ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಆನ್‌ ಲೈನ್ ಕೊರೊನಾ ಕೋರ್ಸ್ ಪ್ರಾರಂಭವಾದ ಎರಡು ವಾರಗಳಲ್ಲಿ 2,90,000 ಕ್ಕೂ ಹೆಚ್ಚು ತರಬೇತಿ ಕೋರ್ಸ್‌ ಹಾಗು 1,83,000 ಬಳಕೆದಾರರನ್ನು ಹೊಂದಿದೆ: ಡಾ. ಜಿತೇಂದ್ರ ಸಿಂಗ್

Posted On: 23 APR 2020 7:16PM by PIB Bengaluru

ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಆನ್ಲೈನ್ ಕೊರೊನಾ ಕೋರ್ಸ್ ಪ್ರಾರಂಭವಾದ ಎರಡು ವಾರಗಳಲ್ಲಿ 2,90,000 ಕ್ಕೂ ಹೆಚ್ಚು ತರಬೇತಿ ಕೋರ್ಸ್ಹಾಗು 1,83,000 ಬಳಕೆದಾರರನ್ನು ಹೊಂದಿದೆ: ಡಾ. ಜಿತೇಂದ್ರ ಸಿಂಗ್

 

ಡಿಒಪಿಟಿ (ಸಿಬ್ಬಂದಿ ಮತ್ತು ತರಬೇತಿ ಇಲಾಖೆ) ಆನ್ಲೈನ್ ಕೊರೊನಾ ಕೋರ್ಸ್ ಭಾರಿ ಪ್ರತಿಕ್ರಿಯೆ ಪಡೆಯುತ್ತಿದೆ ಮತ್ತು ಪ್ರಾರಂಭವಾದ ಎರಡು ವಾರಗಳಲ್ಲಿ 2,90,000 ಕ್ಕೂ ಹೆಚ್ಚು ತರಬೇತಿ ಕೋರ್ಸ್ಗಳನ್ನು ಪ್ರಾರಂಭಿಸಲಾಗಿದೆ ಮತ್ತು 1,83,000 ಕ್ಕೂ ಹೆಚ್ಚು ಬಳಕೆದಾರರು ವೇದಿಕೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಇದನ್ನು ಇಂದು ಮಾಧ್ಯಮಗಳಿಗೆ ತಿಳಿಸಿದ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ಕೇಂದ್ರ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ), ಪ್ರಧಾನಮಂತ್ರಿ ಕಚೇರಿ ರಾಜ್ಯ ಸಚಿವರು, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ, ಡಾ.ಜಿತೇಂದ್ರ ಸಿಂಗ್ ಒಂದು ಹೊಸ ಪ್ರಯೋಗದಲ್ಲಿ, ಬಹುಶಃ ರೀತಿಯಲ್ಲಿಯೇ ಮೊದಲನೆಯದು, ಕಲಿಕೆಯ ವೇದಿಕೆ https://igot.gov.in ಮೂಲಕ ಮುಂಚೂಣಿಯ ಕೊರೊನಾ ಯೋಧರನ್ನು ಸಬಲೀಕರಣಗೊಳಿಸುವ ಘಟಕವನ್ನು ಡಿಪಿಟಿ ಪರಿಚಯಿಸಿದೆ. ಮುಂಚೂಣಿಯ ಕೊರೊನಾ ಯೋಧರನ್ನು ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ತರಬೇತಿ ಮತ್ತು ತಾಜಾ ಮಾಹಿತಿಗಳೊಂದಿಗೆ ಸಜ್ಜುಗೊಳಿಸಲು ಆನ್ಲೈನ್ ಮಾಧ್ಯಮವೆಂದು ಊಹಿಸಲಾಗಿತ್ತು ಅದುವೇ ಒಂದು ಅನನ್ಯ ಯಶಸ್ಸಿನ ಕಥೆಯೆಂದು ಸಾಬೀತಾಗಿದೆ, ಇದು ಮುಂದಿನ ದಿನಗಳಲ್ಲಿ ವಿಭಿನ್ನ ರೂಪಗಳಲ್ಲಿ ಅನುಕರಿಸಲ್ಪಡುತ್ತದೆ ಎಂದು ಅವರು ಹೇಳಿದರು. .

ವಿಶೇಷ ಪ್ಲಾಟ್ಫಾರ್ಮ್ ಫ್ಲೆಕ್ಸಿ-ಟೈಮ್ ಮತ್ತು ಆನ್-ಸೈಟ್ ಆಧಾರದ ಮೇಲೆ ತರಬೇತಿ ಮಾಡ್ಯೂಲ್ಗಳನ್ನು ಒದಗಿಸುತ್ತಿದೆ ಎಂದು ತಿಳಿಸಲಾಯಿತು, ಇದರಿಂದಾಗಿ ಕೋವಿಡ್ ಪ್ರತಿಸ್ಪಂದನೆಯನ್ನು ಸ್ಮಾರ್ಟ್ ಫೋನ್ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ತಲುಪಿಸಬಹುದು. ಉದ್ದೇಶಕ್ಕಾಗಿ ಮೀಸಲಾದ ಆಂಡ್ರಾಯ್ಡ್ ಆಧಾರಿತ ಆ್ಯಪ್ ಅನ್ನು ಸಹ ಪ್ರಾರಂಭಿಸಲಾಗಿದೆ ಮತ್ತು https://bit.ly/dikshaigot ಲಿಂಕ್ ಬಳಸಿ ಡೌನ್ಲೋಡ್ ಮಾಡಬಹುದು.

ಕೋವಿಡ್ ಕಲಿಕಾ ವೇದಿಕೆಯು ಮುಂಚೂಣಿ ಯೋಧರನ್ನು ಸಬಲೀಕರಣಗೊಳಿಸುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯನ್ನು ಆಧರಿಸಿದೆ ಮತ್ತು ಸರಿಯಾದ ರೀತಿಯ ಜ್ಞಾನದಿಂದ ಸಜ್ಜುಗೊಳಿಸುವ ಮೂಲಕ ಅವರನ್ನು ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗದಂತೆ ರಕ್ಷಿಸುತ್ತದೆ. ಕೋರ್ಸ್ ತರಬೇತಿ ವಿಷಯಗಳಲ್ಲಿ ಕೋವಿಡ್ ಕ್ಲಿನಿಕಲ್ ಮ್ಯಾನೇಜ್ಮೆಂಟ್, ಐಸಿಯು ಕೇರ್ ಮ್ಯಾನೇಜ್ಮೆಂಟ್, ಸೋಂಕು ತಡೆಗಟ್ಟುವಿಕೆ ಮತ್ತು ಆರೈಕೆ, ಪಿಪಿಇ ಬಳಕೆ, ಸಂಪರ್ಕತಡೆ ಮತ್ತು ಪ್ರತ್ಯೇಕತೆ, ಎನ್ಸಿಸಿ ಕೆಡೆಟ್ಗಳಿಗೆ ತರಬೇತಿ, ಕೋವಿಡ್19 ಪ್ರಕರಣಗಳ ನಿರ್ವಹಣೆ, ಪ್ರಯೋಗಾಲಯದ ಮಾದರಿ ಸಂಗ್ರಹ ಮತ್ತು ಪರೀಕ್ಷೆ, ರೋಗಿಗಳ ಮಾನಸಿಕ ಆರೈಕೆ, ಕೋವಿಡ್ ನಲ್ಲಿ ಮಕ್ಕಳ ಆರೈಕೆ, ಕೋವಿಡ್ ಸಮಯದಲ್ಲಿ ಗರ್ಭಧಾರಣೆ, ಇತ್ಯಾದಿ.

ಹೊಸ ಕಲಿಕೆಯ ವಿಷಯವನ್ನು ನಿಯಮಿತವಾಗಿ ಮಾಡ್ಯೂಲ್ಗೆ ಸೇರಿಸಲಾಗುತ್ತಿದೆ ಮತ್ತು ವೈದ್ಯರು, ದಾದಿಯರು, ಅರೆವೈದ್ಯರು ಮತ್ತು ಪೊಲೀಸ್ ಸಂಸ್ಥೆಗಳಿಂದ ಹಿಡಿದು ನೆಹರೂ ಯುವಕೇಂದ್ರಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರವರೆಗಿನ 18 ಸೆಟ್ಗಳ ಪಾತ್ರಗಳ ತರಬೇತಿ ಅವಶ್ಯಕತೆಗಳನ್ನು ಪೂರೈಸಲು ತರಬೇತಿ ಮಾಡ್ಯೂಲ್ಗಳನ್ನು ವಿನ್ಯಾಸಗೊಳಿಸಲಾಗಿದೆ.

***



(Release ID: 1618016) Visitor Counter : 146