ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಆರೋಗ್ಯ ಕಾರ್ಯದರ್ಶಿ ಅವರು ಅತಿ ಹೆಚ್ಚು ಕೋವಿಡ್-19 ಪ್ರಕರಣವಿರುವ 30 ಪುರಸಭೆಯ ಪ್ರದೇಶಗಳೊಂದಿಗೆ ಸಂವಾದ ನಡೆಸಿದರು
Posted On:
16 MAY 2020 6:55PM by PIB Bengaluru
ಆರೋಗ್ಯ ಕಾರ್ಯದರ್ಶಿ ಅವರು ಅತಿ ಹೆಚ್ಚು ಕೋವಿಡ್-19 ಪ್ರಕರಣವಿರುವ 30 ಪುರಸಭೆಯ ಪ್ರದೇಶಗಳೊಂದಿಗೆ ಸಂವಾದ ನಡೆಸಿದರು
ಕೋವಿಡ್ -19 ನಿಯಂತ್ರಣ ಮತ್ತು ನಿರ್ವಹಣೆಗಾಗಿ ಕೈಗೊಂಡ ಕ್ರಮಗಳ ವಿಮರ್ಶೆ
ಚೇತರಿಕೆಯ ಪ್ರಮಾಣ 35.09% ಕ್ಕೆ ಏರಿಕೆ
ಆರೋಗ್ಯ ಕಾರ್ಯದರ್ಶಿ ಎಂ.ಎಸ್.ಪ್ರೀತಿ ಸೂದನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವಿಶೇಷ ಕರ್ತವ್ಯದ ಅಧಿಕಾರಿ, ( ಒಎಸ್ಡಿ - ಎಚ್ಎಫ್ಡಬ್ಲ್ಯು), ಶ್ರೀ ರಾಜೇಶ್ ಭೂಷಣ್ ಮತ್ತು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ದೇಶದ ಕೋವಿಡ್ -19 ಪ್ರಕರಣಗಳಲ್ಲಿ ಸುಮಾರು 80% ರಷ್ಟು ಕೊಡುಗೆ ನೀಡುತ್ತಿರುವ 30 ಪುರಸಭೆಯ ಪ್ರಾರ್ಥಮಿಕ ಆರೋಗ್ಯ ಕಾರ್ಯದರ್ಶಿಗಳು, ಪುರಸಭೆ ಆಯುಕ್ತರು, ಜಿಲ್ಲಾ ದಂಡಾಧಿಕಾರಿಗಳು ಮತ್ತು ಇತರ ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಪರಿಶೀಲನಾ ಸಭೆಯನ್ನು ನಡೆಸಿದರು.
ಈ 30 ಪುರಸಭೆಯ ಪ್ರದೇಶಗಳು ಈ ಕೆಳಗಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿದ ಬಂದವು: ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ದೆಹಲಿ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ, ಉತ್ತರ ಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್ ಮತ್ತು ಒಡಿಶಾ.
ಕೋವಿಡ್ -19 ಪ್ರಕರಣಗಳ ನಿರ್ವಹಣೆಗಾಗಿ ನಗರಸಭೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕೈಗೊಂಡ ಕ್ರಮಗಳನ್ನು ಪರಿಶೀಲಿಸಲಾಯಿತು. ನಗರ ಪ್ರದೇಶಗಳಲ್ಲಿ ಕೋವಿಡ್ -19 ನಿರ್ವಹಣೆಯ ಹೊಸ ಮಾರ್ಗಸೂಚಿಗಳನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ತಿಳಿಸಲಾಯಿತು. ಈ ಕಾರ್ಯತಂತ್ರದ ಮುಖ್ಯಾಂಶಗಳನ್ನು ಚರ್ಚಿಸಲಾಯಿತು. ಹೆಚ್ಚಿನ ಅಪಾಯಕಾರಿ ಅಂಶಗಳು, ದೃಢೀಕರಣ ದರ, ಸಾವಿನ ಪ್ರಮಾಣ, ದ್ವಿಗುಣಗೊಳಿಸುವಿಕೆ ಪ್ರಮಾಣ, ಪ್ರತಿ ದಶಲಕ್ಷಕ್ಕೆ ಪರೀಕ್ಷೆಗಳು ಮುಂತಾದ ಸೂಚ್ಯಂಕಗಳನ್ನು ಎತ್ತಿ ತೋರಿಸುವಾಗ ಜಿಲ್ಲೆಗಳಲ್ಲಿ ಪ್ರಸ್ತುತ ಕೋವಿಡ್-19 ಸೋಂಕುಗಳ ಕುರಿತು ಪ್ರಸ್ತುತಿಯನ್ನು ನೀಡಲಾಯಿತು. ಅವರಿಗೆ ನಿಯಂತ್ರಣ ಮತ್ತು ಬಫರ್ ವಲಯಗಳನ್ನು ಗುರುತು ಮಾಡುವಾಗ ಪರಿಗಣಿಸಬೇಕಾದ ಅಂಶಗಳು ; ಪರಿಧಿಯ ನಿಯಂತ್ರಣ, ಮನೆಯಿಂದ ಮನೆಗೆ ಕಣ್ಗಾವಲು, ಸಂಪರ್ಕ ಪತ್ತೆಹಚ್ಚುವಿಕೆ, ಪರೀಕ್ಷಾ ಶಿಷ್ಟಾಚಾರ, ಸಕ್ರಿಯ ಪ್ರಕರಣಗಳ ಕ್ಲಿನಿಕಲ್ ನಿರ್ವಹಣೆ ಮುಂತಾದ ನಿಯಂತ್ರಣ ವಲಯದಲ್ಲಿನ ಕಡ್ಡಾಯ ಚಟುವಟಿಕೆಗಳು; ಎಸ್ಎಆರ್ ಐ / ಐಎಲ್ ಐ ಪ್ರಕರಣಗಳ ಮೇಲ್ವಿಚಾರಣೆ, ಸಾಮಾಜಿಕ ಅಂತರವ್ನನು ಖಾತರಿಪಡಿಸುವುದು, ಕೈಗಳ ನೈರ್ಮಲ್ಯವನ್ನು ಉತ್ತೇಜಿಸುವುದು ಮುಂತಾದವು ಬಫರ್ ವಲಯದಲ್ಲಿನ ಚಟುವಟಿಕೆಗಳು.
ಪ್ರಕರಣಗಳು ಮತ್ತು ಸಂಪರ್ಕಗಳ ಗುರುತಿಸುವಿಕೆ, ಪ್ರಕರಣಗಳು ಮತ್ತು ಸಂಪರ್ಕಗಳ ಭೌಗೋಳಿಕ ಪ್ರಸರಣ, ಉತ್ತಮವಾಗಿ ಗುರುತಿಸಲಾದ ಪರಿಧಿ ಮತ್ತು ಜಾರಿಗೊಳಿಸುವಿಕೆಯಂತಹ ಅಂಶಗಳ ಆಧಾರದ ಮೇಲೆ ಸಾಮಾನ್ಯವಾಗಿ ನಿಯಂತ್ರಣ ವಲಯಗಳ ಭೌಗೋಳಿಕ ಪ್ರದೇಶವನ್ನು ವ್ಯಾಖ್ಯಾನಿಸಲಾಗುವುದು ಎಂದು ಮುಖ್ಯವಾಗಿ ಹೇಳಲಾಗಿದೆ. ಮುನಿಸಿಪಲ್ ಕಾರ್ಪೊರೇಷನ್ಗಳಿಗೆ, ರೆಸಿಡೆನ್ಶಿಯಲ್ ಕಾಲೋನಿ / ಮೊಹಲ್ಲಾಗಳು / ಮುನ್ಸಿಪಲ್ ವಾರ್ಡ್ಗಳು ಅಥವಾ ಪೊಲೀಸ್-ಸ್ಟೇಷನ್ ಪ್ರದೇಶ / ಪುರಸಭೆ ವಲಯಗಳು / ಪಟ್ಟಣಗಳು ಇತ್ಯಾದಿಗಳನ್ನು ಸೂಕ್ತವಾಗಿ ನಿಯಂತ್ರಣ ವಲಯಗಳಾಗಿ ಗೊತ್ತುಪಡಿಸಬಹುದು. ಈ ಪ್ರದೇಶವನ್ನು ಸ್ಥಳೀಯ ಮಟ್ಟದಿಂದ ತಾಂತ್ರಿಕ ಮಾಹಿತಿಯೊಂದಿಗೆ ಜಿಲ್ಲಾಡಳಿತ / ಸ್ಥಳೀಯ ನಗರ ಸಂಸ್ಥೆ ಸೂಕ್ತವಾಗಿ ವ್ಯಾಖ್ಯಾನಿಸಬೇಕು ಎಂದು ಸೂಚಿಸಲಾಯಿತು. ನಿಯಂತ್ರಣ ವಲಯಗಳ ಜೊತೆಗೆ, ಪ್ರಸರಣ ಸರಪಳಿಯನ್ನು ಮುರಿಯಲು ನಿಯಂತ್ರಣ ವಲಯದ ಸುತ್ತಲಿನ ಬಫರ್ ವಲಯವನ್ನು ಸಹ ಗುರುತಿಸಬೇಕು. ಹಳೆಯ ನಗರಗಳು, ನಗರದ ಕೊಳೆಗೇರಿಗಳು ಮತ್ತು ಇತರ ಹೆಚ್ಚಿನ ಸಾಂದ್ರತೆಯ ಪ್ರದೇಶಗಳಲ್ಲಿ ವಲಸೆ ಕಾರ್ಮಿಕರ ಶಿಬಿರಗಳ ಜೊತೆಗೆ ಹೆಚ್ಚಿನ ಜಾಗರೂಕತೆ ಮತ್ತು ಮೇಲ್ವಿಚಾರಣೆಯನ್ನು ನಿರ್ವಹಿಸುವುದು ನಗರ ಪ್ರದೇಶಗಳಲ್ಲಿನ ಕೋವಿಡ್-19 ನಿರ್ವಹಣೆಯಲ್ಲಿ ಪ್ರಮುಖ ಹಂತಗಳಾಗಿವೆ.
ಹೆಚ್ಚಿನ ದ್ವಿಗುಣಗೊಳಿಸುವಿಕೆಯ ಪ್ರಮಾಣ, ಹೆಚ್ಚಿನ ಪ್ರಕರಣಗಳ ಸಾವಿನ ಪ್ರಮಾಣ ಮತ್ತು ನಿಯಂತ್ರಣ ವಲಯಗಳಲ್ಲಿ ಕಂಡುಬರುವ ಹೆಚ್ಚಿನ ದೃಢೀಕರಣ ಶೇಕಡಾವಾರು ಸೂಚಕಗಳ ನಿರ್ವಹಣೆಗೆ ಸಂಬಂಧಿಸಿದಂತೆ, ಸಂಭವನೀಯ ಮೂಲ ಕಾರಣಗಳ ಬಗ್ಗೆ ಅವರಿಗೆ ತಿಳಿಸಲಾಯಿತು ಮತ್ತು ತೆಗೆದುಕೊಳ್ಳಬಹುದಾದ ಸಂಭವನೀಯ ಕ್ರಮಗಳ ಕುರಿತು ಶಿಫಾರಸುಗಳನ್ನು ನೀಡಲಾಯಿತು. ವಿಶೇಷವಾಗಿ ಜನನಿಬಿಡ ನಗರ ಪ್ರದೇಶಗಳಲ್ಲಿ ಕಳಪೆ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳು, ಸೀಮಿತ ಆರೋಗ್ಯ ಮೂಲಸೌಕರ್ಯ, ಸಾಮಾಜಿಕ ಅಂತರದ ಕೊರತೆ, ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳಂತಹ ಹೆಚ್ಚಿನ ಸವಾಲುಗಳನ್ನು ಪರಿಗಣಿಸಬೇಕಾಗಿದೆ ಎನ್ನುವುದನ್ನು ಸಹ ಎತ್ತಿ ತೋರಿಸಲಾಗಿದೆ.
ಕೋವಿಡ್-19 ಪ್ರಕರಣಗಳ ನಿಯಂತ್ರಣ ಮತ್ತು ನಿರ್ವಹಣೆಯೊಂದಿಗೆ, ನಗರ ಪ್ರದೇಶಗಳಲ್ಲಿ ಆರ್ ಎಮ್ ಎನ್ ಸಿ ಹೆಚ್ ಎ + ಎನ್ ಆರೈಕೆ, ಕ್ಯಾನ್ಸರ್ ಚಿಕಿತ್ಸೆ, ಟಿಬಿ ಕಣ್ಗಾವಲು, ರೋಗನಿರೋಧಕ ಪ್ರಯತ್ನಗಳು, ವೆಕ್ಟರ್ ನಿಯಂತ್ರಣ ಕ್ರಮಗಳಂತಹ ಎಲ್ಲಾ ಅಗತ್ಯ ಕೋವಿಡ್ ಹೊರತಾದ ಆರೋಗ್ಯ ಸೇವೆಗಳನ್ನು ಮುಂದುವರೆಸುವ ಬಗ್ಗೆ ಮುಂದೆ ಬರುವ ಮಾನ್ಸೂನ್ ಇತ್ಯಾದಿಗಳ ದೃಷ್ಟಿಯಿಂದ ಖಚಿತಪಡಿಸಿಕೊಳ್ಳಬೇಕು ಎಂದು ಆರೋಗ್ಯ ಕಾರ್ಯದರ್ಶಿಯವರು ಒತ್ತಿ ಹೇಳಿದರು. ಮುನಿಸಿಪಲ್ ಪ್ರದೇಶಗಳು ವಿಶ್ವಾಸ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಪರಿಣಾಮಕಾರಿ ಅಪಾಯದ ಸೂಚನೆಯ ಸಂವಹನದತ್ತ ಗಮನಹರಿಸಲು ಕೇಳಲಾಯಿತು. ಸ್ಥಳೀಯ ಸಮುದಾಯಗಳ ಸಹಕಾರವನ್ನು ಉತ್ತೇಜಿಸಲು ಸ್ಥಳೀಯ ಕಣ್ಗಾವಲು ತಂಡಗಳೊಂದಿಗೆ ಸಮುದಾಯದ ಮುಖಂಡರು ಮತ್ತು ಸ್ಥಳೀಯ ನಾಯಕರೊಂದಿಗೆ ತೊಡಗಿಸಿಕೊಳ್ಳಲು ಅವರನ್ನು ವಿನಂತಿಸಲಾಯಿತು. ಮುಂಬೈ ತನ್ನ ಸಮುದಾಯದ ಹಿರಿಯರು ಮತ್ತು ವಾರ್ಡ್ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿರುವ "ಕಂಟೇನ್ಮೆಂಟ್ ನಾಯಕರ" ಅನುಭವವನ್ನು, ವಿಶೇಷವಾಗಿ ಕೊಳೆಗೇರಿಗಳಲ್ಲಿ ಜನರನ್ನು ಸರ್ಕಾರದ ಪ್ರಯತ್ನಗಳನ್ನು ಬೆಂಬಲಿಸಲು ಪ್ರೋತ್ಸಾಹಿಸುತ್ತಿರುವ ಬಗ್ಗೆ ಹಂಚಿಕೊಂಡಿದೆ, ಸ್ಥಳೀಯವಾಗಿ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ, ವಿಶ್ವಾಸವನ್ನು ಬೆಳೆಸುವಲ್ಲಿ ಮತ್ತು ಆರೋಗ್ಯ ಕಾರ್ಯಕರ್ತರ ಮೇಲೆ ಸಕಾರಾತ್ಮಕ ಪ್ರಭಾವ ಬೀರುವಲ್ಲಿ ಸಮುದಾಯ ನಾಯಕತ್ವ ಪಾತ್ರವನ್ನು ಎತ್ತಿ ತೋರಿಸಲಾಯಿತು.
ಚೇತರಿಕೆಯ ಶೇಕಡಾವಾರು, ಎಸ್ಎಆರ್ ಐ ಮತ್ತು ಐಎಲ್ಐ ಕಣ್ಗಾವಲು ಮತ್ತು ಹೆಚ್ಚು ಪರಿಣಾಮಕಾರಿಯಾದ ಮಾನವ ಸಂಪನ್ಮೂಲ ನಿರ್ವಹಣೆಯನ್ನು ಸುಧಾರಿಸಲು ರೋಗಿಗಳ ಸಮಯೋಚಿತ ಪತ್ತೆಹಚ್ಚುವಿಕೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ ಎಂದು ಒತ್ತಿಹೇಳಲಾಯಿತು. ಎಲ್ಲಾ ಆರೋಗ್ಯ ಸೇವಾ ಪೂರೈಕೆದಾರರಿಗೆ ಸಾಕಷ್ಟು ರಕ್ಷಣಾತ್ಮಕ ಸಾಧನಗಳನ್ನು ಒದಗಿಸಬೇಕಾಗಿದೆ ಮತ್ತು ಈ ಮುಂಚೂಣಿಯ ಆರೋಗ್ಯ ಕಾರ್ಯಕರ್ತರ ಬಗ್ಗೆ ರೋಗದ ಕಳಂಕದ ವಿರುದ್ಧ ಸಂವಹನವು ಗಮನಹರಿಸಬೇಕು ಎಂದು ಸೂಚಿಸಲಾಯಿತು. ಪರಿಹಾರ ಮತ್ತು ಪ್ರತ್ಯೇಕ ಶಿಬಿರಗಳ ನೈರ್ಮಲ್ಯ ಮಾನದಂಡಗಳ ನಿರ್ವಹಣೆ, ಮತ್ತು ಕೋವಿಡ್-19 ಪ್ರಕರಣಗಳ ಮನೆಗಳಿಂದ ತ್ಯಾಜ್ಯ ನಿರ್ವಹಣೆಗೆ ಒತ್ತು ನೀಡಲಾಯಿತು.
ಈವರೆಗೆ ಒಟ್ಟು 30,150 ಜನರನ್ನು ಗುಣಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 2233 ರೋಗಿಗಳು ಗುಣಮುಖರಾಗಿದ್ದಾರೆ. ಇದರಿಂದಾಗಿ ಒಟ್ಟು ಚೇತರಿಕೆ ಪ್ರಮಾಣವು 35.09% ಆಗಿದೆ. ದೃಢಪಡಿಸಿದ ಒಟ್ಟು ಪ್ರಕರಣಗಳ ಸಂಖ್ಯೆ ಈಗ 85,940 ಆಗಿದೆ. ನಿನ್ನೆಯಿಂದ, ಭಾರತದಲ್ಲಿ ಕೋವಿಡ್-19 ದೃಢ ಪಡಿಸಿದ ಪ್ರಕರಣಗಳ ಸಂಖ್ಯೆಯಲ್ಲಿ 3970 ಹೆಚ್ಚಳ ಕಂಡುಬಂದಿದೆ.
ಕೋವಿಡ್-19ಗೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ಇಲಾಖೆಯ ಜಾಲತಾಣಕ್ಕೆ ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in
ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in , ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು ಮತ್ರು @CovidIndiaSeva ಗೆ ಟ್ವೀಟ್ ಮಾಡಬಹುದು.
ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ. : +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿಯು https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.
***
(Release ID: 1624584)
Visitor Counter : 175