ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಎನ್ ಐ ಎಫ್ ಕೋವಿಡ್ – 19 ಸ್ಪರ್ಧೆ (ಸಿ3) ನಾವು ಬದಲಾಣೆ ತರಲು ಸಿದ್ಧರಿದ್ದೇವೆ ಸ್ಪರ್ಧೆಯಲ್ಲಿ ಭಾಗವಹಿಸಿದ ಸಾಮಾನ್ಯ ಜನರ ವಿಜ್ಞಾನ ಮತ್ತು ತಂತ್ರಜ್ಞಾನ ಆಧರಿತ ಆವಿಷ್ಕಾರಿ ಪರಿಹಾರಗಳು

Posted On: 17 MAY 2020 6:02PM by PIB Bengaluru

ಎನ್ ಐ ಎಫ್ ಕೋವಿಡ್ – 19 ಸ್ಪರ್ಧೆ (ಸಿ3) ನಾವು ಬದಲಾಣೆ ತರಲು ಸಿದ್ಧರಿದ್ದೇವೆ

ಸ್ಪರ್ಧೆಯಲ್ಲಿ ಭಾಗವಹಿಸಿದ ಸಾಮಾನ್ಯ ಜನರ ವಿಜ್ಞಾನ ಮತ್ತು ತಂತ್ರಜ್ಞಾನ ಆಧರಿತ ಆವಿಷ್ಕಾರಿ ಪರಿಹಾರಗಳು

 

ಭಾರತದ ರಾಷ್ಟ್ರೀಯ ಆವಿಷ್ಕಾರ ಸಂಸ್ಥೆ (ಎನ್ ಐ ಎಫ್), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿ ಎಸ್ ಟಿ)ಯ ಸ್ವಾಯತ್ತ ಸಂಸ್ಥೆಯಾಗಿದ್ದು, ಕೋವಿಡ್ – 19 ಸ್ಪರ್ಧೆಯ (ಸಿ3) ಮೂಲಕ ಹಲವಾರು ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಹಪಸ ಪರಿಹಾರಗಳನ್ನು ಗುರುತಿಸಿದೆ. ಪ್ರಸ್ತುತ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟಲು ನಾಗರಿಕರು ಹೊಸ ಆಲೋಚನೆಗಳು ಮತ್ತು ಆವಿಷ್ಕಾರಗಳೊಂದಿಗೆ ಮುಂದೆ ಬರಲು 31ಮಾರ್ಚ್ ನಿಂದ  10 ಮೇ 2020 ಈ ಅಭಿಯಾನ ನಡೆಯಲಿದೆ

ಮುಂಬರುವ ದಿನಗಳಲ್ಲಿ ಹೊಸ ಆಲೋಚನೆಗಳನ್ನು ಹೊಂದಿರುವವರ ಯೋಚನೆಗಳನ್ನು ಪ್ರಸಾರ ಮಾಡಲು ಎನ್ ಐ ಎಫ್ ಪ್ರಥಮ ಹಂತ ಮತ್ತು ಮಾರ್ಗದರ್ಶನದ ಸಹಕಾರ ನೀಡಲಿದೆ. ಈ ಅಭಿಯಾನದಡಿ ಇತ್ತೀಚೆಗೆ ಸಹಕಾರ ಪಡೆ 2 ಆವಿಷ್ಕಾರಗಳೆಂದರೆ ಹ್ಯಾಂಡ್ ಸ್ಯಾನಿಟೈಸೇಷನ್ ಗಾಗಿ ಮತ್ತು ಕೈ ತೊಳೆಯಲು ಕಾಲಿನಿಂದ ಚಲಿಸಬಹುದಾದ ಉಪಕರಣ ಹಾಗೂ ಸ್ಯಾನಿಟೈಸೇಷನ್ ಗಾಗಿ ಸಿಂಪಡಿಸುವ ಯಂತ್ರಗಳಾಗಿವೆ.  

ಹ್ಯಾಂಡ್ ಸ್ಯಾನಿಟೈಸೇಷನ್ ಗಾಗಿ ಮತ್ತು ಕೈ ತೊಳೆಯಲು ಕಾಲಿನಿಂದ ಚಲಿಸಬಹುದಾದ ಉಪಕರಣವನ್ನು ತೆಲಂಗಾಣದ, ವರಂಗಲ್ ನ, ಶ್ರೀ ಮುಪ್ಪರಪು ರಾಜು ವಿನ್ಯಾಸಗೊಳಿಸಿದ್ದಾರೆ. ಇದು ಈಗಿರುವ ಕೊವಿಡ್-19 ಪರಿಸ್ಥಿತಿಯಲ್ಲಿ, ಸ್ಪರ್ಶ ಮಾಡದೇ ಬಳಸುವ ಸಾಧನಗಳ ಸಮಯೋಚಿತ ಪರಿಹಾರವಾಗಿದೆ. ಈ ಸಾಧನವನ್ನು ಕೈಗಳಿಂದಲ್ಲದೇ ಕಾಲಿನಿಂದ ನಿರ್ವಹಿಸುವ ಮೂಲಕ ಸೋಪು ಮತ್ತು ನೀರು ಬಳಸಲು ಅನುಕೂಲ ಕಲ್ಪಿಸುತ್ತದೆ. ಹೀಗಾಗಿ ಬಳಕೆದಾರರ ಮತ್ತು ಸ್ಯಾನಿಟೈಸರ್, ಸಾಬೂನು ಅಥವಾ ನೀರಿಗೆ ಕೈಗಳ ಸಂಪರ್ಕ ಬರುವುದಿಲ್ಲ. ಇವುಗಳನ್ನು ಈ ಸಾಧನದ ಭಾಗವಾಗಿ ಪ್ರತ್ಯೇಕ ಪೆಟ್ಟಿಗೆಗಳಲ್ಲಿ ಸಂಗ್ರಹಿಸಲಾಗಿರುತ್ತದೆ. ತೆಲಂಗಾಣ ರಾಜ್ಯದ ವಿವಿಧೆಡೆ (ವರಂಗಲ್, ಮೆಹಬೂಬಾಬಾದ್ ಮತ್ತು ಇತರೆಡೆ) ಶ್ರೀ ರಾಜು ಅವರು ಈ ಆಧನವನ್ನು ಅಳವಡಿಸಿದ್ದಾರೆ. ಮೌಲ್ಯವರ್ಧನೆಗಾಗಿ ಮತ್ತು ಉತ್ಪಾದನೆ ವೆಚ್ಚಗಳನ್ನು ಭರಿಸಲು ಈ ಆವಿಷ್ಕಾರಕರಿಗೆ  ಎನ್ ಐ ಎಫ್ ಸಹಕಾರ ನೀಡಿದೆ.   

A group of people wearing military uniformsDescription automatically generated A group of people standing in front of a buildingDescription automatically generated

ತೆಲಂಗಾಣದ ವರಂಗಲ್ ಮತ್ತು ಮೆಹಬೂಬಾಬಾದ್ ಜಿಲ್ಲೆಗಳಲ್ಲಿ ಹ್ಯಾಂಡ್ ಸ್ಯಾನಿಟೈಸೇಷನ್ ಗಾಗಿ ಮತ್ತು ಕೈ ತೊಳೆಯಲು ಕಾಲಿನಿಂದ ಚಲಿಸಬಹುದಾದ ಉಪಕರಣದ ಅಳವಡಿಕೆ

ಪ್ರೋತ್ಸಾಹವನ್ನು ಪಡೆದಂತಹ ಮತ್ತೊಂದು ಆವಿಷ್ಕಾರವೆಂದರೆ ರಸ್ತೆಗಳು, ಪ್ರದೇಶಗಳು, ಬಾಗಿಲುಗಳು, ಕಂಪೌಂಡ್ ಗಳು, ಗೋಡೆಗಳು ಮುಂತಾದವುಗಳ ವಿಶಾಲವಾದ ಪ್ರದೇಶಗಳನ್ನು ಸ್ಯಾನಿಟೈಸ್ ಮಾಡಲು ಅಥವಾ ತೊಳೆಯಲು ಸಾಮರ್ಥ್ಯ ಹೊಂದಿರುವ ಸಿಂಪಡಣಾ ಯಂತ್ರವಾಗಿದೆ. ಈ ಯಂತ್ರದಲ್ಲಿ ಸಿಂಪಣೆಗೆ ವಿರುದ್ಧ ದಿಕ್ಕಿನಲ್ಲಿ ತಿರುಗುವ ಅಲ್ಯೂಮಿನಿಯಂನ 2 ರೇಡಿಯಲ್ ಫ್ಯಾನ್ ಗಳಿವೆ. ಇದರ ಕಾರ್ಯವೈಖರಿ ಹೀಗಿದೆ. ಪ್ರತಿ ಫ್ಯಾನ್ ವಿರುದ್ಧ ದಿಕ್ಕಿನಿಂದ ಗಾಳಿಯನ್ನು ಹೀರಿಕೊಳ್ಳುತ್ತದೆ ಮತ್ತು ಚಿಕ್ಕ ಗಾತ್ರದ ಹನಿಗಳಲ್ಲಿ ಹೆಚ್ಚಿನ ಒತ್ತಡದೊಂದಿಗೆ ನಾಸೆಲ್ ಗಳ ಮೂಲಕ ಚಿಮ್ಮುತ್ತದೆ. ಪ್ಯಾನೆಲ್ 180 ಡಿಗ್ರಿ ತಿರುಗುವುದರಿಂದ ಇದನ್ನು ಭೂಮಿಯಿಂದ 15 ಅಡಿ ಎತ್ತರದ ಗೋಡೆಗಳಿಗೂ ಬಳಸಬಹುದು. 15 ಹಾರ್ಸ್ ಪವರ್ (ಹೆಚ್ ಪಿ) ಇರುವ ಯಾವುದೇ ಟ್ರ್ಯಾಕ್ಟರ್ ನ್ನು ಪವರ್ ಟೇಕ್ ಆಫ್ (ಪಿಟಿಒ) ಮೂಲಕ ಇದಕ್ಕಾಗಿ ಬಳಸಬಹುದುಈ ಸಿಂಪಡಿಕೆಯನ್ನು ನಿಯೋಜಿಸುವ ಮೂಲಕ ಪ್ರದೇಶಗಳು, ರಸ್ತೆಗಳನ್ನು ಈ ಯಂತ್ರದ ಮಧ್ಯಭಾಗದಿಂದ 30 ಅಡಿಗಳಷ್ಟು ದೂರದವರೆಗೆ ಮತ್ತು 15 ಅಡಿಗಳಷ್ಟು ಎತ್ತರದವರೆಗೆ ಸ್ಯಾನಿಟೈಸ್ ಮಾಡಬಹುದಾಗಿದೆ. ಅಂದರೆ ಈ ಯಂತ್ರವು 30 ಅಡಿಗಳಷ್ಟು ಅಡ್ಡಲಾಗಿ ಮತ್ತು 15 ಅಡಿಗಳಷ್ಟು ಲಂಬವಾಗಿ ಸ್ಯಾನಿಟೈಸ್ ಮಾಡಬಹುದು. ಇದರ ಪರಿಣಾಮವಾಗಿ ಆವರಣಗಳು ಮತ್ತು ಬಾಗಿಲುಗಳನ್ನು ಸಿಂಪಡಿಕೆಯಿಂದ ಸುಲಭವಾಗಿ ಸ್ಯಾನಿಟೈಸ್ ಮಾಡಬಹುದು. ಈ ಸ್ಪ್ರೇಯರ್ ನಲ್ಲಿ ಅಳವಡಿಸಿದ ನಾಸೆಲ್ ಗಳು ಯಂತ್ರದ ಬಳಕೆ ಸಮಯದಲ್ಲಿ ಅಗತ್ಯವಿರುವ ಪ್ರದೇಶವನ್ನು ಅದು ವಿಶಾಲವಾದ ಪ್ರದೇಶವಾಗಿರಲಿ, ದಟ್ಟಣೆಯ ಪ್ರದೇಶವಾಗಿರಲಿ ಸುಲಭವಾಗಿ ಸ್ಯಾನಿಟೈಸ್ ಮಾಡುವ ಹಾಗಿವೆ.     

ಕೋವಿಡ್ – 19 ಪರಿಹಾರ ಮತ್ತು ಕ್ರಮಗಳಿಗಾಗಿ ನಮ್ಮ ನಾಗರಿಕರ ಪಾಲುದಾರಿಕೆ, ಮಾಲೀಕತ್ವ ಮತ್ತು ಕ್ರೀಯಾಶೀಲತೆಯ ಸಾಮರ್ಥ್ಯವನ್ನು ಪ್ರಪಂಚಕ್ಕೆ ತೋರಲು ಎನ್ ಐ ಎಫ್ ಸ್ಪರ್ಧೆ ಬೃಹತ್ ಅವಕಾಶ ಕಲ್ಪಿಸಿದೆ. ಇದು ನಮ್ಮ ಕೆಳ ಮಟ್ಟದ ಆವಿಷ್ಕಾರಿಗಳು ಮತ್ತು ಉದ್ಯಮಿಗಳನ್ನು ಗುರುತಿಸಲು, ಸಹಾಯ ಹಸ್ತ ಚಾಚಲು ಮತ್ತು ಅವರ ಆಲೋಚನೆಗಳನ್ನು ಉತ್ಪನ್ನಗಳನ್ನಾಗಿ ಪರಿವರ್ತಿಸಲು ಸಬಲಗೊಳಿಸುತ್ತದೆ ಎಂದು ಡಿ ಎಸ್ ಟಿ ಕಾರ್ಯದರ್ಶಿ ಪ್ರೋ ಅಶುತೋಷ್ ಶರ್ಮಾ ಹೇಳಿದರು

A picture containing outdoor, parked, building, motorcycleDescription automatically generated

ಸ್ಯಾನಿಟೈಸೇಷನ್ ಗಾಗಿ ಬಳಸುವ ಆವಿಷ್ಕಾರಿ ಸ್ಪ್ರೇಯರ್

A person that is on fireDescription automatically generated

ಮಹಾರಾಷ್ಟ್ರದ ವಿವಿಧ ಸ್ಥಳಗಳ ಬೀದಿಗಳಲ್ಲಿ ಸ್ಯಾನಿಟೈಸ್ ಮಾಡಲು ಈ ಸಿಂಪಡಣಾ ಯಂತ್ರವನ್ನು ನಿಯೋಜಿಸಲಾಗಿದೆ

ಮಹಾರಾಷ್ಟ್ರದ ಸತಾನಾ, ನಾಸಿಕ್ ಮುಂತಾದ ಪ್ರದೇಶಗಳಲ್ಲಿ ಈ ಸಿಂಪಡಣಾ ಯಂತ್ರವನ್ನು ಸಕ್ರೀಯವಾಗಿ ಬಳಸಲಾಗುತ್ತಿದೆ.

ಕೋವಿಡ್ – 19 ಸವಾಲಿನ ಸ್ಪರ್ಧೆಯಲ್ಲಿ  ಬಹು ದೊಡ್ಡ ಸಂಖ್ಯೆಯಲ್ಲಿ ನಾಗರಿಕರು ಪಾಲ್ಗೊಂಡಿದ್ದಾರೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಹೊಸ ಪರಿಹಾರಗಳೊಂದಿಗೆ ನಮ್ಮ ದೇಶ ಈ ಬಿಕ್ಕಟ್ಟಿನಿಂದ ಹೊರಬರಲು ಸಹಾಯ ಮಾಡುತ್ತಿದ್ದಾರೆ. ಕೋವಿಡ್ – 19 ತಡೆಗಟ್ಟಲು ತಂತ್ರಜ್ಞಾನಗಳ ಅವಶ್ಯಕತೆ ಮತ್ತು ಇವುಗಳ್ನು ವಿನ್ಯಾಸಗೊಳಿಸವುದು ಮೂಲ ಮಾದರಿ ತಯಾರಿಕೆ ಮತ್ತು ಅಂತಿಮವಾಗಿ ಸಾಮಾಜಿಕ ಹಾಗೂ ವಾಣಿಜ್ಯಿಕ ಬಳಕೆಗೆ ಲಭ್ಯವಾಗುವಂತೆ ಶೀಘ್ರಗತಿಯಲ್ಲಿ ಉತ್ಪಾದಿಸುವ ಈ ಕಾರ್ಯವೈಖರಿ, ರಾಷ್ಟ್ರ ಎದುರಿಸುತ್ತಿರುವ ಈ ಬಿಕ್ಕಟ್ಟಿಗೆ ತಮ್ಮ ಆವಿಷ್ಕಾರಗಳು ನಿಜಕ್ಕೂ ಸಹಾಯಕರವಾಗಬಲ್ಲವು ಎಂದು ನಂಬಿರುವ ಸಾಮಾನ್ಯ ಜನರು ಎನ್ ಐ ಎಫ್ ನ ಕೋವಿಡ್ – 19 ಸ್ಪರ್ಧೆಯ ಸವಾಲನ್ನು (ಸಿ3) ಸ್ವೀಕರಿಸಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತದೆ

(ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ, ಶ್ರೀ ತುಷಾರ್ ಗರ್ಗ್ tusharg@nifindia.org, ಮೊಬೈಲ್ : +91-9632776780

***



(Release ID: 1624794) Visitor Counter : 204