ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಮಲೇರಿಯಾ, ಡೆಂಗ್ಯೂ ಮತ್ತು ಚಿಕನ್ ಗೂನ್ಯಾ ನಿಯಂತ್ರಣ ಕುರಿತು ದಿಲ್ಲಿಯಲ್ಲಿ ಡಾ. ಹರ್ಷವರ್ಧನ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಪರಾಮರ್ಶನಾ ಸಭೆ

Posted On: 05 MAY 2020 7:28PM by PIB Bengaluru

ಮಲೇರಿಯಾ, ಡೆಂಗ್ಯೂ ಮತ್ತು ಚಿಕನ್ ಗೂನ್ಯಾ ನಿಯಂತ್ರಣ ಕುರಿತು ದಿಲ್ಲಿಯಲ್ಲಿ ಡಾ. ಹರ್ಷವರ್ಧನ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಪರಾಮರ್ಶನಾ ಸಭೆ

ಕೋವಿಡ್ ನಿಂದಾಗಿ ಬದಲಾದ ಪರಿಸ್ಥಿತಿಯಲ್ಲಿ ಸೋಂಕು ರೋಗಗಳ ತಡೆಗೆ ನವೀನ ಜಾಗೃತಿ ಕಾರ್ಯಕ್ರಮಗಳು, ಸಮುದಾಯ ಭಾಗವಹಿಸುವಿಕೆ ಮತ್ತು ಎಲ್ಲಾ ಭಾಗೀದಾರರ ಸಹಕಾರದ ಪ್ರಾಮುಖ್ಯತೆಗೆ ಒತ್ತು

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಹರ್ಷವರ್ಧನ್ ಅವರು ತಮ್ಮ ಅಧ್ಯಕ್ಷತೆಯಲ್ಲಿ  ಸೋಂಕು ರೋಗಗಳಾದ  (ವಿ.ಬಿ.ಡಿ.ಎಸ್.)ಮಲೇರಿಯಾ, ಡೆಂಗ್ಯೂ ಮತ್ತು ಚಿಕನ್ ಗೂನ್ಯಾ ಗಳ ತಡೆ ಮತ್ತು ನಿಯಂತ್ರಣದ ಸಿದ್ದತಾ ಸ್ಥಿತಿಯ ಬಗ್ಗೆ ದಿಲ್ಲಿಯಲ್ಲಿ ಉನ್ನತ ಮಟ್ಟದ ಸಭೆಯನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದರು .

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀಮತಿ ರೇಖಾ ಶುಕ್ಲಾ ಅವರು ದಿಲ್ಲಿಯಲ್ಲಿ ಡೆಂಗ್ಯೂ, ಚಿಕೂನ್ ಗೂನ್ಯಾ ಮತ್ತು ಮಲೇರಿಯಾ ಪರಿಸ್ಥಿತಿಯ ಕುರಿತು ಹಾಗು ರೋಗಗಳನ್ನು ನಿಯಂತ್ರಿಸಲು ಕೈಗೊಂಡ ಕ್ರಮಗಳ ಬಗ್ಗೆ ಪ್ರದರ್ಶಿಕೆಯೊಂದನ್ನು ತೋರಿಸಿದರು. ಡೇಂಗ್ಯೂ (ವರ್ಗ 1 ) ಪ್ರಕರಣಗಳು ಜುಲೈಯಲ್ಲಿ ಕಾಣಿಸಿಕೊಳ್ಳಲು ಆರಂಭಿಸುತ್ತವೆ, ಅಕ್ಟೋಬರ್ ತಿಂಗಳಲ್ಲಿ ತೀವ್ರಗೊಳ್ಳುತ್ತವೆ ಮತ್ತು ನವೆಂಬರ್ ಡಿಸೆಂಬರ್ ತಿಂಗಳಲ್ಲಿ ಕಡಿಮೆಯಾಗುತ್ತವೆ ಎಂದವರು ಹೇಳಿದರು. ಅವರು ಚಿಕೂನ್ ಗೂನ್ಯಾ ಮತ್ತು ಮಲೇರಿಯಾ ಕುರಿತೂ ಮಾಹಿತಿ ಒದಗಿಸಿದರು ಮತ್ತು ವಿ.ಡಿ.ಎಸ್. ಗಳ ವಿರುದ್ದ ಹೋರಾಡಲು ಸಮರ್ಪಕ ತಂತ್ರಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು. ಅಂತರ ವಿಭಾಗ ಸಮನ್ವಯಕ್ಕಾಗಿ ಕ್ರಿಯಾ ಯೋಜನೆ ಅಗತ್ಯವಿದ್ದು, ರಾಜ್ಯ ಸರಕಾರ, ಮುನ್ಸಿಪಲ್ ಕಾರ್ಪೋರೇಶನ್ , ಕೇಂದ್ರೀಯ ಮತ್ತು ರಾಜ್ಯ ಸರಕಾರಿ ಆಸ್ಪತ್ರೆಗಳು , ರೈಲ್ವೇಗಳು ಮತ್ತು ಕಂಟೋನ್ಮೆಂಟ್ ಬೋರ್ಡುಗಳುಗಳನ್ನೊಳಗೊಂಡಂತೆ ಇದನ್ನು ರೂಪಿಸಬೇಕಾಗಿರುವ ಬಗ್ಗೆ ಚರ್ಚಿಸಲಾಯಿತು.

ವಿ.ಬಿ.ಡಿ.ಎಸ್. ಗಳ ತಡೆ ಮತ್ತು ನಿಯಂತ್ರಣ ಕುರಿತು ವ್ಯಾಪಕವಾದ ಜಾಗೃತಿಯ ಮಹತ್ವವನ್ನು ಒತ್ತಿ ಹೇಳಿದ ಕೇಂದ್ರ ಆರೋಗ್ಯ ಸಚಿವರು ಎಲ್ಲಾ ಭಾಗೀದಾರರಿಗೂ ಸಕ್ರಿಯ ಸಮುದಾಯ ಭಾಗವಹಿಸುವಿಕೆಯ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರಲ್ಲದೆ ಕೋವಿಡ್ -19 ವಿರುದ್ದ ಮುಂಜಾಗರೂಕತಾ ಕಾರ್ಯಕ್ರಮಗಳನ್ನು ಕೈಗೊಳ್ಳುವಾಗ  ಆರ್.ಡಬ್ಲ್ಯು.. ಗಳು, ಅಂಗಡಿ ಮುಂಗಟ್ಟುಗಳ ಸಂಘಟನೆಗಳ ಸಹಕಾರ ಪಡೆಯುವಂತೆ  ಸಲಹೆ ಮಾಡಿದರು.

ಮಲೇರಿಯಾ, ಚಿಕನ್ ಗೂನ್ಯಾ ಮತ್ತು ಡೆಂಗ್ಯೂ ವಿರುದ್ದ ಹೋರಾಡುವಾಗ ನಿರ್ದಿಷ್ಟ ಗುರಿ ಕೇಂದ್ರಿತ ಸುಧಾರಿತ ತಂತ್ರಗಳನ್ನು ಅನುಸರಿಸಬೇಕು , ನಮ್ಮ ಮುಖ್ಯ ಗುರಿ ಸೋಂಕು ವಾಹಕಗಳನ್ನು ನಿಯಂತ್ರಿಸುವುದಾಗಿರಬೇಕುಎಂದು ಆರೋಗ್ಯ ಸಚಿವರು ಹೇಳಿದರು. “ನಮ್ಮ ಸುತ್ತ ಮುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳಲು ಮತ್ತು ಏಡಿಸ್ ಸೊಳ್ಳೆಗಳನ್ನು ರಹಿತವಾಗಿಟ್ಟುಕೊಳ್ಳಲು ಸರಳ ಕ್ರಮಗಳನ್ನು ಅನುಸರಿಸಬಹುದು. ನಿಂತ ನೀರನ್ನು ಆಗಾಗ ಗಮನಿಸುತ್ತಿರಬೇಕು, ಅದನ್ನು ನಿವಾರಿಸಿ ಲಾರ್ವಾ ಕೇಂದ್ರಗಳನ್ನು ಸಮರ್ಪಕವಾಗಿ ನಿವಾರಿಸಬೇಕು. ಸೋಂಕುವಾಹಕಗಳ/ ಸೋಂಕುಕಾರಕ ಸೊಳ್ಳೆಗಳ  ನಿಯಂತ್ರಣ ಕಾರ್ಯಕ್ರಮವು ಸಮುದಾಯ ಭಾಗವಿಸುವಿಕೆ ಮತ್ತು ಮಾಲಕತ್ವಕ್ಕೆ ಸಂಬಂಧಿಸಿದುದಾಗಿದೆ ಎಂದವರು ಹೇಳಿದರು. “ ರೋಗಗಳನ್ನು ತಡೆಯಲು ಮತ್ತು ನಿಯಂತ್ರಿಸಲು ಎಲ್ಲಾ ಮಟ್ಟಗಳಲ್ಲೂ ಬದ್ದತೆ ಅಗತ್ಯ ಮತ್ತು ನಾವು ಸೊಳ್ಳೆಗಳ ಉತ್ಪಾದನೆಗೆ ಪರಿಸರವನ್ನು ರೂಪಿಸದಂತೆ ಖಾತ್ರಿಪಡಿಸುವ ಜವಾಬ್ದಾರಿಯೂ ನಮ್ಮದಾಗಿದೆ ಎಂದರು.

ವಿ.ಬಿ.ಡಿ.ಯು ವಾರ್ಷಿಕ ಸಮಸ್ಯೆ, ಬಾರಿ ಅದು ಇಡೀ ದೇಶ ಕೋವಿಡ್ -19 ಸ್ಪೋಟದ ಜೊತೆ ಹೋರಾಡುತ್ತಿರುವ ಸಂದರ್ಭದಲ್ಲಿ ಬಂದಿದೆ ಎಂದು ಹೇಳಿದ ಡಾ. ಹರ್ಷವರ್ಧನ್ “ 2015 ರಲ್ಲಿ ದಿಲ್ಲಿಯಲ್ಲಿ ಡೆಂಗ್ಯೂ ಗಂಭೀರ ಪ್ರಮಾಣದಲ್ಲಿತ್ತು, ಅದು 16,000 ಜನರನ್ನು ಬಾಧಿಸಿತ್ತು ಮತ್ತು 60 ಮಂದಿ ಮೃತಪಟ್ಟಿದ್ದರು. ಆಗಿನ ಸ್ಥಿತಿಗೆ  ಹೋಲಿಸಿದಾಗ ನಾವು ಈಗ ಉತ್ತಮ ಸ್ಥಿತಿಯಲ್ಲಿದ್ದೇವೆ, ನಗರದಲ್ಲಿ ಇದುವರೆಗೆ 50 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ ಆದಾಗ್ಯು ನಾವು ಡೆಂಗ್ಯೂ ವಿರುದ್ದ ಹೋರಾಟದ ನಮ್ಮ  ಧೋರಣೆಯಲ್ಲಿ ಸಂತೃಪ್ತಿಯ ಭಾವ ತಾಳುವುದು  ಬೇಡ ಎಂದು ಡಾ. ಹರ್ಷವರ್ಧನ್ಹೇಳಿದರು.

 ಸೋಂಕು ಮತ್ತು ರೋಗ ವಾಹಕಗಳ  ವರ್ಗಾವಣೆ ಸರಪಳಿ ತುಂಡರಿಸುವಲ್ಲಿ ಸಮುದಾಯ ಬೆಂಬಲ ಬಹಳ ಮುಖ್ಯ.ವಿ.ಬಿ.ಡಿ. ಗಳ ತಡೆ ಮತ್ತು ನಿಯಂತ್ರಣದಲ್ಲಿ ಸಮುದಾಯದಲ್ಲಿ ಜಾಗೃತಿಯನ್ನು ಉತ್ತೇಜಿಸಬೇಕಾಗಿದೆ ಎಂದು ಡಾ. ಹರ್ಷವರ್ಧನ್ ಅಭಿಪ್ರಾಯಪಟ್ಟರು.” ಇದು ಸಾಮೂಹಿಕ ಪ್ರಯತ್ನವಾಗಬೇಕು . ಮತ್ತು ಎಲ್ಲಾ ಮೂರೂ  ಹಂತಗಳಾದ-ಕೇಂದ್ರ ಸರಕಾರ  ಮತ್ತು ಅದರ ಏಜೆನ್ಸಿಗಳು - ರಾಷ್ಟ್ರ ಮಟ್ಟದಲ್ಲಿ,    ಹಾಗು ರಾಜ್ಯ ಮಟ್ಟದಲ್ಲಿ ರಾಜ್ಯ ಸರಕಾರಗಳು ಮತ್ತು ತಳ ಮಟ್ಟದಲ್ಲಿ ಸ್ಥಳೀಯ ಸಂಸ್ಥೆಗಳು ತಮ್ಮ ಪ್ರಯತ್ನಗಳನ್ನು ಏಕತ್ರಗೊಳಿಸಿ  ಸಾರ್ವಜನಿಕ ಆರೋಗ್ಯ ಚಟುವಟಿಕೆಗೆ ಸಮುದಾಯವನ್ನು ಒಗ್ಗೂಡಿಸಬೇಕು ಎಂದವರು ಹೇಳಿದರು.

ಹಿಂದಿನ  ವರ್ಷಗಳಲ್ಲಿ  ಶಾಲಾ ಮಕ್ಕಳು ವಿ.ಬಿ.ಡಿ ಗಳ ಕುರಿತು ಮಾಡಿದ ಜಾಗೃತಿ ಕಾರ್ಯಕ್ರಮಗಳಲ್ಲಿ ಮತ್ತು ಅವುಗಳ ಪ್ರಸರಣ ತಡೆಯಲ್ಲಿ ವಹಿಸಿದ ಶ್ಲಾಘನೀಯ  ಪಾತ್ರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಮೊದಲು ಶಾಲಾ ಮಕ್ಕಳು ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.ಆದರೆ ಈಗ ಎಲ್ಲಾ ಶಿಕ್ಷಣ ಸಂಸ್ಥೆಗಳು, ಕಾಲೇಜುಗಳು ಮತ್ತು ಶಾಲೆಗಳು ಕೋವಿಡ್ -19 ಸ್ಪೋಟದ ಕಾರಣದಿಂದಾಗಿ ಮುಚ್ಚಿರುವಾಗ, ಬಹುತೇಕ ಶಾಲಾ ಮಕ್ಕಳು ಮನೆಯಲ್ಲಿದ್ದಾರೆಎಂದರು. ನಿಟ್ಟಿನಲ್ಲಿ ಜನತೆ ಮುಂದೆ ಬರಬೇಕು ಎಂದು ಕರೆ ನೀಡಿದ ಅವರು ಲಾಕ್ ಡೌನ್ 3.0 ರಲ್ಲಿ ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳಲು ಮುಂದಾಗಬೇಕು, ಕಸ ಕಡ್ಡಿಗಳಲ್ಲಿ ನೀರು ಸಂಗ್ರಹವಾಗಲು ಬಿಡಬಾರದು ಬಳಸಲಾದ ಟಯರುಗಳಲ್ಲಿ, ಹೂವಿನ ಕುಂಡಗಳಲ್ಲಿ, ವಾಸ್ ಗಳಲ್ಲಿ , .ಸಿ. ಇತ್ಯಾದಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದರು. ರೋಗಗಳ ವಿರುದ್ದ ಹೋರಾಟದ ಸಂದರ್ಭದಲ್ಲಿ  ನಾಗರಿಕರು ಸ್ವಯಂ ಮುಂದೆ ಬಂದು ತಾವಾಗಿಯೇ ಸೂಪರ್ ಹೀರೋಗಳಾಗ ಬೇಕು ಎಂದರಲ್ಲದೆ ಮೂಲಕ ಕೋವಿಡ್ -19 ಇಂದಿನ  ಸ್ಥಿತಿಯಲ್ಲಿ ಅದರ ವಿರುದ್ದ ಹೋರಾಟ ಮಾಡುತ್ತಲೇ ರೋಗಗಳ ವಿರುದ್ದವೂ ಹೋರಾಟ ಮಾಡಿ ಸ್ವಾಸ್ಥ್ಯ ವೀರರಾಗಬೇಕು ಎಂದರು. ಕೋವಿಡ್ -19 ಪರಿಸ್ಥಿತಿಯಲ್ಲಿ ತಮ್ಮ ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೊಳ್ಳೆ ಉತ್ಪಾದನಾ ತಾಣಗಳನ್ನು ನಿಯಂತ್ರಿಸುವಲ್ಲಿ ನಾಗರಿಕರ ಪಾತ್ರ ಮಹತ್ವದ್ದಾಗಿದೆ  ಎಂದರು. ಸೊಳ್ಳೆ ಉತ್ಪಾದನಾ ತಾಣಗಳನ್ನು ತಪಾಸಣೆ ಮಾಡಲು ಅವಕಾಶ ಕೊಡದ ಆವರಣಗಳ ನಿವಾಸಿಗಳು ಇಡೀ ಪ್ರಕ್ರಿಯೆಯೇ ಹದಗೆಡಲು ಕಾರಣರಾಗಬಹುದು ಎಂದೂ ಅವರು ಅಭಿಪ್ರಾಯಪಟ್ಟರು.

ಮಲೇರಿಯಾ ಪ್ರಕರಣಗಳ ಕುರಿತಂತೆ ಮಾತನಾಡಿದ ಡಾ. ಹರ್ಷವರ್ಧನ್ ಅವರು ಮಲೇರಿಯಾವನ್ನು ಆರೋಗ್ಯಾಧಿಕಾರಿಗಳಿಗೆ ತಿಳಿಸಲೇ ಬೇಕಾದ ರೋಗವನ್ನಾಗಿ ಮಾಡಬೇಕು ಎಂದು ಸಲಹೆ ಮಾಡಿದರು. ದಿಲ್ಲಿ ಆರೋಗ್ಯ ಸಚಿವರಾದ ಶ್ರೀ ಸತ್ಯೇಂದ್ರ ಜೈನ್ ಅದನ್ನು ತಕ್ಷಣವೇ ಮಾಡುವುದಾಗಿ ಭರವಸೆ ನೀಡಿದರು.ಖಾಸಗಿ ಆಸ್ಪತ್ರೆಗಳು  ಸಹಿತ ಎಲ್ಲಾ ಆಸ್ಪತ್ರೆಗಳು ವಿ,ಬಿ.ಡಿ. ಗೆ ಸಂಬಂಧಿಸಿ ಸರಕಾರ ಮತ್ತು ಖಾಸಗಿ ಮಧ್ಯಪ್ರವೇಶಗಳನ್ನು ಮತ್ತು ರೋಗಗಳನ್ನು ತಡೆಯಲು/ಗುಣ ಪಡಿಸುವ ನಡೆಸುವ ಪ್ರಯತ್ನಗಳನ್ನು ಸಂಯೋಜಿತ ರೀತಿಯಲ್ಲಿ ನಡೆಸಬೇಕೆಂಬ ಸಲಹೆಯನ್ನೂ ಮಾಡಲಾಯಿತು.

ವಿ.ಬಿ.ಡಿ.ಗಳ ಪ್ರಕರಣಗಳನ್ನು ನಿರ್ಲಕ್ಷ ಮಾಡಬಾರದು ಎಂದು ಕೇಂದ್ರ ಸಚಿವರು ಕೇಂದ್ರ ಸರಕಾರದ ಆಸ್ಪತ್ರೆಗಳ ಪ್ರತಿನಿಧಿಗಳನ್ನು ಕೋರಿದರು. ರೋಗಗಳಿಗೆ ಲಸಿಕೆ ಇಲ್ಲದೇ ಇರುವುದರಿಂದ ಮತ್ತು ಕಟ್ಟು ನಿಟ್ಟಾದ ತಡೆ ಕ್ರಮಗಳಿಂದ ಹೋರಾಟವನ್ನು ಯಶಸ್ವಿಯಾಗಿ ನಡೆಸಬಹುದು ಎಂದ ಸಚಿವರು ದಿಲ್ಲಿ ಸರಕಾರಕ್ಕೆ ಅದರ ಸಿದ್ದತೆಗಳನ್ನು ಬಲಪಡಿಸಲು ಅವಶ್ಯ ಸರ್ವೇಕ್ಷಣಾ ಮತ್ತು ರೋಗ ಪತ್ತೆ ಕಿಟ್ ಗಳಿಗೆ ಸಂಬಂಧಿಸಿ ಎಲ್ಲಾ ಸಾಗಾಣಿಕೆ ಮತು ತಾಂತ್ರಿಕ ನೆರವನ್ನು ಒದಗಿಸಲು ಕೇಂದ್ರ ಸರಕಾರ ಕರ್ತವ್ಯ ಬದ್ದವಾಗಿದೆ ಎಂದರು. ಅಗತ್ಯ ಬಿದ್ದರೆ  ದಿಲ್ಲಿ ಸರಕಾರದ ಜೊತೆ ವೈದ್ಯರು ಮತ್ತು ಅರೆ ವೈದ್ಯಕೀಯ  ಸಿಬ್ಬಂದಿಗಳ ತರಬೇತಿ ಶಿಷ್ಟಾಚಾರವನ್ನು ಕೂಡಾ ಹಂಚಿಕೊಳ್ಳಬಹುದು ಎಂದವರು ಹೇಳಿದರು.

ದಿಲ್ಲಿ ಎನ್.ಸಿ.ಟಿ. ಲೆಫ್ಟಿನೆಂಟ್ ಗವರ್ನರ್ ಶ್ರೀ ಅನಿಲ್ ಬೈಜಾಲ್ ಅವರು ದಿಲ್ಲಿಯಲ್ಲಿ ಡೆಂಗ್ಯೂ, ಮಲೇರಿಯಾ, ಮತ್ತು ಚಿಕೂನ್ ಗೂನ್ಯಾ ತಡೆ ಮತ್ತು ನಿಯಂತ್ರಣಕ್ಕೆ ಗರಿಷ್ಟ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು. ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದರು.

ಎಂ..ಎಸ್. (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ) ಶ್ರೀ ಅಶ್ವಿನಿ ಕುಮಾರ್ ಚೌಬೇ, ದಿಲ್ಲಿ ಆರೋಗ್ಯ ಸಚಿವರಾದ ಶ್ರೀ ಸತ್ಯೇಂದ್ರ ಜೈನ್, ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀಮತಿ ಪ್ರೀತಿ ಸುಡಾನ್, ಭಾರತ ಸರಕಾರದ ಡಿ.ಜಿ.ಎಚ್.ಎಸ್.; ಎನ್.ಡಿ.ಎಂ.ಸಿ. ಅಧ್ಯಕ್ಷರು, ದಿಲ್ಲಿಯ ಎಲ್ಲಾ ಮೂರು ಮುನ್ಸಿಪಲ್ ಕಾರ್ಪೋರೇಶನ್ ಗಳ ಆಯುಕ್ತರು , ಜಿ.ಎನ್.ಸಿ.ಟಿ.ಡಿ. ಆರೋಗ್ಯ ಕಾರ್ಯದರ್ಶಿ , ದಿಲ್ಲಿ ಜಿಲ್ಲೆಗಳ ಎಲ್ಲಾ ಡಿ.ಎಂ. ಗಳು ,ದಿಲ್ಲಿಯ  ಎಲ್ಲಾ ಕೇಂದ್ರ ಮತ್ತು ರಾಜ್ಯ ಸರಕಾರಿ ಆಸ್ಪತ್ರೆಗಳ ಮುಖ್ಯಸ್ಥರು, ಸುಪರಿಂಟೆಂಡೆಂಟ್ ಗಳು, ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು, ಮತ್ತು ರಾಷ್ಟ್ರೀಯ ಸೋಂಕು ರೋಗಗಳ  (ಎನ್.ವಿ. ಬಿ.ಡಿ.ಸಿ.ಪಿ.) ಕಾರ್ಯಕ್ರಮದ ಹಿರಿಯ ಅಧಿಕಾರಿಗಳು, ದಿಲ್ಲಿ ಎನ್.ಸಿ.ಟಿ. ಸರಕಾರದ ಹಿರಿಯ ಅಧಿಕಾರಿಗಳು ಮತ್ತು ದಿಲ್ಲಿ ಮುನ್ಸಿಪಲ್ ಕಾರ್ಪೋರೇಶನ್ ಗಳ ಪ್ರತಿನಿಧಿಗಳು ಮತ್ತು ಇತರ ಅಧಿಕಾರಿಗಳು ಭಾಗವಹಿಸಿದ್ದರು.

***



(Release ID: 1621511) Visitor Counter : 221