ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಕೊರೊನಾ ಸಹಾಯತಾ ಯೋಜನೆಯಡಿ ಕೇಂದ್ರ ಸರ್ಕಾರ ರೂ. 1000 ನೀಡಲಿದೆ ಎಂದು ವಾಟ್ಸಾಪ್ ನಲ್ಲಿ ನಕಲಿ ಸುದ್ದಿ

Posted On: 25 APR 2020 9:37PM by PIB Bengaluru

ಕೊರೊನಾ ಸಹಾಯತಾ ಯೋಜನೆಯಡಿ ಕೇಂದ್ರ ಸರ್ಕಾರ ರೂ. 1000 ನೀಡಲಿದೆ ಎಂದು ವಾಟ್ಸಾಪ್ ನಲ್ಲಿ ನಕಲಿ ಸುದ್ದಿ

 

ಕೊರೊನಾ ಸಹಾಯತಾ ಯೋಜನೆ ಎಂಬ ಯೋಜನೆಯಡಿ ಭಾರತ ಸರ್ಕಾರವು ಯಾರಿಗೂ ರೂ. 1000 ನೀಡುವುದಿಲ್ಲ ಎಂದು ಪ್ರೆಸ್ ಇನ್ಫೋರ್ಮೇಶನ್ ಬ್ಯೂರೋದ ಮಾಹಿತಿ ಪರಿಶೀಲನಾ ಘಟಕ (ಫ್ಯಾಕ್ಟ್ ಚೆಕ್ ಯುನಿಟ್)” ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ.

ಕೇಂದ್ರ ಸರ್ಕಾರವು ನೂತನ ಸ್ಕೀಮ್-ಡಬ್ಲ್ಯೂ.ಸಿ.ಹೆಚ್. ಯೋಜನೆಯನ್ನು ಪ್ರಾರಂಭಿಸಿದೆ. ಯೋಜನೆಯಡಿ ಜನರಿಗೆ ತಲಾ ರೂ. 1000 ವಿತರಿಸಲಾಗುವುದು, ಅದಕ್ಕಾಗಿ ಜನರು ಕೆಳಗೆ ನೀಡಿರುವ ಜಾಲತಾಣದ ಕೊಂಡಿಯನ್ನು ಕ್ಲಿಕ್ ಮಾಡಿ, ತಮ್ಮ ಮಾಹಿತಿಯನ್ನು ಒದಗಿಸಬೇಕಾಗುತ್ತದೆ ಎಂಬ ಸುಳ್ಳು ಸಂದೇಶವೊಂದು ವಾಟ್ಸಾಪ್ ನಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.

ಹೇಳಿಕೆ ಮತ್ತು ಲಿಂಕ್ ಎರಡೂ ಮೋಸದ್ದಾಗಿದೆ ಎಂದು ಭಾರತ ಸರ್ಕಾರದ ಪ್ರೆಸ್ ಇನ್ಫೋರ್ಮೇಶನ್ ಬ್ಯೂರೋದ ಮಾಹಿತಿ ಪರಿಶೀಲನಾ ಘಟಕ (ಫ್ಯಾಕ್ಟ್ ಚೆಕ್ ಯುನಿಟ್)” ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ, ಹಾಗೂ ಅಲ್ಲಿ ನೀಡಿರುವ ಲಿಂಕ್ ಕ್ಲಿಕ್ ಮಾಡದಿರಲು ಜನರಿಗೆ ಎಚ್ಚರಿಕೆ ನೀಡಿದೆ.

PIB Fact Check@PIBFactCheck

दावा: कोरोना सहायता योजना WCHO की तरफ से 1000 ₹ सहायता राशि सभी को दिया जा रहा हैें। फॉर्म भरें और 1000 ₹ प्राप्त करें। : केंद्र सरकार द्वारा ऐसी कोई भी योजना नहीं चलाई जा रही। मैसेज में किया गया दावा व दिया गया लिंक फ़र्ज़ी है।
कृपया जालसाज़ों से सावधान रहे।

एक व्हाटसएप मैसेज पर फेक की मोहर। मैसेज में दावा किया गया है की  कोरोना सहायता योजना WCHO की तरफ से 1000 रुपये सहायता राशि सभी को दी जा रही है।

740

1:19 PM - Apr 25, 2020

Twitter Ads info and privacy

333 people are talking about this

ಹಿನ್ನೆಲೆ :

ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸುದ್ದಿ ಹರಡುವಿಕೆಯನ್ನು ಪರಿಶೀಲಿಸಲು ಮತ್ತು ಸುಪ್ರೀಂ ಕೋರ್ಟ್ ಮಾಡಿದ ಅವಲೋಕನಗಳನ್ನು ಅನುಸರಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವದಂತಿ/ನಕಲಿ/ಸುಳ್ಳುಸುದ್ದಿಗಳನ್ನು ನಿಗ್ರಹ ಮಾಡಲು ಮೀಸಲಾದ ಪಿಐಬಿಫ್ಯಾಕ್ಟ್ ಚೆಕ್ ಘಟಕವನ್ನು ಪಿಐಬಿ ಸ್ಥಾಪಿಸಿತು. ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ಗಳಲ್ಲಿ ಟ್ರೆಂಡಿಂಗ್ ಸಂದೇಶಗಳನ್ನುಪಿಐಬಿಫ್ಯಾಕ್ಟ್ ಚೆಕ್’ (#PIBFactCheck) ನಿರಂತರವಾಗಿ ಪರಿವೀಕ್ಷಣೆ ಮಾಡುತ್ತದೆ. ವಿಷಯಗಳ ಸಮಗ್ರ ವಿಮರ್ಶೆ-ಪರಿಶೀಲನೆ ನಡೆಸಿ ಸುಳ್ಳು ಸುದ್ದಿಗಳ ಸತ್ಯಾಂಶ ಹೊರಹಾಕುವ ಅಧಿಕೃತ ಟ್ವಿಟರ್ ಹ್ಯಾಂಡಲ್ ಆಗಿದೆ. ಟ್ವಿಟರ್ ಸಮುದಾಯದ ಅನುಕೂಲಕ್ಕಾಗಿ ಯಾವುದೇ ವಿಷಯದ ವಾಸ್ತವಿಕ ಮತ್ತು ಅಧಿಕೃತ ಆವೃತ್ತಿಯನ್ನು ಟ್ವಿಟರ್ ನಲ್ಲಿ #ಪಿಐಬಿಫ್ಯಾಕ್ಟ್ ಚೆಕ್ (#PIBFactCheck) ಎಂಬ ಹ್ಯಾಶ್ಟ್ಯಾಗ್ ಬಳಸಿ ಪಡೆಯಬಹುದು. ಇದರ ಜೊತೆಗೆ ಪಿಐಬಿ_ಇಂಡಿಯ (@PIB_INDIA) ಮತ್ತು ವಿವಿಧ ಪಿಐಬಿ ಪ್ರಾದೇಶಿಕ ಘಟಕಗಳ ಟ್ವಿಟರ್ ಹ್ಯಾಂಡಲ್ ಗಳು ಸಕಾಲಿಕವಾಗಿ ಮಾಹಿತಿ ಪ್ರಕಟಮಾಡುತ್ತಿವೆ.

ಸಾಮಾಜಿಕ ಮಾಧ್ಯಮದ ಯಾವುದೇ ಸಂದೇಶದ ಸತ್ಯಾಸತ್ಯತೆಯ ಪರಿಶೀಲನೆಗಾಗಿ ಯಾವುದೇ ವ್ಯಕ್ತಿಯು ವಿಷಯದ ಪಠ್ಯ, ಆಡಿಯೋ ಮತ್ತು ವಿಡಿಯೋ ಸೇರಿದಂತೆ ಮಾಹಿತಿಗಳನ್ನು #PIBFactCheckಗೆ ಸಲ್ಲಿಸಬಹುದು. ಇವುಗಳನ್ನು ಆನ್ಲೈನ್ನಲ್ಲಿ https://factcheck.pib.gov.in/ ಅಥವಾ ವಾಟ್ಸಾಪ್ ಸಂಖ್ಯೆ +918799711259 ಅಥವಾ ಇಮೇಲ್: pibfactcheck[at]gmail[dot]com ಮೂಲಕವೂ ಸಲ್ಲಿಸಬಹುದು. ಅಲ್ಲದೆ ವಿವರಗಳು ಪಿಐಬಿ ವೆಬ್ಸೈಟ್: https://pib.gov.in ನಲ್ಲಿಯೂ ಲಭ್ಯವಿದೆ.

WhatsApp Image 2020-04-21 at 8.38.39 PM.jpeg

***



(Release ID: 1618559) Visitor Counter : 179