ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯ
ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ (ಎಂಎಫ್‌ಪಿಐ) ಭಾರತೀಯ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಸ್ಥೆ (ಐಐಎಫ್‌ಪಿಟಿ) ಕೋವಿಡ್–19 ರೋಗಿಗಳಿಗೆ ಪೌಷ್ಟಿಕ ಆಹಾರವನ್ನು ತಯಾರಿಸಿ ವಿತರಿಸುವ ಮೂಲಕ ರೋಗದ ವಿರುದ್ಧದ ಹೋರಾಟಕ್ಕೆ ಕೈಜೋಡಿಸುತ್ತಿದೆ
Posted On:
23 APR 2020 4:23PM by PIB Bengaluru
ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ (ಎಂಎಫ್‌ಪಿಐ) ಭಾರತೀಯ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಸ್ಥೆ (ಐಐಎಫ್‌ಪಿಟಿ) ಕೋವಿಡ್–19 ರೋಗಿಗಳಿಗೆ ಪೌಷ್ಟಿಕ ಆಹಾರವನ್ನು ತಯಾರಿಸಿ ವಿತರಿಸುವ ಮೂಲಕ ರೋಗದ ವಿರುದ್ಧದ ಹೋರಾಟಕ್ಕೆ ಕೈಜೋಡಿಸುತ್ತಿದೆ
ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ (ಎಂಎಫ್‌ಪಿಐ) ಪ್ರತಿಷ್ಠಿತ ಭಾರತೀಯ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಸ್ಥೆ (ಐಐಎಫ್‌ಪಿಟಿ) ಕೋವಿಡ್–19 ವಿರುದ್ಧದ ಹೋರಾಟದಲ್ಲಿ ಪಾಲ್ಗೊಂಡಿದೆ. ಕೋವಿಡ್–19 ರೋಗಿಗಳಿಗೆ ಪೌಷ್ಟಿಕ ಆಹಾರ ತಯಾರಿಸಿ ವಿತರಿಸುತ್ತಿರುವ ಐಐಎಫ್‌ಪಿಟಿಯ ಕಾರ್ಯವನ್ನು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆ ಸಚಿವರಾದ ಶ್ರೀಮತಿ ಹರ್ಷಿಮ್ರಾತ್ ಕೌರ್ ಬಾದಲ್ ಪ್ರಶಂಸಿಸಿದ್ದಾರೆ. ರೋಗಿಗಳಿಗೆ ಆರೋಗ್ಯಕರ ಮತ್ತು ಶಕ್ತಿ ವರ್ಧಕ ಆಹಾರ ಅಗತ್ಯವಿರುವುದರಿಂದ ಇಂತಹ ಕಾರ್ಯ ಕೈಗೊಂಡಿರುವುದು ಶ್ಲಾಘನೀಯ ಎಂದು ಹೇಳಿದ್ದಾರೆ.
ಭಾರತೀಯ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಸ್ಥೆ (ಐಐಎಫ್‌ಪಿಟಿ) ವೈದ್ಯಕೀಯ ತಜ್ಞರ ನಿಗಾದಲ್ಲಿ ಪೌಷ್ಟಿಕ ಆಹಾರವನ್ನು ತಯಾರಿಸುತ್ತಿದೆ. ತಮಿಳುನಾಡಿನ ತಂಜಾವೂರು ವೈದ್ಯಕೀಯ ಕಾಲೇಜಿನಲ್ಲಿ ಈ ಸಾಂಕ್ರಾಮಿಕ ಕಾಯಿಲೆಗೆ ಚಿಕಿತ್ಸೆ ಪಡೆದು ಗುಣಮುಖರಾದವರು ಸಹ ಈ ಆಹಾರ ಸೇವಿಸಿದ್ದರು.
ಕೋವಿಡ್–19 ನಿಯಂತ್ರಿಸಲು ತಂಜಾವೂರು ಜಿಲ್ಲಾಡಳಿತ ಮತ್ತು ತಂಜಾವೂರು ವೈದ್ಯಕೀಯ ಕಾಲೇಜಿನ ಪ್ರಯತ್ನಗಳನ್ನು ಐಐಎಫ್‌ಪಿಟಿ ಬೆಂಬಲಿಸಿದೆ. ಕೋವಿಡ್–19 ಹಿನ್ನೆಲೆಯಲ್ಲಿ ಶಕ್ತಿ ವರ್ಧಕ ಹೆಚ್ಚಿಸುವ ನಿಟ್ಟಿನಲ್ಲಿ ಪೌಷ್ಟಿಕ ಆಹಾರ ತಯಾರಿಸುವ ಕಾರ್ಯಕ್ಕೆ ಗಮನ ನೀಡಲಾಗಿದೆ. ನಿರ್ದೇಶಕ ಡಾ. ಸಿ. ಆನಂದರಾಮಕೃಷ್ಣನ್ ತಿಳಿಸಿದ್ದಾರೆ. ಐಐಎಫ್‌ಪಿಟಿ ವಿಜ್ಞಾನಿಗಳು ವೈವಿಧ್ಯಮಯ ದೇಶಿಯ ಆಹಾರಗಳನ್ನು ಪ್ಯಾಕ್ ಮಾಡಿ ವಿತರಿಸುವ ಯೋಜನೆಯನ್ನು ರೂಪಿಸಿದ್ದಾರೆ. ಬ್ರೆಡ್, ಕೂಕ್ಕಿಸ್, ರಸ್ಕ್ಸ್ ಮತ್ತು ಸಿರಿಧಾನ್ಯಗಳನ್ನು ಪ್ರತಿದಿನ ಐಐಎಫ್‌ಪಿಟಿಯ ಎಚ್‌ಎಸಿಸಿಪಿ ಮತ್ತು ಐಎಸ್‌ಐ ಪ್ರಮಾಣೀಕೃತ ಆಹಾರ ಸಂಸ್ಕರಣಾ ವ್ಯಾಪಾರ ಇನ್‌ಕ್ಯೂಬೇಷನ್ ಕೇಂದ್ರ(ಎಫ್‌ಪಿಬಿಐಸಿ) ತಯಾರಿಸಲಾಗುತ್ತಿದೆ. ಇಲ್ಲಿಂದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ. 2020ರ ಏಪ್ರಿಲ್ 21ರಿಂದ ಈ ಕಾರ್ಯ ಕೈಗೊಳ್ಳಲಾಗುತ್ತಿದೆ. ಜಿಲ್ಲಾಧಿಕಾರಿ, ಡೀನ್, ಟಿಎಂಸಿ ಉಸ್ತುವಾರಿಯಲ್ಲಿ ಈ ಕಾರ್ಯಕೈಗೊಳ್ಳಲಾಗಿದೆ. ಎಲ್ಲ ಆಹಾರವನ್ನು ಐಐಎಫ್‌ಪಿಟಿ ಸಿಬ್ಬಂದಿ ಎಚ್ಚರಿಕೆಯಿಂದ ಮತ್ತು ಜವಾಬ್ದಾರಿಯಿಂದ ತಯಾರಿಸಿ ಪ್ಯಾಕ್ ಮಾಡುತ್ತಿದ್ದಾರೆ.
ಒಣಗಿದ ನುಗ್ಗೆಸೊಪ್ಪು ಎಲೆಗಳು, ಶೇಂಗಾ ಪುಡಿ ಮತ್ತು ಶೇಕಡ 9.8ರಷ್ಟು ಪ್ರೋಟಿನ್ ಮತ್ತು ಶೇಕಡ 8.1 ಫೈಬರ್ ಹಾಗೂ ನೈಸರ್ಗಿಕ ಶಕ್ತಿ ನಿರೋಧಕ ಅರಿಶಿನ, ಮಸಾಲೆ ಮತ್ತಿತರ ಪದಾರ್ಥಗಳಿಂದ ಬ್ರೆಡ್ ತಯಾರಿಸಿ ನೀಡಲಾಗುತ್ತಿದೆ. ಕೂಕ್ಕಿಸ್‌ನಲ್ಲಿ ಶೇಕಡ 14.16ನಲ್ಲಿ ಪ್ರೊಟಿನ್ ಮತ್ತು ಶೇಕಡ 8.71ರಷ್ಟು ಫೈಬರ್ ಒಳಗೋಮಡಿವೆ. ಇವೆಲ್ಲವೂಗಳನ್ನು ತಯಾರಿಸಿದ ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗುತ್ತಿದೆ.
|
|
|
|
ಐಐಎಫ್ಪಿಟಿಯ ಎಫ್‌ಪಿಬಿಐಸಿ ನಲ್ಲಿ ತಯಾರಿಸಲಾಗುತ್ತಿರುವ ಉತ್ಪನ್ನಗಳು
|
ಪ್ಯಾಕ್ ಮಾಡಿ ಲೇಬಲ್ ಮಾಡಲಾದ ಉತ್ಪನ್ನಗಳು
|
ಐಐಎಫ್‌ಪಿಟಿಯಲ್ಲಿ ಎಫ್‌ಎಸ್‌ಎಸ್‌ಎಐ ರೆಫರಲ್ ಪ್ರಯೋಗಾಲಯವಿದೆ. ಜತೆಗೆ, ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪರೀಕ್ಷೆ ಇಲಾಖೆಯು ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಇತರ ಅಧಿಕಾರಿಗಳಿಗೆ ತಯಾರಿಸುತ್ತಿದೆ. ವಿವಿಧ ರೀತಿಯ ಕರ್ತವ್ಯಗಳಿಗೆ ನಿಯೋಜಿತರಾಗುವವರಿಗೆ ಇವುಗಳನ್ನು ನೀಡಲಾಗುತ್ತಿದೆ. ಹ್ಯಾಂಡ್ ಸ್ಯಾನಿಟೈಜರ್ ಅನ್ನು ಡಬ್ಲ್ಯೂಎಚ್ಒ ಶಿಷ್ಟಾಚಾರದ ಪ್ರಕಾರವೇ ತಯಾರಿಸಲಾಗುತ್ತಿದೆ.
|
ವಿತರಣೆಗಾಗಿ ಸಿದ್ಧಪಡಿಸಿರುವ ಹ್ಯಾಂಡ್ ಸ್ಯಾನಿಟೈಸರ್ ಗಳು
|
ಐಐಎಫ್ಪಿಟಿ ಕುರಿತು
ಐಐಎಫ್‌ಪಿಟಿಯು ರಾಷ್ಟ್ರ ಮಟ್ಟದ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಯಾಗಿದೆ. ಭಾರತ ಸರ್ಕಾರದ ಆಹಾರ ಸಂಸ್ಕರಣೆ ಕೈಗಾರಿಕೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ತಮಿಳುನಾಡಿನ ತಂಜಾವೂರಿನಲ್ಲಿ ಈ ಸಂಸ್ಥೆಯ ಮುಖ್ಯ ಕಚೇರಿ ಇದೆ. ಜತೆಗೆ, ಪಂಜಾಬ್‌ನ ಬಥಿಂದಾ, ಅಸ್ಸಾಂನ ಗುವಾಹಟಿಯಲ್ಲಿ ಸಂಸ್ಥೆಯ ಕಚೇರಿಗಳಿವೆ. ಆಹಾರ ಸಂಸ್ಕರಣೆ, ಮೌಲ್ಯ ವರ್ಧನೆ, ಆಹಾರ ಗುಣಮಟ್ಟು, ಸುರಕ್ಷತೆ ಮತ್ತು ಬ್ಯೂಸಿನೆಸ್ ಇನ್‌ಕ್ಯುಬೇಷನ್ ಸೇರಿದಂತೆ ವಿವಿಧ ಸೇವೆಗಳನ್ನು ಐಐಎಫ್‌ಪಿಟಿ ಒದಗಿಸುತ್ತದೆ.
***
(Release ID: 1618087)
Visitor Counter : 241