ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ನಝಾಫ್ಘರ್ ನ ಚೌಧರಿ ಬ್ರಹ್ಮ ಪ್ರಕಾಶ ಆಯುರ್ವೇದ ಚರಕ ಸಂಸ್ಥಾನದ ಕೋವಿಡ್ -19 ಮೀಸಲು ಆರೋಗ್ಯ ಕೇಂದ್ರಕ್ಕೆ ಡಾ. ಹರ್ಷವರ್ಧನ್ ಭೇಟಿ

Posted On: 24 MAY 2020 7:21PM by PIB Bengaluru

ನಝಾಫ್ಘರ್ ಚೌಧರಿ ಬ್ರಹ್ಮ ಪ್ರಕಾಶ ಆಯುರ್ವೇದ ಚರಕ ಸಂಸ್ಥಾನದ

ಕೋವಿಡ್ -19 ಮೀಸಲು ಆರೋಗ್ಯ ಕೇಂದ್ರಕ್ಕೆ ಡಾ. ಹರ್ಷವರ್ಧನ್ ಭೇಟಿ

ಸಿ.ಬಿ.ಪಿ..ಸಿ.ಎಸ್. ಆಯುರ್ವೇದ ಮೂಲಕ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಮಾದರಿ ಪಾತ್ರವಹಿಸಿದೆ - ಡಾ. ಹರ್ಷವರ್ಧನ್

 

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಹರ್ಷವರ್ಧನ್ ಅವರು ಇಂದು ಹೊಸದಿಲ್ಲಿಯ ನಝಾಫ್ಘರ್ ನಲ್ಲಿರುವ ಚೌಧರಿ ಬ್ರಹ್ಮ ಪ್ರಕಾಶ ಆಯುರ್ವೇದ ಚರಕ ಸಂಸ್ಥಾನ (ಸಿ.ಬಿ.ಪಿ..ಸಿ.ಎಸ್.) ನಲ್ಲಿರುವ ಕೋವಿಡ್ -19 ಕ್ಕಾಗಿಯೇ ಮೀಸಲಾಗಿರುವ ಆರೋಗ್ಯ ಕೇಂದ್ರಕ್ಕೆ ( ಡಿ.ಸಿ.ಎಚ್.ಸಿ.) ಭೇಟಿ ನೀಡಿದರು.

ಅವರು ಕೇಂದ್ರದಲ್ಲಿ ಕೋವಿಡ್ -19 ರೋಗಿಗಳಿಗೆ ಒದಗಿಸಲಾಗುತ್ತಿರುವ ಚಿಕಿತ್ಸಾ ವ್ಯವಸ್ಥೆಗಳ ಪರಿಶೀಲನೆ ನಡೆಸಿದ್ದಲ್ಲದೆ, ಕೋವಿಡ್ -19 ಕೇಂದ್ರದಲ್ಲಿಯ ವೈದ್ಯರ ತಂಡದ ಜೊತೆ ಸಂವಾದ ನಡೆಸಿದರು ಹಾಗು ಕೋವಿಡ್ -19 ರೋಗಿಗಳ ಕ್ಷೇಮ ಸಮಾಚಾರವನ್ನು ವಿಚಾರಿಸಿದರು. ಅವರು ಕೋವಿಡ್ -19 ಆರೋಗ್ಯ ಕೇಂದ್ರದಲ್ಲಿ ಲಭ್ಯ ಇರುವ ಸವಲತ್ತುಗಳ ಬಗ್ಗೆ ಹಿಮ್ಮಾಹಿತಿ ಪಡೆದರಲ್ಲದೆ ಆಯುರ್ವೇದ ಔಷಧಿಗಳ ಮೂಲಕ ಒದಗಿಸಲಾದ ಚಿಕಿತ್ಸೆಯ ಫಲಿತಾಂಶಗಳ ಬಗ್ಗೆಯೂ ಮಾಹಿತಿ ಪಡೆದರು.

ಕೇಂದ್ರದಲ್ಲಿಯ ವಿವಿಧ ಸವಲತ್ತುಗಳ ಪರಿಶೀಲನೆ ಮತ್ತು ಸಂವಾದದ ಬಳಿಕ ಡಾ. ಹರ್ಷವರ್ಧನ್ ಅವರು ಸಿ.ಬಿ.ಪಿ..ಸಿ.ಎಸ್. ಡಿ.ಸಿ.ಎಚ್.ಸಿ. ಕಾರ್ಯವೈಖರಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಸಿ.ಬಿ.ಪಿ..ಸಿ.ಎಸ್. ಇಡೀ ತಂಡ ಸ್ಪೂರ್ತಿಯಿಂದ, ಉತ್ಸಾಹದಿಂದ, ಧೈರ್ಯದಿಂದ ಕೈಗೊಂಡ ಕ್ರಮಗಳು ಮತ್ತು ಪ್ರಯತ್ನಗಳ ಫಲವಾಗಿ ಇದು ಕೋವಿಡ್ ಪಾಸಿಟಿವ್ ರೋಗಿಗಳಿಗೆ ಆಯುರ್ವೇದ ತತ್ವಗಳ ಆಧಾರದ ಮೇಲೆ ಚಿಕಿತ್ಸೆ ನೀಡುತ್ತಿರುವ ಭಾರತದ ಪ್ರಥಮ ಆಯುರ್ವೇದ ಆಸ್ಪತ್ರೆಯಾಗಿ ಮೂಡಿ ಬಂದಿದೆ, ಇದು ಮೆಚ್ಚುಗೆಗೆ ಅರ್ಹವಾದ ಕಾರ್ಯ. ಭಾರತದಾದ್ಯಂತ ಕೋವಿಡ್ ರೋಗಿಗಳಿಗೆ ಆಯುರ್ವೇದ ಮೂಲಕ ಚಿಕಿತ್ಸೆ ಒದಗಿಸಿ ಸಿ.ಬಿ.ಪಿ..ಸಿ.ಎಸ್. ಮಾದರಿ ಪಾತ್ರವನ್ನು ನಿರ್ವಹಿಸಿದೆ ಎಂದರು. ಕೋವಿಡ್ -19 ರೋಗಿಗಳಿಂದ ಇಲ್ಲಿ ಧನಾತ್ಮಕ ಹಿಮ್ಮಾಹಿತಿ ಪಡೆಯುತ್ತಿರುವುದು ಹೃದಯಸ್ಪರ್ಶಿ ಸಂಗತಿಎಂದು ಆರೋಗ್ಯ ಸಚಿವರು ಹೇಳಿದರು. ಅವರು ಸಿ.ಬಿ.ಪಿ..ಸಿ.ಎಸ್. ತಂಡ ಮತ್ತು ನಾಯಕತ್ವವು ಕೋವಿಡ್ -19 ಪ್ರತಿಕ್ರಿಯೆ ಮತ್ತು ನಿರ್ವಹಣೆಯಲ್ಲಿ ಮುಂಚೂಣಿ ಪಾತ್ರ ವಹಿಸಿದ್ದಕ್ಕಾಗಿ ಅವರನ್ನು ಅಭಿನಂದಿಸಿದರು.

ಆಯುರ್ವೇದಭಾರತದ ಸಾಂಪ್ರದಾಯಿಕ ಜ್ಞಾನ ಮೂಲವಾಗಿದ್ದು, ಅದರಲ್ಲಿ ಭಾರೀ ಸಾಮರ್ಥ್ಯವಿದೆ ಎಂದೂ ಡಾ. ಹರ್ಷವರ್ಧನ್ ಹೇಳಿದರು. ಸಮಗ್ರವಾದ ಗುಣಪಡಿಸುವಿಕೆಯಲ್ಲಿ ಅದರ ಶಕ್ತಿ ಅಡಗಿದೆ ಮತ್ತು ಡಿ.ಸಿ.ಎಚ್.ಸಿ. ಯಲ್ಲಿ ಕೋವಿಡ್ -19 ರೋಗಿಗಳ ಚಿಕಿತ್ಸೆಯಲ್ಲಿ ಅದನ್ನು ಕ್ಷೇಮಕ್ಕಾಗಿ ಬಳಕೆ ಮಾಡಲಾಗುತ್ತಿದೆ. ಜ್ಞಾನ ಮತ್ತು ಪರಿಣತಿ ಇಡೀ ವಿಶ್ವದಲ್ಲಿ ಜನರಿಗೆ ಖಂಡಿತವಾಗಿಯೂ ಪ್ರಯೋಜನಕಾರಿಯಾಗಲಿದೆ, ಅದರಲ್ಲೀ ಕೋವಿಡ್ -19 ವಿರುದ್ದದ ಹೋರಾಟದಲ್ಲಿ ಇದು ಸಹಾಯಕ್ಕೆ ಬರಲಿದೆ ಎಂದವರು ನುಡಿದರು.

ನಾವು ಇಂದು 422 ಸರಕಾರಿ ಪ್ರಯೋಗಾಲಯಗಳ ಸರಪಳಿಯನ್ನು ಮತ್ತು 177 ಖಾಸಗಿ ಪ್ರಯೋಗಾಲಯಗಳ ಸರಪಳಿಯನ್ನು ಹೊಂದಿದ್ದೇವೆ. ಪರೀಕ್ಷಾ ಸಾಮರ್ಥ್ಯ ಎರಡೂ ಕ್ಷೇತ್ರಗಳಲ್ಲಿ ಹೆಚ್ಚಿಸಲಾಗಿದೆ. ಮತ್ತು ಇಂದು ದಿನವೊಂದಕ್ಕೆ 1,50,000 ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯವಿದೆ. ನಿನ್ನೆ ನಾವು 1,10,397 ಪರೀಕ್ಷೆಗಳನ್ನು ನಡೆಸಿದೆವು. ನಿನ್ನೆಯವರೆಗೆ ನಡೆಸಿದ ಪರೀಕ್ಷೆಗಳ ಒಟ್ಟು ಸಂಖ್ಯೆ 29,44,874 “ ಎಂದವರು ಹೇಳಿದರು.

ದೇಶಾದ್ಯಂತ ಸ್ಥಾಪನೆಯಾಗಿರುವ ಆರೋಗ್ಯ ರಕ್ಷಣಾ ಮೂಲ ಸೌಕರ್ಯಗಳ ಬಗ್ಗೆ ವಿವರ ಒದಗಿಸಿದ ಅವರು ಸಾಕಷ್ಟು ಆರೋಗ್ಯ ರಕ್ಷಣಾ ಮೂಲಸೌಕರ್ಯ ಮತ್ತು ಇತರ ಸವಲತ್ತುಗಳನ್ನು ದೇಶಾದ್ಯಂತ ಕೋವಿಡ್ -19 ನಿರ್ವಹಣೆಗಾಗಿ ಸ್ಥಾಪಿಸಲಾಗಿದೆ. ಇದನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ, ಅವುಗಳೆಂದರೆ ಕೋವಿಡ್ ಗಾಗಿಯೇ ಪ್ರತ್ಯೇಕ ಆಸ್ಪತ್ರೆಗಳು (ಡಿ.ಸಿ.ಎಚ್.ಎಸ್.), ಕೋವಿಡ್ ಗಾಗಿಯೇ ಆರೋಗ್ಯ ಕೇಂದ್ರಗಳು (ಡಿ.ಸಿ.ಎಚ್.ಸಿ.ಗಳು. ) ಮತ್ತು ಕೋವಿಡ್ ಶ್ರೂಶ್ರುಷಾ ಕೇಂದ್ರಗಳು (ಸಿ.ಸಿ.ಸಿ.ಗಳು ) , ಇವುಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರತ್ಯೇಕ ಹಾಸಿಗೆಗಳು, .ಸಿ.ಯು. ಹಾಸಿಗೆಗಳು, ಮತ್ತು ಇತರ ಸವಲತ್ತುಗಳು ಇರುತ್ತವೆ ಎಂದರು. ಇಂತಹ ಸವಲತ್ತುಗಳಿರುವ ಸಂಖ್ಯಾವಾರು ವಿವರಗಳನ್ನು ಒದಗಿಸಿದ ಅವರು ಒಟ್ಟು 968 ಕೋವಿಡ್ ಗಾಗಿಯೇ ಇರುವ ಆಸ್ಪತ್ರೆಗಳನ್ನು ದೇಶಾದ್ಯಂತ ಗುರುತಿಸಲಾಗಿದೆ. 2,50,397 ಹಾಸಿಗೆಗಳು ಇದರಲ್ಲಿವೆ (1,62,237 ಐಸೋಲೇಶನ್ ಹಾಸಿಗೆಗಳು ಮತ್ತು 20,468 .ಸಿ.ಯು. ಹಾಸಿಗೆಗಳು) ; 2,065 ಕೋವಿಡ್ ಗಾಗಿಯೇ ಇರುವ ಕೋವಿಡ್ ಆರೋಗ್ಯ ಕೇಂದ್ರಗಳು, ಇದರಲ್ಲಿ 1,76,946 ಹಾಸಿಗೆಗಳಿವೆ (1,20,596 ಐಸೋಲೇಶನ್ ಹಾಸಿಗೆಗಳು ಮತ್ತು 10,691 .ಸಿ.ಯು. ಹಾಸಿಗೆಗಳು) ಮತ್ತು 7,063 ಕೋವಿಡ್ ಆರೈಕೆ ಕೇಂದ್ರಗಳು , ಇಲ್ಲಿ ಹಾಸಿಗೆಗಳ ಸಂಖ್ಯೆ 6,46,438 ಇದೆಎಂದವರು ತಿಳಿಸಿದರು.

ರಕ್ಷಣಾ ಸಲಕರಣೆಗಳ ಕುರಿತಂತೆ ಮಾತನಾಡಿದ ಅವರು, “ದೇಶವೀಗ ಸಾಕಷ್ಟು ಸಂಖ್ಯೆಯಲ್ಲಿ ಎನ್.95 ಮುಖಗವಸುಗಳನ್ನು ಮತ್ತು ಪಿ.ಪಿ.. ಗಳನ್ನು ದೇಶೀಯ ಉತ್ಪಾದನಾ ವಲಯವನ್ನು ಚುರುಕುಗೊಳಿಸುವ ಮೂಲಕ ತಯಾರಿಸುತ್ತಿದೆ. ಮತ್ತು ರಾಜ್ಯಗಳ ಬೇಡಿಕೆಯನ್ನು ಸಾಕಷ್ಟು ಪೂರೈಸಲಾಗುತ್ತಿದೆಎಂದರು. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರೀಯ ಸಂಸ್ಥೆಗಳಿಗೆ 109.08 ಲಕ್ಷ ಎನ್. 95 ಮುಖಗವಸುಗಳನ್ನು ಮತ್ತು ಸುಮಾರು 72.8 ಲಕ್ಷ ವೈಯಕ್ತಿಕ ರಕ್ಷಣಾ ಸಲಕರಣೆಗಳನ್ನು (ಪಿ.ಪಿ..) ಒದಗಿಸಲಾಗಿದೆ ಎಂದರು.

ದೇಶದಲ್ಲಿ ಕೋವಿಡ್ -19 ನಿಯಂತ್ರಣ ಸ್ಥಿತಿಗತಿಯ ಬಗ್ಗೆ ಮಾತನಾಡಿದ ಡಾ. ಹರ್ಷವರ್ಧನ್ ಅವರು ಲಾಕ್ ಡೌನ್ ಗೆ ಮೊದಲು ,2020 ಮಾರ್ಚ್ 25 ಗೆ ಮೊದಲು , ಪ್ರಕರಣಗಳ ದುಪ್ಪಟ್ಟು ದರ 3 ದಿನಗಳ ಕಿಟಕಿಯಲ್ಲಿ ನೋಡಿದಾಗ 3.2 ರಷ್ಟಿತ್ತು, ಬಳಿಕ ಅದು 7 ದಿನಗಳಿಗೆ 3.0ಆಯಿತು ಬಳಿಕ 14 ದಿನಗಳಿಗೆ 4.1 ರಷ್ಟಾಯಿತು. ಇಂದು ಅದು 3 ದಿನಗಳ ಕಿಟಕಿಯಲ್ಲಿ ನೋಡಿದಾಗ 12.0 , ಹಾಗು 7 ದಿನಗಳ ಕಿಟಕಿಯಲ್ಲಿ ನೋಡಿದಾಗ 10.1 ಮತ್ತು 14 ದಿನಗಳ ಕಿಟಕಿಯಲ್ಲಿ ನೋಡಿದಾಗ 11.0 ಆಗಿದೆ. ಅದೇ ರೀತಿ ಮರಣ ಪ್ರಮಾಣ . % ಆಗಿದೆ ಮತ್ತು ಗುಣಮುಖ ದರ 41.2 % ಗೆ ಸುಧಾರಣೆಯಾಗಿದೆ. ಸ್ಪಷ್ಟವಾಗಿ ಹೇಳುವುದಾದರೆ ಲಾಕ್ ಡೌನ್ ನಿಂದಾಗಿ ಪರಿಸ್ಥಿತಿಯಲ್ಲಿ ಸುಧಾರಣೆಯಾಗಿದೆ. ಇದು ಕೋವಿಡ್ -19 ರೋಗಿಗಳಿಗೆ ಒದಗಿಸಲಾಗುವ ಆರೋಗ್ಯ ಸೇವೆಯ ಗುಣಮಟ್ಟವನ್ನೂ ಪ್ರತಿಫಲಿಸುತ್ತದೆ ಎಂದರು.

ಇಂದಿನವರೆಗೆ 201 ರೋಗಿಗಳು ಸಿ.ಬಿ.ಪಿ..ಸಿ.ಎಸ್. ಕೇಂದ್ರಕ್ಕೆ ದಾಖಲಾಗಿದ್ದಾರೆ. ಇವರಲ್ಲಿ 37 ರೋಗಿಗಳು ಗುಣಮುಖರಾಗಿದ್ದಾರೆ. ಮತ್ತು 100 ರೋಗಿಗಳಿಗೆ ಮನೆಯಲ್ಲಿ ಪ್ರತ್ಯೇಕತೆ ಅನುಸರಿಸುವಂತೆ ಸಲಹೆ ಮಾಡಲಾಗಿದೆ. 19 ರೋಗಿಗಳನ್ನು ಅವರ ವೈದ್ಯಕೀಯ ಪರಿಸ್ಥಿತಿಯನ್ನು ಪರಿಶೀಲಿಸಿ ವಿಶೇಷ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಕೇಂದ್ರದಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಒಟ್ಟು ಸಾಮರ್ಥ್ಯವಾದ 270 ಹಾಸಿಗೆಗಳ ಪೈಕಿ 135 ಹಾಸಿಗೆಗಳನ್ನು ಕಾಲ ಕಾಲಕ್ಕೆ ನೀಡಲಾದ ಎಲ್ಲಾ ಮಾರ್ಗದರ್ಶಿಗಳನ್ನು ಅನುಸರಿಸಿ ಮತ್ತು ಗುಣಮಟ್ಟ ಪ್ರಕ್ರಿಯೆಯನ್ವಯ ಕೋವಿಡ್ -19 ರೋಗಿಗಳಿಗಾಗಿಯೇ ಮೀಸಲಿಡಲಾಗಿದೆ. ನೆಲ ಅಂತಸ್ತು ಮತ್ತು ಎರಡನೆ ಮಾಳಿಗೆಯಲ್ಲಿ ಆರು ವಾರ್ಡ್ ಗಳಲ್ಲಿ ಹಾಸಿಗೆಗಳಿದ್ದು, ರೋಗಿಗಳನ್ನು ಸೋಂಕು, ಮಧ್ಯಮ ಮತ್ತು ಸಾಮಾನ್ಯ ರೋಗಲಕ್ಷಣಗಳ ರೋಗಿಗಳೆಂದು ವಿಂಗಡಿಸಿ ಅವರ ಶುಶ್ರೂಷೆಗೆ ಸಿದ್ದ ಮಾಡಿಡಲಾಗಿದೆ.

ಕೋವಿಡ್ -19 ರೋಗಿಗಳ ನಿರ್ವಹಣೆಯ ಬಗ್ಗೆ, ಅವರನ್ನು ಪ್ರತ್ಯೇಕಿಸಿರುವ ವ್ಯವಸ್ಥೆಯ ಬಗ್ಗೆ ಕೇಂದ್ರ ಆರೋಗ್ಯ ಸಚಿವರಿಗೆ ಮಾಹಿತಿ ನೀಡಲಾಯಿತು.ಹಿರಿಯ ಸಿಬ್ಬಂದಿಗಳನ್ನು ಒಳಗೊಂಡ ಸಿ.ಬಿ.ಪಿ..ಸಿ.ಎಸ್. ನಿರ್ದೇಶಕ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ವಿಶೇಷ ಕೋವಿಡ್ ಕಾರ್ಯ ಪಡೆಯನ್ನು ರಚಿಸಲಾಗಿದ್ದು, ಅದು ಕೋವಿಡ್ -19 ರೋಗಿಗಳ ಚಿಕಿತ್ಸೆ ಮತ್ತು ನಿರ್ವಹಣೆಯನ್ನು ಪರಾಮರ್ಶೆ ಮಾಡುತ್ತದೆ.

ಸಿ.ಬಿ.ಪಿ..ಸಿ. ಎಸ್. ನಲ್ಲಿ ಕೋವಿಡ್ -19 ರೋಗಿಗಳ ಚಿಕಿತ್ಸೆಯಲ್ಲಿ ಸಮಗ್ರವಾದಂತಹ ಧೋರಣೆಯನ್ನು ಅನುಸರಿಸಲಾಗುತ್ತಿದೆ. ಆಯುಷ್ ಸಚಿವಾಲಯದ ಶಿಷ್ಟಾಚಾರವನ್ನು ಪಾಲಿಸಲಾಗುತ್ತಿದೆ, ಮತ್ತು ಆಯುರ್ವೇದಿಕ್ ಚಿಕಿತ್ಸೆ ಹಾಗು ಗಿಡ ಮೂಲಿಕೆಗಳ ಚಿಕಿತ್ಸೆಯ ಜೊತೆ ಯೋಗ, ಧ್ಯಾನ, ಪ್ರಾಣಾಯಾಮ ಇತ್ಯಾದಿಗಳನ್ನೂ ಅನುಸರಿಸಲಾಗುತ್ತದೆ.

ಜಿ.ಎನ್.ಸಿ.ಟಿ.ಡಿ. ಆಯುಷ್ ನಿರ್ದೇಶಕ ಡಾ. ಆರ್. ಕೆ. ಮಾನ್ ಚಂದ , ಸಿ.ಬಿ.ಪಿ..ಸಿ.ಎಸ್. ನಿರ್ದೇಶಕ ಪ್ರಾಂಶುಪಾಲ ಡಾ. ವಿದುಲಾ ಗುಜ್ಜಾರವಾರ್, ಹಿರಿಯ ಬೋಧಕ ಸಿಬ್ಬಂದಿಗಳು , ವೈದ್ಯರು ಮತ್ತು ಸಚಿವಾಲಯದ ಅಧಿಕಾರಿಗಳು ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದರು.

***


(Release ID: 1626840) Visitor Counter : 241