ಪ್ರವಾಸೋದ್ಯಮ ಸಚಿವಾಲಯ
‘ಭಾರತದ ಅತ್ಯುತ್ತಮ ಕಾಪಾಡಿದ ರಹಸ್ಯ- ಒಡಿಶಾ’ ಶೀರ್ಷಿಕೆಯಲ್ಲಿ "ದೇಖೋ ಅಪ್ನಾ ದೇಶ್" ಸರಣಿಯ 18 ನೇ ವೆಬ್‌ನಾರ್ ಆಯೋಜನೆ
Posted On:
13 MAY 2020 12:55PM by PIB Bengaluru
‘ಭಾರತದ ಅತ್ಯುತ್ತಮ ಕಾಪಾಡಿದ ರಹಸ್ಯ- ಒಡಿಶಾ’ ಶೀರ್ಷಿಕೆಯಲ್ಲಿ
ಪ್ರವಾಸೋದ್ಯಮ ಸಚಿವಾಲಯದ "ದೇಖೋ ಅಪ್ನಾ ದೇಶ್" ಸರಣಿಯ 18 ನೇ ವೆಬ್‌ನಾರ್ ಆಯೋಜನೆ
ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ನಮ್ಮ ದೇಶವನ್ನು ನೋಡಿ (ದೇಖೋ ಅಪ್ನಾ ದೇಶ್) ಸರಣಿಯ 18 ನೇ ವೆಬ್ನಾರ್ ಅನ್ನು ‘ಭಾರತದ ಅತ್ಯುತ್ತಮ ಕಾಪಾಡಿದ ರಹಸ್ಯ-ಒಡಿಶಾ’ ಎಂಬ ಶೀರ್ಷಿಕೆಯೊಂದಿಗೆ ಮೇ 12, 2020 ರಂದು ಆಯೋಜಿಸಿದ್ದು, ಈ ಮೂಲಕ ಭಾಗವಹಿಸಿದವರನ್ನು ಒಡಿಶಾಗೆ ವಾಸ್ತವ ಲೋಕಕ್ಕೆ ಪ್ರಯಾಣ ಮಾಡಿಸಲಾಯಿತು.
ಒಡಿಶಾ ಸರ್ಕಾರದ ಕಾರ್ಯದರ್ಶಿ (ಪ್ರವಾಸೋದ್ಯಮ) ಶ್ರೀ ವಿಶಾಲ್ ದೇವ್ ಅವರು ತಮ್ಮ ಪರಿಚಯಾತ್ಮಕ ಮಾತುಗಳೊಂದಿಗೆ ಎಲ್ಲರನ್ನೂ ಒಡಿಶಾ ರಾಜ್ಯಕ್ಕೆ ಸ್ವಾಗತಿಸುತ್ತಾ, ಒಡಿಶಾದ ಬಗ್ಗೆ ಸಂಕ್ಷಿಪ್ತ ಪರಿಚಯವನ್ನು ನೀಡಿದರು. ಒಡಿಶಾದ ಪ್ರಾಚೀನ ನಾಗರಿಕತೆ, ಕಳಿಂಗದೊಂದಿಗೆ ಪ್ರಸಿದ್ಧ ದೇವಾಲಯಗಳು ಮುಂತಾದ ಪ್ರಮುಖ ಪ್ರವಾಸಿ ತಾಣಗಳ ಪ್ರಸ್ತಾಪವೆ ಮಾಡಿ ವಿವರಿಸಿದರು. ಒಡಿಶಾದ ವೈಭವಯುತ ವಾಸ್ತುಶಿಲ್ಪದ ಶೈಲಿ, ಸುಂದರವಾದ ಕಡಲತೀರಗಳು, ಕಲೆ ಮತ್ತು ಕರಕುಶಲ ವಸ್ತುಗಳು, ಸಂಸ್ಕೃತಿ, ಜನಪ್ರಿಯ ನೃತ್ಯ ಪ್ರಕಾರಗಳಾದ ಒಡಿಸ್ಸಿ, ಗೋಟಿಪುವಾ, ಕಾಡುಗಳು, ಮತ್ತು ಪರಿಸರ ಪ್ರವಾಸೋದ್ಯಮ ತಾಣಗಳನ್ನು ಉತ್ತೇಜಿಸುವಲ್ಲಿ ರಾಜ್ಯ ಸರ್ಕಾರದ ವಿವಿಧ ಉಪಕ್ರಮದ ಬಗ್ಗೆಯೂ ಅವರು ಮಾಹಿತಿ ನೀಡಿದರು.
ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ವೆಬ್ ಸರಣಿಯ 18 ನೇ ಕಾರ್ಯಕ್ರಮದ ನಿರೂಪಕರುಗಳಾದ ಶ್ರೀ ಬೆಂಜಮೈನ್ ಸೈಮನ್, ವ್ಯವಸ್ಥಾಪಕ ನಿರ್ದೇಶಕ, ಟ್ರಾವೆಲ್ ಲಿಂಕ್ ಪ್ರೈವೇಟ್. ಲಿಮಿಟೆಡ್ ಮತ್ತು ವಿರಾಸತ್ -ಇ- ಹಿಂದ್ ಇದರ ಸಹ-ಸಂಸ್ಥಾಪಕ ಶ್ರೀ ಜಿತು ಮಿಶ್ರಾ ಅವರು ಪ್ರಾಚೀನ ಅವಶೇಷಗಳು ಮತ್ತು ಪೌರಾಣಿಕ ದೇವಾಲಯಗಳಂತಹ ವಿಶಿಷ್ಟ ಕಲಾಲಕ್ಷಣಗಳು, ಸ್ಥಳೀಯ ಬುಡಕಟ್ಟು ಮತ್ತು ಸಂಪ್ರದಾಯಗಳು, ಬೌದ್ಧ ಪರಂಪರೆ; ರಾಯಲ್ ಹೆರಿಟೇಜ್, ಅರಣ್ಯಗಳು; ಸಾಹಸ ಚಟುವಟಿಕೆಗಳು; ಕರಾವಳಿ ವಿರಾಮಗಳು ಮತ್ತು ಸಮುದ್ರ ರಂಗಗಳು; ಪರಿಪೂರ್ಣ ಶಿಬಿರ ತಾಣಗಳು, ಸಂಸ್ಕೃತಿ, ಕರಕುಶಲ ವಸ್ತುಗಳು ಮತ್ತು ಹಬ್ಬಗಳು ಮುಂತಾದ ಒಡಿಶಾದ ಅನನ್ಯ ಹಾಗೂ ಅದ್ಭುತ ಕೊಡುಗೆಗಳ ಬಗ್ಗೆ ವಿವರಿಸಿದರು.
ಈ ವಾಸ್ತವ ಒಡಿಶಾ ಪ್ರಯಾಣವು, ಭಿತಾರ್ಕನಿಕಾ ವೈಲ್ಡ್ಲೈಫ್ ಅಭಯಾರಣ್ಯ, ಉದಯಪುರ ಬೀಚ್, ಮಂಗ್ಲಜೋಡಿ - ಅನನ್ಯ ಗದ್ದೆ, ಸತ್ಪಾಡಾ, ಚಿಲಿಕಾ ಸರೋವರ, ಡಾಲ್ಫಿನ್ ಗಳ ನಿಟ್ಟುಸಿರು ಬಿಡಲು ಹೆಸರುವಾಸಿಯಾದ ಅನನ್ಯ ಇರಾವಾಡಿ, ಸಿಮ್ಲಿಪಾಲ್ ರಾಷ್ಟ್ರೀಯ ಉದ್ಯಾನ, ಡೆಬ್ರಿಗರ್ ರಾಷ್ಟ್ರೀಯ ಉದ್ಯಾನ-ಹಿರಕುಡ್ ಜಲಾಶಯದಲ್ಲಿನ ಪರಿಸರ ಪ್ರವಾಸೋದ್ಯಮ, ಜಲಪಾತ, ಸೈಲೆಂಟ್ ಡೇರಿಂಗ್‌ಬಾಡಿ ಪ್ರಕೃತಿ ಶಿಬಿರ, ಮಹಾನದಿ ಜಾರ್ಜ್, ಭೆಟ್ನೊಯ್, ಬೀಚ್ ಸ್ಥಳಗಳು, ಬುಡಕಟ್ಟು ಪರಂಪರೆ, ಕಲೆ ಮತ್ತು ಕರಕುಶಲ ವಸ್ತುಗಳು, ಜವಳಿ, ನೃತ್ಯ ಪ್ರಕಾರಗಳು, ಉತ್ಸವಗಳು, ಪಾಕಪದ್ಧತಿ- ಹೀಗೆ ಒಡಿಶಾ ವೈಭವಯುತ ಪರಂಪರೆಗಳನ್ನು ದೃಶ್ಯ ಮೂಲಕ ಸಾಗುತ್ತಾ, ಸಂಪೂರ್ಣಾ ಒಡಿಶಾವನ್ನೇ ಕಣ್ಣೆದುರಲ್ಲಿ ವಿವರಿಸುತ್ತಾ ಹೋಯಿತು.
ಅರಿಯದ, ಕಡಿಮೆ ತಿಳಿದಿರುವ ದೇಶದ ವಿವಿಧ ಬಾಗಗಳ ಸ್ಥಳಗಳು ಮತ್ತು ಜನಪ್ರಿಯ ತಾಣಗಳ ಕಡಿಮೆ ತಿಳಿದಿರುವ ಅಂಶಗಳು ಸೇರಿದಂತೆ ಭಾರತದ ವಿವಿಧ ಪ್ರವಾಸೋದ್ಯಮ ತಾಣಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಉತ್ತೇಜಿಸುವುದು - ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಈ ವೆಬ್ನಾರ್ ಸರಣಿಯ ಮುಖ್ಯ ಉದ್ದೇಶವಾಗಿದೆ
ಈ ವೆಬ್‌ನಾರ್‌ಗಳ ಸರಣಿಯ ಎಲ್ಲಾ ಕಾರ್ಯಕ್ರಮಗಳನ್ನು ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ಎಲ್ಲಾ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಪಡೆಯಬಹುದು ಹಾಗೂ https://www.youtube.com/channel/UCbzIbBmMvtvH7d6Zo_ZEHDA/featured ನಲ್ಲಿ ಸದಾ ಲಭ್ಯವಿದೆ.
ಮುಂದಿನ ಸಂಚಿಕೆಗೆ ‘ಮೈಸೂರು: ಕರ್ನಾಟಕದ ಕ್ರಾಫ್ಟ್ ಕಾರವಾನ್’ ಶೀರ್ಷಿಕೆಯಿದ್ದು, ಮೇ 14, 2020ರ ಗುರುವಾರ ಬೆಳಿಗ್ಗೆ 11.00 ಕ್ಕೆ ವೆಬ್‌ನಾರ್ ಪ್ರಸಾರವಾಗಲಿದೆ ಮತ್ತು ಇದರಲ್ಲಿ ಭಾಗವಹಿಸಲು ಇಚ್ಛಿಸುವವರು https://bit.ly/MysuruDAD ಮೂಲಕ ವೆಬ್‌ನಾರ್ ಗೆ ಸೇರಬಹುದು
***
(Release ID: 1623662)
Visitor Counter : 275