ಬುಡಕಟ್ಟು ವ್ಯವಹಾರಗಳ ಸಚಿವಾಲಯ
“ಬುಡಕಟ್ಟು ಜೀವನೋಪಾಯಗಳು ಮತ್ತು ಸುರಕ್ಷೆ” ಕುರಿತಂತೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಜೊತೆ ವೀಡಿಯೋ ಕಾನ್ಫರೆನ್ಸ್ ನಡೆಸಿದ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಅರ್ಜುನ್ ಮುಂಡಾ
Posted On:
12 MAY 2020 6:40PM by PIB Bengaluru
“ಬುಡಕಟ್ಟು ಜೀವನೋಪಾಯಗಳು ಮತ್ತು ಸುರಕ್ಷೆ” ಕುರಿತಂತೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಜೊತೆ ವೀಡಿಯೋ ಕಾನ್ಫರೆನ್ಸ್ ನಡೆಸಿದ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಅರ್ಜುನ್ ಮುಂಡಾ
ಪರಿಷ್ಕೃತ ಬೆಂಬಲ ದರದಲ್ಲಿ ಎಂ.ಎಫ್. ಪಿ. ಖರೀದಿಗೆ ಮುಂದಾಗಿರುವುದಕ್ಕೆ ರಾಜ್ಯಗಳಿಗೆ ಶ್ರೀ ಅರ್ಜುನ್ ಮುಂಡಾ ಅಭಿನಂದನೆ
ವನಧನ್ ಕಾರ್ಯಕ್ರಮ ಮತ್ತು ಕೋವಿಡ್ -19 ಹಿನ್ನೆಲೆಯಲ್ಲಿ ಮನೆಗೆ ಮರಳುತ್ತಿರುವ ಬುಡಕಟ್ಟು ವಲಸೆ ಕಾರ್ಮಿಕರು/ ವಿದ್ಯಾರ್ಥಿಗಳ ವಿಷಯದಲ್ಲಿ ರಾಜ್ಯಗಳು ಕೈಗೊಂಡ ಕ್ರಮಗಳ ಬಗ್ಗೆ ಬುಡಕಟ್ಟು ವ್ಯವಹಾರ ಸಚಿವರಿಂದ ಪರಾಮರ್ಶೆ
ಬುಡಕಟ್ಟು ವ್ಯವಹಾರಗಳ ಸಚಿವರಾದ ಶ್ರೀ ಅರ್ಜುನ್ ಮುಂಡಾ ಅವರು “ಬುಡಕಟ್ಟು ಜೀವನೋಪಾಯಗಳು ಮತ್ತು ಸುರಕ್ಷೆ” ಕುರಿತಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಜೊತೆ ಹೊಸದಿಲ್ಲಿಯಲ್ಲಿಂದು ವೀಡಿಯೋ ಕಾನ್ಫರೆನ್ಸ್ ನಡೆಸಿದರು. 20 ಕ್ಕೂ ಅಧಿಕ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ರಾಜ್ಯ ಬುಡಕಟ್ಟು ವ್ಯವಹಾರಗಳ ಸಚಿವರು ಮತ್ತು ರಾಜ್ಯಗಳ ಅರಣ್ಯ ಸಚಿವರು ಹಿರಿಯ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಪಾಲ್ಗೊಂಡಿದ್ದರು. ಬುಡಕಟ್ಟು ವ್ಯವಹಾರಗಳ ಸಹಾಯಕ ಸಚಿವರಾದ ಶ್ರೀಮತಿ ರೇಣುಕಾ ಸಿಂಗ್ ಸರೂಟಾ; ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಶ್ರೀ ದೀಪಕ್ ಖಾಂಡೇಕರ್; ಟ್ರೈಫೆಡ್ ಎಂ.ಡಿ. ಶ್ರೀ ಪ್ರವೀರ ಕೃಷ್ಣ ಮತ್ತು ಬುಡಕಟ್ಟು ವ್ಯವಹಾರಗಳ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಪಾಲ್ಗೊಂಡಿದ್ದವರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಅರ್ಜುನ್ ಮುಂಡಾ ಅವರು ಪರಿಷ್ಕೃತ ಎಂ.ಎಸ್.ಪಿ. ಯಲ್ಲಿ ಕಿರು ಅರಣ್ಯ ಉತ್ಪತ್ತಿಗಳನ್ನು ಖರೀದಿಸಲು ಮುಂದಾಗುವ ಮೂಲಕ ಬುಡಕಟ್ಟು ಜೀವನೋಪಾಯವನ್ನು ಬೆಂಬಲಿಸುತ್ತಿರುವುದಕ್ಕೆ ರಾಜ್ಯಗಳನ್ನು ಅಭಿನಂದಿಸಿದರು.
2020 ರ ಮೇ 1 ರ ಬಳಿಕ, ಎಂ.ಎಫ್.ಪಿ.ಗಾಗಿರುವ ಎಂ.ಎಸ್.ಪಿ. ಯನ್ನು 50 ವಸ್ತುಗಳಿಗೆ ಸಂಬಂಧಿಸಿ ಪರಿಷ್ಕರಿಸಿದ ಬಳಿಕ 17 ರಾಜ್ಯಗಳು ರೂ. 40 ಕೋಟಿಯವರೆಗೆ ವಸ್ತುಗಳನ್ನು ಖರೀದಿ ಮಾಡಿವೆ. ಇನ್ನೂ ಐದು ರಾಜ್ಯಗಳು ಈ ಪ್ರಕ್ರಿಯೆಯನ್ನು ಶೀಘ್ರವೇ ಆರಂಭಿಸಲಿವೆ. ಬುಡಕಟ್ಟು ಜನರಿಗೆ ಎಂ.ಎಫ್.ಪಿ. ಯು ಪ್ರಮುಖ ಜೀವನೋಪಾಯವಾಗಿದ್ದು, ಬುಡಕಟ್ಟು ಜನರಿಗೆ ಅವರ ಉತ್ಪನ್ನಗಳಿಗೆ ನೈಜ ಬೆಲೆ ದೊರೆಯುವಂತೆ ಮಾಡಲು ಸರಕಾರ ಎಲ್ಲಾ ಪ್ರಯತ್ನಗಳನ್ನು ಖಾತ್ರಿಪಡಿಸುತ್ತಿದೆ ಎಂದು ಶ್ರೀ ಅರ್ಜುನ್ ಮುಂಡಾ ಹೇಳಿದರು. ಉಳಿದ ರಾಜ್ಯಗಳು ಸಾಧ್ಯವಿದ್ದಷ್ಟು ಬೇಗ ಎಂ.ಎಸ್.ಪಿ. ಖರೀದಿಯನ್ನು ಆರಂಭಿಸುವಂತೆ ಅವರು ಮನವಿ ಮಾಡಿದರು.
ರಾಜ್ಯಗಳಲ್ಲಿ ಪ್ರಧಾನ ಮಂತ್ರಿಗಳ ವನ್ ಧನ ಯೋಜನೆ ಕಾರ್ಯವನ್ನು ಬುಡಕಟ್ಟು ವ್ಯವಹಾರಗಳ ಸಚಿವ, ಶ್ರೀ ಅರ್ಜುನ್ ಮುಂಡಾ ಪರಾಮರ್ಶಿಸಿದರು. ಬುಡಕಟ್ಟು ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯ ಸಂಪರ್ಕ ಬೇಕಾದರೆ ಮೌಲ್ಯ ವರ್ಧನೆ ಅವಶ್ಯವಾಗಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರೂ ಈ ಬಗ್ಗೆ ಧೀರ್ಘ ಕಾಲೀನ ಮುಂಗಾಣ್ಕೆಯನ್ನು ಹೊಂದಿದ್ದಾರೆ . ವನಧನ ಕೇಂದ್ರಗಳು ಮತ್ತು ಮೌಲ್ಯವರ್ಧನೆಗೆ ಬೇಕಾದ ಮೂಲಸೌಕರ್ಯಗಳು ಹಾಗು ಮತ್ತು ಬುಡಕಟ್ಟು ಉತ್ಪಾದನೆಗಳ ಮಾರುಕಟ್ಟೆ ಮಾಡುವುದಕ್ಕಾಗಿ ರಾಜ್ಯಗಳಿಗೆ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಬೆಂಬಲ ನೀಡುತ್ತದೆ ಹಾಗು ಈ ನಿಟ್ಟಿನಲ್ಲಿ ರಾಜ್ಯಗಳ ಇತರ ಯಾವುದೇ ಆವಶ್ಯಕತೆಗಳಿದ್ದರೂ ಅದನ್ನು ಈಡೇರಿಸುತ್ತದೆ ಎಂದರು. ಸಾವಯವ ಸ್ವರೂಪದ ಗ್ರಾಮೀಣ ಉತ್ಪನ್ನಗಳನ್ನು ರಾಷ್ಟ್ರೀಯ ಮತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಕೊಂಡೊಯ್ಯಲು ಮಾರುಕಟ್ಟೆ ಸರಪಳಿಯನ್ನು ಅಭಿವೃದ್ದಿ ಮಾಡಬೇಕಾದ ಆವಶ್ಯಕತೆಯನ್ನು ಸಚಿವರು ಪ್ರಮುಖವಾಗಿ ಪ್ರಸ್ತಾಪಿಸಿದರು.
ಕೋವಿಡ್ -19 ಉಂಟು ಮಾಡಿರುವ ಪರಿಸ್ಥಿತಿಯಿಂದಾಗಿ ಮನೆಗಳಿಗೆ ಮರಳುತ್ತಿರುವ ಬುಡಕಟ್ಟು ವಲಸೆಗಾರರಿಗೆ ಮತ್ತು ವಿದ್ಯಾರ್ಥಿಗಳಿಗಾಗಿ ರಾಜ್ಯಗಳು ಮಾಡಿರುವ ವ್ಯವಸ್ಥೆಗಳನ್ನು ಶ್ರೀ ಅರ್ಜುನ್ ಮುಂಡಾ ಪರಾಮರ್ಶಿಸಿದರು.
ಈ ಸಂಕೀರ್ಣ ಸಂದರ್ಭದಲ್ಲಿ ಮನೆಗಳಿಗೆ ಮರಳಿ ಬರುತ್ತಿರುವ ವಲಸೆಗಾರರಿಗೆ ಕಿರು ಅರಣ್ಯ ಉತ್ಪನ್ನಗಳಿಗೆ ನೀಡಲಾಗಿರುವ ಆದ್ಯತೆ ಮತ್ತು ವಿ.ಡಿ.ವಿ.ಕೆ. ಗಳ ಮೂಲಕ ಮಾರುಕಟ್ಟೆ ಹಾಗು ನ್ಯಾಯೋಚಿತ ಬೆಂಬಲ ಬೆಲೆಗಳು ಹೆಚ್ಚುವರಿ ಜೀವನೋಪಾಯ ಸೃಷ್ಟಿಸಲು ವರವಾಗಬಲ್ಲದು ಎಂದು ಸಚಿವರು ಹೇಳಿದರು.
ಬುಡಕಟ್ಟು ವ್ಯವಹಾರಗಳ ಸಹಾಯಕ ಸಚಿವರಾದ ಶ್ರೀಮತಿ ರೇಣುಕಾ ಸಿಂಗ್ ಅವರು ವಿವಿಧ ರಾಜ್ಯಗಳಿಂದ ಮರಳಿ ಬರುತ್ತಿರುವ ಬುಡಕಟ್ಟು ಜನರನ್ನು ಗ್ರಾಮ ಮಟ್ಟದಲ್ಲಿ ಉದ್ಯೋಗಸ್ಥರನ್ನಾಗಿಸಲು ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಸ್ಥಾಪಿಸುವ ಆವಶ್ಯಕತೆಯ ಬಗ್ಗೆ ಪ್ರಸ್ತಾಪಿಸಿದರು. ಮತ್ತು ಬುಡಕಟ್ಟು ಜನರಲ್ಲಿ ಪರಂಪರಾಗತವಾಗಿ ಬಂದಿರುವ ಸಾಂಪ್ರದಾಯಿಕ ಜ್ಞಾನದ ಪ್ರಯೋಜನವನ್ನು ಪಡೆಯುವ ಅಗತ್ಯದ ಬಗ್ಗೆಯೂ ಉಲ್ಲೇಖಿಸಿದರು.
ವನಧನ ಕೇಂದ್ರಗಳು, ಸ್ವಸಹಾಯ ಗುಂಪುಗಳ ಮೂಲಕ ಮತ್ತು ಬುಡಕಟ್ಟು ಉತ್ಪಾದನೆಗಳ ಮಾರುಕಟ್ಟೆಗಾಗಿ ಬುಡಕಟ್ಟು ಜನರಿಗೆ ಜೀವನೋಪಾಯ ಮತ್ತು ಉದ್ಯೋಗ ಸೃಷ್ಟಿಗೆ ಸಹಾಯ ಮಾಡುತ್ತಿರುವ ಕೇಂದ್ರ ಸರಕಾರಕ್ಕೆ ವಿವಿಧ ರಾಜ್ಯಗಳು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದವು. ವನಧನ ಕೇಂದ್ರಗಳ ಮೂಲಕ ಉತ್ತಮ ಆರಂಭಿಕ ಫಲಿತಾಂಶಗಳು ಬಂದ ಬಳಿಕ ಬಹುತೇಕ ಎಲ್ಲಾ ರಾಜ್ಯಗಳೂ ತಮ್ಮ ರಾಜ್ಯಗಳಲ್ಲಿ ವನಧನ ಕೇಂದ್ರಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡಲು ಕೋರಿಕೆ ಮಂಡಿಸಿವೆ. ಅವುಗಳು ತಮ್ಮ ರಾಜ್ಯಗಳಲ್ಲಿ ಲಭ್ಯ ಇರುವ ಕಿರು ಅರಣ್ಯ ಉತ್ಪತ್ತಿಗಳ ಪ್ರಯೋಜನ ಮತ್ತು ವೈವಿಧ್ಯತೆ ಬಗ್ಗೆ ಪ್ರಮುಖವಾಗಿ ಪ್ರಸ್ತಾಪಿಸಿವೆ ಮತ್ತು ಎಂ.ಎಸ್. ಪಿ. ಹೆಚ್ಚಳದಿಂದ ಎಂ.ಎಫ್.ಪಿ. ಖರೀದಿಗೆ ಹೇಗೆ ಅನುಕೂಲವಾಗಿದೆ ಎಂಬುದನ್ನೂ ಉಲ್ಲೇಖಿಸಿವೆ. ಕೋವಿಡ್ 19 ರ ಹಿನ್ನೆಲೆಯಲ್ಲಿ ಬುಡಕಟ್ಟು ಜನರು ತಯಾರಿಸಿರುವ ಸ್ಯಾನಿಟೈಸರ್ ಮತ್ತು ಮುಖಗವಸುಗಳನ್ನು ಕೆಲವು ರಾಜ್ಯಗಳು ಪ್ರದರ್ಶಿಸಿವೆ, ಮತ್ತು ಅವುಗಳನ್ನು ಸ್ಥಳೀಯ ಸಮುದಾಯಗಳಿಗೆ ಹಾಗು ರೈಲ್ವೇಯಂತಹ ಏಜೆನ್ಸಿಗಳಿಗೆ ಪೂರೈಕೆ ಮಾಡಲಾಗಿದೆ.
ಟ್ರೈಫೆಡ್ ಆಡಳಿತ ನಿರ್ದೇಶಕ ಶ್ರೀ ಕೃಷ್ಣ ಅವರು ವನಧನ ಕೇಂದ್ರಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಒಂದೊಂದು ರಾಜ್ಯ ಮಾಡಿರುವ ಸಾಧನೆಯನ್ನು ಪ್ರದರ್ಶಿಕೆಯ ಮೂಲಕ ತಿಳಿಸಿದರು.
ಟ್ರೈಫೆಡ್ ಆಡಳಿತ ನಿರ್ದೇಶಕ ಶ್ರೀ ಕೃಷ್ಣ ಅವರು ವನಧನ ಕೇಂದ್ರಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಒಂದೊಂದು ರಾಜ್ಯ ಮಾಡಿರುವ ಸಾಧನೆಯನ್ನು ಪ್ರದರ್ಶಿಕೆಯ ಮೂಲಕ ತಿಳಿಸಿದರು.
ಪರಿಷ್ಕೃತ ಎಂ.ಎಸ್.ಪಿ. ಯಲ್ಲಿ ರಾಜ್ಯಗಳು ಖರೀದಿ ಮಾಡಿದ ಎಂ.ಎಫ್.ಪಿ.
ವಿವರಗಳು
|
ದಿನಾಂಕ 04/05/2020 ರಲ್ಲಿದ್ದಂತೆ
|
ದಿನಾಂಕ 09/05/2020 ರಲ್ಲಿದ್ದಂತೆ
|
ದಿನಾಂಕ 12/05/2020 ರಲ್ಲಿದ್ದಂತೆ
|
ರಾಜ್ಯಗಳ ಸಂಖ್ಯೆ
|
10 States
10 ರಾಜ್ಯಗಳು
|
10 States
10 ರಾಜ್ಯಗಳು
|
17 States
17 ರಾಜ್ಯಗಳು
|
ಖರೀದಿ
|
ರೂ. .23.06 ಕೋಟಿ
|
ರೂ. . 29.07 ಕೋಟಿ
|
ರೂ. 40 ಕೋಟಿ
|
ಶ್ರೀ ಪ್ರವೀರ ಕೃಷ್ಣ ಅವರು ರಾಜ್ಯಗಳ ಏಜೆನ್ಸಿಗಳು 40 ಕೋಟಿ ರೂ. ಮೌಲ್ಯದ ಎಂ.ಎಫ್.ಪಿ. ಯನ್ನು ಖರೀದಿ ಮಾಡಿರುವುದನ್ನು ಪ್ರಕಟಿಸಿ ಇದರಿಂದ ಅರಣ್ಯ ಉತ್ಪನ್ನಗಳ ಮಾರುಕಟ್ಟೆ ದರದಲ್ಲಿ ಹೆಚ್ಚಳವಾಗಿದ್ದು, ಖಾಸಗಿ ವ್ಯಾಪಾರಸ್ಥರು ಪರಿಷ್ಕೃತ ದರದಲ್ಲಿ ಖರೀದಿ ಮಾಡಿರುವುದರಿಂದ ಹೆಚ್ಚುವರಿ 300 ಕೋ.ರೂ.ಗಳ ಪ್ರಯೋಜನ ಬುಡಕಟ್ಟು ಜನರಿಗಾಗಿದೆ ಎಂದರು.
1205 ವನ್ ಧನ ಕೇಂದ್ರಗಳನ್ನು ರಾಜ್ಯಗಳಲ್ಲಿ ಸ್ಥಾಪಿಸಲಾಗಿದೆ, ಮತ್ತು 18075 ಸ್ವ ಸಹಾಯ ಗುಂಪುಗಳ ಮೂಲಕ 3.75 ಲಕ್ಷ ಫಲಾನುಭವಿಗಳಿಗೆ ಪ್ರಯೋಜನವಾಗಿದೆ. ಇಂದಿನವರೆಗೆ ವಿ.ಡಿ.ವಿ.ಕೆ.ಗಳನ್ನು ಸ್ಥಾಪಿಸಲು 166 ಕೋ.ರೂ.ಗಳನ್ನು ಮಂಜೂರು ಮಾಡಲಾಗಿದೆ.
***
(Release ID: 1623801)
Visitor Counter : 276