ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಇಪಿಎಫ್‌ಒ ನೌಕರರಿಂದ ಪಿಎಂ ಕೇರ್ಸ್ ನಿಧಿಗೆ 2.5 ಕೋಟಿ ರೂಪಾಯಿಗಳ ದೇಣಿಗೆ
प्रविष्टि तिथि:
03 MAY 2020 5:12PM by PIB Bengaluru
ಇಪಿಎಫ್‌ಒ ನೌಕರರಿಂದ ಪಿಎಂ ಕೇರ್ಸ್ ನಿಧಿಗೆ 2.5 ಕೋಟಿ ರೂಪಾಯಿಗಳ ದೇಣಿಗೆ
ಕೋವಿಡ್-19 ಸಾಂಕ್ರಾಮಿಕ ರೋಗದ ರಾಷ್ಟ್ರೀಯ ಬಿಕ್ಕಟ್ಟನ್ನು ಎದುರಿಸುವಲ್ಲಿ ಸರ್ಕಾರದ ಉಪಕ್ರಮವನ್ನು ಬೆಂಬಲಿಸಲು ನೌಕರರ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಒ) ನೌಕರರೂ ಸಹ ಮುಂದೆ ಬಂದಿದ್ದಾರೆ ಮತ್ತು ಒಂದು ದಿನದ ಸಂಬಳವನ್ನು ಅಂದರೆ ಸುಮಾರು ರೂ.2.5 ಕೋಟಿ ರೂಪಾಯಿಗಳನ್ನು ಪಿಎಂ ಕೇರ್ಸ್ ನಿಧಿಗೆ ಸ್ವಯಂಪ್ರೇರಣೆಯಿಂದ ಕೊಡುಗೆಯಾಗಿ ನೀಡಿದರು. ವಿಶ್ವದ ಅತಿದೊಡ್ಡ ಸಾಮಾಜಿಕ ಭದ್ರತಾ ಸಂಸ್ಥೆಗಳಲ್ಲಿ ಒಂದಾದ ಇಪಿಎಫ್‌ಒ ರಾಷ್ಟ್ರದ ಸೇವೆಯಲ್ಲಿ ಎಲ್ಲ ರೀತಿಯಲ್ಲೂ ಬದ್ಧವಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಸಾಂಕ್ರಾಮಿಕ ರೋಗವೆಂದು ಘೋಷಿಸಿರುವ ಕೋವಿಡ್-19, ಲಕ್ಷಾಂತರ ಭಾರತೀಯರ ಆರೋಗ್ಯ ಮತ್ತು ಆರ್ಥಿಕ ಭದ್ರತೆಗೆ ಗಂಭೀರ ಸವಾಲುಗಳನ್ನು ಒಡ್ಡಿದೆ. ಯಾವುದೇ ರೀತಿಯ ತುರ್ತು ಅಥವಾ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುವ ಪ್ರಾಥಮಿಕ ಉದ್ದೇಶದಿಂದ ಭಾರತ ಸರ್ಕಾರವು ‘ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿ ಪರಿಹಾರ’ (ಪಿಎಂ ಕೇರ್ಸ್ ಫಂಡ್) ಹೆಸರಿನಲ್ಲಿ ಸಾರ್ವಜನಿಕ ದತ್ತಿ ಟ್ರಸ್ಟ್ ಅನ್ನು ಸ್ಥಾಪಿಸಿದೆ.
ಪಿಎಂಜಿಕೆವೈ ಪ್ಯಾಕೇಜ್ ಅಡಿಯಲ್ಲಿ ಕೋವಿಡ್ ಹಕ್ಕುಗಳು ಸೇರಿದಂತೆ ಇಪಿಎಫ್ ವಾಪಸಾತಿ ಕ್ಲೈಮ್ ಗಳನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸುವ ಮೂಲಕ ಪರಿಹಾರವನ್ನು ಒದಗಿಸಲು ಹೆಚ್ಚುವರಿ ಪ್ರಯತ್ನಗಳನ್ನು ಮಾಡುವ ಮೂಲಕ ಇಪಿಎಫ್‌ಒ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹಕರಿಸುತ್ತಿದ್ದಾರೆ.
***
(रिलीज़ आईडी: 1620855)
आगंतुक पटल : 264