ರಕ್ಷಣಾ ಸಚಿವಾಲಯ

ಎಲೆಕ್ಟ್ರಾನಿಕ್ ಉಪಕರಣಗಳನ್ನು, ಪೇಪರ್ ಮತ್ತು ಕರೆನ್ಸಿ ನೋಟುಗಳನ್ನು ಸ್ಯಾನಿಟೈಸ್ ಮಾಡಲು ಸ್ವಯಂಚಾಲಿತ ಯು.ವಿ. ವ್ಯವಸ್ಥೆಯನ್ನು ಅಭಿವೃದ್ದಿಪಡಿಸಿದ ಡಿ.ಆರ್.ಡಿ.ಒ . ಪ್ರಯೋಗಾಲಯ

Posted On: 10 MAY 2020 5:32PM by PIB Bengaluru

ಲೆಕ್ಟ್ರಾನಿಕ್ ಉಪಕರಣಗಳನ್ನು, ಪೇಪರ್ ಮತ್ತು ಕರೆನ್ಸಿ ನೋಟುಗಳನ್ನು ಸ್ಯಾನಿಟೈಸ್ ಮಾಡಲು ಸ್ವಯಂಚಾಲಿತ ಯು.ವಿ. ವ್ಯವಸ್ಥೆಯನ್ನು ಅಭಿವೃದ್ದಿಪಡಿಸಿದ ಡಿ.ಆರ್.ಡಿ. . ಪ್ರಯೋಗಾಲಯ

 

ಹೈದರಾಬಾದ್ ಮೂಲದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (ಡಿ.ಆರ್.ಡಿ..) ಪ್ರಮುಖ ಪ್ರಯೋಗಾಲಯ, ಇಮಾರತ್ ಸಂಶೋಧನಾ ಕೇಂದ್ರ (ಆರ್.ಸಿ..) ಸ್ವಯಂಚಾಲಿತ, ಸಂಪರ್ಕ ರಹಿತ ಯು.ವಿ.ಸಿ. ಸ್ಯಾನಿಟೈಸೇಶನ್ ಕ್ಯಾಬಿನೆಟ್ ಗಳನ್ನು ಅಭಿವೃದ್ದಿಪಡಿಸಿವೆ. ಇವುಗಳನ್ನು ರಕ್ಷಣಾ ಸಂಶೋಧನಾ ಅಲ್ಟ್ರಾವೊಯ್ಲೆಟ್ ಸ್ಯಾನಿಟೈಸರ್ (ಡಿ.ಆರ್.ಯು.ವಿ.ಎಸ್.) ಗಳೆಂದು ನಾಮಕರಣ ಮಾಡಲಾಗಿದೆ. ಮೊಬೈಲ್ ಫೋನುಗಳು , ಪ್ಯಾಡ್ ಗಳು, ಲ್ಯಾಪ್ ಟಾಪ್ ಗಳು, ಕರೆನ್ಸಿ ನೋಟುಗಳು , ಚೆಕ್ ಹಾಳೆಗಳು, ಚಲನುಗಳು, ಪಾಸ್ ಪುಸ್ತಕಗಳು, ಪೇಪರು, ಲಕೋಟೆಗಳು ಇತ್ಯಾದಿಗಳನ್ನು ಸ್ಯಾನಿಟೈಸ್ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ.

ಡಿ.ಆರ್.ಯು.ವಿ.ಎಸ್. ಕ್ಯಾಬಿನೆಟ್, ಸಂಪರ್ಕ ರಹಿತ ಕಾರ್ಯಾಚರಣೆಯನ್ನು ಒಳಗೊಂಡಿದೆ. ವೈರಸ್ ಹರಡುವಿಕೆ ತಡೆಯಲು ಇದು ಬಹಳ ಮಹತ್ವದ್ದಾಗಿದೆ. ಸೆನ್ಸಾರ್ ಸ್ವಿಚ್ ಗಳು ಅದಕ್ಕೆ ಜೋಡಿಸಿದಂತಿರುವ ಡ್ರಾವರ್ ತೆರೆಯುವ ಮತ್ತು ಮುಚ್ಚಿಕೊಳ್ಳುವ ವ್ಯವಸ್ಥೆಯನ್ನು ಇದು ಒಳಗೊಂಡಿದೆ ಮತ್ತು ಭೌತಿಕ ಸಂಪರ್ಕ ಇಲ್ಲದಿರುವಂತಹ ವ್ಯವಸ್ಥೆ ಇದಾಗಿದೆ. ಇದು ಕ್ಯಾಬಿನೆಟ್ಟಿನ ಒಳಗೆ ಇರಿಸಲಾಗುವ ಯಾವುದೇ ವಸ್ತುವು 360 ಡಿಗ್ರಿ ವ್ಯಾಪ್ತಿಯಲ್ಲಿ ಯು.ವಿ.ಸಿ. ಬೆಳಕಿನ ಕಿರಣಗಳಿಂದ ಶೋಧಿಸಲ್ಪಡುತ್ತದೆ. ಒಮ್ಮೆ ಸ್ಯಾನಿಟೈಸೇಶನ್ ಆದ ಬಳಿಕ ವ್ಯವಸ್ಥೆ ತನ್ನಿಂದ ತಾನೇ ನಿದ್ರಾವಸ್ಥೆಗೆ ಹೋಗುತ್ತದೆ ಮತ್ತು ಇದನ್ನು ನಿರ್ವಹಿಸಲು ಯಾವುದೇ ಆಪರೇಟರ್ ಹತ್ತಿರದಲ್ಲಿಯೇ ನಿಂತುಕೊಂಡಿರಬೇಕಾದ ಆವಶ್ಯಕತೆ ಇಲ್ಲ.

ಆರ್.ಸಿ.. ಯು ಸ್ವಯಂಚಾಲಿತ ಯು.ವಿ.ಸಿ. ಕರೆನ್ಸಿ ಸ್ಯಾನಿಟೈಸಿಂಗ್ ಉಪಕರಣವನ್ನು ಅಭಿವೃದ್ದಿ ಮಾಡಿದೆ. ಇದಕ್ಕೆ ನೋಟ್ಸ್ ಕ್ಲೀನ್ ಎಂದು ನಾಮಕರಣ ಮಾಡಲಾಗಿದೆ. ಕರೆನ್ಸಿ ನೋಟುಗಳ ಬಂಡಲ್ ಗಳನ್ನು ಡಿ.ಆರ್.ಯು.ವಿ.ಎಸ್. ಬಳಸಿ ಸ್ಯಾನಿಟೈಸ್ ಮಾಡಬಹುದು, ಆದರೆ ಪ್ರತೀ ನೋಟಿನ ಕ್ರಿಮಿನಾಶಕ ಪ್ರಕ್ರಿಯೆಗೆ ಇದನ್ನು ಬಳಸಿದರೆ ಬಹಳ ಸಮಯ ಬೇಕಾಗುತ್ತದೆ. ಉದ್ದೇಶಕ್ಕಾಗಿ , ಸ್ಯಾನಿಟೈಸಿಂಗ್ ತಂತ್ರವನ್ನು ಅಭಿವೃದ್ದಿ ಮಾಡಲಾಗಿದೆ, ಇದರಲ್ಲಿ ಬಿಡಿ ಬಿಡಿ ನೋಟುಗಳನ್ನು (ಕಟ್ಟು ಹಾಕಿಲ್ಲದ ) ಉಪಕರಣದ ಇನ್ ಪುಟ್ ಕಿಂಡಿಗೆ ಹಾಕಬೇಕಾಗುತ್ತದೆ. ಅದು ನೋಟುಗಳನ್ನು ಒಂದೊಂದಾಗಿ ಹೆಕ್ಕಿಕೊಂಡು ಅವುಗಳು ಯು.ವಿ.ಸಿ. ಬೆಳಕಿನ ಲ್ಯಾಂಪ್ ಗಳ ಮೂಲಕ ಹಾದು ಹೋಗುವಂತೆ ಮಾಡಿ ಸಂಪೂರ್ಣವಾಗಿ ಕ್ರಿಮಿಮುಕ್ತಗೊಳಿಸುತ್ತದೆ.

***



(Release ID: 1622828) Visitor Counter : 221