ಕೃಷಿ ಸಚಿವಾಲಯ

38 ಹೊಸ ಮಂಡಿಗಳು ಇ-ನ್ಯಾಮ್‌ ಜೊತೆ ಜೋಡಣೆ

Posted On: 15 MAY 2020 4:34PM by PIB Bengaluru

38 ಹೊಸ ಮಂಡಿಗಳು ಇ-ನ್ಯಾಮ್‌ ಜೊತೆ ಜೋಡಣೆ

ಭಾರತದಾದ್ಯಂತ ಎಲೆಕ್ಟ್ರಾನಿಕ್‌ ಕೃಷಿ ಉತ್ಪನ್ನಗಳ ವ್ಯಾಪಾರ ಪೋರ್ಟಲ್‌

18 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿನ 1000 ಮಂಡಿಗಳಿಗೆ ತಲುಪುತ್ತದೆ

 

ಹೆಚ್ಚುವರಿಯಾಗಿ 38 ಮಂಡಿಗಳು ಇ–ನ್ಯಾಮ್‌ ವೇದಿಕೆ ಅಡಿ ಇಂದು ಸೇರಿಸಲಾಗಿದೆ. ಇದರಿಂದಾಗಿ ಯೋಜಿತ ಗುರಿ ಅನುಸಾರ 415 ಮಂಡಿಗಳನ್ನು ಸಮ್ಮಿಲನಗೊಳಿಸುವುದನ್ನು ಸಾಧಿಸಲಾಗಿದೆ. 38 ಮಂಡಿಗಳು ಮಧ್ಯಪ್ರದೇಶ (19), ತೆಲಂಗಾಣ (10), ಮಹಾರಾಷ್ಟ್ರ (4) ಹಾಗೂ ಗುಜರಾತ್‌, ಹರಿಯಾಣ, ಪಂಜಾಬ್‌, ಕೇರಳ ಮತ್ತು ಜಮ್ಮು ಮತ್ತು ಕಾಶ್ಮೀರದಿಂದ ತಲಾ ಒಂದು ಸೇರಿವೆ.

ಮೊದಲನೇ ಹಂತದಲ್ಲಿ 585 ಮಂಡಿಗಳನ್ನು ಸೇರಿಸುವ ಮೂಲಕ ಒಟ್ಟಾರೆಯಾಗಿ ಯಶಸ್ಸು ಸಾಧಿಸಲಾಗಿದೆ. ಎರಡನೇ ಹಂತದಲ್ಲಿ 415 ಹೊಸ ಮಂಡಿಗಳನ್ನು ಸಮ್ಮಿಲನಗೊಳಿಸಿ ವಿಸ್ತರಿಸಲಾಗಿದೆ. ಇ–ನ್ಯಾಮ್‌ ವೇದಿಕೆ ಅಡಿಯಲ್ಲಿ 18 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳ 1000 ಮಂಡಿಗಳು ಸೇರಿವೆ.

ಇ–ನ್ಯಾಮ್‌ ಅನ್ನು ಸಣ್ಣ ರೈತರ ಕೃಷಿ ವ್ಯಾಪಾರ ಸಂಘಟನೆ (ಎಸ್ಎಫ್ಎಸಿ) ಅನುಷ್ಠಾನಗೊಳಿಸುತ್ತಿದೆ. ಭಾರತ ಸರ್ಕಾರದ ಕೃಷಿ ಸಚಿವಾಲಯ ಮತ್ತು ರೈತರ ಕಲ್ಯಾಣ ಅಡಿಯಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ರಾಜ್ಯ ಮಾರುಕಟ್ಟೆ ಮಂಡಳಿಗಳು, ಮಂಡಿ ಕಾರ್ಯದರ್ಶಿಗಳು, ರೈತರು, ಎಫ್‌ಪಿಒಗಳು, ವ್ಯಾಪಾರಿಗಳು ಮತ್ತು ಇ–ನ್ಯಾಮ್‌ ತಂಡದ ಸಹಯೋಗ ಮತ್ತು ಬೆಂಬಲದೊಂದಿಗೆ ಇ–ನ್ಯಾಮ್‌ ಕಾರ್ಯನಿರ್ವಹಿಸುತ್ತಿದೆ.

ದೇಶದಾದ್ಯಂತ ವ್ಯಾಪ್ತಿ ಹೊಂದಿರುವ ಎಲೆಕ್ಟ್ರಾನಿಕ್‌ ವ್ಯಾಪಾರ ಪೋರ್ಟಲ್‌ ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ–ನ್ಯಾಮ್‌) 2016ರ ಏಪ್ರಿಲ್‌ 14ರಂದು ಆರಂಭಿಸಲಾಗಿತ್ತು. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಈ ಪೋರ್ಟಲ್‌ಗೆ ಚಾಲನೆ ನೀಡಿದ್ದರು. ಈಗಿರುವ ಮಂಡಿಗಳನ್ನು ಒಂದೇ ಸೂರಿನ ಅಡಿಯಲ್ಲಿ ಜೋಡಿಸಿ ಸಂಪರ್ಕ ಕಲ್ಪಿಸುವ ಉದ್ದೇಶ ಈ ಪೋರ್ಟಲ್‌ ಹೊಂದಿದೆ. ದೇಶದಲ್ಲಿ ಕೃಷಿ ಉತ್ಪನ್ನಗಳಿಗೆ ‘ಒಂದು ದೇಶ, ಒಂದು ಮಾರುಕಟ್ಟೆ’ ಎನ್ನುವ ತತ್ವದ ಆಧಾರದ ಅಡಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿತ್ತು.

ಕೇಂದ್ರ ಸರ್ಕಾರದ ಡಿಜಿಟಲ್‌ ಕ್ರಮಗಳಾದ ಏಕರೂಪದ ವ್ಯವಸ್ಥೆಯನ್ನು ಎಲ್ಲ ಎಪಿಎಂಸಿಗಳಿಗೂ ಒದಗಿಸುತ್ತದೆ. ಮಾಹಿತಿ ಮತ್ತು ಸೇವೆಗಳು, ಉತ್ಪನ್ನಗಳ ಆಗಮನ, ಗುಣಮಟ್ಟ ಪರಿಶೀಲನೆ, ಸ್ಪರ್ಧಾತ್ಮಕ ಬಿಡ್‌ಗಳು ಮತ್ತು ರೈತರ ಖಾತೆಗಳಿಗೆ ನೇರವಾಗಿ ಎಲೆಕ್ಟ್ರಾನಿಕ್‌ ಹಣ ಪಾವತಿಸುವುದು ಈ ವ್ಯವಸ್ಥೆಯ ಉದ್ದೇಶವಾಗಿದೆ. ಆನ್‌ಲೈನ್‌ ಡಿಜಿಟಲ್‌ ಮಾರುಕಟ್ಟೆಯಿಂದ ರೈತರಿಗೆ ಮತ್ತು ಈ ವ್ಯವಸ್ಥೆಯಲ್ಲಿನ ಸಹಭಾಗಿತ್ವ ಹೊಂದಿದವರಿಗೆ ವಹಿವಾಟಿನ ವೆಚ್ಚ ಕಡಿಮೆಯಾಗುತ್ತದೆ, ಮಾಹಿತಿಯನ್ನು ಕ್ರೋಢಿಕರಿಸಲು ಮತ್ತು ಮಾರುಕಟ್ಟೆಯನ್ನು ವಿಸ್ತರಿಸಲು ಅನುಕೂಲವಾಗುತ್ತದೆ.

ಕಳೆದ ನಾಲ್ಕು ವರ್ಷಗಳಲ್ಲಿ ಇ–ನ್ಯಾಮ್‌ ಅಡಿಯಲ್ಲಿ 1.66 ಕೋಟಿ ರೈತರು, 1.31 ಲಕ್ಷ ವ್ಯಾಪಾರಿಗಳು, 73,151 ಕಮಿಷನ್‌ ಏಜೆಂಟ್‌ಗಳು ಮತ್ತು 1012 ಎಫ್‌ಪಿಒಗಳನ್ನು ನೋಂದಾಯಿಸಲಾಗಿದೆ. 2020ರ ಮೇ 14ರವರೆಗೆ ಇ–ನ್ಯಾಮ್‌ ವೇದಿಕೆ ಅಡಿಯಲ್ಲಿ ರೂ. 1 ಲಕ್ಷ ಕೋಟಿ ಮೌಲ್ಯದ 3.43 ಕೋಟಿ ಮೆಟ್ರಿಕ್‌ ಟನ್‌ ಮತ್ತು 38.16 ಲಕ್ಷ ಸಂಖ್ಯೆಯ ಬಿದಿರು ಮತ್ತು ಕೊಬ್ಬರಿ ವಹಿವಾಟು ಮಾಡಲಾಗಿದೆ. ಆಹಾರ ಧಾನ್ಯಗಳು, ಎಣ್ಣೆ ಬೀಜಗಳು, ಫೈಬರ್‌ಗಳು, ಹಣ್ಣು ಮತ್ತು ತರಕಾರಿಗಳು ಸೇರಿದಂತೆ 150 ಉತ್ಪನ್ನಗಳನ್ನು ಇ–ನ್ಯಾಮ್‌ ಅಡಿಯಲ್ಲಿ ವ್ಯಾಪಾರ ಮಾಡಲಾಗುತ್ತಿದೆ.

ಕೋವಿಡ್‌–19 ಲಾಕ್‌ಡೌನ್‌ನಿಂದ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ನಿವಾರಿಸಲು ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್‌ ತೋಮಾರ್‌ ಅವರು 2020ರ ಏಪ್ರಿಲ್‌ 2ರಂದು ಇ–ನ್ಯಾಮ್‌ ಅಡಿಯಲ್ಲಿ ಮೂರು ಹಂತದ ವಿಶೇಷ ಯೋಜನೆಗಳನ್ನು ಪ್ರಕಟಿಸಿದ್ದಾರೆ.

1. ಇ–ನ್ಯಾಮ್‌ ಅಡಿಯಲ್ಲಿ ಎಫ್‌ಪಿಒ: ಈ ವ್ಯವಸ್ಥೆ ಅಡಿಯಲ್ಲಿ ಎಫ್‌ಪಿಒಗಳು ವಸ್ತುಗಳ ವ್ಯಾಪಾರವನ್ನು ‘ಡೀಮ್ಡ್‌ ಮಾರುಕಟ್ಟೆ’ ಎಂದು ಕರೆಯಲಾಗುವ ಸಂಗ್ರಹ ಕೇಂದ್ರದಿಂದ ಕೈಗೊಳ್ಳುತ್ತಿವೆ. 2020ರ ಮೇ 14ರ ಅನ್ವಯ 1012 ಎಫ್‌ಪಿಒಗಳನ್ನು ಇ–ನ್ಯಾಮ್‌ ಅಡಿಯಲ್ಲಿ ನೋಂದಾಯಿಸಲಾಗಿದ್ದು, ರೂ. 8.11 ಕೋಟಿ ಮೌಲ್ಯದ 3053 ಮೆಟ್ರಿಕ್‌ ಟನ್‌ ಕೃಷಿ ಉತ್ಪನ್ನಗಳ ವ್ಯಾಪಾರ ನಡೆಸಿವೆ. ಇವುಗಳಲ್ಲಿ 42 ಎಫ್‌ಪಿಒಗಳು ತಮ್ಮದೇ ಆದ ಸಂಗ್ರಹ ಕೇಂದ್ರಗಳಿಂದ ನಡೆಸಿವೆ. ಇತ್ತೀಚೆಗೆ ಪರಿಚಯಿಸಲಾದ ಎಫ್‌ಪಿಒ ಮೊಡ್ಯುಲ್‌ಗಳು ಮೂಲಕ ಕೈಗೊಂಡಿದ್ದವು.

2. ಉಗ್ರಾಣ ಆಧಾರಿತ ಎಲೆಕ್ಟ್ರಾನಿಕ್‌ ನೆಗೋಷಿಯೇಬಲ್‌ ಉಗ್ರಾಣ ರಶೀದಿ ವ್ಯಾಪಾರ (ಇಎನ್‌ಡಬ್ಲ್ಯುಆರ್‌): ಆಂಧ್ರಪ್ರದೇಶ (23) ಮತ್ತು ತೆಲಂಗಾಣದ (14) ಇಎನ್‌ಡಬ್ಲ್ಯುಆರ್‌ ಆಧಾರಿತ ವ್ಯಾಪಾರಕ್ಕೆ ಡಬ್ಲ್ಯುಡಿಆರ್‌ಎ ಮಾನ್ಯತೆ ಹೊಂದಿರುವ ಉಗ್ರಾಣಗಳನ್ನು ಡೀಮ್ಡ್‌ ಮಾರುಕಟ್ಟೆಗಳೆಂದು ರಾಜ್ಯ ಸರ್ಕಾರಗಳು ಘೋಷಿಸಿವೆ. ರಾಜಸ್ಥಾನ ಸರ್ಕಾರವು ಇತ್ತೀಚೆಗೆ 138 ರಾಜ್ಯ ಸರ್ಕಾರಗಳು ಮತ್ತು ಸಹಕಾರ ಉಗ್ರಾಣಗಳನ್ನು ಉಪಮಾರುಕಟ್ಟೆ ಯಾರ್ಡ್‌ಗಳೆಂದು ಘೋಷಿಸಿದೆ. ಮಧ್ಯಪ್ರದೇಶ, ಉತ್ತರಪ್ರದೇಶ, ಗುಜರಾತ್‌ ಮತ್ತು ಪಂಜಾಬ್‌ ಸಹ ಉಗ್ರಾಣ ಆಧಾರಿತ ವ್ಯಾಪಾರಕ್ಕೆ ಕಾಯ್ದೆಗಳಿಗೆ ತಿದ್ದುಪಡಿ ಮಾಡಲು ಮುಂದಾಗಿವೆ.

3. ಲಾಜಿಸ್ಟಿಕ್‌ ಯೋಜನೆ: ಜಮೀನಿನಿಂದ ಮಂಡಿಗಳಿಗೆ ಮತ್ತು ಮಂಡಿಗಳಿಂದ ಉಗ್ರಾಣಗಳು ಅಥವಾ ಬಳಕೆಯಾಗುವ ಕೇಂದ್ರಗಳಿಗೆ ಕೃಷಿ ಉತ್ಪನ್ನಗಳನ್ನು ಸಾರಿಗೆ ವ್ಯವಸ್ಥೆ ಮೂಲಕ ತಲುಪಿಸುವುದಾಗಿದೆ. 2.3 ಲಕ್ಷ ಸಾರಿಗೆದಾರರು ಮತ್ತು 11.37 ಲಕ್ಷ ವಾಹನಗಳನ್ನು ಒಂಬತ್ತು ಲಾಜಿಸ್ಟಿಕ್‌ ಸೇವೆಗಳ ಜತೆ ಸಂಪರ್ಕ ಸಾಧಿಸಿ ಇ–ನ್ಯಾಮ್‌ ವೇದಿಕೆ ಅಡಿಯಲ್ಲಿ ತರಲಾಗಿದೆ.

2020ರ ಮೇ 1ರಂದು ಆರ್‌ಇಎಂಎಸ್‌(ಏಕೀಕೃತ ಮಾರುಕಟ್ಟೆ ಪೊರ್ಟಲ್‌–ಯುಎಂಪಿ) ಮತ್ತು ಇ–ನ್ಯಾಮ್‌ ಪೋರ್ಟಲ್‌ ಅನ್ನು ಆರಂಭಿಸಲಾಯಿತು. ಆರ್‌ಇಎಂಎಸ್ ಅಡಿಯಲ್ಲಿ ಕರ್ನಾಟಕದ ರೈತರು ಮತ್ತು ವ್ಯಾಪಾರಿಗಳು ಹಾಗೂ ಇ–ನ್ಯಾಮ್‌ ವೇದಿಕ ಅಡಿಯಲ್ಲಿರುವವರು ಸಂರ್ಪಕ ಸಾಧಿಸಿ ಅಂತರ ವೇದಿಕೆ ವ್ಯವಸ್ಥೆ ಅಡಿಯಲ್ಲಿ ವ್ಯಾಪಾರ ಕೈಗೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಇದರಿಂದ ವ್ಯಾಪಾರಕ್ಕೆ ಮಾರುಕಟ್ಟೆ ವ್ಯಾಪ್ತಿ ಹೆಚ್ಚಳವಾಗಲಿದೆ.

ಇ–ನ್ಯಾಮ್‌ ಕ್ರಾಂತಿಕಾರಿ ಹೆಜ್ಜೆಗಳಿಂದ ‘ಒಂದು ದೇಶ–ಒಂದು ರಾಷ್ಟ್ರ’ ಗುರಿಯನ್ನು ತಲುಪುವ ಆಶಯವನ್ನು ಹೊಂದಲಾಗಿದೆ. ರೈತರು, ವ್ಯಾಪಾರಿಗಳು ಮತ್ತು ಮಂಡಿಗಳಿಗೆ ಅನುಕೂಲವಾಗಲಿದೆ. ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ವಾತಾವರಣವನ್ನು ಕಲ್ಪಿಸಲಿದೆ. ಇನ್ಯಾಮ್‌ ಪೋರ್ಟಲ್‌ ಮೂಲಕ ಕೃಷಿ ಉತ್ಪನ್ನಗಳನ್ನು ದೇಶದಾದ್ಯಂತ ಆನ್‌ಲೈನ್‌ ಮೂಲಕ ಮಾರಾಟ ಮತ್ತು ಖರೀದಿ ವ್ಯವಸ್ಥೆಯನ್ನು ಬಲಪಡಿಸಲಿದೆ.

***



(Release ID: 1624301) Visitor Counter : 269