ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಕೇಂದ್ರ ಮಾನವ ಸಂಪನ್ಮೂಲ ಸಚಿವ ಶ್ರೀ ರಮೇಶ್ ಪೊಖ್ರಿಯಾಲ್ ‘ನಿಶಾಂಕ್’ ಅವರು ಒಡಿಶಾದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ, ಅರಿವಿನ ಭಾವನಾತ್ಮಕ ಪುನರ್ವಸತಿ ಸೇವೆಗಳ ಕುರಿತು, ಒಡಿಶಾ ಕೇಂದ್ರ ವಿಶ್ವವಿದ್ಯಾಲಯ ಸಹಾಯವಾಣಿ “ಭರೋಸಾ” ಪ್ರಾರಂಭ

Posted On: 11 MAY 2020 5:47PM by PIB Bengaluru

ಕೇಂದ್ರ ಮಾನವ ಸಂಪನ್ಮೂಲ ಸಚಿವ ಶ್ರೀ ರಮೇಶ್ ಪೊಖ್ರಿಯಾಲ್ ‘ನಿಶಾಂಕ್’ ಅವರು ಒಡಿಶಾದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ, ಅರಿವಿನ ಭಾವನಾತ್ಮಕ ಪುನರ್ವಸತಿ ಸೇವೆಗಳ ಕುರಿತು, ಒಡಿಶಾ ಕೇಂದ್ರ ವಿಶ್ವವಿದ್ಯಾಲಯ ಸಹಾಯವಾಣಿ “ಭರೋಸಾ” ಪ್ರಾರಂಭ
 

ಕೊವಿಡ್-19 ಬಿಕ್ಕಟ್ಟಿನ ಸಮಯದಲ್ಲಿ ವಿದ್ಯಾರ್ಥಿ ಸಮುದಾಯದ ತೊಂದರೆಗಳನ್ನು ನಿವಾರಸಲು, ಕೇಂದ್ರ ಮಾನವ ಸಂಪನ್ಮೂಲ ಸಚಿವ ಶ್ರೀ ರಮೇಶ್ ಪೊಖ್ರಿಯಾಲ್ ‘ನಿಶಾಂಕ್’ ಅವರು ಒಡಿಶಾ ಕೇಂದ್ರ ವಿಶ್ವವಿದ್ಯಾಲಯ ಸಹಾಯವಾಣಿ “ಭರೋಸಾ” ಅನ್ನು ಮತ್ತು ಸಹಾಯವಾಣಿ ಸಂಖ್ಯೆ 08046801010 ಅನ್ನು ಇಂದು ನವದೆಹಲಿಯಲ್ಲಿ ವಿಡಿಯೋಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಈ ಸಹಾಯವಾಣಿ, ಒಡಿಶಾದ ಎಲ್ಲಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ, ಅರಿವಿನ ಭಾವನಾತ್ಮಕ ಪುನರ್ವಸತಿ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಸಂದರ್ಭದಲ್ಲಿ ಒಡಿಶಾ ಸರ್ಕಾರದ  ಉನ್ನತ ಶಿಕ್ಷಣ ಇಲಾಖೆ, ರಾಜ್ಯ ಸಚಿವರು ಡಾ. ಅರುಣ್ ಕುಮಾರ್ ಸಾಹೂ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಒಡಿಶಾ ಕೇಂದ್ರ ವಿಶ್ವವಿದ್ಯಾಲಯದ ಉಪ-ಕುಲಪತಿ, ಪ್ರೊ. ಐ ರಾಮಬ್ರಹ್ಮಂ ಆಯೋಜಿಸಿದ್ದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ರಮೇಶ್ ಪೊಖ್ರಿಯಾಲ್ ನಿಶಾಂಕ್ ಅವರು, ಕೊವಿಡ್-19 ಸಾಂಕ್ರಾಮಿಕ ಬಿಕ್ಕಟ್ಟಿನಿಂದ ನಮ್ಮ ದೇಶ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದೆ ಮತ್ತು ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕ್ರಿಯಾಶೀಲ ನೇತೃತ್ವದಲ್ಲಿ ಭಾರತ ಸರ್ಕಾರದ ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಪ್ರಯತ್ನಗಳನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡುವ ಉದ್ದೇಶದಿಂದ ಮಾನವ ಸಂಪನ್ಮೂಲ ಸಚಿವಾಲಯ ಮಾಡುತ್ತಿರುವ ಪ್ರಯತ್ನಗಳ ಕುರಿತು ಅವರು ವಿವರಿಸಿದರು. ಹೊಸ ಶೈಕ್ಷಣಿಕ ಕ್ಯಾಲೆಂಡರ್ ಮತ್ತು ಪ್ರಸ್ತುತ ಶಿಕ್ಷಣ ವಿಧಾನಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಬಗ್ಗೆ ಅವರು ಒತ್ತಿ ಹೇಳಿದರು.

ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಕಾಳಜಿವಹಿಸಲು ಹೆಚ್ಚಿನ ಮಹತ್ವವನ್ನು ನೀಡಬೇಕಾಗಿದೆ ಮತ್ತು ಒಡಿಶಾದ ಕೇಂದ್ರೀಯ ವಿಶ್ವವಿದ್ಯಾಲಯ ಆರಂಭಿಸಿರುವ ಸಹಾಯವಾಣಿ, ಈ ನಿಟ್ಟಿನಲ್ಲಿ ಬಹುದೊಡ್ಡ ಹೆಜ್ಜೆಯಾಗಿದೆಯೆಂದು ಅವರು ಪ್ರತಿಪಾದಿಸಿದರು. ಔಪಚಾರಿಕವಾಗಿ ಸಹಾಯವಾಣಿಯನ್ನು ಅವರು ಉದ್ಘಾಟಿಸಿದರು ಮತ್ತು ವಿದ್ಯಾರ್ಥಿಗಳು ಹಾಗೂ ಪೋಷಕರ ಅನುಕೂಲಕ್ಕಾಗಿ ಅದರ ಸಂಖ್ಯೆಯನ್ನು ಘೋಷಿಸಿದರು. ಸಹಾಯವಾಣಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಉಪ-ಕುಲಪತಿ, ಶಿಕ್ಷಣ ಸಂಸ್ಥೆಯ ಪ್ರಮುಖರು, ರೆಜಿಸ್ಟ್ರಾರ್ ಗಳು ಮತ್ತು ಒಡಿಶಾದ ವಿವಿಧ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಸೇರಿದಂತೆ ಎಲ್ಲ ಗಣ್ಯಮಾನ್ಯರಿಗೆ ಕೇಂದ್ರ ಸಚಿವರು ಶುಭ ಹಾರೈಸಿದರು. ಭರೋಸಾ ಉಪಕ್ರಮವನ್ನು ಅನುಸರಣೆಮಾಡುವಂತೆ ದೇಶಾದ್ಯಂತದ ಕೇಂದ್ರ ಮತ್ತು ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಿಗೆ ಅವರು ಆಗ್ರಹಿಸಿದರು.

ಕೊವಿಡ್-19 ಬಿಕ್ಕಟ್ಟಿನಿಂದ ತೊಂದರೆಗೊಳಗಾದ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲು ಆರಂಭಿಸಲಾದ ಸಿಯುಒ ನ ಸಹಾಯವಾಣಿ ಭರೋಸಾದ ಪ್ರಮುಖ ಗುಣಲಕ್ಷಣಗಳು ಮತ್ತು ಸೇವೆಗಳ ಕುರಿತು ಸಿಯುಒ ಉಪ-ಕುಲಪತಿಗಳಾದ ಪ್ರೊ. ಐ ರಾಮಬ್ರಹ್ಮಂ ವಿವರಿಸಿದರು. ಸಿಯುಒ ಸಹಾಯವಾಣಿ ಭರೋಸಾ ಒಡಿಶಾದ ಯಾವುದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಯ ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ಸಿಯುಒ ಸಹಾಯವಾಣಿಯ ಪರೀಕ್ಷಾ ಹಂತದಲ್ಲಿಯೇ ಸುಮಾರು 400 ಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಲಾಗಿದೆ ಎಂದು ಅವರು ಹೇಳಿದರು. ಕೊರಾಪುಟ್ ನ ಜಿಲ್ಲಾ ನ್ಯಾಯಾಧೀಶರು ಮತ್ತು ಜಿಲ್ಲಾಧಿಕಾರಿಗಳು ಆದ ಶ್ರೀ ಮಧುಸೂದನ್ ಮಿಶ್ರಾ ಅವರು, ಸಿಯುಒ ನ ಭರೋಸಾ ಉಪಕ್ರಮವನ್ನು ಇಂದು ವಿದ್ಯುಕ್ತವಾಗಿ ಉದ್ಘಾಟಿಸುವ ಮೊದಲು ಅದರ ಪರೀಕ್ಷಾ ಹಂತದಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಒಡಿಶಾ ಸರ್ಕಾರದ  ಉನ್ನತ ಶಿಕ್ಷಣ ಸಚಿವ, ಡಾ. ಅರುಣ್ ಕುಮಾರ್ ಸಾಹೂ ಅವರು ಒಡಿಶಾ ಕೇಂದ್ರ ವಿಸ್ವ ವಿದ್ಯಾಲಯದ ಈ ಪ್ರಯತ್ನವನ್ನು ಶ್ಲಾಘಿಸಿದರು ಮತ್ತು ಕೊವಿಡ್-19 ರ ಸಮಯದಲ್ಲಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಇದು ಸಹಾಯ ಮಾಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

***(Release ID: 1623126) Visitor Counter : 657