ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಕೊವಿಡ್-19 ಆಸ್ಪತ್ರೆಯ ಸ್ಥಳಗಳನ್ನು ಯು.ವಿ ಸೋಂಕು ನಿವಾರಣಾ ಟ್ರಾಲಿಗಳು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸುತ್ತವೆ
Posted On:
25 APR 2020 3:46PM by PIB Bengaluru
ಕೊವಿಡ್-19 ಆಸ್ಪತ್ರೆಯ ಸ್ಥಳಗಳನ್ನು ಯು.ವಿ ಸೋಂಕು ನಿವಾರಣಾ ಟ್ರಾಲಿಗಳು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸುತ್ತವೆ
ಇತರ ವೈರಸ್ ಮತ್ತು ಬ್ಯಾಕ್ಟೀರಿಯಾಗಳಂತೆ ಯು.ವಿ.ಸಿ ಬೆಳಕಿಗೆ ಕೊರೊನವೈರಸ್ ಸಂವೇದಿಸುತ್ತವೆ
ನೌಕರರ ರಾಜ್ಯ ವಿಮಾ ನಿಗಮ ಆಸ್ಪತ್ರೆ, ಹೈದರಾಬಾದ್ ನಲ್ಲಿ ಪ್ರಸ್ತುತ ವ್ಯವಸ್ಥೆಯನ್ನು ಅನುಷ್ಠಾನಕ್ಕಾಗಿ ನಿಯೋಜಿಸಲಾಗಿದೆ
ಕೋವಿಡ್ 19ರ ಶುಶ್ರೂಷೆಯ ಆಸ್ಪತ್ರೆಯ ಪರಿಸರವನ್ನು ತ್ವರಿತವಾಗಿ ಸ್ವಚ್ಛಗೊಳಿಸಲು ಯು.ವಿ.ಸಿ ಆಧಾರಿತ ಸೋಂಕು ನಿವಾರಣಾ ಟ್ರಾಲಿಯನ್ನು ಕಂಡುಹುಡುಕಿದ್ದಾರೆ. ಇಂಟರ್ನ್ಯಾಷನಲ್ ಅಡ್ವಾನ್ಸ್ಡ್ ರಿಸರ್ಚ್ ಸೆಂಟರ್ ಫಾರ್ ಪೌಡರ್ ಮೆಟಲರ್ಜಿ ಅಂಡ್ ನ್ಯೂ ಮೆಟೀರಿಯಲ್ಸ್ (ಎ.ಆರ್.ಸಿ.ಐ.), ಸ್ವಾಯತ್ತ ಸಂಸ್ಥೆಯಾದ ಆರ್ & ಡಿ ಸೆಂಟರ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ (ಡಿ.ಎಸ್.ಟಿ.), ಭಾರತ ಸರಕಾರ ಮತ್ತು ಹೈದರಾಬಾದ್ ವಿಶ್ವವಿದ್ಯಾಲಯ (ಯು.ಒ.ಹೆಚ್) ಹಾಗೂ ಮೆಕಿನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಎಂ.ಐ.ಎಲ್) ಸಂಸ್ಥೆಗಳ ಸಹಾಯದಿಂದ ಒಟ್ಟಾಗಿ ಕೋವಿಡ್ -19 ವಿರುದ್ಧ ಹೋರಾಡಲು ಯು.ವಿ.ಸಿ ಆಧಾರಿತ ಸೋಂಕು ನಿವಾರಣಾ ಟ್ರಾಲಿಯನ್ನು ಅಭಿವೃದ್ಧಿಪಡಿಸಿದೆ.
200 ರಿಂದ 300 ಎನ್.ಎಮ್.ಗಳ ನಡುವಿನ ತರಂಗಾಂತರಗಳ ವ್ಯಾಪ್ತಿಯಲ್ಲಿರುವ ಯು.ವಿ ಕಿರಣ ಬ್ಯಾಕ್ಟೀರಿಯಾ ಮತ್ತು ವೈರಸ್ಗಳಂತಹ ಸೂಕ್ಷ್ಮಜೀವಿಗಳನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ, ಹೀಗಾಗಿ ಗಾಳಿ ಮತ್ತು ಘನ ಮೇಲ್ಮೈಗಳನ್ನು ಅತಿ ಶೀಘ್ರವಾಗಿ ಸೋಂಕುರಹಿತಗೊಳಿಸುತ್ತದೆ. ಆಸ್ಪತ್ರೆಗಳು ಮತ್ತು ಇತರ ಮಾಲಿನ್ಯ ಪೀಡಿತ ಪರಿಸರದಲ್ಲಿ ಕಂಡುಬರುವ ಬ್ಯಾಕ್ಟೀರಿಯಾ ಮತ್ತು ವೈರಸ್ಗಳನ್ನು ಆಗಾಗ್ಗೆ ಸ್ವಚ್ಛಗೊಳಿಸಿ ತೆಗೆದುಹಾಕಲು ರಾಸಾಯನಿಕ ಸೋಂಕು ನಿವಾರಕಗಳ ವ್ಯವಸ್ಥೆ ಸಾಕಾಗುವುದಿಲ್ಲ. ಹಾಸಿಗೆಗಳ ಸೀಮಿತ ಲಭ್ಯತೆಯ ದೃಷ್ಟಿಯಿಂದ ಆಸ್ಪತ್ರೆಗಳಲ್ಲಿ ಮೊದಲ ರೋಗಿಗಳು ಬಳಸಿದ ಆರೈಕೆ ಹಾಸಿಗೆಗಳು ಮತ್ತು ಆಸ್ಪತ್ರೆ ಕೊಠಡಿಗಳನ್ನು ನಂತರದ ರೋಗಿ/ನಿವಾಸಿಗಳು ಪ್ರವೇಶಿಸುವ ಮುಂಚಿತವಾಗಿ ಅತಿ ಶೀಘ್ರವಾಗಿ ಶುಚಿಗೊಳಿಸುತ್ತದೆ. ಇತರ ವೈರಸ್ಗಳು ಮತ್ತು ಬ್ಯಾಕ್ಟೀರಿಯಾಗಳಂತೆ ಕೊರೊನವೈರಸ್ ಯು.ವಿ.ಸಿ ಕಿರಣಕ್ಕೆ ಸೂಕ್ಷ್ಮ ಸಂವೇದಿಗಳಾಗಿವೆ. 254 ಎನ್.ಎಮ್.ನಲ್ಲಿ ಗರಿಷ್ಠ ತೀವ್ರತೆ ಹೊಂದಿರುವ ಯು.ವಿ.ಸಿ ವಿಕಿರಣದ ಸೂಕ್ಷ್ಮಾಣು ಪರಿಣಾಮಗಳು ವೈರಸ್ ನ ಹೊರವಲಯದ ಸೆಲ್ಯುಲಾರ್ ಹಾನಿಗೆ ಕಾರಣವಾಗುತ್ತವೆ ಮತ್ತು ಇದರಿಂದಾಗಿ ಸೆಲ್ಯುಲಾರ್ ಪುನರಾವರ್ತನೆಯನ್ನು ತಡೆಯುತ್ತದೆ. ರಾಸಾಯನಿಕ ವಿಧಾನಗಳಿಗಿಂತ ಭಿನ್ನವಾಗಿ, ಯು.ವಿ ಕಿರಣ ಭೌತಿಕ ಪ್ರಕ್ರಿಯೆಯ ಮೂಲಕ ಸೋಂಕುಗಳ ತಕ್ಕೆಗೆ ಹಾನಿಗೊಳಿಸಿ, ಸೂಕ್ಷ್ಮಜೀವಿಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ನಿಷ್ಕ್ರಿಯಗೊಳಿಸುತ್ತದೆ.
ಎ.ಆರ್.ಸಿ.ಐ, ಯು.ಒಹೆಚ್., ಮತ್ತು ಎಮ್.ಐ.ಎಲ್. ಸಂಸ್ಥೆಗಳು ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದ ಯು.ವಿ.ಸಿ ಸೋಂಕು ನಿವಾರಣಾ ಟ್ರಾಲಿ (ಎತ್ತರ 1.6ಮೀx ಅಗಲ 0.6ಮೀ x ಉದ್ದ 0.9ಮೀ) 6-ಯು.ವಿ.ಸಿ. ಜರ್ಮಿಸಿದಲ್ ಟ್ಯೂಬ್ಗಳನ್ನು ಒಳಗೊಂಡಿದೆ, ಇವುಗಳನ್ನು ಪ್ರತಿ ದಿಕ್ಕಿಗೆ ಎದುರು ಬದುರಾಗಿ 2-ಟ್ಯೂಬ್ಗಳೊಂದಿಗೆ 3-ಬದಿಗಳನ್ನು ಬೆಳಗಿಸುವ ರೀತಿಯಲ್ಲಿ ಜೋಡಿಸಲಾಗಿದೆ. ಈ ದೀಪಗಳು ಗೋಡೆಗಳು, ಹಾಸಿಗೆಗಳು ಮತ್ತು ಕೋಣೆಯ ಗಾಳಿಯ ಕಿಟಕಿ ಮೇಲೆ ಇರುವ ಸೋಂಕುಗಳನ್ನು ತೆಗೆದು ಹಾಕುತ್ತವೆ, ನೆಲದ ಮೇಲಿರುವ ಸೋಂಕುಗಳನ್ನು ನೆಲಕ್ಕೆ ಎದುರು ಮುಖವಾಗಿರವ 2ಸಣ್ಣ ಯು.ವಿ. ದೀಪಗಳಿಂದ ನಿರ್ಮೂಲನ ಮಾಡಲಾಗುತ್ತದೆ. ಆಸ್ಪತ್ರೆಯ ಕೊಠಡಿಗಳಲ್ಲಿ, ಕೋಣೆಗಳಲ್ಲಿ ಟ್ರಾಲಿಯನ್ನು ಸುತ್ತಾಡಿಸಿ ತಿರುಗಿಸುತ್ತಾ ಎಲ್ಲಡೆ ಸೋಂಕುರಹಿತ ಮಾಡುವಾಗ, ಟ್ರಾಲಿ ಆಪರೇಟರ್ ರಕ್ಷಣಾತ್ಮಕ ಮುಸುಕು ಹಾಕಿ, ಕವಚಧಾರಿಯಾಗಿ ಯು.ವಿ. ನಿರೋಧಕ ಕನ್ನಡಕಗಳನ್ನು ಧರಿಸಿರುತ್ತಾರೆ.
ಸರಾಸರಿ ನಿಮಿಷಕ್ಕೆ 5 ಅಡಿ ವಿಸ್ತೀರ್ಣವನ್ನು ಸ್ವಚ್ಛಗೊಳಿಸುವ ಯು.ವಿ.ಸಿ ಟ್ರಾಲಿಯು, ಸುಮಾರು 400 ಚದರ ಅಡಿ ಕೋಣೆಯನ್ನು ಸಂಪೂರ್ಣ (> 99%) ಸೋಂಕು ರಹಿತವಾಗಿಸಲು ಸುಮಾರು 30 ನಿಮಿಷ ಸಮಯ ತೆಗೆದುಕೊಳ್ಳುತ್ತದೆ. ಪ್ರಸ್ತುತ ವ್ಯವಸ್ಥೆಯು ಮೊದಲ ಮೂಲಮಾದರಿಯಾಗಿದೆ. ಆಸ್ಪತ್ರೆಗಳು ಮತ್ತು ರೈಲ್ವೆ ಬೋಗಿಗಳಲ್ಲಿ ಸುಲಭವಾಗಿ ಬಳಸಬಹುದಾಗಿದೆ, ಇದನ್ನು ಕೊವಿಡ್-19 ರೋಗಿಗಳ ಚಿಕಿತ್ಸೆಗಾಗಿ ಯೋಜಿಸಲಾಗಿದೆ. ವಿಮಾನ ಕ್ಯಾಬಿನ್ಗಳಲ್ಲಿ ಅಗತ್ಯವಿರುವ ತ್ವರಿತ ಸೋಂಕು ತೆಗೆವ ದೃಷ್ಟಿಯಿಂದ ಸಣ್ಣ ಆಯಾಮಗಳ ಮತ್ತು ಹೆಚ್ಚಿನ ಯಾಂತ್ರೀಕೃತಗೊಂಡ ವ್ಯವಸ್ಥೆಗಳ ಉಪಕರಣ ನಿರ್ಮಾಣ ಇನ್ನೂ ಪ್ರಗತಿಯಲ್ಲಿವೆ. ಹೈದರಾಬಾದ್ ನ ನೌಕರರ ರಾಜ್ಯ ವಿಮಾ ನಿಗಮ (ಇ.ಎಸ್.ಐ.ಸಿ.) ಆಸ್ಪತ್ರೆಯಲ್ಲಿ ಪ್ರಸ್ತುತ ವ್ಯವಸ್ಥೆಯನ್ನು (ಪ್ರಮಾಣಿತ ಕಾರ್ಯಾಚರಣಾ ವಿಧಾನ ಮತ್ತು ಸುರಕ್ಷತಾ ಸೂಚನೆಗಳೊಂದಿಗೆ) ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ನಿಯೋಜಿಸಲಾಗಿದೆ. ರೋಗಿಯ ಬಿಡುಗಡೆ ಮಾಡಿದ ನಂತರ ಮತ್ತು ಆರೋಗ್ಯ ಸಿಬ್ಬಂದಿಗಳ ಅನುಪಸ್ಥಿತಿಯಲ್ಲಿ ಖಾಲಿಯಿರುವ ಕೋಣೆಗಳಲ್ಲಿ ಯು.ವಿ-ಲೈಟ್ ಸೋಂಕು ನಿವಾರಣಾ ಉಪಕರಣದಿಂದ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಾರೆ.
"ಆಳವಾದ ನೇರಳಾತೀತ ಕಿರಣವನ್ನು ಬಳಸಿಕೊಂಡು ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿ , ಆಸ್ಪತ್ರೆ ಕೊಠಡಿಗಳು, ಉಪಕರಣಗಳು ಮತ್ತು ಇತರ ಮೇಲ್ಮೈಗಳ ಶುಷ್ಕ ಸೋಂಕು ನಾಶ ಮತ್ತು ಕ್ರಿಮಿನಾಶ ಮಾಡುವುದು ಒಂದು ರೀತಿಯ ಉತ್ತಮ ಪರಿಹಾರವಾಗಿದೆ, ಇದನ್ನು ಸುಲಭ, ಸರಳ, ವೇಗದ ಬಳಕೆಯ ಮತ್ತು ದಕ್ಷತೆಯಿರುವ ಅತ್ಯಂತ ಆಕರ್ಷಕ ಡಿಸೈನರ್ ಟ್ರಾಲಿಯ ರೂಪದಲ್ಲಿ ಕಾರ್ಯಗತಗೊಳಿಸಲಾಗಿದೆ." ಎಂದು ಡಿ.ಎಸ್.ಟಿ. ಕಾರ್ಯದರ್ಶಿ ಪ್ರೊಫೆಸರ್ ಅಶುತೋಷ್ ಶರ್ಮಾ ಹೇಳಿದರು,
[ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಶ್ರೀಮತಿ ಎನ್. ಅಪರ್ಣ ರಾವ್, ಸಿ.ಪಿ.ಆರ್.ಒ., ಎ.ಆರ್.ಚಿ.ಐ, ಮಿಂಚಂಚೆ: aparna@arci.res.in, ಮೊ: +91-9849622731 ಅನ್ನು ಸಂಪರ್ಕಿಸಿ]
***
(Release ID: 1618327)
Visitor Counter : 242