ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಹಣಕಾಸು ಸಚಿವರು ಇಂದು ಘೋಷಿಸಿರುವ ರಚನಾತ್ಮಕ ಸುಧಾರಣಾ ಕ್ರಮಗಳನ್ನು ಶ್ಲಾಘಿಸಿದ ಕೇಂದ್ರ ಗೃಹ ಸಚಿವರು

Posted On: 16 MAY 2020 8:02PM by PIB Bengaluru

ಕೇಂದ್ರ ಹಣಕಾಸು ಸಚಿವರು ಇಂದು ಘೋಷಿಸಿರುವ ರಚನಾತ್ಮಕ ಸುಧಾರಣಾ ಕ್ರಮಗಳನ್ನು ಶ್ಲಾಘಿಸಿದ ಕೇಂದ್ರ ಗೃಹ ಸಚಿವರು

ಶಕ್ತಿಯುತ, ಸುರಕ್ಷಿತ ಮತ್ತು ಸಶಕ್ತ  ಭಾರತವು ಮೋದಿ ಸರ್ಕಾರದ ಮೊದಲ ಆದ್ಯತೆಯಾಗಿದೆ: ಶ್ರೀ ಅಮಿತ್ ಶಾ

ಪ್ರಧಾನಿ ಮೋದಿ ಅವರ 'ಸುಧಾರಣೆ, ಸಾಧನೆ ಮತ್ತು ಪರಿವರ್ತನೆ' ಮಂತ್ರ ಕಳೆದ 6 ವರ್ಷಗಳಲ್ಲಿ ಭಾರತದ ಅದ್ಭುತ ಬೆಳವಣಿಗೆ ಕಾರಣವಾಗಿದೆ: ಗೃಹ ಸಚಿವರು

 

ಕೇಂದ್ರ ಹಣಕಾಸು ಸಚಿವರು ಇಂದು ಘೋಷಿಸಿರುವ ರಚನಾತ್ಮಕ ಸುಧಾರಣಾ ಕ್ರಮಗಳನ್ನು ಶ್ಲಾಘಿಸಿರುವ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ, "ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಇಂದಿನ ಮಹತ್ವದ ನಿರ್ಧಾರಗಳಿಗಾಗಿ ಧನ್ಯವಾದಗಳು, ಇದು ಖಂಡಿತವಾಗಿಯೂ ನಮ್ಮ ಆರ್ಥಿಕತೆಯನ್ನು ವೃದ್ಧಿಸುತ್ತದೆ ಮತ್ತು ಮತ್ತಷ್ಟು ಸ್ವಾವಲಂಬಿ ಭಾರತದ ಕಡೆಗೆ ನಮ್ಮ ಪ್ರಯತ್ನಗಳನ್ನು ಮುಂದುವರೆಸುತ್ತದೆ " ಎಂದರು. ಕಳೆದ 6 ವರ್ಷಗಳಲ್ಲಿ ಭಾರತದ ಅದ್ಭುತ ಬೆಳವಣಿಗೆಗೆ ಪ್ರಧಾನಿ ಮೋದಿಯವರ 'ಸುಧಾರಣೆ, ಸಾಧನೆ ಮತ್ತು ಪರಿವರ್ತನೆ' ಮಂತ್ರ ಕಾರಣವಾಗಿದೆ ಎಂದು ಅವರು ಹೇಳಿದರು.

ಕಲ್ಲಿದ್ದಲು ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಅಭೂತಪೂರ್ವ ಹೆಜ್ಜೆ ಇಟ್ಟಿದ್ದಕ್ಕಾಗಿ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ ಶ್ರೀ ಶಾ, "ಕಲ್ಲಿದ್ದಲು ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 50,000 ಕೋಟಿ ರೂ. ಒದಗಿಸಿರುವುದು ಮತ್ತು ವಾಣಿಜ್ಯ ಗಣಿಗಾರಿಕೆಯನ್ನು ಪರಿಚಯಿಸಿರುವುದು ಸ್ವಾಗತಾರ್ಹ ನೀತಿ ಸುಧಾರಣೆಯಾಗಿದ್ದು ಇದು ಹೆಚ್ಚು ಸ್ಪರ್ಧೆ ಮತ್ತು ಪಾರದರ್ಶಕತೆಯನ್ನು ತರುತ್ತದೆ" ಎಂದು ಹೇಳಿದರು.

"ರಕ್ಷಣಾ ಉತ್ಪಾದನೆಯಲ್ಲಿ ವಿದೇಶಿ ನೇರ ಹೂಡಿಕೆಯ ಮಿತಿಯನ್ನು ಶೇ.74 ಕ್ಕೆ ಏರಿಸುವುದು ಮತ್ತು ಆಯ್ದ ಶಸ್ತ್ರಾಸ್ತ್ರಗಳು / ಪ್ಲಾಟ್ಫಾರ್ಮ್ಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸುವುದು ಖಂಡಿತವಾಗಿಯೂ 'ಮೇಕ್ ಇನ್ ಇಂಡಿಯಾ'ಕ್ಕೆ ಉತ್ತೇಜನ ಮೀಡುತ್ತದೆ ಮತ್ತು ನಮ್ಮ ಆಮದು ಹೊರೆಯನ್ನು ಕಡಿಮೆ ಮಾಡುತ್ತದೆ. ಶಕ್ತಿಯುತ, ಸುರಕ್ಷಿತ ಮತ್ತು ಸಶಕ್ತ ಭಾರತವು ಮೋದಿ ಸರ್ಕಾರದ ಪ್ರಮುಖ ಆದ್ಯತೆಯಾಗಿದೆಎಂದು ಗೃಹ ಸಚಿವರು ಹೇಳಿದರು.

ವಿಮಾನಯಾನ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿರ್ಧಾರಗಳಿಗಾಗಿ ಪ್ರಧಾನಿ ಮೋದಿ ಅವರಿಗೆ ಶ್ರೀ ಶಾ ಧನ್ಯವಾದ ಅರ್ಪಿಸಿದರು. "ವಾಯುಪ್ರದೇಶ ಬಳಕೆಯ ಮೇಲಿನ ನಿರ್ಬಂಧಗಳನ್ನು ಸಡಿಲಿಸುವ ಮೂಲಕ, ನಮ್ಮ ವಾಯುಯಾನ ಕ್ಷೇತ್ರಕ್ಕೆ ವರ್ಷಕ್ಕೆ ಸುಮಾರು 1000 ಕೋಟಿ ರೂ. ಲಾಭವಾಗಲಿದೆ. ಇದಲ್ಲದೆ, ಭಾರತವನ್ನು ವಿಮಾನ MRO ಜಾಗತಿಕ ಕೇಂದ್ರವನ್ನಾಗಿ ಮಾಡಲು MRO ಗೆ ತೆರಿಗೆ ನಿಯಮವನ್ನು ಸುಧಾರಿಸಲಾಗಿದೆ" ಎಂದು ಅವರು ಹೇಳಿದರು.

ಬಾಹ್ಯಾಕಾಶ ಮತ್ತು ಸಾಮಾಜಿಕ ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಖಾಸಗಿ ವಲಯದ ಉಪಸ್ಥಿತಿಯನ್ನು ಹೆಚ್ಚಿಸುವ ನಿರ್ಧಾರ ಕುರಿತು ಮಾತನಾಡಿದ ಗೃಹ ಸಚಿವರು, “ಸಾಮಾಜಿಕ ಮೂಲಸೌಕರ್ಯದಲ್ಲಿ ಖಾಸಗಿ ವಲಯದ ಹೂಡಿಕೆಯನ್ನು ಹೆಚ್ಚಿಸಲು 8100 ಕೋಟಿ ರೂ.ಗಳ ಪರಿಷ್ಕೃತ ಕಾರ್ಯಸಾಧ್ಯತೆ ಗ್ಯಾಪ್ ಫಂಡಿಂಗ್ ನೀಡುವಂತಹ ಇಂದಿನ ನಿರ್ಧಾರಗಳಿಗಾಗಿ ನಾನು ಪ್ರಧಾನಿ ಮೋದಿ ಅವರನ್ನು ಶ್ಲಾಘಿಸುತ್ತೇನೆ. ಬಾಹ್ಯಾಕಾಶ ಚಟುವಟಿಕೆಗಳಲ್ಲಿ ಖಾಸಗಿಯವರ ಭಾಗವಹಿಸುವಿಕೆಯನ್ನು ಉತ್ತೇಜಿಸುವುದರಿಂದ ಅವರು ಭಾರತದ ಬಾಹ್ಯಾಕಾಶ ಪಯಣದಲ್ಲಿ ಸಹ-ಪ್ರಯಾಣಿಕರಾಗಬಹುದು " ಎಂದು ಹೇಳಿದರು.

***



(Release ID: 1624627) Visitor Counter : 1933