ಗೃಹ ವ್ಯವಹಾರಗಳ ಸಚಿವಾಲಯ
ರಾಜ್ಯಗಳಿಗೆ ಎಂಎಚ್ ಎ ಸೂಚನೆ: ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರನ್ನು ತ್ವರಿತವಾಗಿ ಅವರ ಸ್ವಂತ ಸ್ಥಳಗಳಿಗೆ ತಲುಪಿಸಲು ಯಾವುದೇ ಅಡೆತಡೆಗಳಿಲ್ಲದೆ “ಶ್ರಮಿಕ್ ವಿಶೇಷ” ರೈಲುಗಳ ಸಂಚಾರಕ್ಕೆ ರೈಲ್ವೆಗೆ ಸಹಕರಿಸಿ
प्रविष्टि तिथि:
11 MAY 2020 12:07PM by PIB Bengaluru
ರಾಜ್ಯಗಳಿಗೆ ಎಂಎಚ್ ಎ ಸೂಚನೆ: ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರನ್ನು ತ್ವರಿತವಾಗಿ ಅವರ ಸ್ವಂತ ಸ್ಥಳಗಳಿಗೆ ತಲುಪಿಸಲು ಯಾವುದೇ ಅಡೆತಡೆಗಳಿಲ್ಲದೆ “ಶ್ರಮಿಕ್ ವಿಶೇಷ” ರೈಲುಗಳ ಸಂಚಾರಕ್ಕೆ ರೈಲ್ವೆಗೆ ಸಹಕರಿಸಿ
ಸಂಕಷ್ಟದಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ಬಸ್ ಮತ್ತು ಶ್ರಮಿಕ್ ರೈಲುಗಳ ಮೂಲಕ ಸಂಚಾರಕ್ಕೆ ಎಲ್ಲ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳು ಕೈಗೊಂಡಿರುವ ಕ್ರಮಗಳ ನೆರವಿನ ಬಗ್ಗೆ 2020ರ ಮೇ.10ರಂದು ಸಂಪುಟ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಪರಿಶೀಲನೆ ನಡೆಸಲಾಯಿತು.
ಸಭೆಯ ಮುಂದುವರಿದ ಭಾಗವಾಗಿ, ಕೇಂದ್ರ ಗೃಹ ವ್ಯವಹಾರಗಳ ಸಚಿಚಾಲಯ ಎಲ್ಲ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದು, ವಲಸೆ ಕಾರ್ಮಿಕರು ತಮ್ಮ ಊರುಗಳನ್ನು ತಲುಪಲು ನಡೆದುಕೊಂಡು ಹೋಗುವುದು ಅಥವಾ ರೈಲ್ವೆ ಹಳಿಗಳ ಮೇಲೆ ನಡೆಯುವುದನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ‘ಶ್ರಮಿಕ್’ ವಿಶೇಷ ರೈಲುಗಳು ಮತ್ತು ಬಸ್ ಗಳ ಸಂಚಾರಕ್ಕೆ ಈಗಾಗಲೇ ಒಪ್ಪಿಗೆ ನೀಡಿದೆ ಎಂದು ಪ್ರತಿಪಾದಿಸಲಾಗಿದೆ. ಆದ್ದರಿಂದ ವಲಸೆ ಕಾರ್ಮಿಕರು ತಮ್ಮ ತವರಿಗೆ ಮರಳಲು ವಿಶೇಷ ಶ್ರಮಿಕ್ ರೈಲುಗಳು ಅಥವಾ ಬಸ್ ಗಳ ಪ್ರಯೋಜನ ಪಡೆದುಕೊಳ್ಳುವಂತೆ ನೆರವು ನೀಡಬೇಕು ಮತ್ತು ಅಲ್ಲಿಯವರೆಗೂ ವಲಸೆ ಕಾರ್ಮಿಕರಿಗೆ ಮಾರ್ಗದರ್ಶನ ನೀಡಿ ಅವರನ್ನು ಸಮೀಪದ ಪರಿಹಾರ ಕೇಂದ್ರಗಳಿಗೆ ಕರೆದೊಯ್ಯಬೇಕು ಎಂದು ಸೂಚಿಸಲಾಗಿದೆ.
ಅಲ್ಲದೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಲಸೆ ಕಾರ್ಮಿಕರ ಸಂಚಾರಕ್ಕೆ ತ್ವರಿತವಾಗಿ ಹೆಚ್ಚಿನ ವಿಶೇಷ ಶ್ರಮಿಕ್ ರೈಲುಗಳ ಓಡಾಟಕ್ಕೆ ಯಾವುದೇ ತೊಂದರೆಯಾಗದಂತೆ ರೈಲ್ವೆಗೆ ಸಹಕಾರ ನೀಡಬೇಕು ಎಂದು ಸೂಚಿಸಿಲಾಗಿದೆ.
ವಲಸೆ ಕಾರ್ಮಿಕರ ಸಂಚಾರಕ್ಕೆ ಸಂಬಂಧಿಸಿದಂತೆ ಅಧಿಕೃತ ಸಂವಹನ ಸುತ್ತೋಲೆಗಾಗಿ ಇಲ್ಲಿ ಕ್ಲಿಕ್ ಮಾಡಿ
***
(रिलीज़ आईडी: 1622885)
आगंतुक पटल : 262
इस विज्ञप्ति को इन भाषाओं में पढ़ें:
Telugu
,
English
,
Urdu
,
Marathi
,
हिन्दी
,
Manipuri
,
Bengali
,
Punjabi
,
Gujarati
,
Odia
,
Tamil
,
Malayalam