ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಕೋವಿಡ್-19 ನಿರ್ವಹಣೆಗೆ ಕೈಗೊಂಡಿರುವ ನಿಯಂತ್ರಣ ಮತ್ತು ಸಿದ್ಧತಾ ಕ್ರಮಗಳ ಬಗ್ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪರಿಶೀಲನೆ ನಡೆಸಿದ ಡಾ. ಹರ್ಷವರ್ಧನ್

Posted On: 06 MAY 2020 5:40PM by PIB Bengaluru

ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಕೋವಿಡ್-19 ನಿರ್ವಹಣೆಗೆ ಕೈಗೊಂಡಿರುವ ನಿಯಂತ್ರಣ ಮತ್ತು ಸಿದ್ಧತಾ ಕ್ರಮಗಳ ಬಗ್ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪರಿಶೀಲನೆ ನಡೆಸಿದ ಡಾ. ಹರ್ಷವರ್ಧನ್

ರಾಜ್ಯಗಳಿಗೆ ಎಲ್ಲ ರೀತಿಯ ನೆರವಿನ ಭರವಸೆ

ಮುಂಚಿತವಾಗಿಯೇ ನಿಗಾ ಮತ್ತು ಸಂಪರ್ಕ ಪತ್ತೆಗೆ ಆದ್ಯತೆ ನೀಡಿ, ಸಕಾಲದಲ್ಲಿ ಚಿಕಿತ್ಸೆಗೆ ಒತ್ತು ಮತ್ತು ಮೂಲಕ ಕೋವಿಡ್-19ನಿಂದ ಆಗುವ ಸಾವು ಪ್ರಮಾಣ ತಡೆಗೆ ಕರೆ

 

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು ಇಂದು ಗುಜರಾತ್ ಉಪಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವ ಶ್ರೀ ನಿತಿನ್ ಭಾಯ್ ಪಟೇಲ್ ಮತ್ತು ಮಹಾರಾಷ್ಟ್ರದ ಆರೋಗ್ಯ ಸಚಿವ ಶ್ರೀ ರಾಜೇಶ್ ತೋಪೆ ಅವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು. ಎರಡೂ ರಾಜ್ಯಗಳಲ್ಲಿ ಕೋವಿಡ್-19 ನಿರ್ವಹಣೆಗೆ ಮಾಡಿಕೊಂಡಿರುವ ಸಿದ್ಧತೆಗಳು ಮತ್ತು ಕೈಗೊಂಡಿರುವ ಕ್ರಮಗಳು ಹಾಗೂ ಸ್ಥಿತಿಗತಿ ಬಗ್ಗೆ ಸಹಾಯಕ ಸಚಿವ(ಎಚ್ಎಫ್ ಡಬ್ಲ್ಯೂ) ಶ್ರೀ ಅಶ್ವಿನ್ ಕುಮಾರ್ ಚೌಬೆ ಅವರ ಸಮಕ್ಷಮದಲ್ಲಿ ಕೇಂದ್ರದ ಹಿರಿಯ ಅಧಿಕಾರಿಗಳು ಹಾಗೂ ರಾಜ್ಯಗಳ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಲಾಯಿತು.

ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳ ಸ್ಥಿತಿಗತಿ ಮತ್ತು ಅದರ ನಿಯಂತ್ರಣಕ್ಕೆ ರಾಜ್ಯಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಸಂಕ್ಷಿಪ್ತ ವಿವರಣೆಯನ್ನು ಪಡೆದುಕೊಂಡ ಸಚಿವರು, ರಾಜ್ಯಗಳ ಕೆಲವು ಜಿಲ್ಲೆಗಳಲ್ಲಿ ಕೋವಿಡ್-19ನಿಂದಾಗಿ ಆಗುತ್ತಿರುವ ಸಾವುಗಳ ಪ್ರಮಾಣ ಹೆಚ್ಚಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಡಾ. ಹರ್ಷವರ್ಧನ್ ಅವರು, “ರಾಜ್ಯಗಳು ಅತ್ಯಂತ ಪರಿಣಾಮಕಾರಿಯಾಗಿ ನಿಗಾವಹಿಸಲು, ಸಂಪರ್ಕ ಪತ್ತೆ ಮತ್ತು ಮುಂಚಿತವಾಗಿಯೇ ಸೋಂಕು ಪರೀಕ್ಷೆಗೆ ಆದ್ಯತೆ ನೀಡಬೇಕು. ಮೂಲಕ ಸಾವಿನ ಪ್ರಮಾಣ ತಗ್ಗಿಸಬೇಕುಎಂದರು. ಅವರು ಸೂಕ್ತ ಸಂದರ್ಭದಲ್ಲಿ ಮಧ್ಯಪ್ರವೇಶ, ತಪಾಸಣೆ ಮತ್ತು ಗಂಭೀರ ಉಸಿರಾಟದ ಸೋಂಕು(ಎಸ್ಎಆರ್ ) ಪರೀಕ್ಷೆ/ಜ್ವರ ಮತ್ತಿತರ ಅನಾರೋಗ್ಯ(ಐಎಲ್ಐ) ಪ್ರಕರಣಗಳ ಬಗ್ಗೆ ಗಂಭೀರ ಗಮನಹರಿಸಬೇಕು. ಇದರಿಂದ ಸೋಂಕು ಇತರೆ ಪ್ರದೇಶಗಳಿಗೆ ಹರಡುವುದು ತಪ್ಪುತ್ತದೆ. ಸಾವಿನ ಪ್ರಮಾಣ ತಗ್ಗಿಸಲು ರಾಜ್ಯಗಳು, ನಿರ್ಬಂಧಿತ ಕಾರ್ಯತಂತ್ರಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಅಗತ್ಯವಿದೆ. ವ್ಯವಸ್ಥಿತ ರೀತಿಯಲ್ಲಿ ಸಮಗ್ರ ಮುನ್ನೆಚ್ಚರಿಕೆ ಮತ್ತು ತಡೆ ಕ್ರಮಗಳನ್ನು ಕೈಗೊಳ್ಳಲು ಇದು ಸಕಾಲ ಮತ್ತು ಹೊಸ ಪ್ರಕರಣಗಳನ್ನು ತಡೆಯಲು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕುಎಂದರು.

ಕೆಲವು ಪ್ರಕರಣಗಳಲ್ಲಿ ರೋಗಿಗಳು ತಮಗೆ ಇರುವ ಸೋಂಕಿನ ಬಗ್ಗೆ ಮಾಹಿತಿಗಳನ್ನು ಮುಚ್ಚಿಡುತ್ತಿದ್ದಾರೆ ಅಥವಾ ತಡವಾಗಿ ಆಸ್ಪತ್ರೆಗೆ ಬರುತ್ತಿರುವ ಪ್ರಕರಣಗಳಲ್ಲಿ ಕೋವಿಡ್-19ನಿಂದ ಆಗುತ್ತಿರುವ ಭಯ ಅಥವಾ ತಪ್ಪು ಕಲ್ಪನೆ ಕಾರಣವಿರಬಹುದು ಎಂದ ಡಾ. ಹರ್ಷವರ್ಧನ್ ಅವರು, ಸಮುದಾಯದ ತಾರತಮ್ಯಕ್ಕೆ ಹೊಂದಿಕೊಂಡಂತೆ ಜನರಲ್ಲಿ ನಡವಳಿಕೆ ಬದಲಾವಣೆ ಸಂವಹನ(ಬಿಸಿಸಿ)ಗೆ ರಾಜ್ಯಗಳು ಹೆಚ್ಚಿನ ಒತ್ತು ನೀಡಬೇಕು ಎಂದ ಅವರು ಸಮುದಾಯದ ಬಹಿಷ್ಕಾರ ಮತ್ತು ತಾರಮತ್ಯದ ಬಗ್ಗೆ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಮೂಲಕ ಕೋವಿಡ್-19 ವಿರುದ್ಧ ಅತ್ಯಂತ ಪರಿಣಾಮಕಾರಿ ಹೋರಾಡಬಹುದು, ಇದರಿಂದಾಗಿ ಜನರು ಮುಂಚಿತವಾಗಿಯೇ ಪತ್ತೆ ಮತ್ತು ಚಿಕಿತ್ಸೆಗೆ ಮುಂದಾಗುತ್ತಾರೆ ಎಂದು ಹೇಳಿದರು.

ಡಾ. ಹರ್ಷವರ್ಧನ್ ಅವರು, ನಿರ್ಬಂಧಿತ ಪ್ರದೇಶಗಳಲ್ಲಿ ನಿಗಾ ತಂಡಗಳನ್ನು ನಿಯೋಜಿಸಬೇಕು ಎಂದು ಸಲಹೆ ಮಾಡಿದರು. ವಾರ್ಡ್ ಮಟ್ಟದಲ್ಲಿ ಕೈತೊಳೆಯುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು ಮತ್ತಿತರ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಮುದಾಯದ ಸ್ವಯಂಸೇವಕರನ್ನು ಗುರುತಿಸಿ ಬಳಕೆ ಮಾಡಿಕೊಳ್ಳಬೇಕು ಮತ್ತು ಅವರು ಸಮಾಜದಲ್ಲಿ ಕಾಯಿಲೆ ಬಗ್ಗೆ ಹರಡಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸುವಲ್ಲಿ ಪರಿಣಾಮಕಾರಿ ಪಾತ್ರವಹಿಸಲಿದ್ದಾರೆ ಎಂದರು. ಔರಂಗಾಬಾದ್ ಮತ್ತು ಪುಣೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಇದನ್ನು ಮಾಡಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ರಾಜ್ಯ ಸರ್ಕಾರಗಳಿಗೆ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ಎಚ್ಎಂ) ಅಡಿಯಲ್ಲಿ ತಕ್ಷಣದ ಹಾಗೂ ದೀರ್ಘ ಕಾಲದಲ್ಲಿ ಆರೋಗ್ಯ ವ್ಯವಸ್ಥೆ ಬಲವರ್ಧನೆಗೆ ಸಂಪೂರ್ಣ ನೆರವು ನೀಡಲಿದೆ’’ ಎಂದು ಡಾ. ಹರ್ಷವರ್ಧನ್ ಹೇಳಿದರು. ವೃದ್ಧರು ಸೇರಿದಂತೆ ಅತಿ ಹೆಚ್ಚಿನ ಜನಸಂಖ್ಯೆ ಅಪಾಯ ಎದುರಿಸುತ್ತಿರುವ ಕೆಲವು ಜಿಲ್ಲೆಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸಾಂಕ್ರಾಮಿಕವಲ್ಲದ ರೋಗಗಳಾದ ಮಧುಮೇಹ, ರಕ್ತದೊತ್ತಡ ಮತ್ತಿತರವುಗಳನ್ನು ಗುರುತಿಸಿ ಅವುಗಳಿಗೆ ನಿಗದಿತ ಚಿಕಿತ್ಸೆಗಳನ್ನು ನೀಡಬೇಕು ಎಂದರು. 65 ವರ್ಷ ಮೇಲ್ಪಟ್ಟ ಮತ್ತು ಯಾವುದೇ ಸಾಂಕ್ರಾಮಿಕ ರೋಗಗಳಿಲ್ಲದ ವ್ಯಕ್ತಿಗಳನ್ನು ಆದ್ಯತೆಯ ಮೇಲೆ ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳಲ್ಲಿ ತಪಾಸಣೆ ನಡೆಸುವುದನ್ನು ರಾಜ್ಯಗಳು ಖಾತ್ರಿಪಡಿಸಬೇಕು ಎಂದು ಅವರು ಕರೆ ನೀಡಿದರು. ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದ ಅವರು, (ಕೋವಿಡ್ ಅಲ್ಲದ ಆರೋಗ್ಯ ಸೇವೆಗಳಾದ ಗರ್ಭಿಣಿ ಮಹಳೆಯರಿಗೆ ಎಎನ್ ಸಿ, ರೋಗ ನಿರೋಧಕ ಲಸಿಕೆ ಅಭಿಯಾನ, ಟಿಬಿ ಪ್ರಕರಣಗಳ ಪತ್ತೆ ಮತ್ತು ಚಿಕಿತ್ಸೆ, ಡಯಾಲಿಸಿಸ್ ರೋಗಿಗಳಿಗೆ ರಕ್ತ ಮರುಪೂರಣ ಚಿಕಿತ್ಸೆ, ಕ್ಯಾನ್ಸರ್ ರೋಗಿಗಳ ಚಿಕಿತ್ಸೆ ಇತ್ಯಾದಿ) ಇವುಗಳನ್ನು ನಿರ್ಲಕ್ಷಿಸಬಾರದು. ಸಚಿವರು ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆ(ಎಚ್ಎಂಐಎಸ್) ಅಡಿಯಲ್ಲಿ ರಾಜ್ಯಗಳಲ್ಲಿ ಲಭ್ಯವಿರುವ ನಾನಾ ರೋಗಗಳ ಕುರಿತ ದತ್ತಾಂಶವನ್ನು ಬಳಸಿಕೊಂಡು ಅಪಾಯವನ್ನು ಗುರುತಿಸಿ, ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು.

ಡಾ. ಹರ್ಷವರ್ಧನ್ ಅವರು, ರಾಜ್ಯಗಳ ಮನವಿ ಮೇರೆಗೆ ಅಧಿಕಾರಿಗಳನ್ನೊಳಗೊಂಡ ಹೆಚ್ಚುವರಿ ತಂಡಗಳನ್ನು ಕೇಂದ್ರ ಸರ್ಕಾರ ನಿಯೋಜಿಸಲಿದೆ ಎಂದು ಭರವಸೆ ನೀಡಿದರು. ಅಲ್ಲದೆ ನ್ಯಾಷನಲ್ ಟೆಲಿಕನ್ಸಲ್ಟೇಷನ್ ಸೆಂಟರ್(ಸಿಒಎನ್ ಟಿಇಸಿ) ಮೂಲಕ ಕೋವಿಡ್-19 ರೋಗಿಗಳ ನಿರ್ವಹಣೆಗೆ ಕ್ಲಿನಿಕಲ್ ಮತ್ತು ಚಿಕಿತ್ಸೆಗೆ ಮಾರ್ಗದರ್ಶನ ಮಾಡಲು ದೆಹಲಿ ಏಮ್ಸ್ ನೀಡುವ ಬೆಂಬಲವನ್ನು ರಾಜ್ಯಗಳು ಬಳಸಿಕೊಳ್ಳಬೇಕು ಎಂದು ಹೇಳಿದರು. ನವದೆಹಲಿಯ ಏಮ್ಸ್ ವೈದ್ಯರು ಮತ್ತು ಪರಿಣಿತರು ಸಕಾಲದಲ್ಲಿ ನೆರವು ನೀಡಲಿದ್ದಾರೆ. ದೇಶದ ಯಾವುದೇ ಭಾಗದಿಂದ ಸಿಒಎನ್ ಟಿಇಸಿ ತಲುಪಲು ಏಕೈಕ ಮೊಬೈಲ್ ಸಂಖ್ಯೆ(+91 9115444155)ಗೆ ಕರೆ ಮಾಡಬಹುದು ಎಂದು ಹೇಳಿದರು.

ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಮತ್ತು 1921ಕ್ಕೆ ಮಿಸ್ಡ್ ಕಾಲ್ ನೀಡಿ ಆರೋಗ್ಯ ಸೇತು ಸಂವಾದಾತ್ಮಕ ಧ್ವನಿ ಪ್ರತಿಸ್ಪಂದನಾ ವ್ಯವಸ್ಥೆ(ಐವಿಆರ್ ಎಸ್)ಯನ್ನು ಜನಪ್ರಿಯಗೊಳಿಸಲು ರಾಜ್ಯಗಳು ಕ್ರಮ ಕೈಗೊಳ್ಳಬೇಕು ಎಂದ ಅವರು, ಇವುಗಳನ್ನು ಭಾರತದಾದ್ಯಂತ ಲ್ಯಾಂಡ್ ಲೈನ್ ಮತ್ತು ದೂರವಾಣಿ ಮೂಲಕ ಲಭ್ಯವಾಗುವಂತೆ ಜಾರಿಗೊಳಿಸಲಾಗಿದೆ ಎಂದರು. ವ್ಯವಸ್ಥೆಯನ್ನು ಬಳಕೆದಾರರಿಗೆ ಅನುಕೂಲವಾಗುವಂತೆ ಒಂದು ವೇಳೆ ಆತ ಅಥವಾ ಆಕೆಯಲ್ಲಿ ಸೋಂಕು ದೃಢಪ್ಟಟಿದ್ದರೂ ಅವರಿಗೆ ನೆರವಾಗುವಂತೆ ವಿನ್ಯಾಸಗೊಳಿಸಲಾಗಿದೆ ಎಂದರು.

ಕೇಂದ್ರ ಆರೋಗ್ಯ ಸಚಿವರು ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳು ಮತ್ತು ಆಯುಕ್ತರು ಕೈಗೊಂಡಿರುವ ಕೆಲವು ಉತ್ತಮ ಪದ್ಧತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಫೀವರ್ ಕ್ಲಿನಿಕ್ ಗಳ ಸ್ಥಾಪನೆ, ಕೊಳಚೆ ಪ್ರದೇಶಗಳಲ್ಲಿ ಕೈತೊಳೆಯುವ ಯಂತ್ರಗಳನ್ನು ಸ್ಥಾಪಿಸಿರುವುದು, ಪ್ರತಿಯೊಂದು ಕುಟುಂಬಕ್ಕೂ ಸಾಬೂನು ಮತ್ತು ಮಾಸ್ಕ್ ಗಳ ವಿತರಣೆ, ಗುಜರಾತ್ ಸೂರತ್ ಕೊಳೆಗೇರಿ ಪ್ರದೇಶಗಳಲ್ಲಿ ಕೊರೊನಾ ಯೋಧ ಸಮಿತಿಗಳನ್ನು ರಚಿಸಿರುವುದು ಸೇರಿ ಜಿಲ್ಲಾಡಳಿತಗಳ ವಿನೂತನ ಪ್ರಯತ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಡಾ. ಹರ್ಷವರ್ಧನ್ ಅವರು, ಅಂತಹ ಪದ್ಧತಿಗಳ ಕುರಿತು ಮಾಹಿತಿಯನ್ನು ವಿನಿಮಯ ಮಾಡಿಕೊಂಡು ಅವುಗಳನ್ನು ಇತರೆ ಜಿಲ್ಲೆಗಳಲ್ಲೂ ಅಳವಡಿಸಿಕೊಳ್ಳಬಹುದು. ಮೂಲಕ ಕೋವಿಡ್-19 ಎದುರಿಸಲು ಅಗತ್ಯವಿರುವ ಸಾಮೂಹಿಕ ಪ್ರಯತ್ನಗಳನ್ನು ಕೈಗೊಂಡಂತಾಗುತ್ತದೆ ಎಂದು ಹೇಳಿದ್ದಾರೆ.

ಶ್ರೀಮತಿ ಪ್ರೀತಿ ಸೂದನ್, ಕಾರ್ಯದರ್ಶಿ (ಎಚ್ಎಫ್ ಡಬ್ಲ್ಯೂ), ಶ್ರೀ ರಾಜೇಶ್ ಭೂಷಣ್, ಒಎಸ್ ಡಿ (ಎಚ್ಎಫ್ ಡಬ್ಲ್ಯೂ), ಶ್ರೀ ಸಂಜೀವ್ ಕುಮಾರ್, ವಿಶೇಷ ಕಾರ್ಯದರ್ಶಿ (ಆರೋಗ್ಯ), ಶ್ರೀಮತಿ ವಂದನಾ ಗುರ್ನಾನಿ, ಎಎಸ್ ಮತ್ತು ಎಂಡಿ (ಎನ್ಎಚ್ಎಂ), ಡಾ. ರಾಜೀವ್ ಗರ್ಗ್, ಡಿಜಿಎಚ್ಎಸ್, ಡಾ. ಮನೋಹರ್ ಅಗ್ ನಾನಿ, ಜಂಟಿ ಕಾರ್ಯದರ್ಶಿ (ಎಂಒಎಚ್ಎಫ್ ಡಬ್ಲ್ಯೂ), ಶ್ರೀ ಲವ ಅಗರವಾಲ್, ಜೆಎಸ್ (ಎಂಒಎಚ್ಎಫ್ ಡಬ್ಲ್ಯೂ), ಡಾ. ಎಸ್.ಕೆ. ಸಿಂಗ್, ನಿರ್ದೇಶಕರು, ಎನ್ ಸಿ ಡಿಸಿ ಮತ್ತು ಗುಜರಾತ್ ಮತ್ತು ಮಹಾರಾಷ್ಟ್ರಗಳ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಗುಜರಾತ್ ಮತ್ತು ಮಹಾರಾಷ್ಟ್ರದ ಎಲ್ಲ ಜಿಲ್ಲೆಗಳ ಜಿಲ್ಲಾ ಮ್ಯಾಜಿಸ್ಟ್ರೇಟ್, ಜಿಲ್ಲಾ ಕಲೆಕ್ಟರ್ ಮತ್ತು ಪಾಲಿಕೆ ಆಯುಕ್ತರುಗಳು ಸಭೆಯಲ್ಲಿ ಭಾಗವಹಿಸಿದ್ದರು.

***



(Release ID: 1621641) Visitor Counter : 165