ರಕ್ಷಣಾ ಸಚಿವಾಲಯ

ವೈಜಾಗ್ ಅನಿಲ ಸೋರಿಕೆ ನಿಭಾವಣೆಗೆ ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಲು ಅಗತ್ಯ ರಾಸಾಯನಿಕಗಳನ್ನು ವಾಯುಯಾನ ಮೂಲಕ ಭಾರತೀಯ ವಾಯುಪಡೆ ಸಾಗಿಸಿದೆ

Posted On: 11 MAY 2020 5:37PM by PIB Bengaluru

ವೈಜಾಗ್ ಅನಿಲ ಸೋರಿಕೆ ನಿಭಾವಣೆಗೆ ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಲು ಅಗತ್ಯ ರಾಸಾಯನಿಕಗಳನ್ನು ವಾಯುಯಾನ ಮೂಲಕ ಭಾರತೀಯ ವಾಯುಪಡೆ ಸಾಗಿಸಿದೆ

 

ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಇತ್ತೀಚಿಗೆ ಸಂಭವಿಸಿದ ಅನಿಲ ಸೋರಿಕೆ ಘಟನೆಯಲ್ಲಿ ಹಾನಿಯ ಪರಿಣಾಮವನ್ನು ನಿಭಾಯಿಸುವ ಸಲುವಾಗಿ ರಾಜ್ಯ ಸರ್ಕಾರಕ್ಕೆ ನೆರವಾಗಲು ತನ್ನ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಎಚ್‌..ಡಿ.ಆರ್) ಕಾರ್ಯಾಚರಣೆಗಳ ಭಾಗವಾಗಿ ಭಾರತೀಯ ವಾಯುಪಡೆ (ಐ..ಎಫ್) ಮೇ 09, 2020 ರಂದು ಸೇವಾ ಕಾರ್ಯ ಪ್ರಾರಂಭಿಸಿದೆ. ಆಂಧ್ರಪ್ರದೇಶ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಕೋರಿಕೆಯ ಮೇರೆಗೆ, ಆಂಧ್ರಪ್ರದೇಶದ ವೈಜಾಗ್‌ನಲ್ಲಿರುವ ಎಲ್‌ಜಿ ಪಾಲಿಮರ್ಸ್‌ನ ಸ್ಟೈರೀನ್ ಮೊನೊಮರ್ ಶೇಖರಣಾ ತೊಟ್ಟಿಯಲ್ಲಿ ಸಂಭವಿಸಿದ ಅನಿಲ ಸೋರಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಅಗತ್ಯವಾದ 8.3 ಟಿ ಅಗತ್ಯ ರಾಸಾಯನಿಕಗಳನ್ನು ಐ.ಎ.ಎಫ್ ವಿಮಾನದಲ್ಲಿ ಸಾಗಿಸುವ ಮೂಲಕ ಭಾರತೀಯ ವಾಯುಪಡೆ (ಐ..ಎಫ್) ತನ್ನ ಕಾರ್ಯಚಟುವಟಿಕೆಗಳನ್ನು ತೀವ್ರಗೊಳಿಸಿದೆ.

ಗುಜರಾತ್‌ನ ಮುಂಡ್ರಾದಿಂದ ಆಂಧ್ರಪ್ರದೇಶದ ವಿಶಾಖಪಟ್ಟಣಕ್ಕೆ ಐಎಎಫ್‌ನ ಎರಡು ಎ.ಎನ್ -32 ಸಾರಿಗೆ ವಿಮಾನಗಳು ಸರಿಸುಮಾರು 1100 ಕೆಜಿ ಟರ್ಷರಿ ಬ್ಯುಟೈಲ್‌ಕ್ಯಾಟೆಕೋಲ್ ಮತ್ತು 7.2 ಟಿ ಪಾಲಿಮರೀಕರಣ ನಿರೋಧಕಗಳು ಮತ್ತು ಗ್ರೀನ್ ರಿಟಾರ್ಡರ್‌ಗಳನ್ನು ಸಾಗಿಸಿ ತಲುಪಿಸಿವೆ. ಶೇಖರಣಾ ತೊಟ್ಟಿಯಿಂದ ಅನಿಲ ಸೋರಿಕೆಯಾಗುವ ವಿಷತ್ವವನ್ನು ಕಡಿಮೆ ಮಾಡಲು ಈ ರಾಸಾಯನಿಕಗಳು ಅಗತ್ಯ ಬೇಕಾಗಿವೆ. ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ ಮತ್ತು ಮುಂಬೈನಿಂದ ವಿಶಾಖಪಟ್ಟಣಕ್ಕೆ ಸ್ಟೈರೀನ್ ಗ್ಯಾಸ್‌ನ ತಜ್ಞರನ್ನೂ ವಾಯುಯಾನ ಮೂಲಕ ಸಾಗಿಸಲು ಐಎಎಫ್ ಅನುಕೂಲ ಮಾಡಿಕೊಟ್ಟಿದೆ. ಅನಿಲ ಸೋರಿಕೆಯನ್ನು ನಿಯಂತ್ರಿಸಲು ಕೈಗೊಳ್ಳುತ್ತಿರುವ ಕಾರ್ಯಾಚರಣೆಗಳ ಮೇಲ್ವಿಚಾರಣೆಯನ್ನು ಇಬ್ಬರು ತಜ್ಞರು ಮಾಡಬೇಕಾಗಿದೆ.

ಅಲ್ಲದೆ, ದೇಶದದಾದ್ಯಂತ ನಡೆಯುತ್ತಿರುವ ಕೋವಿಡ್-19 ಸಾಂಕ್ರಾಮಿಕ ವಿರುದ್ಧ ಹೋರಾಟದ ತೀವ್ರತೆಯ ಸಮಯದಲ್ಲಿ ಭಾರತ ಸರ್ಕಾರದ ಸಮಕಾಲೀನ ತುರ್ತು ಅವಶ್ಯಕತೆಗಳನ್ನು ಪೂರೈಸುವ ಭಾಗವಾಗಿ, ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ಎದುರಿಸಲು ರಾಜ್ಯ ಸರ್ಕಾರಗಳು ಮತ್ತು ಇತರೇ ಪೋಷಕ ಏಜೆನ್ಸಿಗಳನ್ನು ಸಜ್ಜುಗೊಳಿಸಲು ಅಗತ್ಯವಾದ ಆವಶ್ಯಕ ವಸ್ತುಗಳನ್ನು ಸಕಾಲಿಕವಾಗಿ ಸಾಗಾಟ ಮಾಡಿ ಪೂರೈಸುವ..ಎಫ್ ಕಾರ್ಯಯೋಜನೆಗಳು ಕೂಡಾ ಮುಂದುವರಿದಿದೆ. ಭಾರತ ಸರ್ಕಾರಕ್ಕೆ ಸಹಾಯ ಮಾಡಲು ಐ..ಎಫ್ ಮಾರ್ಚ್ 25, 2020 ರಂದು ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗಿನಿಂದ ಈ ತನಕ ಒಟ್ಟು 703 ಟಿ ಲೋಡ್ ಗಳನ್ನು ತನ್ನ ವಿಮಾನ ಮೂಲಕ ಸಾಗಿಸಿದೆ. ಕೋವಿಡ್ -19 ಸಂಬಂಧಿತ ಯಾವುದೇ ಅಗತ್ಯ ಕಾರ್ಯಗಳನ್ನು ಕೈಗೊಳ್ಳಲು ಭಾರಿ ಮತ್ತು ಮಧ್ಯಮ ಸ್ವತ್ತುಗಳನ್ನು ವಾಯುಯಾನ ಮೂಲಕ ಸಾಗಿಸಲು..ಎಫ್ ಒಟ್ಟು 30 ಹಾರಾಟವನ್ನು ಈ ತನಕ ಮಾಡಿದೆ.

 

***



(Release ID: 1623119) Visitor Counter : 183