ಪ್ರಧಾನ ಮಂತ್ರಿಯವರ ಕಛೇರಿ

 “ಆರ್ಥ್ ಗಂಗಾ ಯೋಜನೆ” - ಅಸಮತೋಲನವನ್ನು ಸರಿಪಡಿಸುವುದು; ಜನರನ್ನು ಸಂಪರ್ಕಿಸುವುದು- ಪ್ರಧಾನ ಮಂತ್ರಿಯವರಿಂದ ಪರಿಶೀಲನೆ

Posted On: 15 MAY 2020 8:00PM by PIB Bengaluru

 “ಆರ್ಥ್ ಗಂಗಾ ಯೋಜನೆ” - ಅಸಮತೋಲನವನ್ನು ಸರಿಪಡಿಸುವುದು; ಜನರನ್ನು ಸಂಪರ್ಕಿಸುವುದು- ಪ್ರಧಾನ ಮಂತ್ರಿಯವರಿಂದ ಪರಿಶೀಲನೆ

 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರುಆರ್ಥ್ ಗಂಗಾ ಯೋಜನೆಯಅನುಷ್ಠಾನಕ್ಕೆ ರೂಪಿಸಿರುವ ಯೋಜನೆಗಳನ್ನು ಪರಿಶೀಲಿಸಿದರು.

2019 ಡಿಸೆಂಬರ್ 14 ರಂದು ಕಾನ್ಪುರದಲ್ಲಿ ನಡೆದ ರಾಷ್ಟ್ರೀಯ ಗಂಗಾ ಮಂಡಳಿಯ ಮೊದಲ ಸಭೆಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಗಂಗಾ ನದಿ ತೀರದಲ್ಲಿ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸಲುಆರ್ಥ್ ಗಂಗಾಎಂಬ ಪರಿಕಲ್ಪನೆಯನ್ನು ಪ್ರಸ್ತಾಪಿಸಿದ್ದರು.

ಜಲ ಮಾರ್ಗ ವಿಕಾಸ್ ಪ್ರಾಜೆಕ್ಟ್ (ಜೆಎಂವಿಪಿ) ಗಂಗಾ ನದಿಯನ್ನು ಸುರಕ್ಷಿತ ಸಂಚರಣೆ ವಿಧಾನವಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ ಮತ್ತು ಇದನ್ನು ವಿಶ್ವ ಬ್ಯಾಂಕಿನ ತಾಂತ್ರಿಕ ಮತ್ತು ಆರ್ಥಿಕ ನೆರವಿನೊಂದಿಗೆ ಕಾರ್ಯಗತಗೊಳಿಸಲಾಗುತ್ತಿದೆ. ಗಂಗಾ ನದಿ ಮತ್ತು ಸುತ್ತಮುತ್ತಲಿನ ಆರ್ಥಿಕ ಚಟುವಟಿಕೆಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಸ್ಥಳೀಯ ಸಮುದಾಯವನ್ನು ಒಳಗೊಂಡು ಜೆಎಂವಿಪಿಯನ್ನು ಮರು-ಎಂಜಿನಿಯರಿಂಗ್ ಮಾಡಲುಆರ್ಥ್ ಗಂಗಾ ಯೋಜನೆಉದ್ದೇಶಿಸಿದೆ.

ಸಮುದಾಯ ಮಟ್ಟದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲು ಗಂಗಾ ತಟದ ಉದ್ದಕ್ಕೂ ಸಣ್ಣ ಜೆಟ್ಟಿಗಳನ್ನು "ಪ್ರಾಜೆಕ್ಟ್ ಆರ್ಥ್ ಗಂಗಾ" ಭಾಗವಾಗಿ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ನದಿ ತೀರಗಳಲ್ಲಿ ಸ್ಥಾಪಿಸಲಾಗುವುದು. ಗಂಗಾ ನದಿಯ ನಾಲ್ಕು ರಾಜ್ಯಗಳಲ್ಲಿ ಗಂಗಾ ನದಿಯಲ್ಲಿ ಸುಮಾರು 40 ತೇಲುವ ಜೆಟ್ಟಿಗಳು ಮತ್ತು 10 ಜೋಡಿ ರೋ-ರೋ ಟರ್ಮಿನಲ್ಗಳನ್ನು ಯೋಜಿಸಲಾಗುತ್ತಿದ್ದು, ಇದು ಸ್ಥಳೀಯ ಉತ್ಪನ್ನಗಳ ಸಾಗಣೆಯಲ್ಲಿ ರೈತರಿಗೆ ಲಾಜಿಸ್ಟಿಕ್ಸ್ ವೆಚ್ಚವನ್ನು ತಗ್ಗಿಸುತ್ತದೆ.

ವ್ಯಾಪಾರ ಮತ್ತು ಮಾರುಕಟ್ಟೆಗಳಿಗೆ ಪ್ರವೇಶ, ಸ್ಥಳೀಯ ಸಮುದಾಯದ ಆರ್ಥಿಕ ವರ್ಧನೆ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಯೋಜನಗಳನ್ನು ಒದಗಿಸುವುದರ ಹೊರತಾಗಿ, ‘ಆರ್ಥ್ ಗಂಗಾ ಯೋಜನೆಯು ದೊಡ್ಡ ಪ್ರಮಾಣದ ಕೌಶಲ್ಯ ವರ್ಧನೆ ಮತ್ತು ಸಾರ್ವಜನಿಕ / ಖಾಸಗಿ ವಲಯದ ಸಾಮರ್ಥ್ಯ ಅಭಿವೃದ್ಧಿಯನ್ನು ಸಹ ಖಚಿತಪಡಿಸುತ್ತದೆ. ಮುಂದಿನ 5 ವರ್ಷಗಳಲ್ಲಿ 1000 ಕೋಟಿ ರೂ.ಗಳಿಗಿಂತ ಹೆಚ್ಚಿನ ಆರ್ಥಿಕ ಲಾಭವನ್ನು ಗಳಿಸಲುಆರ್ಥ್ ಗಂಗಾ ಯೋಜನೆಗಂಗಾ ಜಲಾನಯನ ಪ್ರದೇಶದಲ್ಲಿನ ಆರ್ಥಿಕ ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ.

ಹಡಗು ಖಾತೆ (ಸ್ವತಂತ್ರ ಉಸ್ತುವಾರಿ) ರಾಜ್ಯ ಸಚಿವ ಶ್ರೀ ಮನ್ಸುಖ್ ಎಲ್. ಮಾಂಡವಿಯಾ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.

ಆರ್ಥ್ ಗಂಗಾ ಯೋಜನೆ ಮಾಸ್ಟರ್ ಪ್ಲ್ಯಾನ್

https://ci6.googleusercontent.com/proxy/zoeLyv9bKKdD4O5c0XQR1Muq2-fKgmSu2wbpogBy5IWNYosZNyMG1Ks5Z7jKz-8Q2gjH3vWigy2djPs9pZRfQXu49MUT-ChK3HvdmPj1qVLraA=s0-d-e1-ft#https://static.pib.gov.in/WriteReadData/userfiles/image/picPS0I.png

***(Release ID: 1625117) Visitor Counter : 168