ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ವ್ಯವಹಾರಕ್ಕಾಗಿ ಇ.ಸಿ.ಆರ್ ಸಲ್ಲಿಕೆ ಸುಲಭಗೊಳಿಸಿದ ಇ.ಪಿ.ಎಫ್‌.ಒ

Posted On: 30 APR 2020 7:32PM by PIB Bengaluru

ವ್ಯವಹಾರಕ್ಕಾಗಿ ಇ.ಸಿ.ಆರ್ ಸಲ್ಲಿಕೆ ಸುಲಭಗೊಳಿಸಿದ ಇ.ಪಿ.ಎಫ್‌.

 

ಕೊವಿಡ್-19 ಸಾಂಕ್ರಾಮಿಕ ಮತ್ತು ಇತರ ಅಡೆತಡೆಗಳ ಹರಡುವಿಕೆಯನ್ನು ನಿಯಂತ್ರಿಸಲು, ಸರ್ಕಾರವು ಘೋಷಿಸಿದ ಪ್ರಸ್ತುತ ಲಾಕ್‌ಡೌನ್‌ನ ಸನ್ನಿವೇಶದಲ್ಲಿ. ವ್ಯವಹಾರಗಳು ಮತ್ತು ಉದ್ಯಮಗಳ ಕಾರ್ಯಚಟುವಟಿಕೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ ಮತ್ತು ನೌಕರರನ್ನು ತಮ್ಮ ಪಟ್ಟಿಯಲ್ಲಿ ಉಳಿಸಿಕೊಂಡಿದ್ದರೂ ಸಹ ತಮ್ಮ ಶಾಸನಬದ್ಧ ಬಾಕಿ ಪಾವತಿಸಲು ವ್ಯವಹಾರಗಳು ಮತ್ತು ಉದ್ಯಮಗಳು ನಗದು ಬಿಕ್ಕಟ್ಟನ್ನು ಎದುರಿಸುತ್ತಿವೆ.

ಮೇಲಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಇಪಿಎಫ್ ಮತ್ತು ಎಂಪಿ ಆಕ್ಟ್, 1952 ರ ಅಡಿಯಲ್ಲಿ ಅನುಸರಣೆ ಕಾರ್ಯವಿಧಾನವನ್ನು ಇನ್ನಷ್ಟು ಸುಲಭಗೊಳಿಸಲು, .ಸಿ.ಆರ್.ನಲ್ಲಿ ವರದಿ ಮಾಡಲಾದ ಶಾಸನಬದ್ಧ ಕೊಡುಗೆಗಳ ಪಾವತಿಯಿಂದ ಮಾಸಿಕ ಎಲೆಕ್ಟ್ರಾನಿಕ್-ಚಲನ್ ಕಮ್ ರಿಟರ್ನ್ (ಇಸಿಆರ್) ಸಲ್ಲಿಸುವಿಕೆಯನ್ನು ಬೇರ್ಪಡಿಸಲಾಗಿದೆ.

ಶಾಸನಬದ್ಧ ಕೊಡುಗೆಗಳನ್ನು ಏಕಕಾಲದಲ್ಲಿ ಪಾವತಿಸುವ ಅಗತ್ಯವಿಲ್ಲದೇ ಇ.ಸಿ.ಆರ್ ಅನ್ನು ಈಗ ಉದ್ಯೋಗದಾತ ಸಲ್ಲಿಸಬಹುದು ಮತ್ತು ಇಸಿಆರ್ ಸಲ್ಲಿಸಿದ ನಂತರ ಉದ್ಯೋಗದಾತ ಶಾಸನಬದ್ಧ ಕೊಡುಗೆಗಳನ್ನು ನಂತರ ಪಾವತಿಸಬಹುದು. ಮೇಲಿನ ಬದಲಾವಣೆಯು ಉದ್ಯೋಗದಾತರಿಗೆ, ಹಾಗೂ ಕಾಯಿದೆ ಮತ್ತು ಯೋಜನೆಗಳ ವ್ಯಾಪ್ತಿಗೆ ಬರುವ ನೌಕರರಿಗೆ ಅನುಕೂಲವಾಗಲಿದೆ.

ಸಮಯಕ್ಕೆ ಉದ್ಯೋಗದಾತರಿಂದ ಇಸಿಆರ್ ಅನ್ನು ಸಲ್ಲಿಸುವುದು ಉದ್ಯೋಗದಾತನು ಅನುಸರಿಸುವ ಉದ್ದೇಶವನ್ನು ಸೂಚಿಸುತ್ತದೆ, ಆದ್ದರಿಂದ ವಿಸ್ತೃತ ಸಮಯದೊಳಗೆ ಬಾಕಿ ಪಾವತಿಸಿದರೆ ರ್ಕಾರವು ಘೋಷಿಸಿದಂತೆ ದಂಡದ ಪರಿಣಾಮಗಳನ್ನು ಮುಂದಿನ ದಿನಗಳಲ್ಲಿ ಪಾವತಿಸಬೇಕಾಗಿಲ್ಲ.

ಸಮಯಕ್ಕೆ ಇಸಿಆರ್ ಅನ್ನು ಸಲ್ಲಿಸುವುದು ಉದ್ಯೋಗದಾತ ಮತ್ತು ಉದ್ಯೋಗಿಗಳ ಶಾಸನಬದ್ಧ ಕೊಡುಗೆಗಳ ಮೇಲಿನ ಸಾಲಕ್ಕೆ ಸಹಾಯವಾಗುತ್ತದೆ.

ಸಾಂಕ್ರಾಮಿಕ ರೋಗದಿಂದ ಪ್ರತಿಕೂಲ ಪರಿಣಾಮ ಬೀರುವ ವ್ಯವಹಾರಗಳು ಮತ್ತು ಇಪಿಎಫ್ ಸದಸ್ಯರಿಗೆ ಹೆಚ್ಚಿನ ಪರಿಹಾರಕ್ಕಾಗಿ ನೀತಿ ಯೋಜನೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಸ್ತುತ ಇಸಿಆರ್ ಡೇಟಾ ಸಹಾಯ ಮಾಡುತ್ತದೆ.

***


(Release ID: 1619928) Visitor Counter : 257