ಪ್ರವಾಸೋದ್ಯಮ ಸಚಿವಾಲಯ

“ದೇಖೋ ಅಪ್ನಾ ದೇಶ್” ಸರಣಿಯಡಿ 14 ನೇ ವೆಬ್‌ ನಾರ್

Posted On: 04 MAY 2020 1:30PM by PIB Bengaluru

ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ “ದೇಖೋ ಅಪ್ನಾ ದೇಶ್” ಸರಣಿಯಡಿ 14 ನೇ ವೆಬ್‌ ನಾರ್ ‘ಹಿಮಾಲಯದಿಂದ ಬಂಗಾಳ’ (Bengal by the Himalayas) ಶೀರ್ಷಿಕೆಯಲ್ಲಿ ಡಾರ್ಜಿಲಿಂಗ್‌ ನ ಶ್ರೀಮಂತ ಪರಂಪರೆಯನ್ನು ಪ್ರಸ್ತುತ ಪಡಿಸಿದೆ

 

ಭಾರತೀಯ ಹಿಮಾಲಯವು ಒಂದು ಸಂಪೂರ್ಣ ಪ್ರವಾಸೋದ್ಯಮ ತಾಣವಾಗಿದ್ದು, ಇದನ್ನು ವರ್ಷಪೂರ್ತಿ ವಿವಿಧ ಅನುಭವಗಳಿಗಾಗಿ ಅನ್ವೇಷಿಸಿದರೂ ಅದು ತೀರದ ಸೊಬಗು. ಹಿಮಾಲಯನ್ ಶ್ರೇಣಿಯ 73%ರಷ್ಟು ಭಾಗ ಭಾರತದಲ್ಲಿದೆ. ಹಿಮಾಲಯವು ಕಠಿಣ ಸಾಹಸದಿಂದ ಮೃದು ಸಾಹಸವರೆಗೆ, ಶ್ರೀಮಂತ ಸಸ್ಯ ಮತ್ತು ಪ್ರಾಣಿಗಳಿಂದ ಜೈವಿಕ ವೈವಿಧ್ಯತೆಯ ತಾಣಗಳು, ಎತ್ತರದ ಶಿಖರಗಳು ಸುಂದರವಾದ ಸರೋವರಗಳು, ವೈವಿಧ್ಯಮಯ ಸಂಸ್ಕೃತಿಯಿಂದ ಆಧ್ಯಾತ್ಮಿಕತೆ ಮತ್ತು ಸ್ವಾಸ್ಥ್ಯದ ಕ್ಷೇತ್ರಕ್ಕೆ - ಹೀಗೆ ಭಾರತದಲ್ಲಿ ಒಂದು ವರ್ಷದ ಪ್ರವಾಸೋದ್ಯಮಕ್ಕೆ ಅವಕಾಶವನ್ನು ಒದಗಿಸುತ್ತದೆ. ಹಿಮಾಲಯನ್ ಶ್ರೇಣಿ ವರ್ಷಪೂರ್ತಿ ಸುತ್ತಿದರೂ ಮುಗಿದ ಪ್ರವಾಸ ಕಥನ.

ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ “ನೋಡಿ ನಮ್ಮ ದೇಶವನ್ನು ( ಡೆಖೋ ಅಪ್ನಾ ದೇಶ್ ) ” ಸರಣಿಯಡಿ ವೆಬ್ನಾರ್‌ನ 14 ನೇ ಅಧಿವೇಶನವು ಮೇ 20, ನೇ 2020 ರಂದು ಹಿಮಾಲಯದಿಂದ ಬಂಗಾಳ’ ಎಂಬ ಶೀರ್ಷಿಕೆಯಲ್ಲಿ ಜರುಗಿತು. ಇದರಲ್ಲಿ ಭಾಗವಹಿಸಿದವರನ್ನು ಡಾರ್ಜಿಲಿಂಗ್ ಚಹಾದ ಇತಿಹಾಸ, ಕಥೆ, ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ (ಡಿ.ಎಚ್‌.ಆರ್) ಅಥವಾ ಟಾಯ್ ಟ್ರೈನ್, ಚಾರಣಗಳು ಮತ್ತು ಹಾದಿಗಳು, ಡಾಕ್ ಬಂಗಲೆಗಳು ಮತ್ತು ಚಾರ್ಟರ್ ರೈಲಿನ ಪರಂಪರೆ, ಗ್ರಾಮ ಸಂಸ್ಕೃತಿಗಳು, ಹೋಂ ಸ್ಟೇಗಳು..... ಮುಂತಾದ ಡಾರ್ಜಿಲಿಂಗ್‌ನ ಆಕರ್ಷಣೆಗಳಿಗೆ ಕರೆದೊಯ್ಯುವ ಪ್ರಯತ್ನವನ್ನು ಶ್ರೀ ಸುಪ್ರತಿಮ್ (ರಾಜ್) ಬಸು, ಹೆಲ್ಪ್ ಟೂರಿಸಂ ಪ್ರೈ. ಲಿಮಿಟೆಡ್, ಅವರು ಮಾಡಿದರು.

ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಹಿಮಾಲಯವನ್ನು ಪ್ರವಾಸೋದ್ಯಮ ತಾಣವಾಗಿ ಉತ್ತೇಜಿಸುವುದರಿಂದ ಭಾರತವನ್ನು ವರ್ಷಪೂರ್ತಿ ಪ್ರಯಾಣದ ತಾಣವಾಗಿ ವ್ಯವಹಾರಿಕವಾಗಿ ಮಾರಾಟ ಮಾಡಲು ಸಾಧ್ಯವಾಗಬಹುದು, ಏಕೆಂದರೆ ಭಾರತೀಯ ಹಿಮಾಲಯವು ವರ್ಷಪೂರ್ತಿ ಪ್ರಯಾಣಿಕರಿಗೆ ಅವಕಾಶಗಳನ್ನು ಒದಗಿಸುತ್ತದೆ. ಪ್ರವಾಸೋದ್ಯಮ ಸಚಿವಾಲಯ, ಸ್ವದೇಶ ದರ್ಶನ ಯೋಜನೆಯಡಿ ದೇಶದಲ್ಲಿ ವಿಷಯಾಧಾರಿತ ವೃತ್ತಗಳನ್ನು ಯೋಜಿತ ಮತ್ತು ಆದ್ಯತೆಯ ರೀತಿಯಲ್ಲಿ ಅಭಿವೃದ್ಧಿಪಡಿಸುತ್ತಿದೆ. ಈ ಯೋಜನೆಯಡಿ ಹಲವಾರು ಗುರುತಿಸಲ್ಪಟ್ಟ ಪ್ರವಾಸೋದ್ಯಮ ಕುರಿತ ವೃತ್ತಗಳಲ್ಲಿ ಹಿಮಾಲಯನ್ ವೃತ್ತ ಕೂಡಾ ಅಂತಹ ಒಂದು ವಿಷಯವಾಗಿದೆ.

ದೇಶದಲ್ಲಿ ಸಾಹಸ ಪ್ರವಾಸೋದ್ಯಮವನ್ನು ಉತ್ತೇಜಿಸುವ ಐತಿಹಾಸಿಕ ಹೆಜ್ಜೆಯಲ್ಲಿ ಭಾರತ ಸರ್ಕಾರವು 2019 ರಲ್ಲಿ ಪರ್ವತಾರೋಹಣಕ್ಕಾಗಿ 100 ಹೊಸ ಶಿಖರಗಳನ್ನು ತೆರೆಯಿತು.

ಮೇ 2, 2020 ರಂದು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ “ನೋಡಿ ನಮ್ಮ ದೇಶವನ್ನು ( ಡೆಖೋ ಅಪ್ನಾ ದೇಶ್ )” ವೆಬ್‌ನಾರ್ ಸರಣಿಯು ಹಿಮಾಲಯದ ಬಂಗಾಳದ ಕಥೆಗಳನ್ನು ಪ್ರದರ್ಶಿಸುವ ಮೂಲಕ ತನ್ನ ಸರಣಿಯಲ್ಲಿ 14 ನೇ ಅಧಿವೇಶನವನ್ನು ಪೂರ್ತಿಗೊಳಿಸಿತು.

ವೈಶಿಷ್ಟ್ಯಪೂರ್ಣಸರಣಿಯ ವೆಬ್‌ನಾರ್‌ಗಳ ಹಿಂದಿನ ಭಾಗಗಳು ಈಗ https://www.youtube.com/channel/UCbzIbBmMvtvH7d6Zo_ZEHDA/ ನಲ್ಲಿ ಲಭ್ಯ ಮತ್ತು ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ಎಲ್ಲಾ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಕೂಡಾ ಲಭ್ಯವಿದೆ.

ಮುಂದಿನ ವೆಬ್‌ನಾರ್ “ಪಂಜಾಬ್ –ಬಿಯಾಂಡ್ ದಿ ಬ್ರೋಚರ್ಸ್” ಎಂಬ ವಿಷಯವನ್ನು ಹೊಂದಿದೆ ಮತ್ತು ಇದು ಮೇ 5, 2020 ರಂದು ಬೆಳಿಗ್ಗೆ 11.00 ಕ್ಕೆ ಪ್ರಸ್ತುತಿಯಾಗಲಿದೆ

***



(Release ID: 1620975) Visitor Counter : 195