ಪ್ರವಾಸೋದ್ಯಮ ಸಚಿವಾಲಯ

"ದೇಖೋ ಅಪ್ನಾ ದೇಶ್" ಸರಣಿಯ 12ನೇ ವೆಬಿನಾರ್

Posted On: 01 MAY 2020 4:00PM by PIB Bengaluru

ಪ್ರವಾಸೋದ್ಯಮ ಸಚಿವಾಲಯವು "ದೇಖೋ ಅಪ್ನಾ ದೇಶ್" ಸರಣಿಯ 12ನೇ ವೆಬಿನಾರ್ ಅನ್ನು "ಜವಾಬ್ದಾರಿಯುತ ಪ್ರವಾಸೋದ್ಯಮದಲ್ಲಿ ಅಸಾಮಾನ್ಯ ಭಾರತೀಯ ಮಹಿಳೆಯರ ಪ್ರಶಂಸೆ" ಕುರಿತು ಆಯೋಜಿಸಿತು

 

ಏಪ್ರಿಲ್ 30, 2020ರಂದು ಪ್ರವಾಸೋದ್ಯಮ ಸಚಿವಾಲಯದ "ದೇಖೋ ಅಪ್ನಾ ದೇಶ್" ಸರಣಿಯ 12ನೇ ವೆಬಿನಾರ್ "ಜವಾಬ್ದಾರಿಯುತ ಪ್ರವಾಸೋದ್ಯಮದಲ್ಲಿ ಅಸಾಮಾನ್ಯ ಭಾರತೀಯ ಮಹಿಳೆಯರ ಪ್ರಶಂಸೆಎಂಬ ಶೀರ್ಷಿಕೆಯ ಕಾರ್ಯಕ್ರಮವು, ಭಾರತದ ಕೆಲವು ಅಸಾಮಾನ್ಯ ಮಹಿಳೆಯರ ಪ್ರಬಲ ಮತ್ತು ವೈಯಕ್ತಿಕ ಕಥೆಗಳನ್ನು ಪ್ರಸ್ತುತಪಡಿಸಿತು, ಇದು ಪ್ರವಾಸದ ಪರ್ಯಾಯ ಕಲ್ಪನೆಯನ್ನು ನೀಡಿತು.

ಪ್ರವಾಸೋದ್ಯಮದ ಮೂಲಕ ವ್ಯಕ್ತಿಗಳು ತಮ್ಮ ಜೀವನದಲ್ಲಿ ಮತ್ತು ಅವರು ವಾಸಿಸುವ ಸಮುದಾಯಗಳಲ್ಲಿ ಹೇಗೆ ಬದಲಾವಣೆಯನ್ನು ಉಂಟುಮಾಡಬಹುದು ಎಂಬುದನ್ನು ವೆಬಿನಾರ್ ವಿವರಿಸಿದೆ. ಪ್ರವಾಸ ಮಾಡುವಾಗ, ಸ್ಥಳೀಯ ಸಂಪನ್ಮೂಲಗಳನ್ನು ಬಳಸುವುದು, ಹೋಮ್ ಸ್ಟೇಗಳಲ್ಲಿ ಇರುವುದು, ಪ್ರಚಾರವಿಲ್ಲದ ಸಣ್ಣ ಉದ್ಯಮಗಳನ್ನು ಬೆಂಬಲಿಸುವುದು, ಸಣ್ಣ ಕುಟುಂಬಗಳ ಒಡೆತನದ ಖಾನಾವಳಿಗಳಲ್ಲಿ ಊಟ ಮಾಡುವುದು, ಇವೆಲ್ಲವೂ ಸ್ಥಳೀಯರಿಗೆ ಭಾರಿ ಪ್ರಯೋಜನವಾಗುತ್ತವೆ ಮತ್ತು ಪ್ರವಾಸೋದ್ಯಮದಿಂದ ಲಾಭ ಪಡೆಯುವ ಪ್ರದೇಶಗಳನ್ನು ಬೆಳೆಸಲು ಸಹಾಯ ಮಾಡುತ್ತದೆ.

ಔಟ್ಲುಕ್ ಪಬ್ಲಿಷಿಂಗ್ ಗ್ರೂಪ್ ಒಂದು ಭಾಗವಾದ ಔಟ್ಲುಕ್ ರೆಸ್ಪಾನ್ಸಿಬಲ್ ಟೂರಿಸಂ ಇನಿಶಿಯೇಟಿವ್ ನಿರೂಪಕರ ತಂಡದಲ್ಲಿದ್ದ ಸೋಯಿತಿ ಬ್ಯಾನರ್ಜಿ, ರಾಧಿಕಾ ಪಿ ನಾಯರ್ ಮತ್ತು ಸೋನಾಲಿ ಚಾಟರ್ಜಿ ಯವರು ಕೋವಿಡ್ ನಂತರದ ಕಾಲದಲ್ಲಿ, ಪ್ರವಾಸೋದ್ಯಮದಲ್ಲಿ ಮಹಿಳೆಯರ ಪಾತ್ರವು ವಿಶೇಷವಾಗಿ ಹೋಂಸ್ಟೇಗಳು ಮತ್ತು ದೂರದ ಸ್ಥಳಗಳು ಹೆಚ್ಚಿನ ಪ್ರಯಾಣಿಕರನ್ನು ಸೆಳೆಯಲು ಪ್ರಾರಂಭಿಸಿದಾಗ ನಿರ್ಣಾಯಕವಾಗಿರುತ್ತದೆ,

ವೆಬಿನಾರ್ ಹತ್ತು ಸ್ಪೂರ್ತಿದಾಯಕ ಕಥೆಗಳನ್ನು ಪ್ರಸ್ತುತಪಡಿಸಿತು:

· ಮಾನ್ ಗ್ರಾಮದ ಸ್ಟ್ಯಾನ್ಜಿನ್ ಡೋಲ್ಕರ್, ಲಡಾಖ್ ಒಬ್ಬ ಉದಯೋನ್ಮುಖ ಖಗೋಳಶಾಸ್ತ್ರಜ್ಞರು, ದೂರದರ್ಶಕ ಆಪರೇಟರ್ ಮತ್ತು ಆಸ್ಟ್ರೊಪ್ರೆನಿಯರ್.

· ಕಾನ್ಹಾ ಬಳಿಯ ಬಂದಾ ತೋಲ ಹಳ್ಳಿಯ ವಿನಯವಂತರಾದ ಸುನೀತಾ ಮರಾವಿ, ಬೈಗಾ ಬುಡಕಟ್ಟಿನ ಶಿಕ್ಷಕಿ ಮತ್ತು ಮಣಿ ಆಭರಣ ತಯಾರಕರು.

· ನಾಗಾಲ್ಯಾಂಡ್ ಮೊನ್ ಜಿಲ್ಲೆಯ ಶಿಯಾಂಗ್ ಗ್ರಾಮದ ಫೆಜಿನ್ ಕೊನ್ಯಾಕ್, ಕಾಫಿ ಬೆಳೆಗಾರರು, ಹೋಂಸ್ಟೇ ಮಾಲೀಕರು ಮತ್ತು ಜನಾಂಗಶಾಸ್ತ್ರಜ್ಞರು ತಮ್ಮ ಕಾಫಿ ತೋಟ ಮತ್ತು ಕಿತ್ತಳೆ ಹಣ್ಣಿನ ತೋಟವನ್ನು ನಿರ್ವಹಿಸುತ್ತಾರೆ ಮತ್ತು ಕೊನ್ಯಾಕ್ಸ್ ಹಚ್ಚೆ ಹಾಕುವ ಪದ್ದತಿಯನ್ನು ದಾಖಲಿಸುತ್ತಿದ್ದಾರೆ.

· ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದಿಂದ (ಎನ್ಸಿಆರ್‌) ಆತಿಥ್ಯ ತಜ್ಞೆ ಮತ್ತು ಮಸಾಜ್ ಮಾಡುವ ಲಕ್ಷ್ಮಿ, ತಮ್ಮ ಅಂಗವೈಕಲ್ಯವನ್ನು ಮೀರಿ ಆತಿಥ್ಯ ಮತ್ತು ಚಿಕಿತ್ಸಕ ಮಸಾಜ್ನಲ್ಲಿ ವೃತ್ತಿಜೀವನವನ್ನು ನಡೆಸುತ್ತಿದ್ದಾರೆ

· ಉತ್ತರಾಖಂಡದ ಮುನ್ಸಿಯಾರಿಯ ಸರ್ಮೋಲಿ ಗ್ರಾಮದ ರೇಖಾ ರೌತೆಲಾ, ಹೋಂ ಸ್ಟೇ ಮಾಲೀಕರು, ಪಕ್ಷಿ ವೀಕ್ಷಣೆ ತಜ್ಞೆ ಮತ್ತು ವಾನ್ ಪಂಚಾಯತ್ ಪಂಚ್ (ಮುಖ್ಯಸ್ಥೆ) ಆಗಿದ್ದಾರೆ.

· ಮಹಾರಾಷ್ಟ್ರದ ಡೆಹೆನ್ ಗ್ರಾಮದ ರಕ್ಷಾ ಪಟೇಕರ್, ಗ್ರಾಮೀಣ ಪ್ರವಾಸೋದ್ಯಮ ತಜ್ಞೆ ಮತ್ತು ಮಾಸ್ಟರ್ ಟ್ರೈನರ್, ಸಮುದಾಯ ಆಧಾರಿತ ಪ್ರವಾಸೋದ್ಯಮ ಯೋಜನೆಗಳಿಗೆ ಆತಿಥ್ಯ ತರಬೇತಿ ನೀಡುತ್ತಿದ್ದಾರೆ.

· ಕೇರಳದ ವಯನಾಡಿನ ಮೋತಕ್ಕರದಿಂದ ಸಜ್ನಾ ಶಾಜಿಯವರು ಡ್ರಮ್ಮರ್ ಮತ್ತು ಟ್ರಾವೆಲ್ ಗೈಡ್ ಆಗಿದ್ದಾರೆ.

· ಪಬಿತ್ರಾ ಮಾಯಾ ಖವಾಸ್, ಹೋಮ್ಚೆಫ್ ಮತ್ತು ಉತ್ತರ ಬಂಗಾಳದ ಚುಯಿಖಿಮ್ ಉದ್ಯಮಿ.

· ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಂದ ಸುಮಿತ್ರಾ ಬಿಸ್ವಾಸ್, ಸ್ಕೂಬಾ ಧುಮುಕುವವನ ಮತ್ತು ನೀರೊಳಗಿನ ರೀಫ್ ರಿಸ್ಟೋರರ್ (ಪುನಃಸ್ಥಾಪಕರು).

ಪ್ರವಾಸೋದ್ಯಮ ಸಚಿವಾಲಯದ ವೆಬಿನಾರ್ ಸರಣಿಯ ಉದ್ದೇಶವು ಜನಪ್ರಿಯವಲ್ಲದ ಸ್ಥಳಗಳು ಮತ್ತು ಜನಪ್ರಿಯ ತಾಣಗಳ ಬಗ್ಗೆ ಕಡಿಮೆ ತಿಳಿದಿರುವ ಅಂಶಗಳು ಸೇರಿದಂತೆ.ಭಾರತದ ವಿವಿಧ ಪ್ರವಾಸೋದ್ಯಮ ತಾಣಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಉತ್ತೇಜಿಸುವುದಾಗಿದೆ

ವೆವಿನಾರ್ಗಳ ನೇರ ಪ್ರಸಾರ ನೋಡಲು ಆಗದವರಿಗೆ, ಕೊಂಡಿಯಲ್ಲಿ ಮತ್ತು ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ಎಲ್ಲಾ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳಲ್ಲಿ ಲಭ್ಯವಿದೆ https://www.youtube.com/channel/UCbzIbBmMvtvH7d6Zo_ZEHDA/featured

***



(Release ID: 1620403) Visitor Counter : 165