ಸಂಪುಟ

"ಅತಿ ಸಣ್ಣ ಆಹಾರ ಸಂಸ್ಕರಣಾ ಘಟಕಗಳ (ಎಫ್‌ಎಂಇ) ವಿಧ್ಯುಕ್ತ ಯೋಜನೆ" ಗೆ ಸಂಪುಟದ ಅಂಗೀಕಾರ

Posted On: 20 MAY 2020 2:27PM by PIB Bengaluru

"ಅತಿ ಸಣ್ಣ ಆಹಾರ ಸಂಸ್ಕರಣಾ ಘಟಕಗಳ (ಎಫ್ಎಂಇವಿಧ್ಯುಕ್ತ ಯೋಜನೆಗೆ ಸಂಪುಟದ ಅಂಗೀಕಾರ

 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, "ಅತಿ ಸಣ್ಣ ಆಹಾರ ಸಂಸ್ಕರಣಾ ಘಟಕಗಳ ವಿಧ್ಯುಕ್ತ ಯೋಜನೆ" (ಎಫ್‌ಎಂಇ) ಎಂಬ 10,000 ಕೋಟಿ ರೂ.ಗಳ ಹೊಸ ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗೆ ಅನುಮೋದನೆ ನೀಡಿದೆ. ವೆಚ್ಚವನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ ಭರಿಸುತ್ತವೆ.

ಯೋಜನೆಯ ವಿವರಗಳು:

ಉದ್ದೇಶಗಳು: 

·        ಅತಿ ಸಣ್ಣ ಆಹಾರ ಸಂಸ್ಕರಣಾ ಘಟಕಗಳಿಗೆ ಹಣಕಾಸು ಲಭ್ಯತೆಯ ಹೆಚ್ಚಳ.

·        ಗುರಿ ಉದ್ಯಮಗಳ ಆದಾಯದಲ್ಲಿ ಹೆಚ್ಚಳ.

·        ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳಿಗೆ ಹೆಚ್ಚಿನ ಒತ್ತು.

·        ಬೆಂಬಲ ವ್ಯವಸ್ಥೆಗಳ ಸಾಮರ್ಥ್ಯಗಳನ್ನು ಬಲಪಡಿಸುವುದು.

·        ಅಸಂಘಟಿತ ವಲಯದಿಂದ  ಔಪಚಾರಿಕ ವಲಯಕ್ಕೆ ಪರಿವರ್ತನೆ.

·        ಮಹಿಳಾ ಉದ್ಯಮಿಗಳು ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳ ಮೇಲೆ ವಿಶೇಷ ಗಮನ.

·        ತ್ಯಾಜ್ಯದಿಂದ ಸಂಪತ್ತಿನ ಸೃಷ್ಟಿ ಚಟುವಟಿಕೆಗಳಿಗೆ ಪ್ರೋತ್ಸಾಹ.

·        ಬುಡಕಟ್ಟು ಜಿಲ್ಲೆಗಳಲ್ಲಿ ಕಿರು ಅರಣ್ಯ ಉತ್ಪನ್ನಗಳ ಮೇಲೆ ಗಮನ.

ಪ್ರಮುಖ ಅಂಶಗಳು:

·        ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆ. ವೆಚ್ಚವನ್ನು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಗಳು 60:40 ಅನುಪಾತದಲ್ಲಿ ಕ್ಕೆ ಹಂಚಿಕೊಳ್ಳತ್ತವೆ.

·        2,00,000 ಕಿರು ಉದ್ಯಮಗಳಿಗೆ ಸಾಲಾಧಾರಿತ ಸಹಾಯಧನದೊಂದಿಗೆ ನೆರವು.

·        2020-21 ರಿಂದ 2024-25ರವರೆಗಿನ 5 ವರ್ಷಗಳ ಅವಧಿಯಲ್ಲಿ ಯೋಜನೆಯನ್ನು ಜಾರಿಗೆ ತರಲಾಗುವುದು.

·        ಕ್ಲಸ್ಟರ್ ವಿಧಾನ.

·        ಬಹು ಬೇಗ ಹಾಳಾಗುವ ವಸ್ತುಗಳ ಮೇಲೆ ಹೆಚ್ಚು ಗಮನ.

ವೈಯಕ್ತಿಕ ಕಿರು ಘಟಕಗಳಿಗೆ ಬೆಂಬಲ:

·        ಅತಿ ಸಣ್ಣ ಘಟಕವು ಗರಿಷ್ಠ 10 ಲಕ್ಷ ರೂ.ಗಳ ಅರ್ಹ ಯೋಜನಾ ವೆಚ್ಚದ ಮೇಲೆ ಶೇ.35 ರಷ್ಟು ಸಾಲಾಧಾರಿತ ಸಬ್ಸಿಡಿ ಪಡೆಯುತ್ತದೆ.

·        ಫಲಾನುಭವಿಗಳ ಕೊಡುಗೆ ಕನಿಷ್ಠ ಶೇ.10 ರಷ್ಟಿರುತ್ತದೆ, ಉಳಿದದ್ದು ಸಾಲ.

·        ಡಿಪಿಆರ್ ಮತ್ತು ತಾಂತ್ರಿಕ ಉನ್ನತೀಕರಣಕ್ಕಾಗಿ ಕೌಶಲ್ಯ ತರಬೇತಿ.

ಎಫ್ಪಿಒಗಳು / ಸ್ವಸಹಾಯ ಸಂಘಗಳು / ಸಹಕಾರಿ ಸಂಸ್ಥೆಗಳಿಗೆ ನೆರವು:

·        ಮೂಲ ಬಂಡವಾಳ ಮತ್ತು ಸಣ್ಣ ಸಾಧನಗಳ ಖರೀದಿಗೆ ಸದಸ್ಯರಿಗೆ ಸಾಲ ನೀಡಲು ಸ್ವಸಹಾಯ ಸಂಘಗಳಿಗೆ ಬೀಜ ಬಂಡವಾಳ.

·        ಸಾಮಾನ್ಯ ಮೂಲಸೌಕರ್ಯ, ಪ್ಯಾಕೇಜಿಂಗ್, ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ಗೆ ಅನುದಾನ.

·        ಕೌಶಲ್ಯ ತರಬೇತಿ ಬೆಂಬಲ.

·        ಸಾಲಾಧಾರಿತ ಬಂಡವಾಳ ಸಹಾಯಧನ.

ಅನುಷ್ಠಾನ ಅವಧಿ:

·        ಅಖಿಲ ಭಾರತ ಆಧಾರದ ಮೇಲೆ ಈ ಯೋಜನೆಯನ್ನು ರೂಪಿಸಲಾಗುವುದು.

·        2,00,000 ಘಟಕಗಳಿಗೆ ಸಾಲಾಧಾರಿತ ಸಬ್ಸಿಡಿ ನೀಡಲಾಗುವುದು.

·        ಮೂಲ ಬಂಡವಾಳ ಮತ್ತು ಸಣ್ಣ ಸಾಧನಗಳಿಗಾಗಿ ಸದಸ್ಯರಿಗೆ ಸಾಲ ನೀಡಲು ಸ್ವಸಹಾಯ ಸಂಘಗಳಿಗೆ (ಪ್ರತಿ ಸ್ವಸಹಾಯ ಗುಂಪಿಗೆ 4 ಲಕ್ಷ ರೂ.) ಬೀಜ ಬಂಡವಾಳವನ್ನು ನೀಡಲಾಗುವುದು.

·        ಸಾಮಾನ್ಯ ಮೂಲಸೌಕರ್ಯ, ಪ್ಯಾಕೇಜಿಂಗ್, ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್‌ಗಾಗಿ ಎಫ್‌ಪಿಒಗಳಿಗೆ ಅನುದಾನ ನೀಡಲಾಗುವುದು.

ಆಡಳಿತಾತ್ಮಕ ಮತ್ತು ಅನುಷ್ಠಾನದ ಕಾರ್ಯವಿಧಾನಗಳು

·        ಆಹಾರ ಸಂಸ್ಕರಣಾ ಸಚಿವರ ಅಧ್ಯಕ್ಷತೆಯಲ್ಲಿ ಅಂತರ-ಸಚಿವಾಲಯ ಉನ್ನತ ಸಮಿತಿಯು (ಐಎಂಇಸಿ) ಈ ಯೋಜನೆಯನ್ನು ಕೇಂದ್ರದಲ್ಲಿ ಮೇಲ್ವಿಚಾರಣೆ ಮಾಡುತ್ತದೆ.

·        ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿರುವ ರಾಜ್ಯ / ಕೇಂದ್ರಾಡಳಿತ ಪ್ರದೇಶ ಮಟ್ಟದ ಸಮಿತಿಯು (ಎಸ್‌ಎಲ್‌ಸಿ) ಕಿರು ಘಟಕಗಳ ವಿಸ್ತರಣೆ ಮತ್ತು ಸ್ವಸಹಾಯ ಸಂಘಗಳು / ಎಫ್‌ಪಿಒಗಳು / ಸಹಕಾರಿ ಸಂಸ್ಥೆಗಳಿಂದ ಹೊಸ ಘಟಕಗಳನ್ನು ಸ್ಥಾಪಿಸುವ ಪ್ರಸ್ತಾಪಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಶಿಫಾರಸು ಮಾಡುತ್ತದೆ.

·        ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಯೋಜನೆಯ ಅನುಷ್ಠಾನಕ್ಕಾಗಿ ವಿವಿಧ ಚಟುವಟಿಕೆಗಳನ್ನು ಒಳಗೊಂಡ ವಾರ್ಷಿಕ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸುತ್ತವೆ, ಇದನ್ನು ಕೇಂದ್ರ ಸರ್ಕಾರ ಅನುಮೋದಿಸುತ್ತದೆ.

·        ಯೋಜನೆಯಲ್ಲಿ ಮೂರನೇ ವ್ಯಕ್ತಿಯಿಂದ ಮೌಲ್ಯಮಾಪನ ಮತ್ತು ಮಧ್ಯಕಾಲೀನ ಪರಿಶೀಲನೆ ಕಾರ್ಯವಿಧಾನವನ್ನು ಅಳವಡಿಸಲಾಗುವುದು.

ರಾಜ್ಯ / ಕೇಂದ್ರಾಡಳಿತ ಪ್ರದೇಶ ನೋಡಲ್ ಇಲಾಖೆ ಮತ್ತು ಸಂಸ್ಥೆ

·        ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯ / ಕೇಂದ್ರಾಡಳಿತ ಪ್ರದೇಶ ಸರ್ಕಾರವು ನೋಡಲ್ ಇಲಾಖೆ ಮತ್ತು ಏಜೆನ್ಸಿಯನ್ನು ಸೂಚಿಸುತ್ತದೆ.

·        ರಾಜ್ಯ / ಕೇಂದ್ರಾಡಳಿತ ಪ್ರದೇಶ ಮಟ್ಟದ ನವೀಕರಣ ಯೋಜನೆ, ಕ್ಲಸ್ಟರ್ ಅಭಿವೃದ್ಧಿ ಯೋಜನೆ, ಜಿಲ್ಲೆ/ಪ್ರಾದೇಶಿಕ ಮಟ್ಟದಲ್ಲಿ ಸಂಪನ್ಮೂಲ ಗುಂಪುಗಳನ್ನು ತೊಡಗಿಸಿಕೊಳ್ಳುವುದು, ಘಟಕಗಳು ಮತ್ತು ಗುಂಪುಗಳಿಗೆ ಬೆಂಬಲವನ್ನು ಒದಗಿಸುವುದು ಇತ್ಯಾದಿ ಮೇಲ್ವಿಚಾರಣೆ ಮಾಡುವುದು ಸೇರಿದಂತೆ ರಾಜ್ಯ / ಕೇಂದ್ರಾಡಳಿತ ಪ್ರದೇಶ ಮಟ್ಟದಲ್ಲಿ ಯೋಜನೆಯ ಅನುಷ್ಠಾನಕ್ಕೆ ರಾಜ್ಯ / ಕೇಂದ್ರಾಡಳಿತ ಪ್ರದೇಶ ನೋಡಲ್ ಏಜೆನ್ಸಿ (ಎಸ್‌ಎನ್‌ಎ) ಜವಾಬ್ದಾರವಾಗಿರುತ್ತದೆ.

ರಾಷ್ಟ್ರೀಯ ಪೋರ್ಟಲ್ ಮತ್ತು ಎಂಐಎಸ್

·        ರಾಷ್ಟ್ರೀಯ ಮಟ್ಟದ ಪೋರ್ಟಲ್ ಅನ್ನು ಸ್ಥಾಪಿಸಲಾಗುವುದು, ಇದರಲ್ಲಿ ಅರ್ಜಿದಾರರು / ವೈಯಕ್ತಿಕ ಉದ್ಯಮಗಳು ಯೋಜನೆಯಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಬಹುದು.

·        ಯೋಜನೆಯ ಎಲ್ಲಾ ಚಟುವಟಿಕೆಗಳನ್ನು ರಾಷ್ಟ್ರೀಯ ಪೋರ್ಟಲ್‌ನಲ್ಲಿ ಕೈಗೊಳ್ಳಲಾಗುವುದು.

ಸಂಯೋಜಿತ ಚೌಕಟ್ಟು

·        ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸುತ್ತಿರುವ ಅಸ್ತಿತ್ವದಲ್ಲಿರುವ ಯೋಜನೆಗಳ ಬೆಂಬಲವನ್ನು ಯೋಜನೆಯಡಿ ಪಡೆಯಬಹುದು.

·        ಇತರ ಮೂಲಗಳಿಂದ ಬೆಂಬಲ ಲಭ್ಯವಿಲ್ಲದಿರುವ ಕಡೆ ವಿಶೇಷವಾಗಿ ಬಂಡವಾಳ ಹೂಡಿಕೆ, ಹ್ಯಾಂಡ್ ಹೋಲ್ಡಿಂಗ್ ಬೆಂಬಲ, ತರಬೇತಿ ಮತ್ತು ಸಾಮಾನ್ಯ ಮೂಲಸೌಕರ್ಯಗಳಿಗೆ ಯೋಜನೆಯು ಅಂತರವನ್ನು ಅಳಿಸಲು ಪ್ರಯತ್ನಿಸುತ್ತದೆ.  

ಪರಿಣಾಮ ಮತ್ತು ಉದ್ಯೋಗ ಸೃಷ್ಟಿ

·        ಸುಮಾರು ಎಂಟು ಲಕ್ಷ ಕಿರು ಉದ್ಯಮಗಳು ಮಾಹಿತಿಯ ಲಭ್ಯತೆ, ಉತ್ತಮ ಮಾನ್ಯತೆ ಮತ್ತು ಔಪಚಾರಿಕೀಕರಣದ ಮೂಲಕ ಪ್ರಯೋಜನ ಪಡೆಯುತ್ತವೆ.

·        ಸಾಲಾಧಾರಿತ ಸಹಾಯಧನದ ಬೆಂಬಲವನ್ನು ವಿಸ್ತರಣೆ ಮತ್ತು ಉನ್ನತೀಕರಣಕ್ಕಾಗಿ 2,00,000 ಕಿರು ಉದ್ಯಮಗಳಿಗೆ ವಿಸ್ತರಿಸಲಾಗುವುದು.

·        ಇದು ವಿಧ್ಯುಕ್ತಗೊಳಿಸಲು, ಬೆಳೆಯಲು ಮತ್ತು ಸ್ಪರ್ಧಾತ್ಮಕವಾಗಲು ಅವರಿಗೆ ಅನುವು ಮಾಡಿಕೊಡುತ್ತದೆ.

·        ಈ ಯೋಜನೆಯು ಒಂಬತ್ತು ಲಕ್ಷ ನುರಿತ ಮತ್ತು ಅರೆ-ನುರಿತ ಉದ್ಯೋಗಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ.

·        ಯೋಜನೆಯು ಅಸ್ತಿತ್ವದಲ್ಲಿರುವ ಕಿರು ಆಹಾರ ಸಂಸ್ಕರಣಾ ಉದ್ಯಮಿಗಳು, ಮಹಿಳಾ ಉದ್ಯಮಿಗಳು ಮತ್ತು ಮಹತ್ವಾಕಾಂಕ್ಷಿ ಜಿಲ್ಲೆಗಳ ಉದ್ಯಮಿಗಳಿಗೆ ಸಾಲ ಲಭ್ಯತೆಯನ್ನು ಹೆಚ್ಚಿಸುತ್ತದೆ.

·        ಸಂಘಟಿತ ಮಾರುಕಟ್ಟೆಗಳೊಂದಿಗೆ ಉತ್ತಮ ಸಂಯೋಜನೆ.

·        ವಿಂಗಡಣೆ, ಶ್ರೇಣಿ, ಸಂಸ್ಕರಣೆ, ಪ್ಯಾಕೇಜಿಂಗ್, ಸಂಗ್ರಹಣೆ ಮುಂತಾದ ಸಾಮಾನ್ಯ ಸೇವೆಗಳಿಗೆ ಹೆಚ್ಚಿನ ಅವಕಾಶ.

ಹಿನ್ನೆಲೆ:

·        ಸುಮಾರು 25 ಲಕ್ಷ ನೋಂದಾಯಿಸದ ಆಹಾರ ಸಂಸ್ಕರಣಾ ಉದ್ಯಮಗಳಿವೆ, ಅವು ಈ ವಲಯಕ್ಕೆಶೇ.98 ರಷ್ಟು ಕೊಡುಗೆ ನೀಡುತ್ತಿವೆ ಮತ್ತು ಇವು ಅಸಂಘಟಿತ ಮತ್ತು ಅನೌಪಚಾರಿಕವಾಗಿವೆ. ಈ ಘಟಕಗಳಲ್ಲಿ ಸುಮಾರು ಶೇ.66 ರಷ್ಟು ಗ್ರಾಮೀಣ ಪ್ರದೇಶಗಳಲ್ಲಿವೆ ಮತ್ತು ಅವುಗಳಲ್ಲಿ ಶೇ.80 ರಷ್ಟು ಕುಟುಂಬ ಆಧಾರಿತ ಉದ್ಯಮಗಳಾಗಿವೆ.

·        ಈ ವಲಯವು ಸಾಲವನ್ನು ಪಡೆಯಲು ಅಸಮರ್ಥತೆ, ದುಬಾರಿ ಸಾಂಸ್ಥಿಕ ಸಾಲ, ಆಧುನಿಕ ತಂತ್ರಜ್ಞಾನದ ಲಭ್ಯತೆಯ ಕೊರತೆ, ಆಹಾರ ಪೂರೈಕೆ ಸರಪಳಿಯೊಂದಿಗೆ ಸೇರಿಕೊಳ್ಳಲು ಅಸಮರ್ಥತೆ ಮತ್ತು ಆರೋಗ್ಯ ಮತ್ತು ಸುರಕ್ಷತಾ ಮಾನದಂಡಗಳ ಅನುಸರಣೆ ಸೇರಿದಂತೆ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ.

·        ಈ ವಲಯವನ್ನು ಬಲಪಡಿಸುವುದರಿಂದ ಪೋಲಾಗುವುದನನ್ನು ತಗ್ಗಿಸಲು, ಕೃಷಿಯೇತರ ಉದ್ಯೋಗಾವಕಾಶಗಳು ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸುವ ಸರ್ಕಾರದ ಉದ್ದೇಶವನ್ನು ಸಾಧಿಸುವಲ್ಲಿ ನೆರವಾಗುತ್ತದೆ.

 ***(Release ID: 1625501) Visitor Counter : 258