ಗೃಹ ವ್ಯವಹಾರಗಳ ಸಚಿವಾಲಯ

ಬಂಗಾಳ ಕೊಲ್ಲಿಯಲ್ಲಿ ಎದುರಾಗಲಿರುವ ಚಂಡಮಾರುತ ನಿಭಾಯಿಸುವುದಕ್ಕೆ ಸಿದ್ದತಾ ಪರಿಸ್ಥಿತಿಯ ಪರಾಮರ್ಶೆಗಾಗಿ ಸಂಪುಟ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಎನ್.ಸಿ.ಎಂ.ಸಿ. ಸಭೆ

Posted On: 16 MAY 2020 5:26PM by PIB Bengaluru

ಬಂಗಾಳ ಕೊಲ್ಲಿಯಲ್ಲಿ ಎದುರಾಗಲಿರುವ ಚಂಡಮಾರುತ ನಿಭಾಯಿಸುವುದಕ್ಕೆ ಸಿದ್ದತಾ ಪರಿಸ್ಥಿತಿಯ ಪರಾಮರ್ಶೆಗಾಗಿ

ಸಂಪುಟ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಎನ್.ಸಿ.ಎಂ.ಸಿ. ಸಭೆ

 

ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ (ಎನ್.ಸಿ.ಎಂ.ಸಿ.) ಸಭೆಯು ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬಾ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು. ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಲಿರುವ ಚಂಡಮಾರುತ (ಸೈಕ್ಲೋನ್ ) ನಿಭಾಯಿಸಲು ಸಿದ್ದತೆಗಳನ್ನು ಸಭೆಯಲ್ಲಿ ಪರಾಮರ್ಶಿಸಲಾಯಿತು.

ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತ ಸಂಭವಿಸಿದ್ದು, ಅದು ಚಂಡಮಾರುತದ ರೂಪವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ ಮತ್ತು ಅದು ಒಡಿಶಾ ಹಾಗು ಪಶ್ಚಿಮ ಬಂಗಾಳ ಕರಾವಳಿಯನ್ನು 2020 ಮೇ 20 ರಂದು ದಾಟುವ ನಿರೀಕ್ಷೆ ಇದೆ. ಇದರಿಂದ ಭಾರೀ ಮತ್ತು ಅತ್ಯಂತ ಹೆಚ್ಚು ತೀವ್ರತೆಯ ಮಳೆ ಬೀಳಲಿದೆ ಮತ್ತು ಇದರ ಜೊತೆ ಭಾರೀ ವೇಗದ ಗಾಳಿಯೂ ಬೀಸಲಿದೆ. ಮತ್ತು ಬೃಹದಾಕಾರದ ಸಮುದ್ರದಲೆಗಳೂ ಅಪ್ಪಳಿಸುವ ನಿರೀಕ್ಷೆ ಇದೆ.

ಸಭೆಯಲ್ಲಿ ಸಂಬಂಧಿತ ರಾಜ್ಯ ಸರಕಾರಗಳ ಅಧಿಕಾರಿಗಳು ಚಂಡಮಾರುತದಿಂದಾಗಿ ಉದ್ಭವಿಸಬಹುದಾದ ಯಾವುದೇ ಸಂಭಾವ್ಯ ಪರಿಸ್ಥಿತಿಯನ್ನು ನಿಭಾಯಿಸಲು ತಮ್ಮ ಸಿದ್ದತೆಗಳನ್ನು ದೃಢಪಡಿಸಿದರು. ಮುಂದುವರೆದು ರಾಜ್ಯ ಸರಕಾರಗಳು ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸಾಕಷ್ಟು ಎಚ್ಚರಿಕೆಯನ್ನೂ ನೀಡಿವೆ. ಚಂಡಮಾರುತ ಸಂತ್ರಸ್ಥರಾಗುವವರಿಗೆ ತಾತ್ಕಾಲಿಕ ಆಶ್ರಯ ತಾಣಗಳೂ ಸಿದ್ದಗೊಂಡಿದ್ದು, ಸ್ಥಳಾಂತರ ಅವಶ್ಯ ಇರುವ ಜನರನ್ನೂ ಗುರುತಿಸಲಾಗಿದೆ.

ಎನ್.ಡಿ.ಆರ್.ಎಫ್., ಸಶಸ್ತ್ರ ಪಡೆಗಳು ಮತ್ತು ಭಾರತೀಯ ಕರಾವಳಿ ಕಾವಲು ಪಡೆಯನ್ನು ಸರ್ವ ಸನ್ನದ್ದ ಸ್ಥಿತಿಯಲ್ಲಿರಿಸಲಾಗಿದ್ದು, ರಾಜ್ಯ ಸರಕಾರದ ಜೊತೆ ಸಮನ್ವಯದಲ್ಲಿವೆ. ಅವುಗಳು ಸಾಕಷ್ಟು ಪೂರ್ವತಯಾರಿಯನ್ನು ಮಾಡಿಕೊಂಡಿವೆ. ಎಂ.ಎಚ್..ಯು ರಾಜ್ಯ ಸರಕಾರಗಳ ಜೊತೆ ಮತ್ತು ಸಂಬಂಧಿತ ಕೇಂದ್ರೀಯ ಏಜೆನ್ಸಿಗಳ ಜೊತೆ ನಿರಂತರ ಸಂಪರ್ಕದಲ್ಲಿದೆ.

ಸಂಪುಟ ಕಾರ್ಯದರ್ಶಿ ಅವರು ಪ್ರಸ್ತುತ ಪರಿಸ್ಥಿತಿ ಮತ್ತು ರಕ್ಷಣಾ ಸಿದ್ದತಾ ಸ್ಥಿತಿಯ ಬಗ್ಗೆ ಮತ್ತು ಪರಿಹಾರ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು ಹಾಗು ಅವಶ್ಯಕ ತಕ್ಷಣದ ಸಹಾಯವನ್ನು ಒದಗಿಸಲು ನಿರ್ದೇಶನಗಳನ್ನು ನೀಡಿದರು.

ಗೃಹ , ರಕ್ಷಣಾ ಸಚಿವಾಲಯಗಳ ಹಿರಿಯ ಅಧಿಕಾರಿಗಳು , .ಎಂ.ಡಿ, ಎನ್.ಡಿ.ಎಂ.. ಮತ್ತು ಎನ್.ಡಿ.ಆರ್.ಎಫ್. ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ರಾಜ್ಯ ಸರಕಾರಗಳ ಮುಖ್ಯ ಕಾರ್ಯದರ್ಶಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು.

***



(Release ID: 1624581) Visitor Counter : 107