ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಅಂಚೆ ಇಲಾಖೆಯು ಅವಶ್ಯಕ ವಸ್ತುಗಳನ್ನು ರಾಷ್ಟ್ರೀಯ ರಸ್ತೆ ಸಾರಿಗೆ ಜಾಲದ ಮೂಲಕ 22 ಮಾರ್ಗಗಳಲ್ಲಿ 500 ಕಿಲೋ ಮೀಟರ್ ದೂರದವರೆಗೆ ಪೂರೈಕೆ ಮಾಡುತ್ತದೆ

Posted On: 24 APR 2020 7:25PM by PIB Bengaluru

ಅಂಚೆ ಇಲಾಖೆಯು ಅವಶ್ಯಕ ವಸ್ತುಗಳನ್ನು ರಾಷ್ಟ್ರೀಯ ರಸ್ತೆ ಸಾರಿಗೆ ಜಾಲದ ಮೂಲಕ 22 ಮಾರ್ಗಗಳಲ್ಲಿ 500 ಕಿಲೋ ಮೀಟರ್ ದೂರದವರೆಗೆ ಪೂರೈಕೆ ಮಾಡುತ್ತದೆ

 

ಕೊವಿಡ್ -19ರ ಕಾರಣದಿಂದಾದ ಸೃಷ್ಠಿಯಾದ ಸಂಪೂರ್ಣ ಸ್ಥಗಿತ ಪರಿಸ್ಥಿತಿಯಿಂದಾಗಿ ದೇಶದಲ್ಲಿ ಅಗತ್ಯ ವಸ್ತುಗಳ ಪೂರೈಕೆ ಸರಪಳಿಯಾದ ಪ್ರಯಾಣಿಕರ ವಿಮಾನಯಾನಗಳು, ರೈಲ್ವೆಗಳು ಮತ್ತು ರಾಜ್ಯ ರಸ್ತೆಮಾರ್ಗಗಳ ಸಾರಿಗೆಗಳು ತಮ್ಮ ಓಡಾಟವನ್ನು ನಿಲ್ಲಿಸಿದ್ದು, ಇದರಿಂದಾಗಿ ವಿತರಣಾ ವ್ಯವಸ್ಥೆಯ ನಿರ್ವಹಣೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಕಾನೂನು ಮತ್ತು ನ್ಯಾಯ ಸಚಿವ ಶ್ರೀ ರವಿಶಂಕರ್ ಪ್ರಸಾದ್ ಅವರು ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೆ ಮಾತನಾಡಿದರು. ಈ ಬಿಕ್ಕಟ್ಟಿನ ಅವಧಿಯಲ್ಲಿ ನಮ್ಮ ಚೌಕಟ್ಟಿನಿಂದ ಹೊರಗಿನ ಸಾಧ್ಯತೆ ಬಗ್ಗೆ ಯೋಚಿಸುವಂತೆ ಇಲಾಖೆಯನ್ನು ಸಚಿವರು ಪ್ರೋತ್ಸಾಹಿಸಿದರು. ಈ ಪ್ರೋತ್ಸಾಹದ ಪರಿಣಾಮವಾಗಿ, ಅಸ್ತಿತ್ವದಲ್ಲಿರುವ ಅಂಚೆ ಇಲಾಖೆಯ ವಾಹನಗಳ ಸಮೂಹದೊಂದಿಗೆ ಪ್ರಾಥಮಿಕವಾಗಿ ಒಳ-ನಗರ ವಿತರಣೆಗೆ ಬಳಸಲು ತಮ್ಮ ರಸ್ತೆ ಜಾಲವನ್ನು ಪ್ರಾರಂಭಿಸುವ ಆಲೋಚನೆ ಮಾಡಿದರು. 22 ದೂರದ ಮಾರ್ಗಗಳೊಂದಿಗೆ ನೂತನ ರಾಷ್ಟ್ರೀಯ ರಸ್ತೆ ಸಾರಿಗೆ ಜಾಲವನ್ನು ವಿನ್ಯಾಸಗೊಳಿಸಲಾಗಿದೆ. ದೇಶದ 75 ನಗರಗಳನ್ನು ತಲುಪಲು 500 ಕಿ.ಮೀ ಅಂತರದಲ್ಲಿ 34 ಅಂತರರಾಜ್ಯ/ ಒಳ-ರಾಜ್ಯ ರಹದಾರಿಯ ವೇಳಾಪಟ್ಟಿ ಮಾಡಲಾಯಿತು.  ಈ ನೂತನ ಉಪಕ್ರಮದಿಂದಾಗಿ ದೇಶದಲ್ಲಿ ಎಲ್ಲಿಗಾದರೂ ಅಗತ್ಯ ವಸ್ತುಗಳನ್ನು ಸಾಗಿಸಲು ಹಾಗೂ ಪಾರ್ಸೆಲ್‌ಗಳನ್ನು ತಲುಪಿಸಲು ಅಂಚೆ ಇಲಾಖೆಗೆ ಸಾಧ್ಯವಾಗುತ್ತದೆ ಮತ್ತು ಈಗ ದೇಶದೊಳಗೆ ಅಗತ್ಯ ವಸ್ತುಗಳ ವಿತರಣಾ ವ್ಯವಸ್ಥೆ ಸಮರ್ಪಕವಾಗಿ ನಡೆಯುತ್ತಿದೆ ಎಂಬುದನ್ನು ಇದು ಖಚಿತಪಡಿಸುತ್ತದೆ.

ದೇಶದ ಎಲ್ಲಾ ಮೂಲೆಗಳಿಗೆ ಔಷಧಿಗಳು, ಕೊವಿಡ್ - 19 ಪರೀಕ್ಷಾ ಕಿಟ್‌ ಗಳು, ಮುಖಕವಚಗಳು, ಸ್ಯಾನಿಟೈಜರ್‌ಗಳು, ಪಿ.ಪಿ.ಇ.ಗಳು ಹಾಗೂ ಸ್ವಾಶಕ್ರಿಯಾ ಉಪಕರಣ(ವೆಂಟಿಲೇಟರ್‌)ಗಳು ಮತ್ತು ಹೃದಯಸ್ಥಂಬನದ ಉಪಕರಣ (ಡಿಫಿಬ್ರಿಲೇಟರ್‌)ಗಳು ಮುಂತಾದ  ವೈದ್ಯಕೀಯ ಉಪಕರಣಗಳು ಸೇರಿದಂತೆ ಅಗತ್ಯ ವಸ್ತುಗಳ ಸರಬರಾಜನ್ನು ಸುಗಮವಾಗಿ ತಲುಪಿಸಿಕೊಡಲು ಅಂಚೆ ಇಲಾಖೆ ಈಗಾಗಲೇ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ.  ವಿಶೇಷವಾಗಿ ಆಧಾರ್ ಜೋಡಣೆಯಾದ ಪಾವತಿ ವ್ಯವಸ್ಥೆಯ ಮೂಲಕ ಹಿರಿಯರು, ದಿವ್ಯಾಂಗ ಜನರು, ಪಿಂಚಣಿದಾರರಿಗೆ ಹಣವನ್ನು ಅವರ ಮನೆ ಬಾಗಿಲಿಗೆ ಅಂಚೆ ಇಲಾಖೆ ತಲುಪಿಸುತ್ತಿದೆ. ದೇಶಾದ್ಯಂತದ ಜನರಿಗೆ ಅಗತ್ಯ ಸಾಮಾಗ್ರಿ ತಲುಪಲು ಸಾಧ್ಯವಾದ ರಾಷ್ಟ್ರೀಯ ರಸ್ತೆ ಸಾರಿಗೆ ಜಾಲವು ಅಂಚೆ ಇಲಾಖೆಯ ಮತ್ತೊಂದು ನೂತನ ಉಪಕ್ರಮವಾಗಿದೆ.

***



(Release ID: 1618331) Visitor Counter : 121