ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ವಿಶ್ವ ಪುಸ್ತಕ ದಿನದಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೊಖ್ರಿಯಾಲ್ ‘ನಿಶಾಂಕ್’ #MyBookMyFriend ಅಭಿಯಾನವನ್ನು ಪ್ರಾರಂಭಿಸಿದ್ದಾರೆ

Posted On: 23 APR 2020 7:34PM by PIB Bengaluru

ವಿಶ್ವ ಪುಸ್ತಕ ದಿನದಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೊಖ್ರಿಯಾಲ್ ‘ನಿಶಾಂಕ್’ #MyBookMyFriend ಅಭಿಯಾನವನ್ನು ಪ್ರಾರಂಭಿಸಿದ್ದಾರೆ

ಶ್ರೀ ರಮೇಶ್ ಪೊಖ್ರಿಯಾಲ್ ‘ನಿಶಾಂಕ್’ ಹಲವಾರು ಕೇಂದ್ರ ಸಚಿವರುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ಯಾಗ್ ಮಾಡಿದ್ದಾರೆ ಮತ್ತು #MyBookMyFriend ಉಪಕ್ರಮಕ್ಕೆ ಸೇರಲು ಮನವಿ ಮಾಡಿದರು

 

ವಿಶ್ವ ಪುಸ್ತಕ ದಿನಾಚರಣೆಯ ಅಂಗವಾಗಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೊಖ್ರಿಯಾಲ್ ‘ನಿಶಾಂಕ್’ ಅವರು ಎಲ್ಲರಿಗೂ ಶುಭ ಕೋರಿದರು ಮತ್ತು ಇದೇ ಸಂದರ್ಭದಲ್ಲಿ #MyBookMyFriend ಅಭಿಯಾನವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಾರಂಭಿಸಿದರು. ನೀವು ಒಂದು ಪುಸ್ತಕ ತೆರೆದಾಗ, ಹೊಸ ಜಗತ್ತನ್ನೇ ತೆರೆಯುವಿರಿ ಎಂದು ಹೇಳುವ ವಿಡಿಯೋ ಸಂದೇಶವನ್ನು, ಶ್ರೀ ಪೊಖ್ರಿಯಾಲ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಪುಸ್ತಕಗಳು ಒಬ್ಬ ವ್ಯಕ್ತಿಯ ಅತ್ಯುತ್ತಮ ಸ್ನೇಹಿತ ಎಂದರು. ಪುಸ್ತಕಗಳು ಪ್ರತಿಯೊಬ್ಬರಿಗೂ ಹೊಸ ವಿಚಾರಗಳನ್ನು ಯೋಚಿಸಲು ಪ್ರೇರೇಪಿಸುತ್ತವೆ. ಜೀವನದ ಕಠಿಣ ಸಮಯಗಳಲ್ಲಿ ಪುಸ್ತಕಗಳು ಮಾರ್ಗದರ್ಶಿಯಾಗಿ ಸೇವೆಸಲ್ಲಿಸುತ್ತವೆ ಎಂದೂ ಶ್ರೀ ನಿಶಾಂಕ್ ಅವರು ಹೇಳಿದರು.

ಈ ಬಾರಿಯ ವಿಶ್ವ ಪುಸ್ತಕ ದಿನಾಚರಣೆಯನ್ನು ಲಾಕ್ ಡೌನ್ ಅವಧಿಯಲ್ಲಿ ಆಚರಿಸಲಾಗುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು. ಈ ಲಾಕ್ ಡೌನ್ ಅವಧಿಯಲ್ಲಿ ವಿದ್ಯಾರ್ಥಿಗಳು ತಮ್ಮ ಪಠ್ಯ ಪುಸ್ತಕಗಳ ಜೊತೆಗೆ, ಆಸಕ್ತಿ ಇರುವ ಇತರ ಪುಸ್ತಕಗಳನ್ನೂ ಓದಬೇಕೆಂದು ಅವರು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು. ಇದರಿಂದ ಹೊಸತೇನನ್ನಾದರೂ ಕಲಿಯುವ ಅವಕಾಶ ಲಭಿಸುತ್ತದೆ. ವಿದ್ಯಾರ್ಥಿಗಳೆಲ್ಲರೂ ಪುಸ್ತಕ ಓದಿ, ಅವರು ಪ್ರಸ್ತುತ ಓದುತ್ತಿರುವ ಪುಸ್ತಕದ ಕುರಿತು ಸಾಮಾಜಿಕ ಮಾಧ್ಯಮದ #MyBookMyFriend ಮೂಲಕ ಅವರ ಜೊತೆ ಹಂಚಿಕೊಳ್ಳಬೇಕೆಂದು ಮನವಿಮಾಡಿಕೊಂಡರು.

ಶ್ರೀ ಪೊಖ್ರಿಯಾಲ್ ಅವರು ಹಲವಾರು ಕೇಂದ್ರ ಸಚಿವರನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ಯಾಗ್ ಮಾಡಿ #MyBookMyFriend ಅಭಿಯಾನಕ್ಕೆ ಸೇರಲು ಮನವಿ ಮಾಡಿಕೊಂಡಿದ್ದಾರೆ. ಇದರ ಜೊತೆಗೆ, ನಮ್ಮ ದೇಶದ ಜನತೆಗೆ ಸ್ಫೂರ್ತಿ ನೀಡಲು, ದೇಶದ ವಿವಿಧ ಭಾಗಗಳ ಕೆಲವು ಪ್ರಮುಖ ವ್ಯಕ್ತಿಗಳನ್ನೂ ಈ ಅಭಿಯಾನಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

***



(Release ID: 1618035) Visitor Counter : 148