ಸಂಪುಟ

ಬ್ಯಾಂಕಿಂಗೇತರ ಹಣಕಾಸು ಕಂಪನಿಗಳ (ಎನ್.ಬಿ.ಎಫ್.ಸಿ.ಗಳು) ಮತ್ತು ವಸತಿ ಹಣಕಾಸು ಕಂಪನಿ (ಎಚ್.ಎಫ್.ಸಿ.) ಲಿಕ್ವಿಡಿಟಿ ಒತ್ತಡ ಎದುರಿಸಲು ವಿಶೇಷ ಲಿಕ್ವಿಡಿಟಿ ಯೋಜನೆಗೆ ಸಂಪುಟದ ಅನುಮೋದನೆ

Posted On: 20 MAY 2020 2:19PM by PIB Bengaluru

ಬ್ಯಾಂಕಿಂಗೇತರ ಹಣಕಾಸು ಕಂಪನಿಗಳ (ಎನ್.ಬಿ.ಎಫ್.ಸಿ.ಗಳು) ಮತ್ತು ವಸತಿ ಹಣಕಾಸು ಕಂಪನಿ (ಎಚ್.ಎಫ್.ಸಿ.)

ಲಿಕ್ವಿಡಿಟಿ ಒತ್ತಡ ಎದುರಿಸಲು ವಿಶೇಷ ಲಿಕ್ವಿಡಿಟಿ ಯೋಜನೆಗೆ ಸಂಪುಟದ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಎನ್.ಬಿ.ಎಫ್.ಸಿ.ಗಳು/ಎಚ್.ಎಫ್.ಸಿ.ಗಳ ಲಿಕ್ವಿಡಿಟಿ (ಹಣ ಹರಿವು) ಸ್ಥಿತಿಯನ್ನು ಸುಧಾರಿಸಲು ಬ್ಯಾಂಕಿಂಗೇತರ ಹಣಕಾಸು ಕಂಪನಿಗಳ (ಎನ್.ಬಿ.ಎಫ್.ಸಿ.ಗಳು) ಮತ್ತು ವಸತಿ ಹಣಕಾಸು ಕಂಪನಿ (ಎಚ್.ಎಫ್.ಸಿ.ಗಳು) ಗಳಿಗಾಗಿ ವಿಶೇಷ ಲಿಕ್ವಿಡಿಟಿ ಯೋಜನೆ ಪ್ರಕಟಿಸುವ ಹಣಕಾಸು ಸಚಿವಾಲಯದ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.

ಹಣಕಾಸು ಪರಿಣಾಮ:

ಇದರ ನೇರ ಹಣಕಾಸು ಹೊರೆ ಸರ್ಕಾರಕ್ಕೆ 5 ಕೋಟಿ ರೂ. ಆಗಿದ್ದು, ಇದನ್ನು ವಿಶೇಷ ಉದ್ದೇಶದ ವಾಹಕ (ಎಸ್.ಪಿ.ವಿ.)ಈಕ್ವಿಟಿ ಕೊಡುಗೆಯೂ ಆಗಬಹುದು. ಒಳಗೊಂಡ ಖಾತ್ರಿ ನೀಡುವವರೆಗೆ ಇದರ ಮೇಲೆ ಸರ್ಕಾರಕ್ಕೆ ಯಾವುದೇ ಹಣಕಾಸು ಹೊರೆ ಇರುವುದಿಲ್ಲ. ಆದಾಗ್ಯೂ, ಕೋರಿಕೆಯಿಂದಾಗಿ, ಸರ್ಕಾರದ ಹೊಣೆಗಾರಿಕೆಯ ವ್ಯಾಪ್ತಿಯು ಖಾತ್ರಿ ಮಿತಿಗೆ ಒಳಪಟ್ಟ ಡೀಫಾಲ್ಟ್ ಮೊತ್ತಕ್ಕೆ ಸಮಾನವಾಗಿರುತ್ತದೆ. ಒಟ್ಟು ಖಾತರಿಯ ಮಿತಿಯನ್ನು 30,000 ಕೋಟಿ ರೂ., ಅಗತ್ಯಕ್ಕನುಗುಣವಾಗಿ ವಿಸ್ತರಿಸಲಾಗುವುದು.

ಯೋಜನೆಯ ವಿವರಗಳು:

ಸರ್ಕಾರವು ಬ್ಯಾಂಕಿಂಗೇತರ ಹಣಕಾಸು ಕಂಪನಿಗಳು (ಎನ್.ಬಿ.ಎಫ್.ಸಿ.ಗಳು) ಮತ್ತು ವಸತಿ ಹಣಕಾಸು ಕಂಪನಿಗಳ (ಎಚ್.ಎಫ್.ಎಸ್.ಸಿ.ಗಳು) ಲಿಕ್ವಿಡಿಟಿ ಸಂಕಷ್ಟವನ್ನು ವಿಶೇಷ ಲಿಕ್ವಿಡಿಟಿ ಯೋಜನೆಯ ಮೂಲಕ ನಿವಾರಿಸಲು ಚೌಕಟ್ಟೊಂದನ್ನು ಪ್ರಸ್ತಾಪಿಸಿದೆ. ಒತ್ತಡದ ಆಸ್ತಿಯ ನಿಧಿ (ಎಸ್..ಎಫ್.) ನಿರ್ವಹಣೆಗೆ ಎಸ್.ಪಿ.ವಿ. ಸ್ಥಾಪಿಸಲಾಗುತ್ತದೆ, ಇದರ ವಿಶೇಷ ಭದ್ರತೆಯನ್ನು ಭಾರತ ಸರ್ಕಾರ ನೀಡುತ್ತದೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್.ಬಿ..) ಮಾತ್ರವೇ ಖರೀದಿಸುತ್ತದೆ. ಇಂಥ ಭದ್ರತೆಗಳ ಮಾರಾಟದಿಂದ ಬರುವ ಹಣವನ್ನು ಎಸ್.ಪಿ.ವಿ.ಗಳು ಎನ್.ಬಿ.ಎಫ್.ಸಿ./ಎಚ್.ಎಫ್.ಸಿ. ಗಳ ಅಲ್ಪಕಾಲೀನ ಸಾಲ ಪಡೆಯಲು ಬಳಸುತ್ತವೆ. ಯೋಜನೆಯನ್ನು ಹಣಕಾಸು ಸೇವೆಗಳ ಇಲಾಖೆಯು ನಿರ್ವಹಿಸುತ್ತದೆ, ಅದು ವಿವರವಾದ ಮಾರ್ಗಸೂಚಿಗಳನ್ನು ನೀಡುತ್ತದೆ.

ಅನುಷ್ಠಾನದ ವೇಳಾಪಟ್ಟಿ:

ಬೃಹತ್ ಸಾರ್ವಜನಿಕ ವಲಯದ ಬ್ಯಾಂಕ್ ಒತ್ತಡದ ನಿಧಿಯ ನಿರ್ವಹಣೆಗಾಗಿ ಎಸ್.ಪಿ.ವಿ. ಸ್ಥಾಪಿಸುತ್ತದೆ, ಇದು ಭಾರತ ಸರ್ಕಾರವು ಖಾತ್ರಿನೀಡುವ ಬಡ್ಡಿ ಇರುವ ವಿಶೇಷ ಭದ್ರತೆಗಳನ್ನು ನೀಡುತ್ತದೆ, ಇದನ್ನು ಆರ್‌.ಬಿಐ ಮಾತ್ರ ಖರೀದಿಸುತ್ತದೆ. ಎಸ್.ಪಿ.ವಿ. ಭದ್ರತೆಗಳನ್ನು ಅಗತ್ಯಕ್ಕೆ ಅನುಗುಣವಾಗಿ ಮತ್ತು ಬಾಕಿ ಭದ್ರತೆಗಳ 30,000 ಕೋಟಿ ರೂಪಾಯಿ ಮೀರದ ಮಿತಿಗೆ ಒಳಪಟ್ಟು, ಅಗತ್ಯಕ್ಕೆ ಅನುಗುಣವಾಗಿ ನೀಡುತ್ತದೆ. ಎಸ್.ಪಿ.ವಿ. ಬಿಡುಗಡೆ ಮಾಡುವ ಭದ್ರತೆಗಳನ್ನು ಆರ್.ಬಿ.. ಖರೀದಿಸುತ್ತದೆ ಮತ್ತು ಅದರ ಫಲವನ್ನು ಎಸ್.ಪಿ.ವಿ.ಗಳು ಅರ್ಹ ಎನ್.ಬಿ.ಎಫ್.ಸಿ.ಗಳು/ಎಚ್.ಎಪ್.ಸಿ.ಗಳಿಂದ ಅಲ್ಪಾವಧಿಯ (3 ತಿಂಗಳವರೆಗೆ ಉಳಿಕೆ ಮೆಚ್ಯೂರಿಟಿ) ಸಾಲ ಪಡೆಯಲು ಬಳಸಬಹುದು.

ಪರಿಣಾಮ: ವಿವಿಧ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಎನ್‌.ಬಿಎಫ್ಸಿಗಳ ನಡುವೆ ಬಹು ದ್ವಿಪಕ್ಷೀಯ ಒಪ್ಪಂದಗಳನ್ನು ಒಳಗೊಂಡಿರುವ ಭಾಗಶಃ ಸಾಲ ಖಾತರಿ ಯೋಜನೆಯಂತಲ್ಲದೆ, ಎನ್‌.ಬಿಎಫ್‌.ಸಿ.ಗಳು ತಮ್ಮ ಪ್ರಸ್ತುತ ಆಸ್ತಿ ಬಂಡವಾಳವನ್ನು ಮುಕ್ತಾಯಗೊಳಿಸುವ ಅಗತ್ಯವಿರುತ್ತದೆ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಹಣದ ಹರಿವನ್ನು ಒಳಗೊಂಡಿರುತ್ತದೆ, ಪ್ರಸ್ತಾವಿತ ಯೋಜನೆಯು ಎಸ್‌.ಪಿವಿ ನಡುವಿನ ಏಕ ತಾಣ ವ್ಯವಸ್ಥೆಯಾಗಿದೆ ಮತ್ತು ಎನ್‌.ಬಿಎಫ್‌.ಸಿಗಳು ತಮ್ಮ ಪ್ರಸ್ತುತ ಆಸ್ತಿ ಬಂಡವಾಳವನ್ನು ಲಿಕ್ವಿಡೇಟ್ ಮಾಡುತ್ತದೆ. ಯೋಜನೆಯು ಎನ್‌.ಬಿ.ಎಫ್‌.ಸಿಗೆ ಹೂಡಿಕೆ ದರ್ಜೆಯನ್ನು ಪಡೆಯಲು ಅಥವಾ ವಿತರಿಸಿದ ಬಾಂಡ್ಗಳಿಗೆ ಉತ್ತಮ ಶ್ರೇಣೀಕರಣ ಪಡೆಯಲು ಸಹಕಾರಿಯಾಗಿದೆ. ಯೋಜನೆಯು ಕಾರ್ಯನಿರ್ವಹಿಸಲು ಸುಲಭವಾಗಬಹುದು ಮತ್ತು ಬ್ಯಾಂಕೇತರ ವಲಯದಿಂದ ಹಣದ ಹರಿವನ್ನು ಹೆಚ್ಚಿಸುತ್ತದೆ.

ಪ್ರಯೋಜನಗಳು:

ಇದನ್ನು 2020-21 ಬಜೆಟ್ ಭಾಷಣದಲ್ಲಿ ಪ್ರಕಟಿಸಲಾಗಿತ್ತು, ವ್ಯವಸ್ಥೆ ಪಿಸಿಜಿಎಸ್. ಮೂಲಕ ಒದಗಿಸಿದ ತರುವಾಯ ಎನ್.ಬಿ.ಎಫ್.ಸಿ.ಗಳು/ಎಚ್.ಎಫ್.ಸಿ.ಗಳಿಗೆ ಹೆಚ್ಚುವರಿ ಲಿಕ್ವಿಡಿಟಿ ವ್ಯವಸ್ಥೆ ಒದಗಿಸಲು ರೂಪಿಸಲಾಗಿದೆ. ವ್ಯವಸ್ಥೆಯು ಸರ್ಕಾರ ಮತ್ತು ಆರ್.ಬಿ.. ಕೈಗೊಂಡ ಲಿಕ್ವಿಡಿಟಿ ಕ್ರಮಗಳಿಗೆ ಪೂರಕವಾಗಿದೆ. ಯೋಜನೆಯು ಎನ್‌.ಬಿಎಫ್ಸಿ / ಎಚ್‌.ಎಫ್‌.ಸಿ / ಎಮ್‌.ಎಫ್‌.ಎಲ್ಗಳ ಸಾಲ ಸಂಪನ್ಮೂಲಗಳನ್ನು ಹೆಚ್ಚಿಸುವ ಮೂಲಕ ನೈಜ ಆರ್ಥಿಕತೆಗೆ ಪ್ರಯೋಜನವನ್ನು ನೀಡುತ್ತದೆ. ಯೋಜನೆ ವಾಸ್ತವ ಆರ್ಥಿಕತೆಗೆ ಪ್ರಯೋಜನಕಾರಿಯಾಗಿದ್ದು, ಎನ್.ಬಿ.ಎಫ್.ಸಿ.ಗಳು/ಎಛ್.ಎಫ್.ಸಿ.ಗಳು/ಎಂ.ಎಫ್..ಗಳ ಸಾಲದ ಮೂಲಗಳನ್ನು ಹೆಚ್ಚಿಸುತ್ತದೆ.

ಹಿನ್ನೆಲೆ

ಭಾಗಶಃ ಸಾಲ ಖಾತ್ರಿ ಯೋಜನೆ (ಪಿಸಿಜಿಎಸ್) ಮೂಲಕ ಒದಗಿಸಲಾದ ಎನ್‌.ಬಿಎಫ್‌.ಸಿ / ಎಚ್‌.ಎಫ್‌.ಸಿಗಳಿಗೆ ಹೆಚ್ಚುವರಿ ದ್ರವ್ಯತೆ ಸೌಲಭ್ಯವನ್ನು ಒದಗಿಸಲು ಯಾಂತ್ರಿಕ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು 2020-21 ಸಾಲಿನ ಬಜೆಟ್ ಭಾಷಣದಲ್ಲಿ ಘೋಷಿಸಲಾಗಿತ್ತು. ಕೋವಿಡ್ 19ರಿಂದ ಉಂಟಾದ ಪರಿಸ್ಥಿತಿಯಿಂದ ಆರ್ಥಿಕ ಸ್ಥಿರತೆ ಬಲಪಡೆಸಲು ಮೇಲಿನ ಬಜೆಟ್ ಪ್ರಕಟಣೆಯನ್ನು ಅನುಷ್ಠಾಗೊಳಿಸುವ ತುರ್ತು ಅಗತ್ಯ ಉಂಟಾಗಿದೆ.

***(Release ID: 1625506) Visitor Counter : 335