ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಐಐಟಿ ಮುಂಬೈ ವಿದ್ಯಾರ್ಥಿ ತಂಡದಿಂದ ಕಡಿಮೆ ಬೆಲೆಯ ಯಾಂತ್ರಿಕ ವೆಂಟಿಲೇಟರ್ “ರುಹ್ದಾರ್” ಅಭಿವೃದ್ಧಿ

Posted On: 26 APR 2020 2:05PM by PIB Bengaluru

ಐಐಟಿ ಮುಂಬೈ ವಿದ್ಯಾರ್ಥಿ ತಂಡದಿಂದ ಕಡಿಮೆ ಬೆಲೆಯ ಯಾಂತ್ರಿಕ ವೆಂಟಿಲೇಟರ್ರುಹ್ದಾರ್ಅಭಿವೃದ್ಧಿ

ಪುಲ್ವಾಮಾದ .ಯು.ಎಸ್.ಟಿ ಡಿಸೈನ್ ಇನ್ನೋವೇಶನ್ ಸೆಂಟರ್ ನಲ್ಲಿ ವಿನ್ಯಾಸ

 

"ಕೋವಿಡ್-19 ಸೋಂಕು ಹರಡುವಿಕೆ ಕಡಿಮೆಯಾಗಿ ರೋಗ ನಿಯಂತ್ರಣದಲ್ಲಿದೆ" ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಸೋಂಕಿಗೆ ಒಳಗಾದವರಲ್ಲಿ, ಸುಮಾರು 80% ರಷ್ಟು ಜನರು ಲಘು-ಅನಾರೋಗ್ಯವನ್ನು ಮಾತ್ರ ಈಗ ಅನುಭವಿಸುತ್ತಿದ್ದಾರೆ. ಮತ್ತ ಕೇವಲ 15% ರಷ್ಟು ಮಂದಿಗೆ ಆಮ್ಲಜನಕದ ಬೆಂಬಲ ಬೇಕಾಗುತ್ತದೆ ಮತ್ತು ಉಳಿದ ಗಂಭೀರ ಅಥವಾ ತೀವ್ರತರವಾದ 5% ಮಂದಿಗೆ ಮಾತ್ರ ವೆಂಟಿಲೇಟರ್ ಗಳ ಅಗತ್ಯವಿದೆ.

ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯವಾದ ವೈದ್ಯಕೀಯ ಮೂಲಸೌಕರ್ಯದಲ್ಲಿ ವೆಂಟಿಲೇಟರ್ಗಳು ಒಂದು ಪ್ರಮುಖ ಅಂಶವಾಗಿದ್ದು, ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗುವವರಿಗೆ ನಿರ್ಣಾಯಕ ಉಸಿರಾಟದ ಸಹಾಯ ವನ್ನು ವೆಂಟಿಲೇಟರ್ಗಳು ಅಡುತ್ತವೆ.

ಇದನ್ನು ಪರಿಗಣಿಸಿ, ಸರ್ಕಾರವು ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ವೈದ್ಯಕೀಯ ಸರಬರಾಜುಗಾಗಿ ವಿಶ್ವದಾದ್ಯಂತ ಸ್ಕೌಟಿಂಗ್ ಮಾಡುವ ದ್ವಿಮುಖ ವಿಧಾನವನ್ನು ಅನುಸರಿಸುತ್ತಿದೆ. ಅದರಂತೆ, ಏಪ್ರಿಲ್ 25, 2020 ರಂದು ನಡೆದ ಕೇಂದ್ರ ಸಚಿವರ ತಂಡದ ಸಭೆಗೆ ನೀಡಿದ ಮಾಹಿತಿ ಪ್ರಕಾರ, ದೇಶೀಯ ತಯಾರಕರು ಈಗಾಗಲೇ ವೆಂಟಿಲೇಟರ್ಗಳ ಉತ್ಪಾದನೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಒಂಬತ್ತು ತಯಾರಕರ ಮೂಲಕ 59,000 ಕ್ಕೂ ಹೆಚ್ಚು ಘಟಕಗಳಿಗೆ ಈಗಾಗಲೇ ಆದೇಶಗಳನ್ನು ನೀಡಲಾಗಿದೆ.

ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಭಾರತೀಯ ಸೃಜನಶೀಲತೆ ಮತ್ತು ಸೃಜನಶೀಲ ಮನೋಭಾವವು ಉತ್ತಮ ಫಲವನ್ನು ಪಡೆಯುತ್ತಿದೆ ಎಂಬುದಕ್ಕೆ ಇಲ್ಲಿದೆ ಹೃದಯಸ್ಪರ್ಶಿ ಸನ್ನಿವೇಶ. ಸಿಎಸ್ಐಆರ್ ಮತ್ತು ಅದರ 30-ಪ್ಲಸ್ ಲ್ಯಾಬ್ಗಳು, ಐಐಟಿಗಳು ಮತ್ತು ಖಾಸಗಿ ವಲಯ ಮತ್ತು ನಾಗರಿಕ ಸಮಾಜದ ಅನೇಕ ಸಂಸ್ಥೆಗಳು ಸೇರಿದಂತೆ ಭಾರತದ ಇಡೀ ವೈಜ್ಞಾನಿಕ ಸಮುದಾಯವು ವಿವಿಧ ಪರಿಹಾರಗಳನ್ನು ತಂದಿವೆ ಮತ್ತು ಪ್ರತಿಯೊಂದೂ ಸಾಂಕ್ರಾಮಿಕ ರೋಗದ ವಿರುದ್ಧದ ನಮ್ಮ ಹೋರಾಟಕ್ಕೆ ಸ್ವಲ್ಪ ಮಟ್ಟಿಗೆ ತಮ್ಮದೇ ಆದ ಕೊಡುಗೆ ನೀಡಿವೆ.

ಐಐಟಿ ಮುಂಬಯಿ, ಎನ್ಐಟಿ ಶ್ರೀನಗರ ಮತ್ತು ಇಸ್ಲಾಮಿಕ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (.ಯು.ಎಸ್.ಟಿ), ಅವಂತಿಪೋರಾ, ಪುಲ್ವಾಮಾ, ಜಮ್ಮು ಮತ್ತು ಕಾಶ್ಮೀರದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡವು ದೇಶದ ವೆಂಟಿಲೇಟರ್ ಅಗತ್ಯತೆಯ ಸಮಸ್ಯೆಯನ್ನು ಪರಿಹರಿಸಲು ಮುಂದೆ ಬಂದ ಒಂದು ಯುವ ಸೃಜನಶೀಲ ವ್ಯಕ್ತಿಗಳ ತಂಡವಾಗಿದೆ. ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ಕಡಿಮೆ ಬೆಲೆಯ ವೆಂಟಿಲೇಟರ್ನೊಂದಿಗೆ ತಂಡವು ನಿರ್ಮಾಣ ಮಾಡಿದೆ.

ತಂಡವುರುಹ್ದಾರ್ ವೆಂಟಿಲೇಟರ್” ” ಎಂದು ಹೆಸರಿಸಿರುವ ಇದು ಹೇಗೆ ಜನ್ಮ ಪಡೆದುಕೊಂಡಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಐಐಟಿ ಬಾಂಬೆಯ ಕೈಗಾರಿಕಾ ವಿನ್ಯಾಸ ಕೇಂದ್ರದ ಪ್ರಥಮ ವರ್ಷದ ವಿದ್ಯಾರ್ಥಿಗಳು ಯೋಜನಾ ಮುಖ್ಯಸ್ಥ ಶ್ರೀ ಜುಲ್ಕರ್ನೈನ್, ಹುಟ್ಟೂರು ಕಾಶ್ಮೀರಕ್ಕೆ ಹೋಗಿದ್ದರು. ಸಾಂಕ್ರಾಮಿಕ ರೋಗವು ಮುಂದುವರೆದಂತೆ ಪರಿಸ್ಥಿತಿಯ ಗಂಭೀರತೆಯನ್ನು ಅರಿತಾಗ ಸಂಪೂರ್ಣ ಕಾಶ್ಮೀರ ಕಣಿವೆಯಲ್ಲಿ ಕೇವಲ 97 ವೆಂಟಿಲೇಟರ್ಗಳಿವೆ ಎಂದು ಅವರಿಗೆ ಗೊತ್ತಾಯಿತು. ಅವಶ್ಯಕತೆ ಹೆಚ್ಚು ಇದ್ದರೂ ಮತ್ತು ವೆಂಟಿಲೇಟರ್ಗಳ ಕೊರತೆಯ ಬಗ್ಗೆ ಜನರಲ್ಲಿದ್ದ ಭೀತಿಕಾಣಿಸ ತೊಡಗಿತು. ನಾವೇಕೆ ಕಡಿಮೆ ವೆಚ್ಚದ ವೆಂಟಿಲೇಟರ್ಗಳ ನಿರ್ಮಾಣ ಮಾಡಬಾರದು? ಎಂದು ಇವರು ಯೋಚಿಸಿದರು.

ಆದ್ದರಿಂದ, ಶ್ರೀ ಜುಲ್ಕರ್ನೈನ್ ಕೂಡಲೇ ತನ್ನ ಸ್ನೇಹಿತರಾದ ಪಿ.ಎಸ್. ಶೋಯಿಬ್, ಆಸಿಫ್ ಶಾ ಮತ್ತು ಅವಂತಿಪೋರಾ ಐಯುಎಸ್ಟಿ ಯಿಂದ ಶಕರ್ ನೆಹವಿ, ಮತ್ತು ಎನ್ಐಟಿ ಶ್ರೀನಗರದ ಮಜೀದ್ ಕೌಲ್ ಜೊತೆ ಕೈಜೋಡಿಸಿದರು. ಐಯುಎಸ್ಟಿಯಲ್ಲಿನ ಡಿಸೈನ್ ಇನ್ನೋವೇಶನ್ ಸೆಂಟರ್ (ಡಿಐಸಿ) ನಿಂದ ನೆರವು ಪಡೆದು, ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ಕಡಿಮೆ ಬೆಲೆಯ ವೆಂಟಿಲೇಟರ್ ಅನ್ನು ವಿನ್ಯಾಸಗೊಳಿಸುವಲ್ಲಿ ತಂಡವು ಯಶಸ್ವಿಯಾಗಿದೆ. ಪ್ರಯತ್ನಿಸಿದ ಮತ್ತು ಪರೀಕ್ಷಿಸಿದ ವಿನ್ಯಾಸವನ್ನು ಪುನರಾವರ್ತಿಸುವುದು ಇವರ ಆರಂಭಿಕ ಗುರಿಯಾಗಿತ್ತು, ಆದರೆ, ಕೆಲಸ ಮಾಡಲು ಪ್ರಾರಂಭಿಸಿದಾಗ, ಅವರು ತಮ್ಮದೇ ಆದ ವೆಂಟಿಲೇಟರ್ ವಿನ್ಯಾಸವನ್ನು ಕೂಡಾ ಅದಾಗಲೇ ಅಭಿವೃದ್ಧಿಪಡಿಸಿದ್ದರು

" ತಂಡಕ್ಕೆ ಮೂಲಮಾದರಿಗಾಗಿ ಸುಮಾರು ರೂ. 10,000 ವೆಚ್ಚವಾಯಿತು ಮತ್ತು ನಾವು ಸಾಮೂಹಿಕ ಉತ್ಪಾದನೆಗೆ ಹೋದಾಗ ವೆಚ್ಚವು ತುಂಬಾ ಕಡಿಮೆಯಾಯಿತು" ಎಂದು ಶ್ರೀ ಜುಲ್ಕರ್ನೈನ್ ಹೇಳಿದರು. ಆಸ್ಪತ್ರೆಗಳಲ್ಲಿ ಬಳಸಲಾಗುವ ಉನ್ನತ-ಮಟ್ಟದ ವೆಂಟಿಲೇಟರ್ಗಳು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿರುತ್ತವೆ, ಆದರೆ ಕಡಿಮೆ ಬೆಲೆಯ "ರುಹ್ದಾರ್ಅಗತ್ಯವಾದ ಕ್ರಿಯಾತ್ಮಕತೆಯನ್ನು ಒದಗಿಸುತ್ತದೆ, ಇದು ತೀವ್ರವಾಗಿ ಅನಾರೋಗ್ಯಕ್ಕೊಳಗಾದ ಕೊವಿಡ್-19 ರೋಗಿಯ ಜೀವವನ್ನು ಉಳಿಸಲು ಅಗತ್ಯವಾದ ಉಸಿರಾಟದ ಬೆಂಬಲವನ್ನು ಕೂಡಾ ಒದಗಿಸುತ್ತದೆ" ಎಂದು ಶ್ರೀ ಜುಲ್ಕರ್ನೈನ್ ಅವರು ಹೇಳಿದರು.

ಯೋಜನೆಯ ಮುಂದಿನ ಹಂತಗಳ ಬಗ್ಗೆ ಮಾತನಾಡಿದ ಶ್ರೀ ಜುಲ್ಕರ್ನೈನ್, " ಈಗ ಮೂಲಮಾದರಿಯ ವೈದ್ಯಕೀಯ ಪರೀಕ್ಷೆಗೆ ಹೋಗುತ್ತದೆ. ಅದನ್ನು ಅನುಮೋದಿಸಿದ ನಂತರ ಅದನ್ನು ಬೃಹತ್ ಉತ್ಪಾದನೆಗೆ ತೆಗೆದುಕೊಳ್ಳಲಾಗುವುದು. ಸಣ್ಣ ಪ್ರಮಾಣದ ಉದ್ಯಮದಿಂದ ಬೃಹತ್ ಉತ್ಪಾದನೆಗೆ ಅನುಕೂಲಕರವಾಗಿಸುವ ಪ್ರಯತ್ನವಾಗಿದೆ. ಉತ್ಪನ್ನಕ್ಕಾಗಿ ಯಾವುದೇ ಗೌರವಧನವನ್ನು ವಿಧಿಸುವುದಿಲ್ಲ. ನಮ್ಮ ತಂಡವು ಎದುರಿಸಿದ ಮುಖ್ಯ ಸಮಸ್ಯೆ, ಸಂಪನ್ಮೂಲಗಳ ಕೊರತೆ ಎಂದು ಶ್ರೀ ಜುಲ್ಕರ್ನೈನ್ ಹೇಳಿದರು.

ಅಮೆರಿಕದ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಭಿವೃದ್ಧಿಪಡಿಸಿದ ವಿನ್ಯಾಸ ಸೇರಿದಂತೆ ಹಲವು ವಿನ್ಯಾಸಗಳ ತಂಡವು ನಿರ್ಮಾಕ್ಕೆ ಪ್ರಯತ್ನಿಸಿತು. ಸಂಪನ್ಮೂಲ ನಿರ್ಬಂಧಗಳನ್ನು ಪರಿಗಣಿಸಿ ತಂಡವು ತಮ್ಮ ಮಿತವ್ಯಯದ ವಿನ್ಯಾಸದೊಂದಿಗೆ ಒಮ್ಮತ ಮೂಡಿಬಂದಿತು. ಸುಧಾರಿತ ಸಾಫ್ಟ್ವೇರ್ ಬಳಸಿ ವಿನ್ಯಾಸವನ್ನು ಮಾಡಲಾಗಿದೆ ಮತ್ತು ಫಲಿತಾಂಶಗಳಲ್ಲಿ ತಂಡವು ತೃಪ್ತಿ ಹೊಂದಿದೆ ಎಂದು ಅವರು ಹೇಳಿದರು.

"ಸಾಂಪ್ರದಾಯಿಕ ವೆಂಟಿಲೇಟರ್ಗೆ ಕಡಿಮೆ-ವೆಚ್ಚದ ಪರ್ಯಾಯವನ್ನು ವಿನ್ಯಾಸಗೊಳಿಸುವುದು ಮತ್ತು ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿತ್ತು. ಉಸಿರಿನ ಏರು/ ಉಬ್ಬರ ಇಳಿತದ ಪರಿಮಾಣದಂತಹ ಮೂಲ ನಿಯತಾಂಕಗಳ ನಿಯಂತ್ರಣವನ್ನು ಸಾಧಿಸಲು ನಮ್ಮ ತಂಡಕ್ಕೆ ಸಾಧ್ಯವಾಗಿದೆ, ಪ್ರತಿ ನಿಮಿಷಕ್ಕೆ ಉಸಿರಾಟ ಮುಕ್ತಾಯದ ಅನುಪಾತ ಮತ್ತು ಅದರ ಕಾರ್ಯಾಚರಣೆಯ ಸಮಯದಲ್ಲಿ ಒತ್ತಡವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದು. ಸಾಧ್ಯವಾಗಿದೆ ಎಂದು ಐಯುಎಸ್ಟಿಯ ಹಳೆಯ ವಿದ್ಯಾರ್ಥಿ ಮತ್ತು ಸಿಮ್ಕೋರ್ ಟೆಕ್ನಾಲಜೀಸ್ ಸಿ.. ಆಗಿರುವ ಶ್ರೀ ಆಸಿಫ್ ಹೇಳಿದರು

ಅಗತ್ಯದ ಸನ್ನಿವೇಶದಲ್ಲಿ ಸಮಾಜಕ್ಕೆ ಪ್ರಯೋಜನಕಾರಿ ಕೊಡುಗೆ ನೀಡುವ ಬಯಕೆಯಿಂದ ಯುವಕರ ತಂಡವನ್ನು ಪ್ರೋತ್ಸಾಹಿಸಲಾಯಿತುಎಂದು ಡಿಐಸಿ, ಐಯುಎಸ್ಟಿ ಸಂಯೋಜಕ ಡಾ.ಶಾಕರ್ ಅಹ್ಮದ್ ನಹ್ವಿ ಹೇಳಿದರು.ಎಂಜಿನಿಯರಿಂಗ್ ದೃಷ್ಟಿಕೋನದಿಂದ ವೆಂಟಿಲೇಟರ್ ಕ್ರಿಯಾತ್ಮಕವಾಗಿದೆ ಆದರೆ ವೈದ್ಯಕೀಯ ಸಮುದಾಯದಿಂದ ತೆರವು ಮತ್ತು ಮೌಲ್ಯಮಾಪನ ಅಗತ್ಯವಿದೆಎಂದು ಅವರು ಹೇಳಿದರು.

ಡಿಐಸಿಯಲ್ಲಿ ಲಭ್ಯವಿರುವ ಘಟಕಗಳನ್ನು ಬಳಸಿಕೊಂಡು ಕಡಿಮೆ ಬೆಲೆಯ ಮಿತವ್ಯಯದ ವೆಂಟಿಲೇಟರ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಐಯುಎಸ್ಟಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಮಜೀದ್ ಹೆಚ್. ಹೇಳಿದರು. ಕೇಂದ್ರದಲ್ಲಿನ ಸೌಲಭ್ಯಗಳಾದ 3-ಡಿ ಮುದ್ರಣ ಮತ್ತು ಲೇಸರ್ ಕತ್ತರಿಸುವ ತಂತ್ರಜ್ಞಾನಗಳ ಬಳಕೆ ಸಹ ಮೂಲ ಮಾದರಿಯ ಯಶಸ್ಸಿಗೆ ಕಾರಣವಾಗಿವೆ. ಕೇಂದ್ರವು ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಒಂದು ಉಪಕ್ರಮವಾಗಿದೆ.

 

***


(Release ID: 1618811) Visitor Counter : 274