ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಈಶಾ ಫೌಂಡೌಷನ್ ಸಹಭಾಗಿತ್ವದಲ್ಲಿ ಆಧ್ಯಾತ್ಮಿಕ ಗುರುಗಳೊಂದಿಗೆ ನೇರ ವೆಬಿನಾರ್ ಆಯೋಜನೆ

Posted On: 08 MAY 2020 6:08PM by PIB Bengaluru

ನಮ್ಮೆಲ್ಲರಲ್ಲೂ ಒಬ್ಬ ಸ್ವಚ್ಛತಾ ಯೋಧನಿದ್ದಾನೆ: ಸದ್ಗುರು

ಭಾರತವನ್ನು ಶುಚಿಗೊಳಿಸಲು ಪೊರಕೆಯೇ ಉಪಕರಣವಲ್ಲ. ನಮ್ಮ ನಗರಗಳು ಮತ್ತು ಪಟ್ಟಣಗಳನ್ನು ಶುಚಿಯಾಗಿಟ್ಟುಕೊಳ್ಳುವಲ್ಲಿ ನಾಗರಿಕರ ಕ್ರಿಯಾಶೀಲ ಸಹಭಾಗಿತ್ವ ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ: ಸದ್ಗುರು

ಸದ್ಗುರು ಅವರೊಂದಿಗೆ ಸಂವಾದ ನಡೆಸಿದ ಸ್ವಚ್ಛತಾ ಯೋಧರು

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಈಶಾ ಫೌಂಡೌಷನ್ ಸಹಭಾಗಿತ್ವದಲ್ಲಿ ಆಧ್ಯಾತ್ಮಿಕ ಗುರುಗಳೊಂದಿಗೆ ನೇರ ವೆಬಿನಾರ್ ಆಯೋಜನೆ

 

ಶ್ರೀ ಸದ್ಗುರು ಅವರು, ನಮ್ಮೆಲ್ಲರಲ್ಲೂ ಒಬ್ಬ ಸ್ವಚ್ಛತಾ ಯೋಧನಿದ್ದಾನೆ ಎಂದು ಹೇಳಿದರು. ಭಾರತವನ್ನು ಶುಚಿಯಾಗಿಟ್ಟುಕೊಳ್ಳಲು ಪೊರಕೆಯೇ ಉಪಕರಣವಲ್ಲ, ನಮ್ಮ ನಗರಗಳು ಮತ್ತು ಪಟ್ಟಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ನಾಗರಿಕರ ಕ್ರಿಯಾಶೀಲ ಸಹಭಾಗಿತ್ವ ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ’’ ಎಂದು ಅವರು ಹೇಳಿದರು. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (ಎಂಒಎಚ್ ಯುಎ), ಈಶಾ ಫೌಂಡೇಶನ್ ಸಹಭಾಗಿತ್ವದಲ್ಲಿ ಸವಾಲಿನ ಸಮಯದಲ್ಲಿ ಸದ್ಗುರು ಅವರೊಂದಿಗೆ ಸ್ವಚ್ಛತಾ ಯೋಧರುಎಂಬ ಶೀರ್ಷಿಕೆಯಡಿ ಆಯೋಜಿಸಿದ್ದ ನೇರ ವೆಬಿನಾರ್ ಅನ್ನು ಉದ್ದೇಶಿಸಿ ಶ್ರೀ ಸದ್ಗುರು ಅವರು ಮಾತನಾಡಿದರು. ಒಂದು ಗಂಟೆಗಳ ಕಾಲ ನಡೆದ ವೆಬಿನಾರ್ ನಲ್ಲಿ ಸದ್ಗುರು ಅವರು, ಸೂರತ್ ಉಜ್ಜಯನಿ, ಪೂರ್ವ ದೆಹಲಿ ಮಹಾನಗರ ಪಾಲಿಕೆ, ಆಗ್ರಾ ಮತ್ತು ಮಧುರೈನ ಜಿಲ್ಲಾ ಕಲೆಕ್ಟರ್/ಮಹಾನಗರ ಪಾಲಿಕೆಗಳ ಆಯುಕ್ತರೊಂದಿಗೆ ಸಂವಾದ ನಡೆಸಿದರು. ಮತ್ತು ಪ್ರಸಕ್ತ ಬಿಕ್ಕಟ್ಟಿನ ಸಮಯವನ್ನು ಹೇಗೆ ಎದುರಿಸಬೇಕು ಎಂಬುದನ್ನು ಕುರಿತು ಶಕ್ತಿಯುತ ಒಳದೃಷ್ಟಿಯನ್ನು ನೀಡಿದರು. ಗೋಷ್ಠಿಯನ್ನು ಕೋವಿಡ್ ಚಾಂಪಿಯನ್ಸ್ ಆಗಿ ಮುಂಚೂಣಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳಿಗೆ ಸಮರ್ಪಿಸಲಾಯಿತು. ಕಾರ್ಯಕ್ರಮವನ್ನು ಎಂಒಎಚ್ ಯುಎ ಕಾರ್ಯದರ್ಶಿ ಶ್ರೀ ದುರ್ಗಾ ಶಂಕರ್ ಮಿಶ್ರಾ ನಿರೂಪಿಸಿದರು. ನೈರ್ಮಲ್ಯ ಕಾರ್ಯಕರ್ತರು ಮುಂದಿಟ್ಟ ಹಲವು ಪ್ರಶ್ನೆಗಳಿಗೆ ಆಧ್ಯಾತ್ಮಿಕ ಗುರು ಉತ್ತರಿಸಿದರು. ಗೋಷ್ಠಿಯನ್ನು ಯೂಟ್ಯೂಬ್ ಮೂಲಕ(isha.co/MoHUAwithSadhguru) ವೆಬ್ ಕಾಸ್ಟ್ ಲೈವ್ ಮಾಡಲಾಯಿತು. ಅದೇ ಸಮಯದಲ್ಲಿ ಹಿಂದಿ ಅನುವಾದಿತ ಕಾರ್ಯಕ್ರಮ (isha.co/MoHUAwithSadhguruinHindi) ಪ್ರಸಾರವಾಯಿತು.

ಶ್ರೀ ಸದ್ಗುರು ಅವರು, ಸ್ವಚ್ಛ ಭಾರತ್ ಮಿಷನ್(ಎಸ್ ಬಿಎಂ) ಅತ್ಯಂತ ಮಹತ್ವದ ಪಾತ್ರವಹಿಸಿದೆ. ಅದರಿಂದ ದೇಶದಲ್ಲಿ ಸ್ವಚ್ಛತಾ ಪ್ರಮಾಣ ಗಣನೀಯವಾಗಿ ಸುಧಾರಣೆಯಾಗಿದೆ ಎಂದು ಹೇಳಿದರು. ಕಳೆದ ಐದು ವರ್ಷಗಳಿಂದ ಯೋಜನೆ ಮುಂಚೂಣಿಯಲ್ಲಿರುವ ನೈರ್ಮಲ್ಯ ಕಾರ್ಯಕರ್ತರ ಪ್ರಯತ್ನಗಳಿಗೆ ವಿಶೇಷವಾಗಿ ಗೌರವ ಸಲ್ಲಿಸುವುದಾಗಿ ಅವರು ಹೇಳಿದರು.

ನಗರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ನೈರ್ಮಲ್ಯ ಕಾರ್ಯಕರ್ತರು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಶ್ರೀ ಸದ್ಗುರು ಅವರು, ಸ್ವಚ್ಛತಾ ಯೋಧರನ್ನು ಉತ್ತೇಜಿಸುವ ಪ್ರಾಮುಖ್ಯತೆಯನ್ನು ಪ್ರಮುಖವಾಗಿ ಪ್ರತಿಪಾದಿಸಿದರು. ಅಲ್ಲದೆ ನೈರ್ಮಲ್ಯ ಕಾರ್ಯಕರ್ತರಿಗೆ ಸಮವಸ್ತ್ರ, ಅಗತ್ಯ ವೈಯಕ್ತಿಕ ರಕ್ಷಣಾ ಉಪಕರಣಗಳು ಲಭ್ಯವಾಗುವುದನ್ನು ಖಾತ್ರಿಪಡಿಸುವ ಮೂಲಕ ಅವರಲ್ಲಿ ತಾವು ಮಾಡುತ್ತಿರುವ ಕೆಲಸದ ಬಗ್ಗೆ ಯಾವುದೇ ಭಯವಿಲ್ಲದಂತೆ ನೋಡಿಕೊಳ್ಳಬೇಕು ಎಂದರು. ಅವರು ನೈರ್ಮಲೀಕರಣ ಎಂಬುದು ಅತಿ ದೊಡ್ಡ ಸವಾಲು ಎಂದು ಹೇಳಬೇಕಿಲ್ಲ. ತ್ಯಾಜ್ಯವನ್ನು ಒಣ ಮತ್ತು ಹಸಿ ತ್ಯಾಜ್ಯವನ್ನಾಗಿ ವಿಂಗಡಿಸುವುದು ಮತ್ತು ಸಂಸ್ಕರಿಸುವುದು, ಕೈಗಾರಿಕೆಗಳ ತ್ಯಾಜ್ಯವನ್ನು ಸಂಸ್ಕರಿಸುವುದು ಹಾಗೂ ಸ್ಥಳೀಯ ಕೈಗಾರಿಕೆಗಳು ಹೊರಹಾಕುವ ತ್ಯಾಜ್ಯವನ್ನು ಸಂಸ್ಕರಿಸುವುದಕ್ಕೂ ಗಮನಹರಿಸಬೇಕಾಗಿದೆ ಎಂದರು. ಅಲ್ಲದೆ ಒಣ ತ್ಯಾಜ್ಯ ವಿಂಗಡಣೆಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ. ಮೂಲಕ ನಾಗರಿಕರು ಅತ್ಯುತ್ಸಾಹದಿಂದ ಕಾರ್ಯವನ್ನು ಕೈಗೊಳ್ಳಲು ಅವರಿಗೆ ಉತ್ತೇಜನ ನೀಡಬೇಕಾಗಿದೆಎಂದು ಹೇಳಿದರು.

ಗೋಷ್ಠಿಯಲ್ಲಿ ಭಾರತದಾದ್ಯಂತ 4300ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳ (ಯುಎಲ್ ಬಿ) ಪ್ರತಿನಿಧಿಗಳು ಭಾಗವಹಿಸಿದ್ದರು. ಅದರಲ್ಲಿ ಪೌರಾಡಳಿತ ಆಯುಕ್ತರು, ಮುಖ್ಯ ಕಾರ್ಯಕಾರಿ ಅಧಿಕಾರಿಗಳು ಹಾಗೂ ಮೇಯರ್ ಅವರಂತಹ ರಾಜಕೀಯ ಪ್ರತಿನಿಧಿಗಳು, ಆರೋಗ್ಯ ಕಾರ್ಯಕರ್ತರು, ಸ್ವಸಹಾಯ ಗುಂಪುಗಳ ಸದಸ್ಯರು ಮತ್ತು ಕೋವಿಡ್-19 ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಎಲ್ಲ ಚಾಂಪಿಯನ್ ಗಳು ಪಾಲ್ಗೊಂಡಿದ್ದರು.

***



(Release ID: 1622331) Visitor Counter : 171