ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಲಾಕ್ ಡೌನ್ ಅವಧಿಯಲ್ಲಿ ವಿವಿಧ ಜವಾಹರ್ ನವೋದಯ ವಿದ್ಯಾಲಯಗಳಲ್ಲಿ ಸಿಲುಕಿಕೊಂಡಿದ್ದ ಪ್ರವಾಸಿ ವಿದ್ಯಾರ್ಥಿಗಳನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಸುರಕ್ಷಿತವಾಗಿ ಸ್ವಸ್ಥಾನಗಳಿಗೆ ಸ್ಥಳಾಂತರಿಸಿದೆ - ಕೇಂದ್ರ ಮಾನವ ಸಂಪನ್ಮೂಲ ಸಚಿವರು

Posted On: 21 MAY 2020 3:25PM by PIB Bengaluru

ಲಾಕ್ ಡೌನ್ ಅವಧಿಯಲ್ಲಿ ವಿವಿಧ ಜವಾಹರ್ ನವೋದಯ ವಿದ್ಯಾಲಯಗಳಲ್ಲಿ ಸಿಲುಕಿಕೊಂಡಿದ್ದ ಪ್ರವಾಸಿ ವಿದ್ಯಾರ್ಥಿಗಳನ್ನು

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಸುರಕ್ಷಿತವಾಗಿ ಸ್ವಸ್ಥಾನಗಳಿಗೆ ಸ್ಥಳಾಂತರಿಸಿದೆ

- ಕೇಂದ್ರ ಮಾನವ ಸಂಪನ್ಮೂಲ ಸಚಿವರು

 

ದೇಶದಾದ್ಯಂತ ವಿವಿಧ ಬಾಗಗಳಲ್ಲಿರುವ ಸಹ-ಶೈಕ್ಷಣಿಕ ವಸತಿ ಶಾಲಾ ವ್ಯವಸ್ಥೆಯ 173 ಜವಾಹರ್ ನವೋದಯ ವಿದ್ಯಾಲಯಗಳಲ್ಲಿ ಲಾಕ್ ಡೌನ್ ಅವಧಿಯಲ್ಲಿ ತಂಗಿದ್ದ 3000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಕಾರ್ಯಯೋಜನೆಯನ್ನು ಮೇ 15, 2020 ರಂದು ನವೋದಯ ವಿದ್ಯಾಲಯ ಸಮಿತಿಯು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ 'ನಿಶಾಂಕ್' ಹೇಳಿದರು.

ನವೋದಯ ವಿದ್ಯಾಲಯ ಸಮಿತಿಯು ನಡೆಸುತ್ತಿರುವ ಸಹ-ಶೈಕ್ಷಣಿಕ ವಸತಿ ಶಾಲೆಗಳಾಗಿವೆ ಜವಾಹರ್ ನವೋದಯ ವಿದ್ಯಾಲಯಗಳು, ಇದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಡಿಯಿರುವ ಸ್ವಾಯತ್ತ ಸಂಸ್ಥೆಯಾಗಿದೆ. ಪ್ರಧಾನವಾಗಿ ಸಾಮಾಜಿಕ-ಆರ್ಥಿಕ ಸ್ಥಿತಿಗಳನ್ನು ಪರಿಗಣಿಸದೆ ಗ್ರಾಮೀಣ ಪ್ರದೇಶದ ಕುಟುಂಬಗಳ ವಿದ್ಯಾರ್ಥಿಗಳಿಗೆ ಸಂಸ್ಕೃತಿಯ ಬಲವಾದ ಅಂಶ, ಮೌಲ್ಯಗಳ ಪ್ರೋತ್ಸಾಹನೆ, ಪರಿಸರದ ಅರಿವು, ಸಾಹಸ ಚಟುವಟಿಕೆಗಳು ಮತ್ತು ದೈಹಿಕ ಶಿಕ್ಷಣ ಸೇರಿದಂತೆ ಉತ್ತಮ ಗುಣಮಟ್ಟದ ಆಧುನಿಕ ಶಿಕ್ಷಣವನ್ನು ಒದಗಿಸುವುದು ನವೋದಯ ವಿದ್ಯಾಲಯಗಳ ಮುಖ್ಯ ಉದ್ದೇಶಗಳಾಗಿವೆ. ಪ್ರಸ್ತುತ, ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಂಜೂರಾದ 661 ಜವಾಹರ್ ನವೋದಯ ವಿದ್ಯಾಲಯಗಳಿವೆ, ಹಾಗೂ ಇದರಲ್ಲಿ 2.60 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಉಚಿತವಾಗಿ ಪಡೆಯುತ್ತಿದ್ದಾರೆ.

https://twitter.com/DrRPNishank/status/1263388946618187776?s=19

ನವೋದಯ ವಿದ್ಯಾಲಯ ಯೋಜನೆಯ ಒಂದು ಪ್ರಮುಖ ಲಕ್ಷಣವೆಂದರೆ ಭಾರತದ ಸಂಸ್ಕೃತಿ ಮತ್ತು ಜನತೆಯ ವೈವಿಧ್ಯತೆ ಮತ್ತು ಬಹುತ್ವದ ತಿಳುವಳಿಕೆಯನ್ನು ಉತ್ತೇಜಿಸಲು ನಿರ್ದಿಷ್ಟ ಭಾಷಾ ಪ್ರದೇಶದಲ್ಲಿ ನೆಲೆಗೊಂಡಿರುವ ಜವಾಹರ್ ನವೋದಯ ವಿದ್ಯಾಲಯದಿಂದ ಬೇರೆ ಭಾಷಾ ಪ್ರದೇಶದಲ್ಲಿ ಮತ್ತೊಂದು ಜವಾಹರ್ ನವೋದಯ ವಿದ್ಯಾಲಯಕ್ಕೆ ವಿದ್ಯಾರ್ಥಿಗಳು ಪರಸ್ಪರ ವಿನಿಮಯ ಪ್ರವಾಸ ಹೋಗುವುದು. ಪರಸ್ಪರ ವಿನಿಮಯ ಪ್ರವಾಸ ಯೋಜನೆ ಬಹಳ ಹಿಂದಿನಿಂದಲೂ ಜಾರಿಯಲ್ಲಿದೆ ಮತ್ತು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಏಕೀಕರಣದ ಭಾವನೆಯನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ, ನವೋದಯ ವಿದ್ಯಾಲಯ ಸಮಿತಿ ತನ್ನ ಬೇಸಿಗೆ ರಜೆಯ ವೇಳಾಪಟ್ಟಿಯನ್ನು ಮೊದಲೇ ತಯಾರಿಸಿತ್ತು ಮತ್ತು ಜವಾಹರ್ ನವೋದಯ ವಿದ್ಯಾಲಯಗಳನ್ನು ಮಾರ್ಚ್ 21, 2020 ಮುಂಚಿತವಾಗಿಯೇ ಮುಚ್ಚಲಾಯಿತು.

ಜವಾಹರ್ ನವೋದಯ ವಿದ್ಯಾಲಯಗಳ ಬಹುಪಾಲು ವಿದ್ಯಾರ್ಥಿಗಳು ರಾಷ್ಟ್ರವ್ಯಾಪಿ ಲಾಕ್ಡೌನ್ ಹೇರುವ ಮೊದಲು ಆಯಾ ನಿವಾಸಗಳಿಗೆ (ಹೆಚ್ಚಾಗಿ ಜಿಲ್ಲಾ ಗಡಿಯೊಳಗೆ) ಪ್ರಯಾಣಿಸಬಹುದಾದರೂ, ಪ್ರವಾಸ ಯೋಜನೆಯಡಿ 173 ಜವಾಹರ್ ನವೋದಯ ವಿದ್ಯಾಲಯಗಳಲ್ಲಿ ಉಳಿದುಕೊಂಡಿದ್ದ 3169 ಹೊರವಲಯ/ಹೊರರಾಜ್ಯಗಳ ವಿದ್ಯಾರ್ಥಿಗಳು ಮತ್ತು ಪುಣೆಯ ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿ ಜೆ.. (ಮುಖ್ಯ) ಪರೀಕ್ಷೆಗೆ ಪೂರ್ವಸಿದ್ಧತಾ ತರಗತಿಗಳಿಗೆ ಹಾಜರಾಗಲು ಬಂದ 12 ವಿದ್ಯಾರ್ಥಿಗಳಳಿಗೆ ಅವರ ನಿವಾಸಗಳಿಗೆ ಸಕಾಲಿಕವಾಗಿ ಪ್ರಯಾಣಿಸಲು ಸಾಧ್ಯವಾಗಲಿಲ್ಲ

ಲಾಕ್ಡೌನ್ ಅವಧಿಯನ್ನು ಮತ್ತಷ್ಟು ವಿಸ್ತರಿಸುವುದರೊಂದಿಗೆ, ಹೊರವಲಯದ ವಿದ್ಯಾರ್ಥಿಗಳು (ಹುಡುಗಿಯರು ಸೇರಿದಂತೆ) ಮತ್ತು ಹೆಚ್ಚಾಗಿ 13 - 15 ವರ್ಷ ವಯಸ್ಸಿನವರು, ಕಳೆದ 6 ತಿಂಗಳುಗಳಿಂದ ತಮ್ಮ ಕುಟುಂಬಗಳನ್ನು ಭೇಟಿ ಮಾಡದ ಕಾರಣ ಹೆಚ್ಚು ಪ್ರಕ್ಷುಬ್ಧ ಮತ್ತು ಮನೆಯ ಕುರಿತು ಚಿಂತನೆಯ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು.

ವಲಸೆ ಬಂದ ವಿದ್ಯಾರ್ಥಿಗಳನ್ನು ಬೇಗನೆ ತಮ್ಮ ಮನೆಗಳಿಗೆ ಸ್ಥಳಾಂತರಿಸಲು ವಿವಿಧ ಆಯ್ಕೆಗಳನ್ನು ಸಮಿತಿ ಪರಿಗಣಿಸುತ್ತಿತ್ತು. ಕೇಂದ್ರ ಗೃಹ ಸಚಿವಾಲಯ, ರಾಜ್ಯ ಮತ್ತು ಜಿಲ್ಲಾಡಳಿತಗಳೊಂದಿಗೆ ಹಲವಾರು ಸುತ್ತಿನ ಚರ್ಚೆಗಳ ನಂತರ ಮತ್ತು ಅಗತ್ಯವಿರುವ ಎಲ್ಲ ಅನುಮತಿಗಳನ್ನು ಪಡೆದ ನಂತರ, ಸಮಿತಿಯು ಲಾಕ್ಡೌನ್ ಅವಧಿಯಲ್ಲಿಯೂ ಸಹ ವಿಶೇಷವಾಗಿ ವ್ಯವಸ್ಥೆಗೊಳಿಸಿದ ಬಸ್ಗಳ ಮೂಲಕ ವಿದ್ಯಾರ್ಥಿಗಳನ್ನು ರಸ್ತೆ ಸಾರಿಗೆ ಮೂಲಕ ಸ್ಥಳಾಂತರಿಸಲು ಪ್ರಾರಂಭಿಸಿತು. ವಿವಿಧ ಜವಾಹರ್ ನವೋದಯ ವಿದ್ಯಾಲಯಗಳಿಂದ ವಿದ್ಯಾರ್ಥಿಗಳ ಸ್ಥಳಾಂತರವು ಮೇ 9,2020 ರವರೆಗೆ ಮುಂದುವರೆಯಿತು. ಹಾಗೂ ಝಾಬುವಾದಲ್ಲಿ ಅಂತಿಮ ತಂಡದ ವಿದ್ಯಾರ್ಥಿಗಳು ತಮ್ಮ ಗಮ್ಯಸ್ಥಾನಗಳನ್ನು ತಲುಪುವ ಮೂಲಕ ಮೇ 15,2020 ರಂದು ಪ್ರಕ್ರಿಯೆಯು ಮುಕ್ತಾಯಗೊಂಡಿತು.

ಸಂಪೂರ್ಣ ಚಟುವಟಿಕೆಯನ್ನು ನವೋದಯ ವಿದ್ಯಾಲಯ ಸಮಿತಿಯು ಸೂಕ್ಷ್ಮವಾಗಿ ಯೋಜಿಸಿ ಕಾರ್ಯಗತಗೊಳಿಸಿತು. ವಾಹನಗಳ ನೈರ್ಮಲ್ಯ, ಮುಖಕವಚ(ಗವಸು)ಗಳು, ಸ್ಯಾನಿಟೈಜರ್ಗಳ ಜೊತೆಗೆ ವಿದ್ಯಾರ್ಥಿಗಳಿಗೆ ಆಹಾರ ಮತ್ತು ಇತರ ಉಪಭೋಗ್ಯ ವಸ್ತುಗಳನ್ನು ಒದಗಿಸುವುದು ಮತ್ತು ಶಿಕ್ಷಕರನ್ನು ಬೆಂಗಾವಲು ಮಾಡುವ ಎಲ್ಲ ವ್ಯವಸ್ಥೆಗಳನ್ನು ಸಹ ಮಾಡಲಾಯಿತು. ಪ್ರಯಾಣದ ಸಂಪೂರ್ಣ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಹೊರಗಿನ ಆಹಾರವನ್ನು ನೀಡಲಾಗಲಿಲ್ಲ. ಪ್ರಯಾಣದ ಪ್ರಾರಂಭದಲ್ಲಿ ಮತ್ತು ಜಿಲ್ಲಾ ಆಡಳಿತಗಳ ನೆರವಿನೊಂದಿಗೆ ಆಯಾ ಸ್ಥಳಗಳಿಗೆ ಆಗಮಿಸುವಾಗ ವಿದ್ಯಾರ್ಥಿಗಳ ವೈದ್ಯಕೀಯ ತಪಾಸಣೆಯನ್ನು ಸಹ ಖಚಿತಪಡಿಸಲಾಯಿತು.

ವಿದ್ಯಾರ್ಥಿಗಳು ವಿವಿಧ ಸ್ಥಳಗಳಿಗೆ ಪ್ರಯಾಣಿಸಿದ ಅಂತರದ ದೃಷ್ಟಿಕೋನದಿಂದ ಸುದೀರ್ಘ ಪ್ರಯಾಣವೆಂದರೆ, 3060 ಕಿ.ಮೀ ದೂರವನ್ನು ಒಳಗೊಂಡ ಜವಾಹರ್ ನವೋದಯ ವಿದ್ಯಾಲಯ ಕರ್ನಾಲ್ (ಹರಿಯಾಣ) ಮತ್ತು ಜವಾಹರ್ ನವೋದಯ ವಿದ್ಯಾಲಯ, ತಿರುವನಂತಪುರಂ (ಕೇರಳ) ನಡುವೆಯಾಗಿತ್ತು. ಮಾರ್ಗದಲ್ಲಿ ಪಯಣವು ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಸೇರಿದಂತೆ 7ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಆದರೆ ಜವಾಹರ್ ನವೋದಯ ವಿದ್ಯಾಲಯ, ಬೋಲಂಗೀರ್ (ಒಡಿಶಾ) ಮತ್ತು ಜವಾಹರ್ ನವೋದಯ ವಿದ್ಯಾಲಯ, ಅನ್ನೂಪುರ (ಎಂಪಿ) ನಡುವೆ ಕೇವಲ 420 ಕಿ.ಮೀಗಳ ಅಂತರವಿತ್ತು.

ಜವಾಹರ್ ನವೋದಯ ವಿದ್ಯಾಲಯ, ನೈನಿತಾಲ್ (ಉತ್ತರಾಖಂಡ) ವಿದ್ಯಾರ್ಥಿಗಳು ಉತ್ತರ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕದ ಮಾರ್ಗದಲ್ಲಿ ಹಾದು ಸಾಗಿ ಜವಾಹರ್ ನವೋದಯ ವಿದ್ಯಾಲಯ, ವಯನಾಡ್ (ಕೇರಳ) ಅನ್ನು ತಲುಪಿದ್ದರೆ, ಜವಾಹರ್ ನವೋದಯ ವಿದ್ಯಾಲಯ, ಸೇನಾಪತಿ (ಮಣಿಪುರ) ದಿಂದ ಬಂದವರು ಕಠಿಣ ಭೂಪ್ರದೇಶಗಳಾದ ನಾಗಾಲ್ಯಾಂಡ್, ಅಸ್ಸಾಂ, ಪಶ್ಚಿಮ ಬಂಗಾಳದ, ಬಿಹಾರ ಮತ್ತು ಯುಪಿ ಮೂಲಕ ಪ್ರಯಾಣಿಸಿ ಜವಾಹರ್ ನವೋದಯ ವಿದ್ಯಾಲಯ,ಝಬುವಾ (ಮಧ್ಯಪ್ರದೇಶ) ವನ್ನು ಸುರಕ್ಷಿತವಾಗಿ ಮೇ 15 2020 ರಂದು ತಲುಪಿದರು

ಅಗತ್ಯವಾದ ಅನುಮತಿಗಳನ್ನು ಪಡೆಯುವಲ್ಲಿನ ವಿಳಂಬದಿಂದಾಗಿ, ಜವಾಹರ್ ನವೋದಯ ವಿದ್ಯಾಲಯ, ಅಮೆಥಿ (ಯುಪಿ)ಯಿಂದ ಜವಾಹರ್ ನವೋದಯ ವಿದ್ಯಾಲಯ, ಅಲೆಪ್ಪಿ(ಕೇರಳ)ಗೆ ಪ್ರಯಾಣಿಸಬೇಕಾಗಿದ್ದ ಪ್ರಯಾಣವು, 5ದಿನಗಳು ಮತ್ತು 15 ಗಂಟೆಗಳ ಕಾಲ ತೆಗೆದುಕೊಂಡ ಸುದೀರ್ಘ ಕಾಲಾವಧಿಯಾಗಿ ಹೋಯಿತು. ಆದರೆ ಜವಾಹರ್ ನವೋದಯ ವಿದ್ಯಾಲಯ, ಬೋಲಂಗೀರ್ನಿಂದ ಅನ್ನೂಪುರದ ಜವಾಹರ್ ನವೋದಯ ವಿದ್ಯಾಲಯ ವರೆಗೆ ಪ್ರಯಾಣವು ಅತಿ ಕಡಿಮೆ ಸಮಯದಲ್ಲಿ (9 ಗಂಟೆ 30 ನಿಮಿಷಗಳು) ಪೂರ್ಣಗೊಂಡಿತು .

ವಿದ್ಯಾರ್ಥಿಗಳ ಸಂಚಾರದ ವೇಳೆಯಲ್ಲಿ, ಸಾಗಾಟ, ಚಲನವಲನಗಳನ್ನು ಎನ್.ವಿ.ಎಸ್ ಮತ್ತು ಎಂ.ಎಚ್.ಆರ್.ಡಿ ಯಲ್ಲಿ ದಿನನಿತ್ಯದ ಪ್ರಗತಿ ವರದಿಗಳ ಮೂಲಕ ಸೂಕ್ಷ್ಮವಾಗಿ ಗಮನಿಸಲಾಗುತ್ತಿತ್ತು. 173 ಶಾಲೆಗಳ ಎಲ್ಲಾ 3169 ವಿದ್ಯಾರ್ಥಿಗಳು ಒಟ್ಟಾರೆ 4.3 ದಶಲಕ್ಷ ಕಿಲೋಮೀಟರ್ ದೂರ ಪ್ರಯಾಣ ಕ್ರಮಿಸಿದ್ದಾರೆ ಹಾಗೂ ಯಾವುದೇ ಸಮಸ್ಯೆಗಳಿಲ್ಲದೆ ಸುರಕ್ಷಿತವಾಗಿ ತಮ್ಮ ತಮ್ಮ ಗಮ್ಯಸ್ಥಾನಗಳನ್ನು ತಲುಪಿದ್ದಾರೆ. ಇದು ನವೋದಯ ವಿದ್ಯಾಲಯ ಸಮಿತಿಯ ಶಿಸ್ತುಬದ್ಧ ಅಧಿಕಾರಿಗಳ ಮತ್ತು ಶ್ಲಾಘನೆಗೆ ಅರ್ಹರಾದ ವಿವಿಧ ರಾಜ್ಯ / ಜಿಲ್ಲಾ ಅಧಿಕಾರಿಗಳ ಉತ್ಸಾಹ, ಬದ್ಧತೆ ಮತ್ತು ಅವಿರತ ಪ್ರಯತ್ನಗಳು, ಹಾಗೂ ಅವರ ದೃಢ ಸಂಕಲ್ಪಗಳನ್ನು ಪ್ರತಿಬಿಂಬಿಸುತ್ತದೆ.

***



(Release ID: 1625999) Visitor Counter : 269