ರೈಲ್ವೇ ಸಚಿವಾಲಯ

ಭಾರತೀಯ ರೈಲ್ವೆಯಿಂದ ಮೇ 19 , 2020 ರ ಸಂಜೆ 1600 ಗಂಟೆಗಳ ವರೆಗೆ ಒಟ್ಟು 1595 “ಶ್ರಮಿಕ್ ವಿಶೇಷ” ರೈಲುಗಳ ಕಾರ್ಯಾಚರಣೆ

Posted On: 19 MAY 2020 7:37PM by PIB Bengaluru

19 ದಿನಗಳಲ್ಲಿಶ್ರಾಮಿಕ್ ಸ್ಪೆಷಲ್ರೈಲುಗಳ ಮೂಲಕ ಒಟ್ಟು 21 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು
ತಮ್ಮ ರಾಜ್ಯಗಳಿಗೆ ತಲುಪಿಸುವ ಮೂಲಕ ಭಾರತೀಯ ರೈಲ್ವೆ ಮತ್ತೊಂದು ಮೈಲಿಗಲ್ಲನ್ನು ದಾಟಿದೆ

ಭಾರತೀಯ ರೈಲ್ವೆಯಿಂದ ಮೇ 19 , 2020 ಸಂಜೆ 1600 ಗಂಟೆಗಳ ವರೆಗೆ ಒಟ್ಟು 1595 “ಶ್ರಮಿಕ್ ವಿಶೇಷರೈಲುಗಳ ಕಾರ್ಯಾಚರಣೆ

ಪ್ರಯಾಣಿಕರಿಗೆ ಉಚಿತ ಊಟ ಮತ್ತು ನೀರು ನೀಡಲಾಗುತ್ತಿದೆ

 

ವಿವಿಧ ಸ್ಥಳಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರ ವ್ಯಕ್ತಿಗಳು ತಮ್ಮ ಸ್ವರಾಜ್ಯಗಳಿಗೆ ವಿಶೇಷ ರೈಲುಗಳಲ್ಲಿ ಸಂಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಆದೇಶದ ನಂತರ, ಭಾರತೀಯ ರೈಲ್ವೆಶ್ರಮಿಕ್ ವಿಶೇಷರೈಲುಗಳನ್ನು ಓಡಿಸಲು ನಿರ್ಧರಿಸಿತು.

ಮೇ 19, 2020 ಸಂಜೆ 1600 ಗಂಟೆಗಳ ಹೊತ್ತಿನ ವರೆಗೆ, ದೇಶಾದ್ಯಂತ ವಿವಿಧ ರಾಜ್ಯಗಳಿಂದ ಒಟ್ಟು 1595 “ಶ್ರಮಿಕ್ ವಿಶೇಷರೈಲುಗಳನ್ನು ಕಾರ್ಯಾಚರಣೆಗೊಳಿಸಲಾಗಿದೆ. ಮೂಲಕ 21 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ತಮ್ಮ ತವರು ರಾಜ್ಯವನ್ನು ತಲುಪಿದ್ದಾರೆ.

1595 ರೈಲುಗಳು ಆಂಧ್ರಪ್ರದೇಶ, ಬಿಹಾರ, ಚಂಡೀಘಡ ಕೇಂದ್ರಾಡಳಿತ ಪ್ರದೇಶ, ದೆಹಲಿ, ಗೋವಾ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಪುದುಚೇರಿ ಕೇಂದ್ರಾಡಳಿತ ಪ್ರದೇಶ , ಪಂಜಾಬ್, ರಾಜಸ್ಥಾನ, ಒಡಿಶಾ, ತಮಿಳುನಾಡು, ತ್ರಿಪುರ, ಉತ್ತರ ಪ್ರದೇಶ, ಉತ್ತರಾಖಂಡ, ಮತ್ತು ಪಶ್ಚಿಮ ಬಂಗಾಳಗಳಿಂದ ತಮ್ಮ ಪ್ರಯಾಣ ಪ್ರಾರಂಭಿಸಿವೆ.

ಅಲ್ಲದೆ, ಶ್ರಮಿಕ್ ವಿಶೇಷರೈಲುಗಳು ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಪಶ್ಚಿಮ ಬಂಗಾಳ, ಛತ್ತೀಸ್ ಘಡ, ಜಾರ್ಖಂಡ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಣಿಪುರ, ಮಿಜೋರಾಂ, ಒಡಿಶಾ, ತಮಿಳುನಾಡು, ತೆಲಂಗಾಣ, ತ್ರಿಪುರ, ಉತ್ತರಾಖಂಡ್, ಜಮ್ಮು ಮತ್ತು ಕಾಶ್ಮೀರ ಮುಂತಾದ ರಾಜ್ಯಗಳಿಗೆ ತಲುಪಿವೆ.

ರೈಲು ಹತ್ತುವ ಮೊದಲು ಪ್ರಯಾಣಿಕರನ್ನು ಸರಿಯಾಗಿ ಪರೀಕ್ಷಿಸುವುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಪ್ರಯಾಣದ ಸಮಯದಲ್ಲಿ ಪ್ರಯಾಣಿಕರಿಗೆ ಉಚಿತ ಊಟ ಮತ್ತು ನೀರು ನೀಡಲಾಗಿದೆ.

***



(Release ID: 1625212) Visitor Counter : 173