ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಪ್ರಧಾನಮಂತ್ರಿಯವರ ದೃಷ್ಟಿಕೋನದ ಆತ್ಮನಿರ್ಭರ ಭಾರತವನ್ನುಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ಭಾರತೀಯ ಅಂಚೆ ಇಲಾಖೆಗೆ ಶ್ರೀ ರವಿಶಂಕರ್ ಪ್ರಸಾದ್ ಸೂಚನೆ
Posted On:
22 MAY 2020 7:21PM by PIB Bengaluru
ಪ್ರಧಾನಮಂತ್ರಿಯವರ ದೃಷ್ಟಿಕೋನದ ಆತ್ಮನಿರ್ಭರ ಭಾರತವನ್ನುಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು
ಭಾರತೀಯ ಅಂಚೆ ಇಲಾಖೆಗೆ ಶ್ರೀ ರವಿಶಂಕರ್ ಪ್ರಸಾದ್ ಸೂಚನೆ
2000 ಟನ್ ಔಷಧಿ ಮತ್ತು ವೈದ್ಯಕೀಯ ಉಪಕರಣಗಳನ್ನು ಭಾರತೀಯ ಅಂಚೆ ದೇಶಾದ್ಯಂತ ವಿತರಣೆ ಮಾಡುತ್ತಿದೆ
ಆಧಾರ್ ಸಂಖ್ಯೆ ಜೋಡಿಸಿದ ಪಾವತಿ ವ್ಯವಸ್ಥೆ (ಎ.ಇ.ಪಿ.ಎಸ್.) ಬಳಸಿಕೊಂಡು ಮನೆ ಬಾಗಿಲಿನ ಹಂತದಲ್ಲಿ ರೂ .1500 ಕೋಟಿ ವಿತರಣೆ
ಕೇಂದ್ರ ಸಂಪರ್ಕ, ಕಾನೂನು ಮತ್ತು ನ್ಯಾಯ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐ.ಟಿ ಸಚಿವ ಶ್ರೀ ರವಿಶಂಕರ್ ಪ್ರಸಾದ್ ಅವರು ಪ್ರಧಾನಮಂತ್ರಿಯವರ ದೃಷ್ಟಿಯ ಆತ್ಮಾನಿರ್ಭಾರ ಭಾರತವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಭಾರತೀಯ ಅಂಚೆ ಇಲಾಖೆಯ ಪ್ರಧಾನ ಪೋಸ್ಟ್ ಮಾಸ್ಟರ್ ಜನರಲ್ ಮತ್ತು ಭಾರತೀಯ ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತೀಯ ಅಂಚೆ ಇಲಾಖೆಯ ಚಟುವಟಿಕೆಗಳು ಮತ್ತು ಕಾರ್ಯಯೋಜನೆಗಳನ್ನು ಕೇಂದ್ರ ಸಚಿವರು ವಿಡಿಯೋ ಸಂವಾದ ಮೂಲಕ ಪರಿಶೀಲಿಸಿದರು. ಪ್ರಧಾನ ಕಚೇರಿಯಲ್ಲಿ ಜರುಗಿದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಸಂಪರ್ಕ ರಾಜ್ಯ ಸಚಿವ ಶ್ರೀ ಸಂಜಯ್ ಶಮರಾವ್ ಧೋತ್ರೆ, ಭಾರತೀಯ ಅಂಚೆಯ ಕಾರ್ಯದರ್ಶಿ ಶ್ರೀ ಪಿ. ಕೆ. ಬಿಸೊಯಿ, ಭಾರತೀಯ ಅಂಚೆಯ ಡಿಜಿ. ಶ್ರೀಮತಿ ಅರುಂಧತಿ ಘೋಷ್ ಮತ್ತು ಇತರ ಹಿರಿಯ ಅಧಿಕಾರಿಗಳೆಲ್ಲಾ ಹಾಜರಿದ್ದರು.
ಸಿ-ಡಾಟ್ ಅಭಿವೃದ್ಧಿಪಡಿಸಿದ ಮೊದಲ “ಮೇಕ್ ಇನ್ ಇಂಡಿಯಾ” ವಿಡಿಯೋ ಸಂವಾದ ವ್ಯವಸ್ಥೆ ಮೂಲಕ ಕಾರ್ಯಕ್ರಮ ನಡೆಸಲಾಯಿತು. ಅಂತೆಯೇ, ಇದು ಈ ವಿಡಿಯೋ ಸಂವಾದ ವ್ಯವಸ್ಥೆಯ ಮೊದಲ ಯಶಸ್ವಿ ಪ್ರಯೋಗವಾಗಿದೆ.
ಭಾರತೀಯ ಅಂಚೆ ಇಲಾಖೆಯ ಕೋವಿಡ್ ತಡೆ ಪ್ರಯತ್ನಗಳ ಮುಖ್ಯಾಂಶಗಳು ಹೀಗಿವೆ:
- ದೇಶಾದ್ಯಂತ ಅಗತ್ಯವಿರುವ ವ್ಯಕ್ತಿಗಳು ಮತ್ತು ಆಸ್ಪತ್ರೆಗಳು ಬುಕ್ ಮಾಡಿದ 2000 ಟನ್ಗಿಂತಲೂ ಹೆಚ್ಚು ಅಗತ್ಯ ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ತಲುಪಿಸಲಾಯಿತು.
- ಸರಬರಾಜು ಸರಪಳಿಯನ್ನು ಬಲಪಡಿಸಲು ರಸ್ತೆ ಸಾರಿಗೆ ಸಾಗಾಟ ಜಾಲವು ಪ್ರತಿದಿನ 75 ಟನ್ಗಿಂತ ಹೆಚ್ಚು ಅಂಚೆಗಳು ಮತ್ತು ಪಾರ್ಸೆಲ್ಗಳನ್ನು ಹೊತ್ತು ಸಾಗಿದೆ ಮತ್ತು 25000 ಕಿ.ಮೀ ಗಿಂತಲೂ ಹೆಚ್ಚು ಕ್ರಮಿಸುತ್ತದೆ..
- ಭಾರತೀಯ ಅಂಚೆಯ ಪೇಮೆಂಟ್ಸ್ ಬ್ಯಾಂಕಿನ ಮೂಲಕ ಆಧಾರ್ ಸಂಖ್ಯೆ ಜೋಡಿಸಿದ ಪಾವತಿ ವ್ಯವಸ್ಥೆಯನ್ನು (ಎ.ಇ.ಪಿ.ಎಸ್) ಬಳಸಿಕೊಂಡು ಸುಮಾರು 85 ಲಕ್ಷ ಫಲಾನುಭವಿಗಳಿಗೆ ಸುಮಾರು ರೂ. 1500 ಕೋಟಿಯನ್ನು ವಿತರಿಸಿದೆ
- ಆರ್ಥಿಕ ಸೇರ್ಪಡೆಯ ವಿವಿಧ ಯೋಜನೆಗಳ ಅಡಿಯಲ್ಲಿ 75 ಲಕ್ಷ ಎಲೆಕ್ಟ್ರಾನಿಕ್ ಹಣ ವರ್ಗಾವಣೆ ಆದೇಶಗಳಲ್ಲಿ (ಇ.ಎಂ.ಒ)ಒಟ್ಟು ರೂ.760 ಕೋಟಿಯನ್ನು ಪಾವತಿಮಾಡಿದೆ.
- ಫಲಾನುಭವಿ ಖಾತೆಗಳಲ್ಲಿ ರೂ .1100 ಕೋಟಿ ಮೌಲ್ಯದ ನೇರ ಲಾಭ ವರ್ಗಾವಣೆ (ಡಿ.ಬಿ.ಟಿ) ಪಾವತಿಗಳನ್ನು ವಿತರಿಸಲಾಗಿದೆ.
- ಕಾರ್ಮಿಕರು, ಪುರಸಭೆ ಕಾರ್ಮಿಕರು ಇತ್ಯಾದಿಗಳಿಗೆ ಮಂದಿಗೆ ಸ್ವ-ಕೊಡುಗೆ ಮೂಲಕ ಮತ್ತು ಎನ್.ಜಿ.ಒ.ಗಳ ಸಹಯೋಗದೊಂದಿಗೆ ಸುಮಾರು 6 ಲಕ್ಷ ಆಹಾರ ಮತ್ತು ಪಡಿತರ ಪ್ಯಾಕೆಟ್ಗಳನ್ನು ವಿತರಿಸಲಾಯಿತು.
ಅಂಚೆ ಸಿಬ್ಬಂದಿಗಳ ಸಮರ್ಪಿತ ತಂಡದ ಪ್ರಯತ್ನವಾಗಿ ಕೈಗೊಂಡ ಚಟುವಟಿಕೆಗಳನ್ನು ಸಿ.ಪಿ.ಎಂ.ಜಿ.ಗಳು ಹಂಚಿಕೊಂಡರು. ವಿಭಿನ್ನ ವಲಯಗಳು ವಿಭಿನ್ನ ಚಟುವಟಿಕೆಗಳಲ್ಲಿ ಈ ರೀತಿಯ ಉತ್ತಮ ಸಾಧನೆ ಮಾಡಿವೆ:
- ಗುಜರಾತ್ ಮತ್ತು ಉತ್ತರ ಪ್ರದೇಶವು ಔಷಧೀಯ ತಯಾರಕರು ಮತ್ತು ಔಷಧ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮತ್ತು ಅವುಗಳ ಸಾಗಣೆಯ ಪರಿಹಾರವನ್ನು ಒದಗಿಸುವಲ್ಲಿ ಬಹಳಷ್ಟು ಮುಂದಾಯಿತು.
- ಬಿಹಾರ, ಉತ್ತರ ಪ್ರದೇಶ, ಗುಜರಾತ್, ಆಂಧ್ರಪ್ರದೇಶ, ರಾಜಸ್ಥಾನ, ಪಂಜಾಬ್ ಮತ್ತು ತೆಲಂಗಾಣಗಳು ಆರ್ಥಿಕ ಸೇರ್ಪಡೆ ಕಾರ್ಯದಲ್ಲಿ ಪ್ರಮುಖ ರಾಜ್ಯಗಳಾಗಿವೆ.
- ದೆಹಲಿ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ವಲಯಗಳು ದೇಶದ ಉತ್ತರ, ಈಶಾನ್ಯ ಮತ್ತು ದಕ್ಷಿಣ ರಾಜ್ಯಗಳಿಗೆ ಪ್ರವೇಶ ದ್ವಾರವಾಗಿ ಪ್ರವರ್ತಿಸಿ ಉತ್ತಮ ಪ್ರದರ್ಶನ ನೀಡಿವೆ.
- ಹರಿಯಾಣ, ಕರ್ನಾಟಕ, ಕೇರಳ ವಲಯಗಳು ಸಾರ್ವಜನಿಕರಿಂದ ಸೇವಾ ವಿನಂತಿಯನ್ನು ಸ್ವೀಕರಿಸಲು ಮತ್ತು ಅದನ್ನು ಪೂರೈಸಲು ಗ್ರಾಹಕರ ಆವಶ್ಯಕತೆಯನುಸಾರ ಮಾಡಿದ ನೂತನ ಮೊಬೈಲ್ ಅಪ್ಲಿಕೇಶನ್ಗಳನ್ನು ಅಭಿವೃದ್ಧಿಪಡಿಸಿವೆ.
ಸೇವಾ ವಿತರಣೆಯ ಕೆಲವು ನವೀನ ಮಾದರಿಗಳು ಮತ್ತು ಪ್ರಾದೇಶಿಕ ವಿಶೇಷತೆಗಳನ್ನು ಉತ್ತೇಜಿಸುವ ಕೆಲಸಗಳನ್ನೂ ಸಹ ಸಿ.ಪಿ.ಎಂ.ಜಿ.ಗಳಿಂದ ಈ ರೀತಿ ಹಂಚಿಕೊಳ್ಳಲ್ಪಟ್ಟಿದೆ:
- ದೇಶಾದ್ಯಂತ ಮಾತಾ ವೈಷ್ಣೋ ದೇವಿ ದೇವಸ್ಥಾನದ ಪ್ರಸಾದ ಮತ್ತು ಕಾಶ್ಮೀರದಿಂದ ಕೇಸರಿ ವಿತರಣೆಯನ್ನು ಜಮ್ಮು ಮತ್ತು ಕಾಶ್ಮೀರ ಶೀಘ್ರದಲ್ಲೇ ಅಂತಿಮಗೊಳಿಸಿದೆ.
- ಅಂಚೆ ಕಚೇರಿಗಳ ಮೂಲಕ ಮತ್ತು ಸಿ.ಎಸ್.ಸಿ.ಗಳ ಸಹಯೋಗದೊಂದಿಗೆ ಭಾರತೀಯ ಔಷಧಿಗಳ ಬುಕಿಂಗ್ ಮತ್ತು ವಿತರಣೆಯನ್ನು ಪಂಜಾಬ್ ಉತ್ತೇಜಿಸಿದೆ
- “ನಿಮ್ಮ ಬ್ಯಾಂಕ್ ನಿಮ್ಮ ಬಾಗಿಲಿಗೆ(ಅಪ್ಕಾ ಬ್ಯಾಂಕ್ ಅಪ್ಕೆ ದ್ವಾರ್)” ಎಂದು ಸುಮಾರು 11.65 ಲಕ್ಷ ಮಂದಿಗೆ ರೂ .147 ಕೋಟಿ ಹಣ ವಿತರಣೆಯೊಂದಿಗೆ ಕಾರ್ಯಯೋಜನೆ ಮೂಲಕ ಬಿಹಾರ ಉತ್ತಮ ಸಾಧನೆ ಮಾಡಿದೆ.
ಇಲಾಖೆಗೆ ತಮ್ಮ ದೃಷ್ಟಿಯನ್ನು ಹಂಚಿಕೊಂಡ ಕೇಂದ್ರ ಸಚಿವರು, ದ್ದು, ಪ್ರಧಾನಮಂತ್ರಿಯವರ ದೃಷ್ಟಿಯ ಆತ್ಮಾ ನಿರ್ಭರ ಭಾರತವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಸಿ.ಪಿ.ಎಂ.ಜಿ.ಗಳು ಮತ್ತು ಭಾರತೀಯ ಅಂಚೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೋವಿಡ್ ನಂತರದ ಪರಿಸ್ಥಿತಿಯಲ್ಲಿ ಅವರು ಈ ಕೆಳಗಿನ ಆದ್ಯತೆಯ ಕ್ಷೇತ್ರಗಳನ್ನು ಕಾರ್ಯಚಟುವಟಿಕೆಗಳಿಗಾಗಿ ಇಲಾಖೆಗೆ ವಿವರಿಸಿದರು:
- ಆಯುರ್ವೇದ, ಯುನಾನಿ, ಸಿದ್ಧ ಇತ್ಯಾದಿಗಳನ್ನು ಒಳಗೊಂಡಿರುವ ಭಾರತೀಯ ಔಷಧ ಪದ್ಧತಿಯ ಔಷಧಗಳನ್ನು ದೇಶದ ವಿವಿಧ ಭಾಗಗಳಲ್ಲಿ ಸಾಗಾಟ ಹಾಗೂ ವಿತರಣೆಗೆ ಸಾರಿಗೆ ಬೆಂಬಲವನ್ನು ಒದಗಿಸಿ.
- ವಲಸಿಗರ ಮಾಹಿತಿ (ಡೇಟಾಬೇಸ್), ಅವರ ಕೌಶಲ್ಯ ಮಿತಿಗಳು, ಅವರು ಬ್ಯಾಂಕ್ ಖಾತೆಗಳನ್ನು ತೆರೆಯಲು ಮತ್ತು ಆಮಲಕ ಎಂ.ಜಿ.ಎನ್.ಆರ್.ಇ.ಜಿ.ಎ ಮತ್ತು ಇತರ ಸರ್ಕಾರದ ಯೋಜನೆಗಳ.ಅಡಿಯಲ್ಲಿ ಪಾವತಿಗಳನ್ನು ಸುಲಭಗೊಳಿಸಲು "ಅಂಚೆಪೇದೆ(ಡಕಿಯಾ)" ಮೊದಲ ಸಂಪನ್ಮೂಲವಾಗಬೇಕು.
- ಟೆಲಿ-ಮೆಡಿಸಿನ್, ಕೃಷಿ ಉತ್ಪನ್ನಗಳು, ಕರಕುಶಲ ವಸ್ತುಗಳು, ಕುಶಲಕರ್ಮಿ ಉತ್ಪನ್ನಗಳು ಮತ್ತು ಇತರ ಸ್ಥಳೀಯ ವಿಶೇಷತೆಗಳನ್ನು ಉತ್ಪಾದಕರಿಂದ ಮಧ್ಯವರ್ತಿಗಳಿಲ್ಲದೆ ನೇರವಾಗಿ ಅಂತಿಮ ಖರೀದಿದಾರರಿಗೆ ಸಾಗಾಟಮಾಡಿ ಸಂಪರ್ಕಿಸುವ ಮೂಲಕ ಭಾರತೀಯ ಸರಬರಾಜು ಸರಪಳಿಯ ಮುಂಚೂಣಿಯ ಧ್ವಜ ಧಾರಕರಾಗಲು ಭಾರತೀಯ ಅಂಚೆ ಕಾರ್ಯತಂತ್ರದ ಯೋಜನೆ, ಕ್ಷೇತ್ರದಿಂದ ಸಲಹೆಗಳನ್ನು ಸಿದ್ಧಪಡಿಸಬೇಕು.
- ಕೋವಿಡ್ ಅವಧಿಯಲ್ಲಿ ಔಷಧಿಗಳು ಮತ್ತು ಅಗತ್ಯ ವಸ್ತುಗಳ ವಿತರಣೆಯಿಂದ ಪಡೆದ ಅನುಭವವು ನೂತನ ವಿತರಣಾ ಮಾದರಿಗೆ ಮಾನದಂಡವಾಗಲು ಈ ಅವಕಾಶವನ್ನು ಇಲಾಖೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಚಿವರು ಹೇಳಿದರು.
- "ಕೋವಿಡ್ ಯೋಧರ" ಪಾತ್ರದಲ್ಲಿ ಅಂಚೆ ನೌಕರರು ಮತ್ತು ಅಧಿಕಾರಿಗಳು ಮಾಡಿದ ಉತ್ತಮ ಕಾರ್ಯಗಳನ್ನು ಸಚಿವರು ಈ ಸಂದರ್ಭದಲ್ಲಿ ಶ್ಲಾಘಿಸಿದರು.
“ವಿಶಾಲವಾದ ಅಂಚೆ ಕಚೇರಿಯ ಜಾಲ ಮತ್ತು ತಂತ್ರಜ್ಞಾನದ ಶಕ್ತಿಯೊಂದಿಗೆ ಸಾಮಾನ್ಯ ಭಾರತೀಯರಿಗೆ ಅಧಿಕಾರ ನೀಡಬೇಕಾಗಿದೆ, ಅಂದರೆ ಡಿಜಿಟಲ್ ಸೇರ್ಪಡೆ ಮೂಲಕ ಆರ್ಥಿಕ ಸೇರ್ಪಡೆ ಮತ್ತು ಮಾನವ ಸಂಪನ್ಮೂಲ ಬೃಹತ್ ಜಾಲದ ಪೂರೈಕೆ ಸರಪಳಿಯಿಂದ ಇದು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ” ಎಂದು ಕೇಂದ್ರ ಸಚಿವರು ಹೇಳಿದರು.
***
(Release ID: 1626251)
Visitor Counter : 247