ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ಕೇಂದ್ರೀಯ ಮೋಟಾರು ವಾಹನ ನಿಯಮ 1989ರ ನಿಯಮ 32 ಮತ್ತು 81ರಡಿ ಕಡ್ಡಾಯವಾಗಿ ಪಾವತಿಸಬೇಕಿರುವ ನಿಗದಿತ ಶುಲ್ಕದ ಅವಧಿ ವಿಸ್ತರಣೆ, ಶುಲ್ಕದ ಮಾನ್ಯತೆ ಅವಧಿ ವಿಸ್ತರಣೆ ಕುರಿತ ಅಧಿಸೂಚನೆ

Posted On: 24 MAY 2020 4:16PM by PIB Bengaluru

ಕೇಂದ್ರೀಯ ಮೋಟಾರು ವಾಹನ ನಿಯಮ 1989 ನಿಯಮ 32 ಮತ್ತು 81ರಡಿ ಕಡ್ಡಾಯವಾಗಿ ಪಾವತಿಸಬೇಕಿರುವ

ನಿಗದಿತ ಶುಲ್ಕದ ಅವಧಿ ವಿಸ್ತರಣೆ, ಶುಲ್ಕದ ಮಾನ್ಯತೆ ಅವಧಿ ವಿಸ್ತರಣೆ ಕುರಿತ ಅಧಿಸೂಚನೆ

 

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿ ಸಂಖ್ಯೆ ನಂ.40-3/2020-ಡಿಎಂ-(), ದಿನಾಂಕ 24 ಮಾರ್ಚ್ 2020 ಮುಂದುವರಿದ ಭಾಗವಾಗಿ ಹಾಗೂ ನಂತರದ ತಿದ್ದುಪಡಿಗಳಿಗೆ ಅನುಗುಣವಾಗಿ ಕೋವಿಡ್-19 ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದರಿಂದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ(ಎಂಒಆರ್ ಟಿಎಚ್) 2020 ಮಾರ್ಚ್ 30ರಂದು ಸುತ್ತೋಲೆಯೊಂದನ್ನು ಹೊರಡಿಸಿ, 1988 ಕೇಂದ್ರೀಯ ಮೋಟಾರು ವಾಹನ ಕಾಯ್ದೆ ಮತ್ತು 1989 ಕೇಂದ್ರೀಯ ಮೋಟಾರು ವಾಹನ ನಿಯಮದನ್ವಯ ದಾಖಲೆಗಳ ಮಾನ್ಯತೆ ಕುರಿತ ಅವಧಿಯನ್ನು ವಿಸ್ತರಣೆ ಮಾಡಿತ್ತು. ಲಾಕ್ ಡೌನ್ ನಿಂದಾಗಿ ಯಾವ ದಾಖಲೆಗಳಿಗೆ ಮಾನ್ಯತೆ ವಿಸ್ತರಣೆ ಮಾಡಿರಲಿಲ್ಲವೋ ಅಥವಾ ಅವಧಿ ವಿಸ್ತರಣೆ ಸಾಧ್ಯವಾಗಿರಲಿಲ್ಲವೋ ಅವುಗಳಿಗೆ ಮತ್ತು 2020 ಫೆಬ್ರವರಿ 1 ರಿಂದ ಅಥವಾ 2020 ಜೂನ್ 30 ವರೆಗೆ ಅವಧಿ ಮುಕ್ತಾಯಗೊಳ್ಳಲಿವೆಯೋ ಅಂತಹ ದಾಖಲೆಗಳನ್ನು 2020 ಜೂನ್ 30 ವರೆಗೆ ಮಾನ್ಯ ಮಾಡುವಂತೆ ಆದೇಶಿಸಲಾಗಿದೆ.

ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಮತ್ತು ಸರ್ಕಾರಿ ಸಾರಿಗೆ ಕಚೇರಿಗಳು ಮುಚ್ಚಿದ್ದರಿಂದ ಕೇಂದ್ರೀಯ ಮೋಟಾರು ವಾಹನ ನಿಯಮಗಳು 1989 ನಿಯಮ 32 ಮತ್ತು 81 ಅಡಿಯಲ್ಲಿ ಕಡ್ಡಾಯವಾಗಿ ಪಾವತಿಸಬೇಕಾದ ಕೆಲವು ಶುಲ್ಕಗಳು/ವಿಳಂಬ ಶುಲ್ಕಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ. ಹಲವು ಪ್ರಕರಣಗಳಲ್ಲಿ ಈಗಾಗಲೇ ಸೇವೆಗಳಿಗೆ ಅಥವಾ ನವೀಕರಣಕ್ಕೆ ಶುಲ್ಕಗಳನ್ನು ಪಾವತಿಸಲಾಗಿದೆ. ಆದರೆ ಲಾಕ್ ಡೌನ್ ನಿಂದಾಗಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ, ಪ್ರಾದೇಶಿಕ ಸಾರಿಗೆ ಕಚೇರಿಗಳು (ಆರ್ ಟಿ ) ಕಚೇರಿಗಳು ಮುಚ್ಚಿದ್ದ ಕಾರಣ ನಾಗರಿಕರು ಶುಲ್ಕವನ್ನು ತುಂಬಲು ತೊಂದರೆಗಳನ್ನು ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ.

ಹಾಗಾಗಿ ಕೋವಿಡ್-19 ಸಮಯದಲ್ಲಿ ನಾಗರಿಕರಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ(ಎಂಒಆರ್ ಟಿಎಚ್) ಆದೇಶವೊಂದನ್ನು ಹೊರಡಿಸಿದ್ದು, 2020 ಫೆಬ್ರವರಿ 1 ಅಥವಾ ಆನಂತರ ನವೀಕರಣ ಸೇರಿದಂತೆ ಯಾವ ಚಟುವಟಿಕೆಗಳಿಗೆ ನಿಗದಿತ ಶುಲ್ಕವನ್ನು ಪಾವತಿಸಲಾಗಿದೆಯೋ ಮತ್ತು ಯಾವ ಚಟುವಟಿಕೆಗಳು ಕೋವಿಡ್-19 ಸಾಂಕ್ರಾಮಿಕದಿಂದಾಗಿ ಪೂರ್ಣಗೊಂಡಿಲ್ಲವೋ ಅಂತಹ ಶುಲ್ಕಗಳ ಪಾವತಿ ಮಾನ್ಯ ಅವಧಿ ಮುಂದುವರಿಯುತ್ತದೆ ಮತ್ತು 2020 ಫೆಬ್ರವರಿ 1 ನಂತರ ಲಾಕ್ ಡೌನ್ ಅವಧಿಯವರೆಗೆ 2020 ಜುಲೈ 31 ವರೆಗೆ ಯಾವುದೇ ಶುಲ್ಕ ಪಾವತಿಯಲ್ಲಿ ವಿಳಂಬವಾದರೆ ಅದಕ್ಕೆ ಹೆಚ್ಚುವರಿ ಅಥವಾ ವಿಳಂಬ ಶುಲ್ಕ ವಿಧಿಸಬಾರದು ಎಂದು ಸೂಚಿಸಲಾಗಿದೆ.

***



(Release ID: 1627009) Visitor Counter : 246