ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಕೋವಿಡ್ ನಂತರದ ಹಂತದಲ್ಲಿ, ನ್ಯಾಯಯುತ ಯೋಜನೆಗಳಿಂದ ಭಾರತದ ಆರೋಗ್ಯ ಮೂಲಸೌಕರ್ಯ ಕ್ಷೇತ್ರವು ಪ್ರಮುಖ ಉತ್ತೇಜನ ಪಡೆಯಬಹುದು: ಡಾ. ಜಿತೇಂದ್ರ ಸಿಂಗ್

Posted On: 08 MAY 2020 6:59PM by PIB Bengaluru

ಕೋವಿಡ್ ನಂತರದ ಹಂತದಲ್ಲಿ, ನ್ಯಾಯಯುತ ಯೋಜನೆಗಳಿಂದ ಭಾರತದ ಆರೋಗ್ಯ ಮೂಲಸೌಕರ್ಯ ಕ್ಷೇತ್ರವು ಪ್ರಮುಖ ಉತ್ತೇಜನ ಪಡೆಯಬಹುದು: ಡಾ. ಜಿತೇಂದ್ರ ಸಿಂಗ್

 

ಭಾರತದ ವೈದ್ಯಕೀಯ ಕ್ಷೇತ್ರದ, ಕಾರ್ಪೊರೇಟ್ ಆಸ್ಪತ್ರೆ ವಲಯಗಳ, ಪ್ರಮುಖ ಸಂಶೋಧನಾ ಸಂಸ್ಥೆಗಳ ಮತ್ತು ವೈದ್ಯಕೀಯ ಅರ್ಥಶಾಸ್ತ್ರಜ್ಞರು ಹಾಗೂ ಭಾರತದ ಉನ್ನತ ವೃತ್ತಿಪರರೊಂದಿಗೆ ಕೋವಿಡ್ ನಂತರದ ಆರೋಗ್ಯ ರಕ್ಷಣೆ ಕುರಿತು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಚರ್ಚಿಸಿದರು.

ಒಂದೂವರೆ ಗಂಟೆಗಳ ಸುದೀರ್ಘ ವಿಡಿಯೋ ಸಂವಾದ ಸಭೆಯಲ್ಲಿ, ಚೆನ್ನೈನ ಅಂತಾರಾಷ್ಟ್ರೀಯ ಖ್ಯಾತ ಮಧುಮೇಹ ತಜ್ಞ ಡಾ.ವಿ.ಮೋಹನ್, ಮೆಡಂತಾ ಮುಖ್ಯಸ್ಥ (ಸಿ.ಎಂ.ಡಿ) ಡಾ.ನರೇಶ್ ಟ್ರೆಹನ್ , ಬೆಂಗಳೂರಿನ ನಾರಾಯಣ ಆರೋಗ್ಯ ಸಂಸ್ಥೆಯ ಅಧ್ಯಕ್ಷ ಡಾ.ದೇವಿ ಶೆಟ್ಟಿ, ಅಪೊಲೊ ಆಸ್ಪತ್ರೆಗಳ ಜಂಟಿ ಎಂಡಿ ಡಾ.ಸಂಗೀತಾ ರೆಡ್ಡಿ, ಬೆಂಗಳೂರು ಬಯೋಕಾನ್ ಸಿಎಂಡಿ ಶ್ರೀಮತಿ ಕಿರಣ್ ಮಜುಂದಾರ್ ಶಾ, ನವದೆಹಲಿ ಸಿಎಸ್ಐಆರ್ ಡಿಜಿ ಡಾ.ಶೇಖರ್ ಮಾಂಡೆ , ಪುದುಚೇರಿಯ ಡಾ. ಡಿ ಸುಂದರರಾಮನ್ , ನವದೆಹಲಿಯ ಏಮ್ಸ್ ನ ಡಾ.ಶಕ್ತಿ , ನವದೆಹಲಿಯ ನಿಫೆಪ್ ನಿರ್ದೇಶಕ ಡಾ. ರತಿನ್ ರಾಯ್ , ನವದೆಹಲಿಯ ಡಿ.ಹೆಚ್.ಎಫ್.ಐ ಅಧ್ಯಕ್ಷ ಪ್ರೊಫೆಸರ್ ಕೆ. ಶ್ರೀನಾಥ್ ರೆಡ್ಡಿ ಮತ್ತು ಛತ್ತೀಸ್ ಗಡ್ ನ ಡಾ ಯೊಗೆಶ್ ಜೈನ್ ಮುಂತಾದವರು ಭಾಗವಹಿಸಿದ್ದರು.

ತಮ್ಮ ಆರಂಭಿಕ ನುಡಿಯಲ್ಲಿ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಮೊದಲ ಹಂತದ ಕೋವಿಡ್ ಸಾಂಕ್ರಾಮಿಕ ರೋಗ ತಡೆ ಪ್ರಯತ್ನವನ್ನು ಬಹಳ ಶ್ರದ್ಧೆ ಮತ್ತು ವೃತ್ತಿಪರತೆಯೊಂದಿಗೆ ವ್ಯವಹರಿಸಿದ್ದೇವೆ, ಭಾರತವು ಕೋವಿಡ್ ನಂತರದ ಹಂತವನ್ನು ಯೋಜಿಸಲು ಮತ್ತು ಈ ಪ್ರತಿಕೂಲತೆಯನ್ನು ಎಷ್ಟು ಉತ್ತಮವಾಗಿ ಪರಿವರ್ತಿಸಬಹುದು ಎಂಬ ಕಾರ್ಯತಂತ್ರ ರೂಪಿಸುವ ಸಮಯ ಈಗ ಬಂದಿದೆಎಂದು ಹೇಳಿದರು.ಭವಿಷ್ಯದ ಅಗತ್ಯಗಳನ್ನು ಪೂರೈಸಲು ನಮ್ಮ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ಅವಕಾಶ ದಾಗಿದೆ. ಒಳನೋಟದೊಂದಿಗೆ ನ್ಯಾಯಯುತವಾಗಿ ಯೋಜಿಸಿದರೆ, ಇದು ಭಾರತದ ಭವಿಷ್ಯದ ಆರೋಗ್ಯ ಮೂಲಸೌಕರ್ಯವನ್ನು ವಿಶ್ವ ದರ್ಜೆಯ ಗುಣಮಟ್ಟಕ್ಕೇರಿಸಲು ಸದಾವಕಾಶವಾಗಿದೆ ಮಾತ್ರವಲ್ಲದೆ, ದೇಶದ ಆರ್ಥಿಕತೆಗೆ ಪ್ರಮುಖ ಕೊಡುಗೆಯಾಗಿಯೂ ಅಭಿವೃದ್ಧಿಪಡಿಸುವ ಒಂದು ಉತ್ತಮ ಅವಕಾಶ ಕೂಡಾ ಆಗಿದೆ ಎಂದು ಹೇಳಿದರು.

ವೈದ್ಯಕೀಯ ಕ್ಷೇತ್ರದ ಮತ್ತೊಂದು ಮಹತ್ತರ ಕಾಳಜಿ ಏನೆಂದರೆ, ನಾವು ಕೋವಿಡ್ ಸವಾಲನ್ನು ಜಯಿಸುವ ಜವಾಬ್ದಾರಿಯನ್ನು ನಿರ್ವಹಿಸುವಾಗ, ಕೋವಿಡ್ ಅಲ್ಲದ ರೋಗಿಗಳನ್ನು ನಾವು ಅಜಾಗರೂಕತೆಯಿಂದ ನಿರ್ಲಕ್ಷಿಸಬಾರದು, ನಮ್ಮಲ್ಲಿ ಹಲವರು ಡಯಾಬಿಟಿಸ್ ಮೆಲ್ಲಿಟಸ್, ಹೃದ್ರೋಗದಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಮತ್ತು ಕ್ಯಾನ್ಸರ್ ಗಳಿಂದ ಬಳಲುತ್ತಿದ್ದಾರೆ. ಕೋವಿಡ್ ಇರುವಿಕೆಯ ಹೊರತಾಗಿಯೂ, ದೇಶ ಇತರೆ ರೋಗಗಳಿಂದ ಕೂಡ ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿದೆ ಮತ್ತು ಇದೇ ಸಮಯದಲ್ಲಿ ಇತರೆ ಕಾರಣಗಳ ಅಸ್ವಸ್ಥತೆಯ ಮೂಲಕ ಹಲವಾರು ರೋಗಿಗಳು ಮರಣವನ್ನಪ್ಪಿದ್ದಾರೆ ಎಂದು ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಹೇಳಿದರು

"ಲಾಕ್‌ಡೌನ್ ಮುಗಿದ ನಂತರವೂ, ಕೋವಿಡ್ ವಿರುದ್ಧದ ಹೋರಾಟವು ಮುಂದುವರಿಯಬಹುದು ಮತ್ತು ಜನಸಂಖ್ಯೆಯನ್ನು ದೊಡ್ಡ ಪ್ರಮಾಣದಲ್ಲಿ ಅಥವಾ ಸಾಮೂಹಿಕವಾಗಿ ಒಗ್ಗಟ್ಟನ್ನು ತೋರಲು ಹಲವು ಬಾರಿ ಕರೆ ನೀಡಬಹುದು. ಆರೋಗ್ಯ ರಕ್ಷಣೆಗಾಗಿ ಭವಿಷ್ಯದ ಯಾವುದೇ ಯೋಜನೆಯ ನಿಟ್ಟಿನಲ್ಲಿ ಮಾಡುವ ಹೊಣೆಗಾರಿಕೆಯ ಕಾರ್ಯಚಟುವಟಿಕೆಗಳನ್ನು ಸಹ ನಾವು ತಾಳ್ಮೆಯಿಂದ ಅಳೆಯಬೇಕಾಗುತ್ತದೆ" ಎಂದು ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಹೇಳಿದರು.

ಚರ್ಚೆಯ ಸಮಯದಲ್ಲಿ, ತೀವ್ರತೆಗೆ ಅನುಗುಣವಾಗಿ ಉನ್ನತ ಮಟ್ಟದ ಕಣ್ಗಾವಲು ಮತ್ತು ಕೋವಿಡ್ ಪ್ರಕರಣಗಳ ವರ್ಗೀಕರಣದ ಅಗತ್ಯಕ್ಕೆ ಒತ್ತು ನೀಡಲಾಯಿತು. ಕೋವಿಡ್ ಪರಿಣಾಮದ ನಂತರದ ದಿನಗಳ ಸಂಭವನೀಯ ಮಾನಸಿಕ ಕುಸಿತವೂ ಚರ್ಚೆಯಾದವು..

ಆರ್ಥಿಕತೆಯ ಬಗ್ಗೆ ಚರ್ಚಿಸುವಾಗ, ಭವಿಷ್ಯದ ಯಾವುದೇ ಯೋಜನೆಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು, ಇದರಿಂದ ಆರೋಗ್ಯ ಕ್ಷೇತ್ರ ಭಾರತದ ಆರ್ಥಿಕತೆಯ ಪ್ರಮುಖ ಅಂಶವಾಗುತ್ತದೆ. ಅದೇ ರೀತಿಯಲ್ಲಿ ವಿಶ್ವದ ಹೆಚ್ಚಿನ ದೇಶಗಳು ಭಾರತದೊಂದಿಗೆ ವ್ಯವಹಾರ ಮಾಡಲು ಆದ್ಯತೆ ನೀಡುವ ಸಮಯದಲ್ಲಿ, ಭಾರತದ ಆರೋಗ್ಯ ಕ್ಷೇತ್ರದ ಉತ್ಪಾದನೆಗಳಿಗೆ ಮತ್ತು ಫಾರ್ಮಾ ವಲಯಕ್ಕೆ ವಿಶೇಷವಾಗಿ ಪ್ರಚೋದನೆಯನ್ನು ನೀಡಬೇಕು. ಅಸ್ತಿತ್ವದಲ್ಲಿರುವ ಆರೋಗ್ಯ ಕ್ಷೇತ್ರಕ್ಕೆ ಆರ್ಥಿಕ ಉತ್ತೇಜನವನ್ನು ನೀಡಲು ವಿವಿಧ ಆಯ್ಕೆಗಳನ್ನು ಸಹ ಮುಂದಿಡಬೇಕು ಮುಂತಾದ ಇತರ ಸಲಹೆಗಳು ಕ್ಷೇತ್ರದ ದಿಗ್ಗಜರಿಂದ ಮೂಡಿಬಂದವು

ಈ ಸಂದರ್ಭದಲ್ಲಿ ಮಹಾಮಾರಿ ಕೋವಿಡ್ ಅಲ್ಲದ ಪರಿಸ್ಥಿತಿಗಳನ್ನು ಒಳಗೊಂಡಂತೆ, ಸಾಂಕ್ರಾಮಿಕವಲ್ಲದ ಇತರೆ ಕಾಯಿಲೆಗಳಂತಹ ಪರಿಸ್ಥಿತಿಗಳನ್ನು ಕೂಡಾ ತಡೆಗಟ್ಟುವ ಮತ್ತು ಆರೋಗ್ಯ ರಕ್ಷಣೆಯನ್ನು ಮಾಡುವ ಕುರಿತು ಸಹ ವಿವರವಾಗಿ ಚರ್ಚಿಸಲಾಯಿತು.

***



(Release ID: 1622330) Visitor Counter : 150