ರೈಲ್ವೇ ಸಚಿವಾಲಯ

ದೇಶಾದ್ಯಂತ ಭಾರತೀಯ ರೈಲ್ವೆಯಿಂದ ಒಟ್ಟು 3060 “ಶ್ರಮಿಕ್ ಸ್ಪೆಷಲ್” ರೈಲುಗಳ ಕಾರ್ಯನಿರ್ವಹಣೆ

Posted On: 25 MAY 2020 7:13PM by PIB Bengaluru

ಮೇ 25, 2020 ಬೆಳಗ್ಗೆ 10:00 ಗಂಟೆಯವರೆಗೆ

ದೇಶಾದ್ಯಂತ ಭಾರತೀಯ ರೈಲ್ವೆಯಿಂದ ಒಟ್ಟು 3060 “ಶ್ರಮಿಕ್ ಸ್ಪೆಷಲ್ರೈಲುಗಳ ಕಾರ್ಯನಿರ್ವಹಣೆ

ಕಳೆದ 25 ದಿನಗಳಲ್ಲಿಶ್ರಮಿಕ್ ಸ್ಪೆಷಲ್ರೈಲುಗಳ ಮೂಲಕ 40 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ತಮ್ಮ ರಾಜ್ಯಗಳಿಗೆ ತಲುಪಿಸಿದೆ

ರೈಲ್ವೆ ಜಾಲದಲ್ಲಿ ಮೇ 23/ 24, 2020 ರಂದು ಕಂಡುಬಂದ ದಟ್ಟಣೆ ಈಗ ಅಂತ್ಯವಾಗಿದೆ

ಪ್ರತೀ ಮೂರರಲ್ಲಿ ಎರಡು ರೈಲುಗಳು ಬಿಹಾರ ಮತ್ತು ಉತ್ತರ ಪ್ರದೇಶಕ್ಕೆ ಹೋಗುವ ಮಾರ್ಗಗಳಲ್ಲಿ ಪಯಣಿಸುವ ಕಾರಣ
ಸಂಚಾರ ದಟ್ಟಣೆಯುಂಟಾಗಿದೆ ಮತ್ತು ರಾಜ್ಯ ಅಧಿಕಾರಿಗಳು ಆರೋಗ್ಯ ಶಿಷ್ಠಾಚಾರಗಳನ್ನು ಪೂರ್ಣಗೊಳಿಸಬೇಕಾದ
ಕಾರಣದಿಂದಾಗಿ ತಲಪುವ ತಾಣಗಳನ್ನು ತಡವಾಗಿ ತೆರವುಗೊಳಿಸಲಾಯಿತು

 

ರಾಜ್ಯ ಸರ್ಕಾರಗಳೊಂದಿಗೆ ಸಕ್ರಿಯ ಸಮಾಲೋಚನೆ ಮತ್ತು
ಪ್ರಯಾಣಕ್ಕಾಗಿ ಇತರ ಸುಗಮ ದಾರಿಗಳನ್ನು ಕಂಡುಕೊಳ್ಳುವ ಮೂಲಕ ವಿಷಯವನ್ನು ಪರಿಹರಿಸಲಾಗಿದೆ

 

ಮೇ 12, 2020 ರಿಂದ ಶ್ರಮಿಕ್ ವಿಶೇಷ ರೈಲುಗಳ ಜೊತೆಗೆ ನವದೆಹಲಿಯನ್ನು ಸಂಪರ್ಕಿಸುವ
30 ಜೋಡಿ ವಿಶೇಷ ರೈಲುಗಳು ಭಾರತೀಯ ರೈಲ್ವೆ ಜಾಲದಲ್ಲಿ ಕಾರ್ಯನಿರ್ವಹಿಸುತ್ತಿವೆ

 ಜೂನ್ 1, 2020 ರಂದು ಹೆಚ್ಚವರಿ 200 ವೇಳಾಪಟ್ಟಿ ನಿಗಧಿತ ರೈಲುಗಳನ್ನು ಪ್ರಾರಂಭಿಸಲು ಚಿಂತನೆ ನಡೆಸುತ್ತಿದೆ

 

ವಿವಿಧ ಸ್ಥಳಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರ ವ್ಯಕ್ತಿಗಳ ಸಂಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ವಿಶೇಷ ರೈಲುಗಳಿಂದ ಅವರುಗಳ ಸಾಗಾಟದ ಆದೇಶದ ನಂತರ, ಭಾರತೀಯ ರೈಲ್ವೆಯು ಮೇ 1,2020 ರಂದುಶ್ರಮಿಕ್ ವಿಶೇಷರೈಲುಗಳನ್ನು ಓಡಿಸಲು ನಿರ್ಧರಿಸಿದೆ.

ಮೇ 25, 2020 ಬೆಳಗ್ಗೆ 10:00 ಗಂಟೆಯವರೆಗೆ ದೇಶದ ವಿವಿಧ ರಾಜ್ಯಗಳಿಂದ ಒಟ್ಟು 3060 “ಶ್ರಮಿಕ್ ವಿಶೇಷರೈಲುಗಳ ಸಾಗಟ ಮೂಲಕ ವಿಶೇಷ ರೈಲುಗಳ ಸಂಚಾರ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲಾಗಿದೆ. ಶ್ರಮಿಕ್ ಸ್ಪೆಷಲ್ರೈಲುಗಳಿಂದಾಗಿ ತನಕ 40 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ತಮ್ಮ ವಾಸ ಸ್ಥಳಗಳನ್ನು ತಲುಪಿದ್ದಾರೆ.

3060 ಶ್ರಮಿಕ್ ವಿಶೇಷ ರೈಲುಗಳಲ್ಲಿ ಸೇವೆ ಪೂರೈಸಿದ 2608 ರೈಲುಗಳನ್ನು ಈಗಾಗಲೇ ನಿಲ್ಲಿಸಲಾಗಿದೆ, ಹಾಗೂ ಇನ್ನೂ 453 ರೈಲುಗಳು ವಲಸಿಗರ ಸಾಗಾಟದ ಚಾಲನೆಯಲ್ಲಿ ಓಡುತ್ತಿವೆ. 24.05.2020, ರಂದು 237 ಶ್ರಮಿಕ್ ಸ್ಪೆಷಲ್ಸ್ ರೈಲುಗಳು 3.1 ಲಕ್ಷ ಪ್ರಯಾಣಿಕರನ್ನು ಹೊತ್ತು ಚಲಿಸಿದೆ.

3060 ರೈಲುಗಳು ವಿವಿಧ ರಾಜ್ಯಗಳಿಂದ ಪ್ರಯಾಣ ಪ್ರಾರಂಭಿಸಿವೆ. ಇವುಗಳಲ್ಲಿ ಗುಜರಾತ್ (853 ರೈಲುಗಳು), ಮಹಾರಾಷ್ಟ್ರ (550 ರೈಲುಗಳು), ಪಂಜಾಬ್ (333 ರೈಲುಗಳು), ಉತ್ತರ ಪ್ರದೇಶ (221 ರೈಲುಗಳು), ಮತ್ತು ದೆಹಲಿ (181 ರೈಲುಗಳು) ಗರಿಷ್ಠ ರೈಲುಗಳು ಪಯಣ ಪ್ರಾರಂಭಿಸಿದ ಮೊದಲ ಐದು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಾಗಿವೆ.

ಅಲ್ಲದೆ, ಶ್ರಮಿಕ್ ವಿಶೇಷ ರೈಲುಗಳನ್ನು ದೇಶದ ವಿವಿಧ ರಾಜ್ಯಗಳ ಉದ್ಧೇಶಿತ ಸ್ಥಳಗಳಿಗಾಗಿ ಚಲಾಯಿಸಿದ್ದು, ತಾಣ ತಲುಪಿದ ನಂತರ ರೈಲುಗಳನ್ನು ನಿಲ್ಲಿಸಲಾಯಿತು. ಗರಿಷ್ಠ ರೈಲುಗಳನ್ನು ತಮ್ಮ ರೈಲ್ವೇ ನಿಲ್ದಾಣಗಳಲ್ಲಿ ಸ್ವೀಕರಿಸಿ, ತಾಣಗಳಲ್ಲಿ ನಿಲ್ಲಿಸಿದ ಮೊದಲ ಐದು ರಾಜ್ಯಗಳೆಂದರೆ ಉತ್ತರ ಪ್ರದೇಶ (1245 ರೈಲುಗಳು), ಬಿಹಾರ (846 ರೈಲುಗಳು), ಜಾರ್ಖಂಡ್ (123 ರೈಲುಗಳು), ಮಧ್ಯಪ್ರದೇಶ (112 ರೈಲುಗಳು), ಮತ್ತು ಒಡಿಶಾ (73 ರೈಲುಗಳು) ಗಳಾಗಿವೆ.

ರೈಲು ಮಾರ್ಗಗಳಲ್ಲಿ ಮೇ 23/24, 2020 ರಂದು ಅನುಭವಿಸಿದ ಅತಿ ದಟ್ಟಣೆಯ ಪರಿಸ್ಥಿತಿಯು ಈಗ ಮುಗಿದಿದೆ. ಬಿಹಾರ ಮತ್ತು ಉತ್ತರ ಪ್ರದೇಶಕ್ಕೆ ಹೋಗುವ ಮಾರ್ಗಗಳಲ್ಲಿ ಮೂರರಲ್ಲಿ ಎರಡು ರೈಲುಗಳ (ಮೂರನೇ ಎರಡರಷ್ಟು) ಸಂಚಾರವನ್ನು ಒಮ್ಮುಖಗೊಳಿಸುವುದರಿಂದ ಆದಿನಗಳಲ್ಲಿ ದಟ್ಟಣೆಯಾಗಿದೆ,ಮತ್ತು ವಿವಿಧ ರಾಜ್ಯ ಪ್ರಾಧಿಕಾರಗಳು ಪೂರ್ಣಗೊಳಿಸಬೇಕಾದ ಆರೋಗ್ಯ ಶಿಷ್ಠಾಚಾರ ವ್ಯವಸ್ಥೆಗಳ ಕಾರಣದಿಂದಾಗಿ ತಲುಪಬೇಕಾದ ತಾಣಗಳಲ್ಲಿನ ಹಳಿಗಳನ್ನು ತಡವಾಗಿ ತೆರವುಗೊಳಿಸುವುದರಿಂದ ದಟ್ಟಣೆಗಳು ಸಂಭವಿಸಿದೆ. ರಾಜ್ಯ ಸರ್ಕಾರಗಳೊಂದಿಗೆ ಸಕ್ರಿಯ ಸಮಾಲೋಚನೆ ಮತ್ತು ಪ್ರಯಾಣಕ್ಕಾಗಿ ಇತರ ಕಾರ್ಯಸಾಧ್ಯ ಮಾರ್ಗಗಳನ್ನು ಸಕಾಲಿಕವಾಗಿ ಕಂಡುಕೊಳ್ಳುವ ಮೂಲಕ ವಿಷಯವನ್ನು ಸಮರ್ಪಕವಾಗಿ ಪರಿಹರಿಸಲಾಗಿದೆ.

ಶ್ರಮಿಕ್ ವಿಶೇಷಗಳ ಜೊತೆಗೆ ರೈಲ್ವೆ ನವದೆಹಲಿಗೆ ಸಂಪರ್ಕ ಕಲ್ಪಿಸುವ 15 ಜೋಡಿ ವಿಶೇಷ ರೈಲುಗಳ ಸಂಚಾರವನ್ನೂ ಏರ್ಪಡಿಸಲಾಗಿದೆ. ಮತ್ತು ಜೂನ್ 1 ರಂದು ಇನ್ನೂ 200 ನೂತನ ರೈಲುಗಳನ್ನು ಪ್ರಾರಂಭಿಸಲು ವೇಳಾಪಟ್ಟಿ ಸಿದ್ಧಗೊಳಿಸಿ ಕಾರ್ಯಗತಗೊಳಿಸಲು ಭಾರತೀಯ ರೈಲ್ವೇ ಯೋಜಿಸಿದೆ.

***



(Release ID: 1626847) Visitor Counter : 202