಮಾತನಾಡಿದ ಶ್ರೀ ಕೃಷ್ಣ ಅವರು ಇದುವರೆಗೆ ಮಧ್ಯವರ್ತಿಗಳು ಪ್ರಮುಖ ಫಲಾನುಭವಿಗಳಾಗಿದ್ದರು, ಮತ್ತು ವನ್ ಧನ್ ಯೋಜನೆ ಸ್ಥಿತಿಯನ್ನು ಹೇಗೆ ಬದಲಾಯಿಸಿತು ಹಾಗು ಬುಡಕಟ್ಟು ಅರಣ್ಯೋತ್ಪತ್ತಿ ಸಂಗ್ರಾಹಕರ ಪಾಲನ್ನು ಹೇಗೆ ಹೆಚ್ಚಿಸಿತು ಎಂಬುದರ ಬಗ್ಗೆ ಹೆಚ್ಚು ಒತ್ತು ನೀಡಿ ವಿವರಿಸಿದರು. ಮಣಿಪುರದ ಸೇನಾಪತಿ ಜಿಲ್ಲೆಯ , ನಾಗಾಲ್ಯಾಂಡಿನ ಲೋಂಗ್ ಲೆಂಗ್ ಜಿಲ್ಲೆಯ ಉದಾಹರಣೆಗಳನ್ನು ನೀಡಿದ ಅವರು ಇಲ್ಲಿ ಬುಡಕಟ್ಟು ಜನರಿಗೆ ವನ್ ಧನ್ ಯೋಜನಾದಿಂದ ಭಾರೀ ಪ್ರಯೋಜನವಾಗಿದೆ ಎಂದರು.

ಯೋಜನೆಯ ಪ್ರಮುಖ ಆಧಾರ ಸ್ತಂಭಗಳ ಬಗೆಗೆ ಪ್ರಸ್ತಾಪಿಸಿದ ಶ್ರೀ ಕೃಷ್ಣ ಅವರು ಕನಿಷ್ಟ ಬೆಂಬಲ ಬೆಲೆಯಲ್ಲಿ ಅಧಿಸೂಚಿತ ಎನ್.ಟಿ.ಎಫ್.ಪಿ. ವಸ್ತುಗಳನ್ನು ಖರೀದಿಸಬೇಕಾದ ಮಹತ್ವವನ್ನು ಒತ್ತಿ ಹೇಳಿದರಲ್ಲದೆ ಗ್ರಾಮೀಣ ಹಾತ್ ಗಳಲ್ಲಿ ಮತ್ತು ದಾಸ್ತಾನುಗಾರಗಳಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸಬೇಕಾದ ಅಗತ್ಯದ ಬಗ್ಗೆಯೂ ಪ್ರಸ್ತಾಪಿಸಿದರು. ಅಂತಿಮವಾಗಿ ಅರಣ್ಯ ಉತ್ಪತ್ತಿಗಳನ್ನು ಸಂಗ್ರಹಿಸುವವರು ಮೌಲ್ಯವರ್ಧನೆಯನ್ನು ಒಳಗೊಂಡ ಕಿರು ಉದ್ಯಮವನ್ನು ನಡೆಸಲು ಸಮರ್ಥರಾಗುವಂತೆ ಮಾಡಬೇಕು ಎಂದವರು ಹೇಳಿದರು. ಟ್ರೈಫೆಡ್ ಕೂಡಾಬುಡಕಟ್ಟು ಜನರಿಗೆ ತಂತ್ರಜ್ಞಾನ” (ಟೆಕ್ ಫಾರ್ ಟ್ರೈಬಲ್ಸ್) ಉಪಕ್ರಮದ ಮೂಲಕ ಪ್ರಮುಖ ದೇಶದ ..ಟಿ.ಗಳು ಮತ್ತು ..ಎಂ.ಗಳ ಜೊತೆ ಪಾಲುದಾರಿಕೆಯೊಂದಿಗೆ ಎಂ.ಎಸ್.ಎಂ.. ಸಚಿವಾಲಯದ ಜೊತೆಗೂಡಿ ಉದ್ಯಮಶೀಲತ್ವ ಕೌಶಲ್ಯ ಅಭಿವೃದ್ದಿ ಕಾರ್ಯಕ್ರಮವನ್ನ್ನು ಕೈಗೊಂಡಿದೆ. ಇದಲ್ಲದೆ ಹೆಚ್ಚುವರಿಯಾಗಿ ಡ್ಯಾಶ್ ಬೋರ್ಡ್ ಗಳ ಡಿಜಿಟೈಸೇಶನ್ , ಮಾಹಿತಿಗಳ ಸರಾಗ ಹರಿವಿಗಾಗಿ ವನ್ ಧನ್ ಯೋಜನೆಗಳ ಮೇಲೆ ನಿಗಾ, ಯೋಜನೆಗಳ ಅಡಿಯಲ್ಲಿ ಪ್ರಸ್ತಾಪಗಳನ್ನು ತ್ವರಿತವಾಗಿ ಸಲ್ಲಿಸಲು ಅವಕಾಶ ಮತ್ತು ಪ್ರಗತಿಯ ಮೇಲೆ ನಿಗಾಕ್ಕೂ ಆದ್ಯತೆ ನೀಡಲಾಗುತ್ತಿದೆ ಎಂದೂ ಹೇಳಿದರು.

ಕೋವಿಡ್ -19 ಪರಿಸ್ಥಿತಿಯನ್ನು ಉಲ್ಲೇಖಿಸಿದ ಶ್ರೀ ಕೃಷ್ಣಾ ಅವರು ನಿಟ್ಟಿನಲ್ಲಿ ಟ್ರೈಫೆಡ್ ಕೈಗೊಂಡ ಕ್ರಮಗಳ ಬಗ್ಗೆಯೂ ತಿಳಿಸಿದರು. ಧೀರ್ಘಕಾಲದ ಲಾಕ್ ಡೌನ್ ನಿಂದಾಗಿ ಉದ್ಭವಿಸಿರುವ ಪರಿಸ್ಥಿತಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವ ಮಹತ್ವವನ್ನು ಒತ್ತಿ ಹೇಳಿದರಲ್ಲದೆ ತಕ್ಷಣದ, ಮಧ್ಯಮಾವಧಿಯ ಮತ್ತು ಧೀರ್ಘಾವಧಿಯ ಉಪಕ್ರಮಗಳು, ಹಾಗು ಬುಡಕಟ್ಟು ಜನರಿಗೆ ಇಂತಹ ಅಭೂತಪೂರ್ವ ಸಂದರ್ಭದಲ್ಲಿ ಹೆಚ್ಚುವರಿ ಬೆಂಬಲಗಳನ್ನು ನೀಡಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು. ಟ್ರೈಫೆಡ್ ಸಂಸ್ಥೆಯು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯೊಂದಿಗೆ ಕೈಜೋಡಿಸಿ ಸ್ಟ್ಯಾಂಡ್ ವಿದ್ ಹ್ಯುಮ್ಯಾನಿಟಿ ಉಪಕ್ರಮದಲ್ಲಿ ಸ್ಟ್ಯಾಂಡ್ ವಿದ್ ಟ್ರೈಬಲ್ ಫ್ಯಾಮಿಲಿ ಘಟಕವನ್ನು ಸೇರಿಸಿಕೊಂಡು ಬುಡಕಟ್ಟು ಸಮುದಾಯಕ್ಕೆ ಬದುಕುಳಿಯಲು ಅವಶ್ಯವಾದ ರೇಶನ್ ಕಿಟ್ ಗಳನ್ನು ಒದಗಿಸುತ್ತಿದೆ. ಕಾಶ್ಮೀರ, ತೆಲಂಗಾಣ, ಮಹಾರಾಷ್ಟ್ರ, ಕರ್ನಾಟಕಗಳ ವಿವಿಧ ವಲಯಗಳಲ್ಲಿ ರೇಶನ್ ಕಿಟ್ ಗಳನ್ನು ಈಗಾಗಲೇ ವಿತರಿಸಲಾಗಿದೆ ಮತ್ತು ದೇಶದ ಇತರ ಭಾಗಗಳಲ್ಲಿಯೂ ವಿತರಣೆಗೆ ಯೋಜನೆ ರೂಪಿಸಲಾಗಿದೆ ಎಂದರು.

ಟ್ರೈಫೆಡ್ ವನ್ ಧನ್ ಸಾಮಾಜಿಕ್ ದೂರಿ ಜಾಗರೂಕತಾ ಅಭಿಯಾನ ವನ್ನು ಯುನಿಸೆಫ್ ಜತೆಗೂಡಿ ಆರಂಭಿಸಿದೆ. ಇದರಡಿ ಬುಡಕಟ್ಟು ಜನರಿಗೆ ಕೋವಿಡ್ -19 ಕುರಿತಂತೆ ಸಂಕೀರ್ಣ ಮಾಹಿತಿಗಳನ್ನು ಹಲವಾರು ಮಾರ್ಗದರ್ಶಿಗಳು , ರಾಷ್ಟ್ರ ವ್ಯಾಪೀ ಮತ್ತು ರಾಜ್ಯವಾರು ವೆಬಿನಾರುಗಳ ಮೂಲಕ ಒದಗಿಸಲಾಗಿದೆ ಹಾಗು ಅನುಸರಿಸಬೇಕಾದ ಸುರಕ್ಷಾ ಕ್ರಮಗಳ ಸೂಚನೆಗಳನ್ನು ನೀಡಲಾಗಿದೆ. ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಇಂತಹ ಸಂಕಷ್ಟದ ಸಮಯದಲ್ಲಿ ಅರಣ್ಯೋತ್ಪತ್ತಿಗಳ ಸಂಗ್ರಾಹಕರಿಗೆ ಅವಶ್ಯವಾದ ಪರಿಹಾರ ನೀಡಲು ಎನ್.ಟಿ.ಎಫ್. ಪಿ. ವಸ್ತುಗಳ ಕನಿಷ್ಟ ಬೆಂಬಲ ಬೆಲೆಗಳನ್ನು ಪರಿಷ್ಕರಿಸಿದೆ.

ವನ್ ಧನ್ ಅಡಿಯಲ್ಲಿ ಅನುಸರಿಸಲಾಗುತ್ತಿರುವ ಉತ್ತಮ ಪದ್ದತಿಗಳ ಬಗೆ ವಿವರಿಸಿದ ಶ್ರೀ ಕೃಷ್ಣ ಅವರು ಎನ್.ಟಿ.ಎಫ್. ಪಿ. ವಸ್ತುಗಳನ್ನು ಛತ್ತೀಸ್ ಗಢದಲ್ಲಿ ಮನೆ ಬಾಗಿಲಿಗೆ ಹೋಗಿ ಖರೀದಿಸುವ , ಮಣಿಪುರದಲ್ಲಿ ಮೊಬೈಲ್ ವ್ಯಾನ್ ಗಳ ಮೂಲಕ ವನ್ ಧನ ಉತ್ಪಾದನೆಗಳನ್ನು ಮಾರಾಟ ಮಾಡಲಾಗುವ , ರಾಯಗಢದಲ್ಲಿ ಎಂ.ಎಫ್.ಪಿ. ಸಂಸ್ಕರಣಾ ಘಟಕಗಳ (ಟ್ರೈಫುಡ್ ) ಸ್ಥಾಪನೆ, ಮಧ್ಯಪ್ರದೇಶದಲ್ಲಿ ಅಪ್ನಿ ದುಕಾನ್ ಉಪಕ್ರಮಗಳೂ ಸಹಿತ ಇತರ ಕ್ರಮಗಳನ್ನು ಪ್ರಸ್ತಾಪಿಸಿದರು.

ವನ್ ಧನ್ ಬುಡಕಟ್ಟು ಉದ್ಯಮಗಳಿಗೆ ಸಂಬಂಧಿಸಿ ರಾಜಸ್ಥಾನದ ಸಿರೋಹಿಯ ಯಶೋಗಾಥೆಯನ್ನು ಪ್ರಸ್ತಾಪಿಸಿದ ಅವರು ಅಲ್ಲಿ ನೆಲ್ಲಿಕಾಯಿ ಉಪ್ಪಿನಕಾಯಿ, ಜಾಮ್ , ನೆಲ್ಲಿಕಾಯಿಯ ಸಿಹಿತಿಂಡಿ (ಮುರಬ್ಬಾ) ಮತ್ತು ಇತರ ಮೌಲ್ಯವರ್ಧಿತ ಉತ್ಪನ್ನಗಳನ್ನು ಯೋಜನೆ ಅಡಿಯಲ್ಲಿ ಸಂಸ್ಕರಿಸುತ್ತಿರುವ ಮತ್ತು ಮಾರುಕಟ್ಟೆಯನ್ನು ಯಶಸ್ವಿಯಾಗಿ ಮಾಡುತ್ತಿರುವ ಬಗ್ಗೆ ತಿಳಿಸಿದರು. ರಾಜಸ್ಥಾನಕ್ಕೆ ಮುಂದಿರುವ ಹಾದಿಯ ಬಗ್ಗೆ ಮಾತನಾಡಿದ ಅವರು ರಾಜಸ್ಥಾನಕ್ಕೆ ಮಂಜೂರು ಮಾಡಬಹುದಾದ 145 ಹೆಚ್ಚುವರಿ ವನ್ ಧನ್ ವಿಕಾಸ ಕೇಂದ್ರಗಳ ಸಾಮರ್ಥ್ಯದ ಬಗ್ಗೆ ಮಾತನಾಡಿದರಲ್ಲದೆ ಅವುಗಳನ್ನು ಆತ್ಮನಿರ್ಭರ ಭಾರತಕ್ಕಾಗಿ ಬುಡಕಟ್ಟು ನವೋದ್ಯಮಗಳುಎಂಬುದಾಗಿ ಸ್ಥಾಪನೆ ಮಾಡಲು ಮುಂದಾಗಬಹುದು ಎಂದರು. ವನ್ ಧನ್ ಯೋಜನೆ ಅಡಿಯಲ್ಲಿ ಅಜೀವಿಕ/ ಅರಣ್ಯ ಇಲಾಖೆಯನ್ನು ಎರಡನೆ ಅನುಷ್ಟಾನ ಏಜೆನ್ಸಿಯಾಗಿ ನೇಮಕ ಮಾಡಿರುವುದರಿಂದ ರಾಜಸ್ಥಾನದ ಎಲ್ಲಾ ಜಿಲ್ಲೆಗಳಲ್ಲಿಯೂ ವನ್ ಧನ್ ವ್ಯಾಪ್ತಿಯ ವಿಸ್ತರಣೆಯಾಗಲಿದೆ ಹಾಗು ರಾಗಿ, ಸಜ್ಜೆ , ನವಧಾನ್ಯಗಳಂತಹ ಅತ್ಯುತ್ತಮ ಆಹಾರದ ವ್ಯಾಪ್ತಿಯೂ ವಿಸ್ತರಣೆಯಾಗಲಿದೆ ಎಂದರು.

ರಾಜಸ್ಥಾನ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ವನ್ ಧನ್ ಯೋಜನಾ ಬಗ್ಗೆ ತೀವ್ರವಾದ ಆಸಕ್ತಿಯನ್ನು ವ್ಯಕ್ತಪಡಿಸಿತು ಮತ್ತು ವನ್ ಧನ್ ಬುಡಕಟ್ಟು ಜನರಿಗಾಗಿ ತಂತ್ರಜ್ಞಾನ ಉಪಕ್ರಮದಡಿಯಲ್ಲಿ ಜ್ಞಾನ ಸಹಭಾಗಿಯಾಗುವುದಕ್ಕೆ ಟ್ರೈಫೆಡ್ ನೊಂದಿಗೆ ಮಾತುಕತೆ ನಡೆಸಿತು. ಜೊತೆಗೆ ..ಎಂ. ಉದಯಪುರ, ..ಟಿ. ಜೋಧಪುರಗಳನ್ನು ಒಳಗೊಂಡ ಅವರ ಸ್ಥಾಪಿತ ಸಾಂಸ್ಥಿಕ ಜಾಲದ ಜೊತೆಗೂಡಿ ಹಾಗು ಇತರರ ಸಹಾಯದೊಂದಿಗೆ ಯೋಜನೆಯನ್ನು ಮುನ್ನಡೆಸಿಕೊಂಡು ಹೋಗಲು ಚರ್ಚಿಸಿತು.

***


(Release ID: 1627105) Visitor Counter : 256