ಪ್ರಧಾನ ಮಂತ್ರಿಯವರ ಕಛೇರಿ

ಆಯುಷ್ಮಾನ್ ಭಾರತ್ ಯೋಜನೆಯ  ಒಂದು ಕೋಟಿಯ ಫಲಾನುಭವಿಯೊಂದಿಗೆ ಸಂವಾದ ನಡೆಸಿದ ಪ್ರಧಾನ ಮಂತ್ರಿ

Posted On: 20 MAY 2020 11:31AM by PIB Bengaluru

ಆಯುಷ್ಮಾನ್ ಭಾರತ್ ಯೋಜನೆಯ  ಒಂದು ಕೋಟಿಯ ಫಲಾನುಭವಿಯೊಂದಿಗೆ ಸಂವಾದ ನಡೆಸಿದ ಪ್ರಧಾನ ಮಂತ್ರಿ

ಆಯುಷ್ಮಾನ್ ಭಾರತ್ ವೈದ್ಯರು, ದಾದಿಯರು ಮತ್ತು ಇತರರ ಪ್ರಯತ್ನವನ್ನು ಪ್ರಶಂಸಿಸಿದ ಪ್ರಧಾನಿ

ಆಯುಷ್ಮಾನ್ ಭಾರತದ ಅತಿದೊಡ್ಡ ಪ್ರಯೋಜನವೆಂದರೆ ಎಲ್ಲೆಡೆ ಲಭ್ಯತೆ ಮತ್ತು ಕೈಗೆಟುಕುವ ಉನ್ನತ ಗುಣಮಟ್ಟದ ವೈದ್ಯಕೀಯ ಆರೈಕೆ: ಪ್ರಧಾನಿ

 

ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳ ಸಂಖ್ಯೆ ಒಂದು ಕೋಟಿ ದಾಟಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಸಂತಸ ವ್ಯಕ್ತಪಡಿಸಿದ್ದಾರೆ.

ಫಲಾನುಭವಿಗಳ ಸಂಖ್ಯೆ ಒಂದು ಕೋಟಿ ದಾಟಿದೆ ಎಂಬುದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ವಿಷಯ ಎಂದು ಪ್ರಧಾನಿಯವರು ಸರಣಿ ಟ್ವೀಟ್ಮಾಡಿದ್ದಾರೆ.

ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ, ಉಪಕ್ರಮವು ಅನೇಕರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಎಲ್ಲಾ ಫಲಾನುಭವಿಗಳು ಮತ್ತು ಅವರ ಕುಟುಂಬಗಳನ್ನು ನಾನು ಅಭಿನಂದಿಸುತ್ತೇನೆ. ಅವರ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ” ಎಂದು ಅವರು ಹೇಳಿದ್ದಾರೆ.

ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು ಮತ್ತು ಆಯುಷ್ಮಾನ್ ಭಾರತ್ಗೆ ಸಂಬಂಧಿಸಿದಂತೆ ಎಲ್ಲರ ಶ್ರಮವನ್ನು ಶ್ಲಾಘಿಸುತ್ತೇನೆ ಎಂದು ಶ್ರೀ ಮೋದಿ ಹೇಳಿದ್ದಾರೆ.

ಅವರ ಪ್ರಯತ್ನಗಳು ಆಯುಷ್ಮಾನ್ ಭಾರತವನ್ನು ವಿಶ್ವದ ಅತಿದೊಡ್ಡ ಆರೋಗ್ಯ ಕಾರ್ಯಕ್ರಮವನ್ನಾಗಿ ಮಾಡಿವೆ. ಉಪಕ್ರಮವು ಹಲವಾರು ಭಾರತೀಯರ, ವಿಶೇಷವಾಗಿ ಬಡವರು ಮತ್ತು ದೀನ ದಲಿತರ ವಿಶ್ವಾಸವನ್ನು ಗಳಿಸಿದೆ. ” ಎಂದು ಪ್ರಧಾನಿ ತಿಳಿಸಿದ್ದಾರೆ.

ಆಯುಷ್ಮಾನ್ ಭಾರತದ ಅನುಕೂಲಗಳನ್ನು ವಿವರಿಸಿರುವ ಪ್ರಧಾನಿಯವರು, ಇದರ ಬಹು ದೊಡ್ಡ ಪ್ರಯೋಜನವೆಂದರೆ, ದೇಶದೆಲ್ಲೆಡೆ ಇದರ ಲಭ್ಯತೆ ಎಂದು ಹೇಳಿದ್ದಾರೆ.

ಫಲಾನುಭವಿಗಳು ತಾವು ನೋಂದಾಯಿಸಿದ ಸ್ಥಳದಲ್ಲಿ ಮಾತ್ರವಲ್ಲದೆ ಭಾರತದ ಯಾವುದೇ ಭಾಗದಲ್ಲಿಯೂ ಉತ್ತಮ ಗುಣಮಟ್ಟದ ವೈದ್ಯಕೀಯ ಆರೈಕೆಯನ್ನು ಪಡೆಯಬಹುದು. ಮನೆಯಿಂದ ದೂರದಲ್ಲಿ ಕೆಲಸ ಮಾಡುವ ಅಥವಾ ತಮ್ಮದಲ್ಲದ ಸ್ಥಳದಲ್ಲಿ ನೋಂದಾಯಿಸಿದವರಿಗೆ ಇದು ಸಹಾಯ ಮಾಡುತ್ತದೆ.” ಎಂದು ಶ್ರೀ ಮೋದಿ ತಮ್ಮ ಟ್ವೀಟ್ನಲ್ಲಿ ಹೇಳಿದ್ದಾರೆ.

ಸದ್ಯದ ಪರಿಸ್ಥಿತಿಯಿಂದಾಗಿ ಆಯುಷ್ಮಾನ್ ಭಾರತದ ಫಲಾನುಭವಿಗಳೊಂದಿಗೆ ಸಂವಾದ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರಧಾನಿ ಹೇಳಿದರು. ಆದಾಗ್ಯೂ ಅವರು ಆಯುಷ್ಮಾನ್ ಭಾರತದ ಒಂದು ಕೋಟಿಯ ಫಲಾನುಭವಿ ಮೇಘಾಲಯದ ಪೂಜಾ ಥಾಪಾ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು.

Narendra Modi@narendramodi

During my official tours, I would interact with Ayushman Bharat beneficiaries. Sadly, that is not possible these days but I did have a great telephone interaction with Pooja Thapa from Meghalaya, the 1 croreth beneficiary. Here is what we discussed. https://soundcloud.com/narendramodi/pm-interacts-with-ayushman-bharat-beneficiary …

PM interacts with Ayushman Bharat beneficiary. - Narendra Modi

soundcloud.com

16.8K

8:31 AM - May 20, 2020

Twitter Ads info and privacy

4,113 people are talking about this

Narendra Modi@narendramodi

I appreciate our doctors, nurses, healthcare workers and all others associated with Ayushman Bharat. Their efforts have made it the largest healthcare programme in the world. This initiative has won the trust of several Indians, especially the poor and downtrodden.

50.6K

8:26 AM - May 20, 2020

Twitter Ads info and privacy

8,441 people are talking about this

Narendra Modi@narendramodi

One of the biggest benefits of Ayushman Bharat is portability. Beneficiaries can get top quality and affordable medical care not only where they registered but also in other parts of India. This helps those who work away from home or registered at a place where they don’t belong.

24.1K

8:28 AM - May 20, 2020

Twitter Ads info and privacy

4,868 people are talking about this

***


(Release ID: 1625294) Visitor Counter : 258