ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಹೊಸ ಮಾಹಿತಿ

Posted On: 26 MAY 2020 2:02PM by PIB Bengaluru

ಕೋವಿಡ್-19 ಹೊಸ ಮಾಹಿತಿ

ತಮ್ಮ ಮೂಲ ಸ್ಥಳಗಳಿಗೆ ಹಿಂತಿರುಗುತ್ತಿರುವ ವಲಸೆ ಕಾರ್ಮಿಕರಲ್ಲಿ ಏರಿಕೆ ಕಾಣುತ್ತಿರುವ 5 ರಾಜ್ಯಗಳೊಂದಿಗೆ ಆರೋಗ್ಯ ಕಾರ್ಯದರ್ಶಿಗಳ ಸಂಭಾಷಣೆ

 

ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುದನ್ ರವರು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವಿಶೇಷ ಕರ್ತವ್ಯದಲ್ಲಿರುವ ಅಧಿಕಾರಿ (ಒಎಸ್ ಡಿ), ಶ್ರೀ ರಾಜೇಶ್ ಭೂಷಣ್ ರವರು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆಯನ್ನು (ವಿಡಿಯೋ ಕಾನ್ಫರೆನ್ಸ್ ಮೂಲಕ) ಉತ್ತರ ಪ್ರದೇಶ ಬಿಹಾರ, ಜಾರ್ಖಂಡ್, ಛತ್ತೀಸ್ಗಢ ಮತ್ತು ಮಧ್ಯಪ್ರದೇಶದ ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಕಾರ್ಯದರ್ಶಿಗಳು, ನಿರ್ದೇಶಕರು (ಎನ್ಎಚ್ಎಂ) ಇವರುಗಳೊಡನೆ ನಡೆಸಿದರು. ರಾಜ್ಯಗಳಲ್ಲಿ ಕಳೆದ ಮೂರು ವಾರಗಳಿಂದ ಕೋವಿಡ್-19 ಪ್ರಕರಣಗಳು ಉಲ್ಬಣಗೊಳ್ಳುತ್ತಿವೆ, ಏಕೆಂದರೆ ಇಲ್ಲಿ ಲಾಕ್ಡೌನ್ ನಿಯಮಗಳನ್ನು ಸಡಿಲಿಸಲಾಗಿದೆ ಮತ್ತು ಅಂತರ ರಾಜ್ಯ ವಲಸೆಯನ್ನು ಅನುಮತಿಸಲಾಗಿದೆ.

ಪ್ರಕರಣಗಳ ಸಾವಿನ ಪ್ರಮಾಣ, ದ್ವಿಗುಣಗೊಳ್ಳುವ ಸಮಯ, ಪ್ರತಿ ದಶಲಕ್ಷಕ್ಕೆ ಪರೀಕ್ಷೆ ಮತ್ತು ಸೋಂಕು ದೃಢೀಕರಣ ಶೇಕಡಾವಾರುಗಳಿಗೆ ಸಂಬಂಧಿಸಿದಂತೆ ರಾಜ್ಯಗಳಿಗೆ ಪ್ರತೀ ಪ್ರಕರಣದ ರೀತಿಯನ ವಿiವರಿಸಲಾಗಿದೆ. ಪರಿಣಾಮಕಾರಿ ನಿಯಂತ್ರಣ ತಂತ್ರಕ್ಕಾಗಿ ಗಮನಹರಿಸಬೇಕಾದ ಅಂಶಗಳಾದ ಪರಿಧಿಯ ನಿಯಂತ್ರಣ, ವಿಶೇಷ ಕಣ್ಗಾವಲು ತಂಡಗಳ ಮೂಲಕ ಮನೆ ಮನೆ ಸಮೀಕ್ಷೆ, ಪರೀಕ್ಷೆ, ಸಕ್ರಿಯ ಸಂಪರ್ಕ ಪತ್ತೆ ಮತ್ತು ಪರಿಣಾಮಕಾರಿ ಕ್ಲಿನಿಕಲ್ ನಿರ್ವಹಣೆ ಮುಂತಾದವುಗಳ ಪ್ರಾಮುಖ್ಯತೆಯನ್ನು ತೋರಿಸಲಾಯಿತು. ಕಿರು ಯೋಜನೆಗಳ ಸರಿಯಾದ ರಚನೆ ಮತ್ತು ಅನುಷ್ಠಾನದ ಮೂಲಕ ಪ್ರವೃತ್ತಿಗಳನ್ನು ಪರಿಶೀಲಿಸಲು ಮತ್ತು ಸರಿಮಾಡಿದ ಕ್ರಮಗಳನ್ನು ಅಳವಡಿಸಿಕೊಳ್ಳಲು ಪ್ರತಿಯೊಂದು ನಿಯಂತ್ರಣ ವಲಯವನ್ನು ವಿಶ್ಲೇಷಿಸಬೇಕಾಗಿದೆ ಎಂದು ಒತ್ತಿಹೇಳಲಾಯಿತು. ಬಫರ್ ವಲಯದೊಳಗಿನ ಚಟುವಟಿಕೆಗಳ ಬಗ್ಗೆಯೂ ಸಹ ಪುನರುಚ್ಚರಿಸಲಾಯಿತು.

ಸಂಪರ್ಕತಡೆ ಕೇಂದ್ರಗಳು, ಐಸಿಯು / ವೆಂಟಿಲೇಟರ್ / ಆಮ್ಲಜನಕ ಹಾಸಿಗೆಗಳು ಹೊಂದಿರುವ ಆಸ್ಪತ್ರೆಗಳು ಮತ್ತು ಮುಂದಿನ ಎರಡು ತಿಂಗಳುಗಳ ಅಗತ್ಯತೆಯನ್ನು ನಿಗದಿ ಮಾಡುವಂತೆ ಮತ್ತು ಅವುಗಳನ್ನು ಬಲಪಡಿಸಲು ರಾಜ್ಯಗಳು ಲಭ್ಯವಿರುವ ಆರೋಗ್ಯ ಮೂಲಸೌಕರ್ಯಗಳನ್ನು ನಿರ್ಣಯಿಸಲು ಗಮನ ಹರಿಸಬೇಕಾಗಿದೆ ಎಂದು ಪುನರುಚ್ಚರಿಸಲಾಯಿತು. ಆರೋಗ್ಯ ಸೇತುವಿನಿಂದ ದೊರಕುವ ದತ್ತಾಂಶದ ಬಳಕೆಯನ್ನು ಭಾಗವಹಿಸಿದ ರಾಜ್ಯಗಳಿಗೆ ಸೂಚಿಸಲಾಯಿತು.

ಕೋವಿಡ್ ರಹಿತ ಅಗತ್ಯ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದಂತೆ, ಟಿಬಿ, ಕುಷ್ಠರೋಗ, ಸಿಒಪಿಡಿ, ಅಧಿಕ ರಕ್ತದೊತ್ತಡ, ಮಧುಮೇಹ, ಗಾಯಗಳಿಗೆ ಚಿಕಿತ್ಸೆ ಮತ್ತು ಅಪಘಾತಗಳಿಂದ ಉಂಟಾಗುವ ಆಘಾತಗಳಿಗೆ ಅಗತ್ಯವಾದ ಆರೋಗ್ಯ ಕಾರ್ಯಕ್ರಮಗಳನ್ನು ಮುಂದುವರಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ರಾಜ್ಯಗಳಿಗೆ ನೆನಪಿಸಲಾಯಿತು.

ಸಂಚಾರಿ ವೈದ್ಯಕೀಯ ಘಟಕಗಳನ್ನು (ಎಂಎಂಯು) ಸಂಪರ್ಕತಡೆ (ಕ್ವಾರಂಟೈನ್) ಕೇಂದ್ರಗಳಲ್ಲಿ ಇರಿಸಬಹುದು ಎಂದು ಸೂಚಿಸಲಾಯಿತು; ಈಗಿರುವ ಕಟ್ಟಡಗಳಲ್ಲಿ ತಾತ್ಕಾಲಿಕ ಉಪ-ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಬಹುದು ಮತ್ತು ಆರ್ಬಿಎಸ್ಕೆ ತಂಡಗಳಂತಹ ಹೆಚ್ಚುವರಿ ಮುಂಚೂಣಿ ಕೆಲಸಗಾರರನ್ನು ಬಳಸಿಕೊಳ್ಳಬಹುದು. ಆಯುಷ್ಮಾನ್ ಭಾರತ್ - ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳೊಂದಿಗಿನ ಸಂಪರ್ಕವನ್ನು ಸ್ಥಾಪಿಸಲು ಸಲಹೆ ನೀಡಲಾಗಿದ್ದು, ಇದರಿಂದ ತಕ್ಷಣದ ಆರೋಗ್ಯ ತಪಾಸಣೆ ವ್ಯವಸ್ಥೆ ಮಾಡಬಹುದು. ಟೆಲಿ-ಮೆಡಿಸಿನ್ ಸೇವೆಗಳನ್ನು ಕೇಂದ್ರಗಳಿಂದ ಹೊರತರಬಹುದು. ಆರೋಗ್ಯ ಕಾರ್ಯಕರ್ತರ ಹೆಚ್ಚುವರಿ ನಿಯೋಜನೆಯೊಂದಿಗೆ ಅಸ್ತಿತ್ವದಲ್ಲಿರುವ ಕಟ್ಟಡಗಳಲ್ಲಿ ತಾತ್ಕಾಲಿಕ ಉಪ ಆರೋಗ್ಯ ಕೇಂದ್ರಗಳನ್ನು ಸಹ ಕಾರ್ಯಗತಗೊಳಿಸಬಹುದು.

ತಮ್ಮ ಮೂಲ ಸ್ಥಳಗಳಿಗೆ ಹೆಚ್ಚಾಗಿ ಹರಿದು ಬರುತ್ತಿರುವ ವಲಸೆ ಕಾರ್ಮಿಕರ ಅಗತ್ಯವನ್ನು ಪೂರೈಸಲು, ಎಎಸ್ ಹೆಚ್ ಗಳು ಮತ್ತು ಎನ್ ಎಮ್ ಗಳಿಗೆ ಹೆಚ್ಚುವರಿ ಪ್ರೋತ್ಸಾಹಧನವನ್ನು ನೀಡಬಹುದು. ಜನಸಂಪರ್ಕದ ತಂಡಗಳಿಗೆ ಸಂಬಂಧಿಸಿದಂತೆ ಪಿಪಿಇ ಮಾರ್ಗಸೂಚಿಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳಿಗೆ ಸೂಚಿಸಲಾಯಿತು. ರಾಜ್ಯಗಳು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಎನ್ಒಜಿಗಳು, ಸ್ವಸಹಾಯ ಗುಂಪುಗಳು, ಖಾಸಗಿ ಆಸ್ಪತ್ರೆಗಳು, ಸ್ವಯಂಸೇವಕ ಗುಂಪುಗಳು ಇತ್ಯಾದಿಗಳನ್ನು ಬಳಸುವಂತೆ ಕೇಳಲಾಯಿತು. ಗರ್ಭಿಣಿಯರು, 5 ವರ್ಷದೊಳಗಿನ ಮಕ್ಕಳು, ವೃದ್ಧರು, ಹೆಚ್ಚು ಖಾಯಿಲೆಗಳನ್ನು ಹೊಂದಿರುವಂತಹ ದುರ್ಬಲ ಗುಂಪುಗಳ ಬಗ್ಗೆ ವಿಶೇಷ ಗಮನ ಹರಿಸಲು ಮತ್ತು ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಪಡೆಗಳನ್ನು ಸಜ್ಜುಗೊಳಿಸಲು ರಾಜ್ಯಗಳಿಗೆ ಸೂಚಿಸಲಾಯಿತು. ಐದು ವರ್ಷದೊಳಗಿನ ಮಕ್ಕಳಲ್ಲಿ ಪೌಷ್ಠಿಕಾಂಶವನ್ನು ಪರಿಶೀಲಿಸಬೇಕು ಮತ್ತು ಪೌಷ್ಠಿಕಾಂಶ ಪುನರ್ವಸತಿ ಕೇಂದ್ರಗಳಿಗೆ (ಎನ್ಆರ್ಸಿ) ಶಿಫಾರಸು ಮಾಡಬೇಕಾಗಿದೆ ಎಂದು ಒತ್ತಿಹೇಳಲಾಯಿತು.

ಇಂದು ವಿಡಿಯೋ ಸಂವಾದದಲ್ಲಿ ನಡೆದ ವಿವರವಾದ ಚರ್ಚೆಗಳ ಪ್ರಕಾರ ರಾಜ್ಯಗಳು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೋರಲಾಯಿತು.

ಕೋವಿಡ್-19ಗೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ಇಲಾಖೆಯ ಜಾಲತಾಣಕ್ಕೆ ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in

ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in , ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು ಮತ್ರು @CovidIndiaSeva ಗೆ ಟ್ವೀಟ್ ಮಾಡಬಹುದು.

ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ: +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***



(Release ID: 1627104) Visitor Counter : 203