ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ಆಯುಷ್ ವಲಯ ಸಮರ್ಥವಾಗಿದ್ದು ಭಾರತವನ್ನು ಆರ್ಥಿಕ ಸೂಪರ್ ಪವರ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲದು: ಶ್ರೀ ನಿತಿನ್ ಗಡ್ಕರಿ

Posted On: 30 APR 2020 6:01PM by PIB Bengaluru

ಆಯುಷ್ ವಲಯ ಸಮರ್ಥವಾಗಿದ್ದು ಭಾರತವನ್ನು ಆರ್ಥಿಕ ಸೂಪರ್ ಪವರ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲದು: ಶ್ರೀ ನಿತಿನ್ ಗಡ್ಕರಿ

ಆಯುಷ್ ವಲಯವನ್ನು ಉತ್ತೇಜಿಸಲು ಆಯುಷ್ ಮತ್ತು ಎಂ.ಎಸ್.ಎಂ.. ಸಚಿವಾಲಯಗಳ ಆಯುಷ್ ಉದ್ಯಮಶೀಲತಾ ಕಾರ್ಯಕ್ರಮ ಆರಂಭ

 

ಭಾರತದ ಆಯುಷ್ ಪದ್ದತಿಗಳು ಭಾರೀ ಸಾಮರ್ಥ್ಯವನ್ನು ಹೊಂದಿದ್ದು, ಭಾರತವನ್ನು ಸೂಪರ್ ಪವರ್ ಮಾಡುವಲ್ಲಿ ಬಹಳ ಸಹಾಯ ಮಾಡಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು ಹಾಗು ಎಂ.ಎಸ್.ಎಂ.. ಸಚಿವರಾದ ಶ್ರೀ ನಿತಿನ್ ಗಡ್ಕರಿ ಹೇಳಿದ್ದಾರೆ. ಭಾರತದಲ್ಲಿ ಪರ್ಯಾಯ ಪದ್ದತಿಗಳ ಚಿಕಿತ್ಸೆ ಮತ್ತು ರೋಗ ಗುಣಪಡಿಸುವಿಕೆ ಶತಮಾನಗಳಿಂದ ಇದೆ, ಮತ್ತು ಅದು ಜನಪ್ರಿಯಗೊಳ್ಳುತ್ತಿದೆ ಎಂದವರು ಹೇಳಿದರು. ಆಯುಷ್ ವಲಯದ ಬೆಳವಣಿಗೆಗೆ ಸಹಾಯ ಮಾಡುವ ವಿಸ್ತ್ರತ ಸಂಶೋಧನೆ ಮತ್ತು ಅನ್ವೇಷಣೆಯನ್ನು ನಡೆಸುವಂತೆ ಅವರು ಕರೆ ನೀಡಿದರು. ಆಯುಷ್ ಸಚಿವಾಲಯ ಮತ್ತು ಕಿರು, ಸಣ್ಣ, ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು ಜಂಟಿಯಾಗಿ ದೇಶದಲ್ಲಿ ಆಯುಷ್ ವಲಯವನ್ನು ಎಂ.ಎಸ್.ಎಂ.. ಸಚಿವಾಲಯದ ವಿವಿಧ ಯೋಜನೆಗಳ ಅಡಿಯಲ್ಲಿ ಉತ್ತೇಜಿಸುವುದಕ್ಕಾಗಿ ಆಯೋಜಿಸಿದ್ದ ಆಯುಷ್ ಉದ್ಯಮಶೀಲತಾ ಅಭಿವೃದ್ದಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶ್ರೀ ಗಡ್ಕರಿ ಅವರು ಮಾತನಾಡಿದರು. ಭಾರತೀಯ ಆಯುರ್ವೇದ , ಹೋಮಿಯೋಪತಿ, ಯೋಗ, ಸಿದ್ದ ಗಳನ್ನು ದೊಡ್ಡ ಮಟ್ಟದಲ್ಲಿ ಉತ್ತೇಜಿಸಬೇಕಾದ ಅಗತ್ಯವಿದೆ ಎಂಬುದನ್ನವರು ಒತ್ತಿ ಹೇಳಿದರು.

ಭಾರತೀಯ ಆಯುರ್ವೇದ , ಯೋಗ, ಹೋಮಿಯೋಪತಿ, ಸಿದ್ದ ಪದ್ದತಿಗಳಿಗೆ ಇತರ ದೇಶಗಳಲ್ಲಿ ಭಾರೀ ಬೇಡಿಕೆ ಇದೆ ಎಂದ ಅವರು ಹಾಲಿ ಇರುವ ಉದ್ಯಮಪತಿಗಳು ಅವಕಾಶವನ್ನು ಬಳಸಿಕೊಂಡು ಅಲ್ಲಿ ಅವರ ಕ್ಲಿನಿಕ್ ಗಳನ್ನು ತೆರೆದು ರಫ್ತನ್ನು ಬೆಂಬಲಿಸಬೇಕು ಎಂದರು.

ಜಾಗತಿಕವಾಗಿ ಆಯುರ್ವೇದ ಚಿಕಿತ್ಸೆ ಮತ್ತು ಯೋಗಕ್ಕೆ ಭಾರೀ ಬೇಡಿಕೆ ಇದೆ, ಅದು ಇನ್ನೂ ವಿಸ್ತರಿಸುತ್ತಿದೆ ಎಂದ ಅವರು ಬೇಡಿಕೆಯನ್ನು ಪ್ರಖ್ಯಾತರ ಮಾರ್ಗದರ್ಶನದಡಿಯಲ್ಲಿ ತರಬೇತಿ ಪಡೆದ ಮಾನವ ಶಕ್ತಿಯನ್ನು ಹೆಚ್ಚಿಸುವುದರ ಮೂಲಕ ಈಡೇರಿಸಬಹುದು ಎಂದರು.

ಆಯುಷ್ ವಲಯವನ್ನು ಬಲಪಡಿಸುವ , ಹೆಚ್ಚು ಉದ್ಯಮಗಳನ್ನು ರೂಪಿಸುವ, ಭಾರತೀಯ ಆರ್ಥಿಕತೆಗೆ ಉದ್ಯೋಗಗಳನ್ನು ರೂಪಿಸುವ ಕಾರ್ಯಕ್ರಮಗಳನ್ನು ಆರಂಭಿಸಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದರು. ಆಯುರ್ವೇದದ ಕಚ್ಚಾ ವಸ್ತುಗಳು ಸಾಮಾನ್ಯವಾಗಿ ಅರಣ್ಯದಲ್ಲಿ , ಗ್ರಾಮೀಣ ಪ್ರದೇಶಗಳಲ್ಲಿ, ಬುಡಕಟ್ಟು ಪ್ರದೇಶಗಳಲ್ಲಿ , ಅಭಿವೃದ್ದಿ ಆಶಯದ ಜಿಲ್ಲೆಗಳಲ್ಲಿ ದೊರೆಯುತ್ತವೆ ಮತ್ತು ಅಲ್ಲಿ ಸಂಸ್ಕರಣಾ ಘಟಕಗಳ ಆವಶ್ಯಕತೆ ಇದೆ, ಉದ್ಯೋಗ ಸೃಷ್ಟಿಯ ಗುಚ್ಚಗಳಿವೆ, ಉದ್ಯಮ ಅಭಿವೃದ್ದಿ, ಸ್ವ ಉದ್ಯೋಗಕ್ಕೂ ಅವಕಾಶಗಳಿವೆ ಎಂದವರು ನುಡಿದರು.

ತರಬೇತಿ ಪಡೆದ ಯೋಗ ತಜ್ಞರು/ ತರಬೇತುದಾರರನ್ನು ಅಭಿವೃದ್ದಿ ಮಾಡಬೇಕಾದ ಆವಶ್ಯಕತೆಯನ್ನು ಪ್ರತಿಪಾದಿಸಿದ ಶ್ರೀ ಗಡ್ಕರಿ ಅವರು ಇದಕ್ಕಾಗಿ ಪ್ರಖ್ಯಾತ ತರಬೇತಿ ಸಂಸ್ಥೆಗಳ ಸಹಯೋಗದಲ್ಲಿ ಕೋರ್ಸುಗಳನ್ನು ಆರಂಭಿಸಬಹುದು ಎಂದರು. ಯೋಗವನ್ನು, ಆಯುರ್ವೇದವನ್ನು ಮತ್ತು ಸಮತೋಲಿತ ಆಹಾರ ಪದ್ದತಿಯನ್ನು ಅಳವಡಿಸಿಕೊಳ್ಳುವುದರ ಮೂಲಕ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ತರುವುದರತ್ತ ಅವರು ಗಮನ ಸೆಳೆದರು. ಪರಿಹಾರ ಒದಗಿಸುವಂತಹ ಸಾಮರ್ಥ್ಯದ ನವೀನ / ಪರ್ಯಾಯ ಚಿಕಿತ್ಸೆಗಳನ್ನು ಸೂಕ್ತ ಕೌಶಲ್ಯ ಅಭಿವೃದ್ದಿಯನ್ನು ಅಳವಡಿಸಿಕೊಂಡು ಒದಗಿಸಬೇಕು, ಇದರಿಂದ ಚಿಕಿತ್ಸೆಗಳು ಎಲ್ಲರಲ್ಲೂ ಜನಪ್ರಿಯಗೊಳ್ಳುವುದಕ್ಕೆ ಸಾಧ್ಯವಿದೆ ಎಂದವರು ಹೇಳಿದರು.

ಆಯುಷ್ ಸಚಿವಾಲಯದ ಎಂ..ಎಸ್. (ಪ್ರಭಾರ) ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್ , ಎಂ.ಎಸ್.ಎಂ.. ಎಂ..ಎಸ್. ಶ್ರೀ ಪ್ರತಾಪ ಸಿಂಗ್ ಸಾರಂಗಿ, ಉಭಯ ಸಚಿವಾಲಯಗಳ ಕಾರ್ಯದರ್ಶಿಗಳು, ಎಂ.ಎಸ್.ಎಂ.. ಅಭಿವೃದ್ದಿ ಆಯುಕ್ತರು ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಂದರ್ಭದಲ್ಲಿ ಮಾತನಾಡಿದ ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್ ಅವರು ಎಂ.ಎಸ್.ಎಂ.. ಮತ್ತು ಆಯುಷ್ ಸಚಿವಾಲಯ ಮಾಡಿರುವ ಪ್ರಯತ್ನಗಳನ್ನು ಶ್ಲಾಘಿಸಿದರಲ್ಲದೆ ಜಾಗತಿಕ ಮಟ್ಟದಲ್ಲಿ ಆಯುಷ್ ನ್ನು ದೊಡ್ಡ ಮಟ್ಟದಲ್ಲಿ ಪ್ರಾಯೋಜಿಸಲು ಇಂತಹದೇ ಸಹಕಾರವನ್ನು ಎದುರು ನೋಡುತ್ತಿರುವುದಾಗಿ ಹೇಳಿದರು. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ಆಯುಷ್ ಸಚಿವಾಲಯವು ಕೈಗೊಂಡ ಕ್ರಮಗಳನ್ನು ವಿವರಿಸಿದರು. ಎಂ.ಎಸ್.ಎಂ.. ಸಹಾಯಕ ಸಚಿವರಾದ ಶ್ರೀ ಪ್ರತಾಪ ಚಂದ್ರ ಸಾರಂಗಿ ಅವರು ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ಆಯುಷ್ ವಲಯವನ್ನು ಉತ್ತೇಜಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರಲ್ಲದೆ ಉಭಯ ಸಚಿವಾಲಯಗಳ ನಡುವೆ ಬೃಹತ್ ಪ್ರಮಾಣದ ನಿಕಟ ಸಮನ್ವಯವನ್ನು ಸಲಹೆ ಮಾಡಿದರು. ಎಂ.ಎಸ್.ಎಂ.. ವಿಶೇಷ ಕಾರ್ಯದರ್ಶಿ ಮತ್ತು ಅಭಿವೃದ್ದಿ ಆಯುಕ್ತರು ಸಮನ್ವಯದ ಹಿನ್ನೆಲೆ; ಆಯುಷ್ ಉತ್ತೇಜನಕ್ಕೆ ಎಂ.ಎಸ್.ಎಂ.. ಸಚಿವಾಲಯವು ಹಾಲಿ ಇರುವ ಸಚಿವಾಲಯದ ಯೋಜನೆಗಳ ಜೊತೆ ರೂಪಿಸಿರುವ ಕ್ರಿಯಾ ಯೋಜನೆಯ ಬಗ್ಗೆ ತಿಳಿಸಿದರು.

ಆಯುಷ್ ನಲ್ಲಿ ಆಯುರ್ವೇದ, ಯೋಗ, ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ದ ಮತ್ತು ಹೋಮಿಯೋಪತಿ ವೈದ್ಯಪದ್ದತಿಗಳು ಅಡಕಗೊಂಡಿವೆ. ಆಯುಷ್ ಪ್ರಮುಖ ಗುಚ್ಚಗಳೆಂದರೆ: ಅಹ್ಮದಾಬಾದ್, ಹುಬ್ಬಳ್ಳಿ, ತ್ರಿಶೂರ್, ಸೋಲಾನ್, ಇಂದೋರ್, ಜೈಪುರ, ಕಾನ್ಪುರ, ಕಣ್ಣೂರು, ಕರ್ನಾಲ್. ಕೋಲ್ಕೊತ್ತಾ, ನಾಗಪುರ.

ವಲಯವು ಅಸಂಘಟಿತ ವಲಯವಾಗಿ , ಉತ್ತಮ ಉತ್ಪಾದನಾ ಪದ್ದತಿಯ ಕೊರತೆ , ಗುಣಮಟ್ಟ ವ್ಯವಸ್ಥೆಯ ಕೊರತೆ, ಪರೀಕ್ಷೆ ಇತ್ಯಾದಿಗಳು, ಸಾಂಪ್ರದಾಯಿಕ ಮಾರುಕಟ್ಟೆ ಪದ್ದತಿಗಳು, ರಫ್ತಿಗೆ ಅತ್ಯಲ್ಪ ಅವಕಾಶ , ಉತ್ತೇಜನ ಕಾರ್ಯಕ್ರಮಗಳು ಮತ್ತು ಬೆಂಬಲದ ಕೊರತೆಯಂತಹ ಸವಾಲುಗಳನ್ನು ಎದುರಿಸುತ್ತಿದೆ.

ಇಂದು ನಡೆದ ಕಾರ್ಯಕ್ರಮವು ಆಯುಷ್ ವಲಯವು ಎದುರಿಸುತ್ತಿರುವ ಸವಾಲುಗಳನ್ನು ದಾಟಿಕೊಳ್ಳುವ ಕ್ರಿಯಾ ಯೋಜನೆಯ ಭಾಗವಾಗಿದೆ. ವಿವಿಧ ಆನ್ ಲೈನ್ / ಸಾಮಾಜಿಕ ಮಾಧ್ಯಮಗಳ ಮೂಲಕ ಕಾರ್ಯಕ್ರಮದಲ್ಲಿ ಆಯುಷ್ ಆಧಾರಿತ ಸುಮಾರು 1000 ಎಂ.ಎಸ್.ಎಂ..ಗಳು ಇದರಲ್ಲಿ ಭಾಗವಹಿಸಿದ್ದವು. ಕಾರ್ಯಕ್ರಮವು ಸಾಮಾಜಿಕ ಮಾಧ್ಯಮಗಳ ವೇದಿಕೆಗಳಲ್ಲಿ ಏಕಕಾಲಕ್ಕೆ ನೇರ ಪ್ರಸಾರಗೊಂಡಿತ್ತು.

ಎರಡೂ ಸಚಿವಾಲಯಗಳು ಆಯುಷ್ ವಲಯವನ್ನು ಉತ್ತೇಜಿಸಲು ಕ್ರಿಯಾ ಯೋಜನೆಯನ್ನು ರೂಪಿಸಿವೆ. ಇದರನ್ವಯ ತಿಳುವಳಿಕಾ ಒಡಂಬಡಿಕೆಗೆ ಕೆಲವು ದಿನಗಳ ಹಿಂದೆ ಎಂ./. ಆಯುಷ್ ಮತ್ತು ಎಂ/ ಎಂ.ಎಸ್.ಎಂ. .ಗಳ ನಡುವೆ ಅಂಕಿತ ಹಾಕಲಾಗಿದೆ. ಉತ್ತೇಜನಕ್ಕಾಗಿ ಮುಂದಿನ ಹಾದಿಯನ್ನು ರೂಪಿಸಲಾಗಿದ್ದು, ಅದು ಆವಶ್ಯಕತೆಯ ಮೌಲ್ಯಮಾಪನ ಮತ್ತು ಕ್ಷೇತ್ರ ಕಚೇರಿಗಳಿಂದ ಆಯುಷ್ ಗುಚ್ಚಗಳ ಗುರುತಿಸುವಿಕೆ, ಅವುಗಳನ್ನು ಎಂ.. ಎಂ.ಎಸ್.ಎಂ. . ಯೋಜನೆಗಳಡಿಯಲ್ಲಿ ಅಳವಡಿಸುವಿಕೆ ಒಳಗೊಂಡಿದೆ;

ಶೂನ್ಯ ದೋಷ, ಶೂನ್ಯ ಪರಿಣಮ/ನೇರ ಉತ್ತಮ ಉತ್ಪಾದನಾ ಪದ್ದತಿ.

ಖರೀದಿ ಮತ್ತು ಮಾರುಕಟ್ಟೆ ಬೆಂಬಲ ಯೋಜನೆ_ರಾಷ್ಟ್ರೀಯ / ಅಂತಾರಾಷ್ಟ್ರೀಯ ವ್ಯಾಪಾರ.

ಮೇಳ, ವಸ್ತುಪ್ರದರ್ಶನ , ಜಿ..ಎಂ., ಪ್ಯಾಕೇಜಿಂಗ್, -ಮಾರುಕಟ್ಟೆ, ರಫ್ತು.

.ಟಿ..-ಸಾಮರ್ಥ್ಯ ವರ್ಧನೆ ಮತ್ತು ಕೌಶಲ್ಯ ಅಭಿವೃದ್ದಿ.

.ಎಸ್.ಡಿ.ಪಿ. , ಇಂಕ್ಯುಬೇಶನ್ ನವೋದ್ಯಮ/ ಉದ್ಯಮ ಅಭಿವೃದ್ದಿ

ಗುಚ್ಚ ಅಭಿವೃದ್ದಿ (ಎಸ್.ಎಫ್.ಯು.ಆರ್.ಟಿ../ಸಿ.ಡಿ.ಪಿ.) – ತಂತ್ರಜ್ಞಾನ ಮೇಲ್ದರ್ಜೆಗೇರಿಸುವಿಕೆ.

ಸಿ.ಎಲ್.ಸಿ.ಎಸ್. , ಪಿ.ಎಂ..ಜಿ.ಪಿ-ಹಣಕಾಸು ಬೆಂಬಲ

ಕಾರ್ಟ್ ( ಕೃಷಿ ಗ್ರಾಮೀಣ ತಂತ್ರಜ್ಞಾನ ಕೇಂದ್ರ ) ವಿಭಾಗ- ಗ್ರಾಮೀಣ ಭಾಗದಲ್ಲಿ ಆಯುಷ್.

ತಂತ್ರಜ್ಞಾನ ಕೇಂದ್ರಗಳು: (ಹಬ್ ಇತ್ಯಾದಿ) ಆಯುಷ್ ಕೇಂದ್ರೀಕೃತ ತಂತ್ರಜ್ಞಾನ ಬೆಂಬಲ.

ಪರೀಕ್ಷಾ ಕೇಂದ್ರಗಳು- ಗುಣಮಟ್ಟ ಸುಧಾರಣೆ/ ಗುಣಮಾನಕ ಸ್ಥಿರೀಕರಣ.

***



(Release ID: 1620745) Visitor Counter : 185