ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಪಿ.ಎಂ.ಕೇರ್ಸ್ ನಿಧಿಗೆ ಬಿ.ಪಿ.ಪಿ.ಐ. ಸಂಸ್ಥೆಯಿಂದ ರೂ. 25 ಲಕ್ಷ ದೇಣಿಗೆ
Posted On:
12 MAY 2020 5:15PM by PIB Bengaluru
ಪಿ.ಎಂ.ಕೇರ್ಸ್ ನಿಧಿಗೆ ಬಿ.ಪಿ.ಪಿ.ಐ. ಸಂಸ್ಥೆಯಿಂದ ರೂ. 25 ಲಕ್ಷ ದೇಣಿಗೆ
ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಸರ್ಕಾರವನ್ನು ಬೆಂಬಲಿಸಲು ಪಿ.ಎಂ.ಕೇರ್ಸ್ ನಿಧಿಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಔಷಧೀಯ ಇಲಾಖೆಯಡಿ ಇರುವ “ಬ್ಯೂರೋ ಆಫ್ ಫಾರ್ಮಾ ಪಿ..ಎಸ್.ಯು ಆಫ್ ಇಂಡಿಯಾ” (ಬಿ.ಪಿ.ಪಿ.ಐ) ಸಂಸ್ಥೆಯು ರೂ 25 ಲಕ್ಷ ನೀಡಿದೆ.
ನವದೆಹಲಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ.ವಿ.ಸದಾನಂದ ಗೌಡ ಅವರಿಗೆ ಶ್ರೀ ಪಿ.ಡಿ. ವಘೇಲಾ, ಕಾರ್ಯದರ್ಶಿ, ಫಾರ್ಮಾ ಇಲಾಖೆ ಇವರು ಈ ಮೊತ್ತದ ಚೆಕ್ ಅನ್ನು ಹಸ್ತಾಂತರಿಸಿದರು. ಬಿ.ಪಿ.ಪಿ.ಐ ಸಂಸ್ಥೆಯ ಸಿ.ಇ.ಒ ಶ್ರೀ ಸಚಿನ್ ಸಿಂಗ್, ಹಾಗೂ ಫಾರ್ಮಾ ಇಲಾಖೆಯ ಜಂಟಿ ಕಾರ್ಯದರ್ಶಿಗಳಾದ ಶ್ರೀ ರಜನೀಶ್ ಟಿಂಗಲ್, ಶ್ರೀ ನವದೀಪ್ ರಿನ್ವಾ ಮುಂತಾದ ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಧಾನ್ ಮಂತ್ರಿ ಭಾರತೀಯ ಜನ ಔಷಧಿ ಪರಿಯೋಜನ (ಪಿ.ಎಂ.ಬಿ.ಜೆ.ಪಿ.) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರಗಳು ರಾಷ್ಟ್ರಕ್ಕೆ ಅಗತ್ಯ ಔಷಧಿ ವಸ್ತುಗಳ ಪೂರೈಕೆಗಳ ಸೇವೆಗಳನ್ನು ನೀಡುತ್ತಿವೆ.. ಬಿ.ಪಿ.ಪಿ.ಐ.ಯ ನೌಕರರು, ಅಧಿಕಾರಿಗಳು ಮತ್ತು ಜನ್ ಔಷಧಿ ಕೇಂದ್ರಗಳ ಮಾಲೀಕರು ಮತ್ತು ವಿತರಕರು ಈ ಮೊತ್ತವನ್ನು ಪ್ರಧಾನಮಂತ್ರಿ ನಿಧಿಗೆ ಕೊಡುಗೆಯಾಗಿ ನೀಡಿದ್ದಾರೆ. ಪಿ.ಎಂ.ಬಿ.ಜೆ.ಪಿ ಯೋಜನೆಯ ಅನುಷ್ಠಾನ ಸಂಸ್ಥೆಯಾದ ಬ್ಯೂರೋ ಆಫ್ ಫಾರ್ಮಾ ಪಿ.ಎಸ್.ಯು ಆಫ್ ಇಂಡಿಯಾ (ಬಿ.ಪಿ.ಪಿ.ಐ) ತನ್ನ ಎಲ್ಲಾ ಕಾರ್ಯಾಚರಣೆಯ ಕ್ಷೇತ್ರಗಳಲ್ಲಿ ನಿಕಟ ಸಂಪರ್ಕ ಇಟ್ಟುಕೊಂಡಿದೆ. ಪ್ರಧಾನ್ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ (ಪಿ.ಎಂ.ಬಿ.ಜೆ.ಕೆ) ಸದಾ ಕ್ರಿಯಾತ್ಮಕವಾಗಿ ಮತ್ತು ಬದ್ಧತೆಯ ಭಾಗವಾಗಿ ಶಿಷ್ಠಾಚಾರದಲ್ಲಿ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದೆ, ಕೋವಿಡ್ ನಂತರದ ಈ ಸಂಕಟದ ಸವಾಲಿನ ಸಮಯದಲ್ಲಿ ಬಿ.ಪಿ.ಪಿ.ಐ ತನ್ನ ಪಾಲುದಾರರು ಮತ್ತು ಗ್ರಾಹಕರೊಂದಿಗೆ ಸದಾ ಜೊತೆಗಿದ್ದು ಉತ್ತಮ ಸೇವೆ ಸಲ್ಲಿಸುತ್ತಿದೆ.
ಪಿ.ಎಂ.ಬಿ.ಜೆ.ಕೆ ಯಲ್ಲಿ ಅಗತ್ಯ ಔಷಧಿಗಳ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಬಿ.ಪಿ.ಪಿ.ಐ ಬದ್ಧವಾಗಿದೆ. ಲಾಕ್ ಡೌನ್ ಮತ್ತು ಈ ಸಂಕಷ್ಟಗಳ ಪರೀಕ್ಷಾ ಸಮಯದ ಹೊರತಾಗಿಯೂ ಬಿ.ಪಿ.ಪಿ.ಐ ತನ್ನ ಮಾರಾಟದ ವಹಿವಾಟನ್ನು ಮಾರ್ಚ್ 2020 ರಲ್ಲಿ ರೂ.42 ಕೋಟಿ ಹಾಗೂ ಏಪ್ರಿಲ್ 2020 ರಲ್ಲಿ ರೂ.52 ಕೋಟಿಗೂ ಹೆಚ್ಚು ಮೊತ್ತದೆಲ್ಲಿ ಮಾಡಿ ಸಾಧಿಸಲಾಗಿದೆ. ಲ್ಯಾಬ್ ರೀಜೆಂಟ್‌ಗಳು ಮತ್ತು ಸ್ಟೆಂಟ್‌ಗಳನ್ನು ಹೊರತುಪಡಿಸಿ ಎನ್.ಎಲ್.ಇ.ಎಂ.ನಲ್ಲಿ ದಾಖಲಾಗಿರುವ ಎಲ್ಲಾ ಅಗತ್ಯ ಔಷಧಿಗಳು ಪಿ.ಎಮ್.ಬಿ.ಜೆ.ಪಿ.ಯ ಉತ್ಪನ್ನದ ಪಟ್ಟಿಯಲ್ಲಿ ಒಳಗೊಂಡಿದೆ, ಹಾಗೂ ಫೇಸ್ ಮಾಸ್ಕ್, ಹೈಡ್ರಾಕ್ಸಿಕ್ಲೋರೋಕ್ವಿನ್, ಪ್ಯಾರೆಸಿಟಮಾಲ್ ಮತ್ತು ಅಜಿಥ್ರೊಮೈಸಿನ್ ಮುಂತಾದ ಬೇಡಿಕೆಯ ಔಷಧಿಗಳ ಸಾಕಷ್ಟು ಸಂಗ್ರಹವನ್ನು ಬಿ.ಪಿ.ಪಿ.ಐ ಪ್ರಸ್ತುತ ಹೊಂದಿದೆ.
ಬಿ.ಪಿ.ಪಿ.ಐ ಸಂಸ್ಥೆಯು ಇದೇ ಮಾರ್ಚ್ ಮತ್ತು ಏಪ್ರಿಲ್ 2020 ತಿಂಗಳಲ್ಲಿ ಸುಮಾರು 6 ಲಕ್ಷ ಫೇಸ್ ಮಾಸ್ಕ್, 50 ಲಕ್ಷ ಟ್ಯಾಬ್ಲೆಟ್ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಮಾರಾಟ ಮಾಡಿದೆ. ಇದಲ್ಲದೆ, 60 ಲಕ್ಷ ಹೈಡ್ರಾಕ್ಸಿಕ್ಲೋರೋಕ್ವಿನ್ ಟ್ಯಾಬ್ಲೆಟ್‌ಗಳಿಗೆ ಬೇಡಿಕೆ ಆದೇಶಗಳನ್ನು ನೀಡಿದೆ. ಪ್ರಸ್ತುತ ಮಾರುಕಟ್ಟೆ ಬೇಡಿಕೆಯನ್ನು ಸಮರ್ಥವಾಗಿ ಪೂರೈಸಲು ಮುಂದಿನ ಆರು ತಿಂಗಳವರೆಗೆ ಸಾಕಷ್ಟು ಸಂಗ್ರಹ (ಸ್ಟಾಕ್) ಹೊಂದಲು ಬಿ.ಪಿ.ಪಿ.ಐ ಈ ಔಷಧಿಗಳ ಖರೀದಿ ಆದೇಶಗಳನ್ನು ಸಹ ನೀಡಿದೆ.
ದೇಶದ 726 ಜಿಲ್ಲೆಗಳನ್ನು ಒಳಗೊಂಡಂತೆ ದೇಶಾದ್ಯಂತ 6300 ಕ್ಕೂ ಹೆಚ್ಚು ಪಿ.ಎಂ.ಬಿ.ಜೆ.ಕೆ.ಗಳು ಲಾಕ್ ಡೌನ್ ಶಿಷ್ಠಾಚಾರ ಕ್ರಮಗಳನ್ನು ಅನುಸರಿಸಿ ಕಾರ್ಯನಿರ್ವಹಿಸುತ್ತಿವೆ. ಸಾಮಾಜಿಕ ಅಂತರವನ್ನು ಶಿಸ್ತಿನಿಂದ ಪಾಲಿಸುತ್ತಾ, ಸರ್ಕಾರದ ಇತರ ಉಪಕ್ರಮವನ್ನು ಬೆಂಬಲಿಸುತ್ತಾ, ಈಗ “ಸ್ವಾಸ್ಥತೆಯ ಸೈನಿಕ (ಸ್ವಾಸ್ತ್ ಕೆ ಸಿಪಾಹಿ)” ಎಂದು ಜನಪ್ರಿಯವಾಗಿರುವ ಪಿ.ಎಂ.ಬಿ.ಜೆ.ಕೆ ಔಷಧಿಗಾರರು ದೇಶದಾದ್ಯಂತ ರೋಗಿಗಳು ಮತ್ತು ವೃದ್ಧರಿಗೆ ಔಷಧಿಗಳನ್ನು ತಮ್ಮ ಮನೆ ಬಾಗಿಲಿಗೆ ಸದಾ ತಲುಪಿಸುವುದರಲ್ಲಿ ನಿರತರಾಗಿದ್ದಾರೆ.
***
(Release ID: 1623399)
Visitor Counter : 250