ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಕೋವಿಡ್-19: 36 ದಿನಗಳಲ್ಲಿ ಬೆಂಗಳೂರಿನ ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ (ಎನ್ ಎಎಲ್)ನಿಂದ ಬಿಪಾಪ್ (ಬಿಐಪಿಎಪಿ) ಆಕ್ರಮಣಕಾರಿಯಲ್ಲದ ವೆಂಟಿಲೇಟರ್ “ಸ್ವಾಸ್ಥ ವಾಯು” ಅಭಿವೃದ್ಧಿ

Posted On: 11 MAY 2020 8:49PM by PIB Bengaluru

ಕೋವಿಡ್-19: 36 ದಿನಗಳಲ್ಲಿ ಬೆಂಗಳೂರಿನ ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ (ಎನ್ ಎಎಲ್)ನಿಂದ ಬಿಪಾಪ್ (ಬಿಐಪಿಎಪಿ) ಆಕ್ರಮಣಕಾರಿಯಲ್ಲದ ವೆಂಟಿಲೇಟರ್ಸ್ವಾಸ್ಥ ವಾಯುಅಭಿವೃದ್ಧಿ

 

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆಸಿಎಸ್ಐಆರ್ ಅಂಗ ಸಂಸ್ಥೆಯಾಗಿರುವ ಬೆಂಗಳೂರಿನ ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ(ಸಿಎಸ್ಐಆರ್-ಎನ್ಎಎಲ್) ದಾಖಲೆಯ 36 ದಿನಗಳ ಅವಧಿಯಲ್ಲಿ ಕೊರೊನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಆಕ್ರಮಣಕಾರಿಯಲ್ಲದ (ನಾನ್ ಇನ್ ವೇಸಿವ್ ) ಬಿಪಾಪ್ ವೆಂಟಿಲೇಟರ್ ಅನ್ನು ಅಭಿವೃದ್ಧಿಪಡಿಸಿದೆ.

ಬಿಪಾಪ್ ಆಕ್ರಮಣಕಾರಿಯಲ್ಲದ ವೆಂಟಿಲೇಟರ್ಸ್ವಾಸ್ಥವಾಯುವನ್ನು (ಸಿಎಸ್ಐಆರ್-ಎನ್ಎಎಲ್) ಅಭಿವೃದ್ಧಿಪಡಿಸಿದ್ದು, ಇದು ಮೈಕ್ರೋ ಕಂಟ್ರೋಲರ್ ಆಧಾರಿತ ನಿಗದಿತ ಕ್ಲೋಸ್ಡ್ ಲೂಪ್ ಅಡಾಪ್ಟಿವ್ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದ್ದು, ಇದರೊಳಗೆ ಜೈವಿಕ ಹೊಂದಾಣಿಕೆ ಇರುವ 3ಡಿ ಪ್ರಿಂಟೆಡ್ ಮಾನಿಫೋಲ್ಡ್ ಮತ್ತು ಕಪ್ಲರ್ ಜೊತೆಗೆ ಹೆಪಾ ಫಿಲ್ಟರ್(ತುಂಬಾ ಪರಿಣಾಮಕಾರಿ ಕೆಲಸ ಮಾಡುವ ವಾಯು ಫಿಲ್ಟರ್) ಇದೆ. ವಿನೂತನ ಅಂಶಗಳುಳ್ಳ ವೆಂಟಿಲೇಟರ್ ಸೋಂಕು ಹರಡುತ್ತದೆಂಬ ಭಯವನ್ನು ದೂರಮಾಡುತ್ತದೆ. ಇದು ಸ್ವಾಭಾವಿಕವಾಗಿರಲಿದೆ, ಸಿಪಿಎಪಿ, ಟೈಮ್ಡ್, ಆಟೋ ಬಿಪಾಪ್ ಮಾದರಿ ಮತ್ತು ಆಕ್ಸಿಜನ್ ಕಾನ್ಸನ್ ಟ್ರೇಟರ್ ಗಳ ಜೊತೆ ಸಂಪರ್ಕ ಅಥವಾ ಪುಷ್ಠೀಕರಣ ಘಟಕವನ್ನು ಆಂತರಿಕವಾಗಿ ಹೊಂದಿದೆ.

ವ್ಯವಸ್ಥೆಯನ್ನು ಎನ್ಎಬಿಎಲ್ ಪ್ರಮಾಣೀಕೃತ ಸಂಸ್ಥೆಗಳು ಸುರಕ್ಷತೆ ಮತ್ತು ಸಾಧನೆಯನ್ನು ಗುರುತಿಸಿ ಪ್ರಮಾಣೀಕರಿಸಿದೆ. ವ್ಯವಸ್ಥೆ ಕಠಿಣ ಜೈವಿಕ ವೈದ್ಯಕೀಯ ಪ್ರಯೋಗಗಳು ಮತ್ತು ಬಿಟಾ ಕ್ಲಿನಿಕಲ್ ಟ್ರಯಲ್ ಗಳನ್ನು ಎನ್ಎಎಲ್ ಆರೋಗ್ಯ ಕೇಂದ್ರದಲ್ಲಿ ಎದುರಿಸಿದೆ.

ಎನ್ಎಎಲ್ ನಿರ್ದೇಶಕ ಶ್ರೀ ಜಿತೇಂದ್ರ ಜೆ. ಜಾಧವ್, “ಜಾಗತಿಕ ಅನುಭವಗಳನ್ನು ಆಧರಿಸಿ ಮತ್ತು ಭಾರತ ಹಾಗೂ ವಿದೇಶದ ಪಲ್ಮನೊಲಾಜಿಸ್ಟ್ (ಶ್ವಾಸಕೋಶ ತಜ್ಞರು) ಸಹೋದ್ಯೋಗಿಗಳು ನೀಡಿದ ಖಚಿತ ಮಾಹಿತಿಯನ್ನು ಆಧರಿಸಿ ಎನ್ಎಎಲ್, ಬಿಪಾಪ್ ಆಕ್ರಮಣಕಾರಿಯಲ್ಲದ ವೇಸಿವ್ ವೆಂಟಿಲೇಟರ್ ಅನ್ನು ಅಭಿವೃದ್ಧಿಪಡಿಸಿದ್ದು, ಅದನ್ನು ಹೊರಗಿನಿಂದ ಆಕ್ಸಿಜನ್ ಕಾನ್ಸನ್ ಟ್ರೇಟರ್ ಗೆ ಸಂಪರ್ಕ ಕಲ್ಪಿಸಿ, ಮಧ್ಯಮ ಹಂತದಲ್ಲಿ ಅಥವಾ ಸೌಮ್ಯ ಹಂತದ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ. ಏಕೆಂದರೆ ಅವರಿಗೆ ಆಕ್ರಮಣಕಾರಿಯಲ್ಲದ ವೆಂಟಿಲೇಶನ್ ಮತ್ತು ಇಂಟ್ಯುಬೇಶನ್ ಅಗತ್ಯವಿರುತ್ತದೆ. ಇದು ಸದ್ಯದ ಭಾರತದ ಕೋವಿಡ್-19 ಸ್ಥಿತಿಗತಿಯಲ್ಲಿ ವಾರ್ಡ್ ಗಳಲ್ಲಿ, ಸ್ಥಳಾಂತರಗೊಳಿಸಬೇಕಾದ ಆಸ್ಪತ್ರೆಗಳಲ್ಲಿ ಮತ್ತು ಡಿಸ್ಪೆನ್ಸರಿಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ ಸೂಕ್ತವಾಗಿದೆ’’ ಎಂದರು.

ಇದರ ಯಶಸ್ಸಿನಲ್ಲಿ ತಂತ್ರಜ್ಞರು ಮತ್ತು ವೈದ್ಯಕೀಯ ವೃತ್ತಿಪರರ ತಂಡದ ಪ್ರಯತ್ನಗಳು ಸಮ್ಮಿಲನಗೊಂಡಿವೆ. ವಿದ್ಯುನ್ಮಾನ ಇಲಾಖೆಯ ಮುಖ್ಯಸ್ಥ ಡಾ. ಸಿ.ಎಂ. ಆನಂದ ಅವರ ನೇತೃತ್ವದಲ್ಲಿ ಎನ್ಎಎಲ್ ಮುಖ್ಯ ಆರೋಗ್ಯಾಧಿಕಾರಿ ಡಾ. ಅಮರ ನಾರಾಯಣ, ಐಜಿಐಬಿಯ ರೆಸ್ಪಿರೇಟರಿ ಫಿಜಿಯೋಲಾಜಿಸ್ಟ್ ಡಾ|| ವಿರೇನ್ ಸರ್ದನ ಮತ್ತು ಎನ್ಎಎಲ್ ವಿಜ್ಞಾನಿಗಳ ತಂಡ ಕೋವಿಡ್-19 ನಿರ್ಬಂಧದ ಸಮಯದಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ. ಸಿಎಸ್ಐಆರ್-ಎನ್ಎಎಲ್ ತಂತ್ರಜ್ಞಾನವನ್ನು ತನ್ನ ಬಾಹ್ಯಾಕಾಶ ವಿನ್ಯಾಸ ವಿಭಾಗದ ಅನುಭವವನ್ನು ಆಧರಿಸಿ ರೂಪಿಸಿದೆ.

ಯಂತ್ರದ ಪ್ರಮುಖ ಅನುಕೂಲವೆಂದರೆ ಯಾವುದೇ ವಿಶೇಷ ನರ್ಸಿಂಗ್ ವ್ಯವಸ್ಥೆಯಿಲ್ಲದೆ, ಸರಳ ರೀತಿಯಲ್ಲಿ ಬಳಸಬಹುದಾಗಿದೆ, ಕಡಿಮೆ ವೆಚ್ಚ ಮತ್ತು ಸ್ವದೇಶಿ ಬಿಡಿ ಭಾಗಗಳನ್ನು ಸೇರಿಸಿ ಅದನ್ನು ರೂಪಿಸಲಾಗಿದೆ. ಸಿಎಸ್ಐಆರ್-ಎನ್ಎಎಲ್ ಇದನ್ನು ಇನ್ನಷ್ಟು ಮುಂಚೂಣಿಗೆ ಕೊಂಡೊಯ್ಯಲು ಪ್ರಯತ್ನಗಳನ್ನು ನಡೆಸುತ್ತಿದ್ದು, ನಿಯಂತ್ರಣ ಸಂಸ್ಥೆಗಳ ಅನುಮೋದನೆಗಾಗಿ ಕಾಯುತ್ತಿದ್ದು, ಅದು ಆದಷ್ಟು ಬೇಗ ಸಿಗುವ ನಿರೀಕ್ಷೆಯಲ್ಲಿದೆ. ಸಿಎಸ್ಐಆರ್-ಎನ್ಎಎಲ್ ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಇಂತಹ ವೆಂಟಿಲೇಟರ್ ಗಳ ಉತ್ಪಾದನೆ ನಿಟ್ಟಿನಲ್ಲಿ ಪ್ರಮುಖ ಸಾರ್ವಜನಿಕ ಖಾಸಗಿ ಉದ್ಯಮಗಳ ಜೊತೆ ಪಾಲುದಾರಿಕೆ ಮಾಡಿಕೊಳ್ಳಲು ಸಮಾಲೋಚನೆಗಳನ್ನು ಆರಂಭಿಸಿದೆ.


#CSIRFightsCovid-19

#NationalTechnologyDay2020

***(Release ID: 1623148) Visitor Counter : 216