ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ವ್ಯವಹಾರವನ್ನು ಸುಲಭಗೊಳಿಸುವುದನ್ನು ಖಾತ್ರಿಪಡಿಸಿಕೊಳ್ಳುವಾಗ ಗೃಹಖರೀದಿದಾರರ ಹಿತಾಸಕ್ತಿಯನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ

Posted On: 13 MAY 2020 8:57PM by PIB Bengaluru

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ವ್ಯವಹಾರವನ್ನು ಸುಲಭಗೊಳಿಸುವುದನ್ನು ಖಾತ್ರಿಪಡಿಸಿಕೊಳ್ಳುವಾಗ ಗೃಹಖರೀದಿದಾರರ ಹಿತಾಸಕ್ತಿಯನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ

ಇಂದಿನ ಕ್ರಮವು ಕೆಲವು ತಿಂಗಳುಗಳ ವಿಳಂಬವಿದ್ದರೂ ಫ್ಲಾಟ್ಗಳು ಮತ್ತು ಮನೆಗಳ ಪೂರ್ಣಗೊಳಿಸುವಿಕೆ ಮತ್ತು ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಗೃಹಖರೀದಿದಾರರ ಹಿತಾಸಕ್ತಿಯನ್ನು ಕಾಪಾಡುವುದಾಗಿದೆ

 

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ವ್ಯವಹಾರವನ್ನು ಸುಲಭಗೊಳಿಸುವುದನ್ನು ಖಾತ್ರಿಪಡಿಸಿಕೊಳ್ಳುವಾಗ ಗೃಹಖರೀದಿದಾರರ ಹಿತಾಸಕ್ತಿಯನ್ನು ಎತ್ತಿಹಿಡಿಯಲು ಮತ್ತು ರಕ್ಷಿಸಲು ಸರ್ಕಾರ ಬದ್ಧವಾಗಿದೆ. ನಂತರ ಕೇಂದ್ರ ಹಣಕಾಸು ಸಚಿವ ಶ್ರೀಮತಿ. ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿಯಲ್ಲಿ, ಇಂದು, ಗ್ರಾಹಕರ ಹಿತಾಸಕ್ತಿ ಕಾಪಾಡುವ ಸಲುವಾಗಿ, ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ಅವರ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಗಳಿಗೆ ರೇರಾ ಅಡಿಯಲ್ಲಿ ನೋಂದಾಯಿಸಲಾದ ಎಲ್ಲಾ ರಿಯಲ್ ಎಸ್ಟೇಟ್ ಯೋಜನೆಗಳ ನೋಂದಣಿಯನ್ನು ಕೋವಿಡ್-19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಸ್ವಾಭಾವಿಕವಾಗಿ 6 ತಿಂಗಳವರೆಗೆ ಮತ್ತು ಅಗತ್ಯವಿದ್ದರೆ 3 ತಿಂಗಳವರೆಗೆ.ವಿಸ್ತರಿಸಲು ಸಲಹೆ ನೀಡಿದೆ.

ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕವನ್ನು "ಫೋರ್ಸ್ ಮೇಜರ್" ನೈಸರ್ಗಿಕ ವಿಪತ್ತು ಎಂದು ಪರಿಗಣಿಸಲು ಮತ್ತು ಕೋವಿಡ್-19 ಸಾಂಕ್ರಾಮಿಕವು ರಿಯಲ್ ಎಸ್ಟೇಟ್ ಯೋಜನೆಗಳ ನಿಯಮಿತ ಅಭಿವೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಮತ್ತು ಸಾಂಕ್ರಾಮಿಕ ರೋಗದಿಂದಾಗಿ ಉಂಟಾಗಿರುವ ಪರಿಸ್ಥಿತಿಯ ಪ್ರಕಾರ, ರೇರಾ ಅಡಿಯಲ್ಲಿ ನೋಂದಾಯಿಸಲಾದ ಎಲ್ಲಾ ರಿಯಲ್ ಎಸ್ಟೇಟ್ ಯೋಜನೆಗಳ ನೋಂದಣಿಯನ್ನು 6 ತಿಂಗಳು ಮತ್ತು 3 ತಿಂಗಳವರೆಗೆ ವಿಸ್ತರಿಸಲು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಇಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ಆಯಾ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಗಳಿಗೆ ಸಲಹೆಯನ್ನು ನೀಡಿದೆ,

ಕ್ರಮವು ಕೆಲವು ತಿಂಗಳುಗಳ ವಿಳಂಬವಿದ್ದರೂ ತಮ್ಮ ಫ್ಲ್ಯಾಟ್ಗಳು ಮತ್ತು ಮನೆಗಳನ್ನು ಕೈಗೊಪ್ಪಿಸಲುಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುತ್ತದೆ ಆದರೆ ಇದು ಯೋಜನೆಗಳ ಪೂರ್ಣಗೊಳ್ಳುವಿಕೆಯನ್ನು ಖಾತ್ರಿಪಡಿಸುತ್ತದೆ.

ಹಿಂದೆ ಹಲವಾರು ಯೋಜನೆಗಳು ಸ್ಥಗಿತಗೊಂಡಿದ್ದು, ಲಕ್ಷಾಂತರ ಗೃಹಖರೀದಿದಾರರನ್ನು ಬಹಳ ಸಂಕಷ್ಟದ ಪರಿಸ್ಥಿತಿಗೆ ಈಡುಮಾಡಿದವು ಇದರಿಂದಾಗಿ ಅವರು ತಾವು ಕಾದಿರಿಸಿದ ಮನೆಗಳಿಗಾಗಿ ಅಲೆದಾಡುತ್ತಿದ್ದರು. ಆದ್ದರಿಂದ, ಕೋವಿಡ್-19 ರಿಯಲ್ ಎಸ್ಟೇಟ್ ಕ್ಷೇತ್ರದ ಸಂಪೂರ್ಣ ಸ್ಥಗಿತಕ್ಕೆ ಕಾರಣವಾಗದಂತೆ ನೋಡಿಕೊಳ್ಳಲು ಈಗ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಅಂತೆಯೇ, ಈಗಿನ ಪರಿಸ್ಥಿತಿಯಲ್ಲಿ, ಯೋಜನೆಗಳನ್ನು ಪೂರ್ಣಗೊಳಿಸಲು ಡೆವಲಪರ್ಗಳಿಗೆ ಸೂಕ್ತವಾದ ನಿಯಂತ್ರಕ ಪರಿಹಾರವನ್ನು ಖಾತರಿಪಡಿಸುವ ಮೂಲಕ ಗ್ರಾಹಕರ ಕಳವಳಗಳನ್ನು ಪರಿಹರಿಸುವುದು ಪ್ರಾಥಮಿಕ ಉದ್ದೇಶವಾಗಿದೆ, ಇದರಿಂದಾಗಿ ಸಂಬಂಧಪಟ್ಟ ಎಲ್ಲರಿಗೂ ಅನುಕೂಲಕರ ಪರಿಸ್ಥಿತಿ ಸೃಷ್ಟಿಯಾಗುತ್ತದೆ.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಗೃಹಖರೀದಿದಾರರು, ಡೆವೆಲಪರ್ಗಳು, ಹಣಕಾಸು ಸಂಸ್ಥೆಗಳು ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಿತು ಮತ್ತು ಹಠಾತ್ ಸಾಂಕ್ರಾಮಿಕ ರೋಗದಿಂದ ಉಂಟಾದ ಪರಿಸ್ಥಿತಿಗೆ ಅತ್ಯುತ್ತಮ ಪರಿಹಾರವನ್ನು ಕಂಡುಹಿಡಿಯಲು ಎಲ್ಲಾ ಸಂಬಂಧಿತ ವಿಷಯಗಳ ಬಗ್ಗೆ ಚರ್ಚಿಸಿತು.

ಇದಲ್ಲದೆ, ರೇರಾದ ಕೇಂದ್ರ ಸಲಹಾ ಮಂಡಳಿಯ (ಸಿಎಸಿ) ತುರ್ತು ಸಭೆ 29 ಏಪ್ರಿಲ್ 2020 ರಂದು ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ), ಶ್ರೀ ಹರ್ದೀಪ್ ಸಿಂಗ್ ಪುರಿ ಅವರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯಿತು, ಇದರಲ್ಲಿ ಪ್ರಸ್ತುತ ಸಾಂಕ್ರಾಮಿಕ ರೋಗವನ್ನು ರೇರಾ ಅಡಿಯಲ್ಲಿ ಫೋರ್ಸ್ ಮೇಜರ್ ಎಂದು ಪರಿಗಣಿಸಲು ಕೇಂದ್ರ ಸರ್ಕಾರವು ಸಲಹೆಯನ್ನು ನೀಡುವುದಕ್ಕೆ ಶಿಫಾರಸು ಮಾಡಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು .

ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಸೃಷ್ಟಿಯಾದ ಪರಿಸ್ಥಿತಿಯಿಂದಾಗಿ, ಮಾರ್ಚ್ 25, 2020ರಿಂದ ರಾಷ್ಟ್ರವ್ಯಾಪಿ ಲಾಕ್ಡೌನ್ ಘೋಷಿಸಲಾಯಿತು. ಇದರ ಪರಿಣಾಮವಾಗಿ, ನಡೆಯುತ್ತಿದ್ದ ರಿಯಲ್ ಎಸ್ಟೇಟ್ ಯೋಜನೆಗಳ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು, ಇದರಿಂದಾಗಿ ಕಾರ್ಮಿಕರು ತಮ್ಮ ಮೂಲ ಸ್ಥಳಗಳಿಗೆ ವಲಸೆ ಹೋದರು ಹಾಗೂ ನಿರ್ಮಾಣ ಸಾಮಗ್ರಿಗಳ ಸರಬರಾಜು ಸರಪಳಿಯಲ್ಲಿ ದೊಡ್ಡ ಪ್ರಮಾಣದ ಅಡ್ಡಿ ಉಂಟಾಗಿದ್ದು ಅದು ದೇಶಾದ್ಯಂತ ನಿರ್ಮಾಣ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿತು.

ಮುಂಗಾರಿನ ಪೂರ್ವದಲ್ಲಿ ನಿರ್ಮಾಣ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದಿಲ್ಲ ಎಂದು ನಿರೀಕ್ಷಿಸಲಾಗಿದೆ, ಇದು ನಿರ್ಮಾಣವನ್ನು ಇನ್ನಷ್ಟು ವಿಳಂಬಗೊಳಿಸುತ್ತದೆ. ಇದಲ್ಲದೆ, ಮುಂಬರುವ ಮುಂಗಾರಿನ ನಂತರ ದಸರಾ, ದೀಪಾವಳಿ, ಛತ್ ಮುಂತಾದ ಹಬ್ಬಗಳು ಇರುವುದರಿಂದ ಕಾರ್ಮಿಕರು ಶೀಘ್ರದಲ್ಲೇ ಕೆಲಸಕ್ಕೆ ಹಿಂತಿರುಗುವ ನಿರೀಕ್ಷೆಯಿಲ್ಲ.

ಅಂತಹ ಸಂದರ್ಭಗಳಲ್ಲಿ, ರಿಯಲ್ ಎಸ್ಟೇಟ್ ಯೋಜನೆಗಳ ಕೆಲಸವು ಪೂರ್ಣ ಪ್ರಮಾಣದಲ್ಲಿ ಪುನರಾರಂಭಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎನ್ನುವುದು ಸ್ಪಷ್ಟವಾಗಿದೆ. ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ, 2016 [ರೇರಾ] ಅಡಿಯಲ್ಲಿ ತುರ್ತು ಪರಿಹಾರ ನಿಯಂತ್ರಣ ಕ್ರಮಗಳ ಅನುಪಸ್ಥಿತಿಯಲ್ಲಿ, ಅನೇಕ ರಿಯಲ್ ಎಸ್ಟೇಟ್ ಯೋಜನೆಗಳು ವ್ಯಾಜ್ಯ ಇತ್ಯಾದಿಗಳಿಗೆ ಕಾರಣವಾಗುವ ಸಾಧ್ಯತೆಯೂ ಇದೆ. ಇದು ಅಂತಿಮವಾಗಿ ತಮ್ಮ ಕನಸಿನ ಮನೆಗಳಿಗಾಗಿ ತಮ್ಮ ಜೀವಿತಾವಧಿಯ ಉಳಿತಾಯವನ್ನು ಹೂಡಿಕೆ ಮಾಡಿದ ಗೃಹಖರೀದಿದಾರರಿಗೆ.ಫ್ಲ್ಯಾಟ್ಗಳನ್ನು ವಿತರಿಸದಿರಲು ಕಾರಣವಾಗುತ್ತದೆ.

***



(Release ID: 1623805) Visitor Counter : 219