ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಕೊವಿಡ್-19 ಸಾಂಕ್ರಾಮಿಕ ವಿರುದ್ಧ ಹೋರಾಡುವ ಸರ್ಕಾರದ ಪ್ರಯತ್ನಗಳನ್ನು ಬೆಂಬಲಿಸುವಲ್ಲಿ ಇಫ್ಕೊ ಪ್ರಮುಖ ಪಾತ್ರ ವಹಿಸುತ್ತಿದೆ - ಶ್ರೀ ಡಿ.ವಿ.ಸದಾನಂದ ಗೌಡ
ಪ್ರಕಟಣಾ ದಿನಾಂಕ:
24 APR 2020 6:12PM by PIB Bengaluru
ಕೊವಿಡ್-19 ಸಾಂಕ್ರಾಮಿಕ ವಿರುದ್ಧ ಹೋರಾಡುವ ಸರ್ಕಾರದ ಪ್ರಯತ್ನಗಳನ್ನು ಬೆಂಬಲಿಸುವಲ್ಲಿ ಇಫ್ಕೊ ಪ್ರಮುಖ ಪಾತ್ರ ವಹಿಸುತ್ತಿದೆ -
ಶ್ರೀ ಡಿ.ವಿ.ಸದಾನಂದ ಗೌಡ
ಕೊವಿಡ್-19 ಸಾಂಕ್ರಾಮಿಕ ಎದುರಿಸಲು ಮತ್ತು ರೋಗದ ಪರಿಣಾಮವನ್ನು ತಗ್ಗಿಸಲು ಸರ್ಕಾರಕ್ಕೆ ಸಹಾಯ ಮಾಡುವಲ್ಲಿ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಧೀನದಲ್ಲಿರುವ ರಸಗೊಬ್ಬರ ಸಹಕಾರಿ ಸಂಸ್ಥೆಯಾದ “ಇಫ್ಕೊ” ಸಂಸ್ಥೆಯು ಪ್ರಮುಖ ಪಾತ್ರ ವಹಿಸುತ್ತಿದೆ.
ಇಫ್ಕೋ ಬೆಂಬಲವನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ.ವಿ.ಸದಾನಂದ ಗೌಡ ಅವರು ಶ್ಲಾಘಿಸಿದ್ದಾರೆ. “ಕೊವಿಡ್-19 ಸಾಂಕ್ರಾಮಿಕ ರೋಗ ಹರಡುವುದರಿಂದ ಜಗತ್ತು ಈಗ ಬಹಳ ಕಷ್ಟದ ಹಂತವನ್ನು ದಾಟುತ್ತಿದೆ. ಸಾಂಕ್ರಾಮಿಕ ರೋಗವು ನಾಗರಿಕರ ಜೀವನ ಮತ್ತು ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ, ವಿಶೇಷವಾಗಿ ಸಮಾಜದ ಬಡ ಮತ್ತು ಅಂಚಿನಲ್ಲಿರುವ ವರ್ಗದವರು ಬಹಳ ಕಷ್ಟ ಅನುಭವಿಸುತ್ತಿದ್ದಾರೆ. ಕೊವಿಡ್-19 ನಿಂದ ಪ್ರಪಂಚದಾದ್ಯಂತ ದೊಡ್ಡ ಪ್ರಮಾಣದಲ್ಲಿ ಹಾನಿಗೊಳಗಾಗುತ್ತಿದೆ. ಈ ಮಹಾಮಾರಿ ರೋಗವನ್ನು ಕೇವಲ ಒಂಟಿಯಾಗಿ ಹೋರಾಡಲು ಸಾಧ್ಯವಿಲ್ಲ. ನಮ್ಮಲ್ಲಿ ಪ್ರತಿಯೊಬ್ಬರಿಂದಲೂ ಒಂದಲ್ಲಾ ಒಂದು ರೂಪದಲ್ಲಿ ಅಥವಾ ಇನ್ನೊಂದರಲ್ಲಿ ರೀತಿಯಲ್ಲಿ ಸಾಮೂಹಿಕವಾಗಿ ಪಾಲ್ಗೊಂಡು ಪ್ರವರ್ತಿಸಬೇಕಾದ ಪ್ರಕ್ರಿಯೆಯ ಅಗತ್ಯವಿದೆ” ಎಂದು ಸಚಿವ ಶ್ರೀ ಡಿ.ವಿ.ಸದಾನಂದ ಗೌಡ ಅವರು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿ.ಇ.ಒ. ಡಾ.ಯು.ಎಸ್.ಅವಸ್ತಿ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
“ಪಿ.ಎಂ. ಕೇರ್ಸ್” ನಿಧಿಗೆ ರೂ. 25 ಕೋಟಿಗಳ ಕೊಡುಗೆ ನೀಡಿದ್ದಕ್ಕಾಗಿ ಇಫ್ಕೊ ಸಂಸ್ಥೆಯನ್ನು ಕೇಂದ್ರ ಸಚಿವರು ಶ್ಲಾಘಿಸಿದರು. ‘ಈ ನಿಸ್ವಾರ್ಥ ಕಾರ್ಯಕ್ಕಾಗಿ ವ್ಯವಸ್ಥಾಪಕ ನಿರ್ದೇಶಕ, ವ್ಯವಸ್ಥಾಪಕರು, ನೌಕರರು ಮತ್ತು ಇಫ್ಕೊದ ಪಾಲುದಾರರಿಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಈ ಸಾಂಕ್ರಾಮಿಕ ರೋಗವನ್ನು ಸೋಲಿಸುವ ನಿಟ್ಟಿನಲ್ಲಿ ನಮ್ಮ ಸಾಮೂಹಿಕ ಸಂಕಲ್ಪವನ್ನು ಬಲಪಡಿಸಲು ಇದು ಅತ್ಯಂತ ಸಹಾಯಕವಾಗುತ್ತದೆ. " ಎಂದು ಕೇಂದ್ರ ಸಚಿವ ಶ್ರೀ ಡಿ.ವಿ.ಸದಾನಂದ ಗೌಡ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಸಚಿವ ಶ್ರೀ ಡಿ.ವಿ.ಸದಾನಂದ ಗೌಡ ಅವರ ಪ್ರೋತ್ಸಾಹದ ಈ ಮಾತುಗಳಿಗೆ ಇಫ್ಕೊ ಮುಖ್ಯ ಕಾರ್ಯ ನಿರ್ವಾಹಕರು ಧನ್ಯವಾದ ತಿಳಿಸಿದ್ದಾರೆ. ‘ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ರಾಷ್ಟ್ರದೊಂದಿಗೆ ಇಫ್ಕೊ ನಿಂತಿದೆ. ಈ ಸಾಂಕ್ರಾಮಿಕ ರೋಗದಿಂದ ರೈತ ಮತ್ತು ಗ್ರಾಮೀಣ ಭಾರತವನ್ನು ರಕ್ಷಿಸಲು ನಮ್ಮ ಕೈಲಾದಷ್ಟು ಪ್ರಯತ್ನ ಮಾಡುವ ಮೂಲಕ ಈ ರೋಗ ಪ್ರಸರಣ ಸರಪಳಿಯನ್ನು ನಾವು ಮುರಿಯಲು ಪ್ರಯತ್ನಿಸುತ್ತಿದ್ದೇವೆ’ ಎಂದು ಇಫ್ಕೊ ಮುಖ್ಯಕಾರ್ಯ ನಿರ್ವಾಹಕರು ಹೇಳಿದ್ದಾರೆ
ಮುಂಬರುವ ಮುಂಗಾರು ಬೆಳೆ (ಖಾರಿಫ್) ಋತುವಿನಲ್ಲಿ ಕೃಷಿ ಸಮುದಾಯಕ್ಕೆ ಸಾಕಷ್ಟು ಪ್ರಮಾಣದ ರಸಗೊಬ್ಬರಗಳನ್ನು ಸಕಾಲಿಕವಾಗಿ ಪೂರೈಸಲು ರಸಗೊಬ್ಬರ ಸಂಸ್ಥೆಗಳು ಈಗಾಗಲೇ ಸಂಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವಾಲಯ ಹೇಳಿದೆ.
***
(ಪ್ರಕಟಣೆ ಐ.ಡಿ.: 1618098)
ವಿಸಿಟರ್ ಕೌಂಟರ್ : 224