ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ವಿಜ್ಞಾನ ಮತ್ತು ತಾಂತ್ರಿಕ ಇಲಾಖೆ ಬೆಂಬಲಿತ ಸರ್ಕಾರೇತರ ಜಾಲಗಳು ಕೋವಿಡ್-19 ವಿರುದ್ಧ ಸಮುದಾಯ ಮಟ್ಟದಲ್ಲಿ ವಿಜ್ಞಾನ ಮತ್ತು ತಾಂತ್ರಿಕದ ಮಧ್ಯಸ್ಥಿಕೆಗಳ ಮೂಲಕ ಹೋರಾಡುತ್ತಿದೆ

Posted On: 22 APR 2020 5:37PM by PIB Bengaluru

ವಿಜ್ಞಾನ ಮತ್ತು ತಾಂತ್ರಿಕ ಇಲಾಖೆ ಬೆಂಬಲಿತ ಸರ್ಕಾರೇತರ ಜಾಲಗಳು ಕೋವಿಡ್-19 ವಿರುದ್ಧ ಸಮುದಾಯ ಮಟ್ಟದಲ್ಲಿ ವಿಜ್ಞಾನ ಮತ್ತು ತಾಂತ್ರಿಕದ ಮಧ್ಯಸ್ಥಿಕೆಗಳ ಮೂಲಕ ಹೋರಾಡುತ್ತಿದೆ

 

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿಎಸ್ಟಿ) ಸೈನ್ಸ್ ಫಾರ್ ಈಕ್ವಿಟಿ ಎಂಪವರ್ಮೆಂಟ್ ಅಂಡ್ ಡೆವಲಪ್ಮೆಂಟ್ (ಎಸ್ ಡಿ) ವಿಭಾಗದಿಂದ ಬೆಂಬಲಿತವಾದ ವಿಜ್ಞಾನ ಮತ್ತು ತಂತ್ರಜ್ಞಾನ (ಎಸ್ & ಟಿ) ದಿಂದ ಸಶಕ್ತಗೊಂಡ ಸರ್ಕಾರೇತರ ಸಂಸ್ಥೆಗಳು ವಿವಿಧ ಎಸ್ & ಟಿ ಮಧ್ಯಸ್ಥಿಕೆಗಳ ಮೂಲಕ ಕೋವಿಡ್-19 ಅನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿವೆ ಮತ್ತು ವಿವಿಧ ರಾಜ್ಯಗಳ ಮತ್ತು ಕೆಳಗಿನ ಹಂತಗಳ ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿವೆ.

ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ (ಪಿಎಸ್) ಮಾರ್ಗಸೂಚಿಗಳನ್ನು ಅನುಸರಿಸಿ ಸರಿಸುಮಾರು 1,20,000 ಮುಖಗವಸುಗಳನ್ನು ತಯಾರಿಸಲಾಯಿತು ಮತ್ತು ಮುಖ್ಯವಾಗಿ ಕೋವಿಡ್ -19 ಹರಡುವಿಕೆಯಿಂದ ಬಾಧಿತವಾಗಿರುವ ಆಂಧ್ರಪ್ರದೇಶ, ದೆಹಲಿ, ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ರಾಜಸ್ಥಾನ ಉತ್ತರಾಖಂಡ, ಉತ್ತರ ಪ್ರದೇಶ, ತಮಿಳುನಾಡು, ತೆಲಂಗಾಣ, ತ್ರಿಪುರ, ಪಶ್ಚಿಮ ಬಂಗಾಳ ಮತ್ತು ಮುಂತಾದವುಗಳಿಗೆ, 30 ಎನ್ಜಿಒಗಳು ಮತ್ತು ಸಮುದಾಯ ಆಧಾರಿತ ಸಂಸ್ಥೆಗಳ ಜಾಲದ ಮೂಲಕ ವಿತರಿಸಲಾಯಿತು ಸರ್ಕಾರೇತರ ಸಂಸ್ಥೆಯ ಜಾಲದ ಇತರ ಸದಸ್ಯರು ಅನುಸರಿಸಲು ಸಹ ಸಕ್ರಿಯಗೊಳಿಸಲಾಯಿತು.

ನವೀನವಾದ ಮುಕ್ತ ಸಂಪನ್ಮೂಲ ವಿನ್ಯಾಸದ ಮೂಲಕ ತಯಾರಿಸಿದ 3 ಡಿ ಮುದ್ರಿತ ಮುಖದ ಕವಚಗಳನ್ನು ಮಹಾರಾಷ್ಟ್ರದ 2500 ಪೊಲೀಸ್ ಸಿಬ್ಬಂದಿ ಮತ್ತು ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ವಿತರಿಸಲಾಯಿತು. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ ) ಶಿಫಾರಸುಗಳ ಪ್ರಕಾರ ಹ್ಯಾಂಡ್ ಸ್ಯಾನಿಟೈಜರ್ಗಳು ಮತ್ತು ಹ್ಯಾಂಡ್ವಾಶ್ ಅನ್ನು ಸಮುದಾಯದಲ್ಲಿ ವಿತರಿಸಲು ಸಿದ್ಧಪಡಿಸಲಾಗಿದೆ. ರೀಥಾ (ಸಪಿಂಡಸ್ ಮುಕೊರೊಸ್ಸಿ) ಮತ್ತು ಎಥೆನಾಲ್, ಹೈಡ್ರೋಜನ್ ಪೆರಾಕ್ಸೈಡ್, ಗ್ಲಿಸರಾಲ್, ಮತ್ತು ಮಗ್ವರ್ಟ್ (ಆರ್ಟೆಮಿಸಿಯಾ ನೀಲಗಿರಿಕಾ) ಮತ್ತು ಸಿಟ್ರೊನೆಲ್ಲಾ ಸಾರವನ್ನು ಹೊಂದಿರುವ ಹ್ಯಾಂಡ್ಸ್ಯಾನಿಟೈಜರ್ಗಳನ್ನು ಬಳಸಿಕೊಂಡು ಯುಎಸ್ಎಫ್ಡಿಎ ಮಾರ್ಗಸೂಚಿಗಳ ಪ್ರಕಾರ 100% ನೈಸರ್ಗಿಕ ಕೈ ತೊಳೆಯುವ ದ್ರವಗಳ ಪ್ರೋಟೋಕಾಲ್ಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಮುಂಬರುವ ಹದಿನೈದು ದಿನಗಳಲ್ಲಿ 3,00,000 ಫೇಸ್ ಮಾಸ್ಕ್, (ಮುಖಗವಸು) 3,000 ಫೇಸ್ ಶೀಲ್ಡ್,(ಮುಖಕವಚ) 15,000 ಲೀಟರ್ ಹ್ಯಾಂಡ್ ಸ್ಯಾನಿಟೈಜರ್, ಮತ್ತು 5,000 ಲೀಟರ್ ಲಿಕ್ವಿಡ್ ಹ್ಯಾಂಡ್ ವಾಶ್ ಉತ್ಪಾದಿಸಲು ಕಾರ್ಯಾಚರಣೆಯನ್ನು ಮತ್ತಷ್ಟು ಹೆಚ್ಚಿಸಲಾಗುತ್ತಿದೆ. ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ (ಎಸ್ಆರ್ಎಲ್ಎಂ) ಒಳಗೊಂಡ ಮಧ್ಯಸ್ಥಿಕೆಗಳ ಪ್ರಸಾರಕ್ಕಾಗಿ ಮಹಿಳಾ ಸ್ವಸಹಾಯ ಸಂಘಗಳು, ಕಿಸಾನ್ ಕ್ಲಬ್ಗಳು ಮತ್ತು ಯುವಕರನ್ನು ಸಜ್ಜುಗೊಳಿಸಲಾಗುತ್ತಿದೆ. ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಲ್ಲಿ ನಿರ್ಣಾಯಕವಾದ ಮಧ್ಯಸ್ಥಿಕೆಗಳ ಬಗ್ಗೆ ಸಮುದಾಯಗಳ ಜಾಗೃತಿ ಮತ್ತು ಸಾಮರ್ಥ್ಯವನ್ನು ಸರ್ಕಾರೇತರ ಜಾಲಗಳು ನಿರ್ಮಿಸಿವೆ.

ಕೋವಿಡ್-19 ಸೋಂಕನ್ನು ತಡೆಗಟ್ಟುವುದರ ಹೊರತಾಗಿ, ಮಧ್ಯಸ್ಥಿಕೆಗಳು ಮಹಿಳಾ ಸ್ವಸಹಾಯ ಸಂಘಗಳಿಗೆ ಪರ್ಯಾಯ ಜೀವನೋಪಾಯದ ಮೂಲವನ್ನು ಸಹ ಒದಗಿಸಿವೆ. ಡಿ ಎಸ್ ಟಿಯ ಬಲವಾದ ವಿಜ್ಞಾನ ಮತ್ತು ತಂತ್ರಜ್ಞಾನ (ಎಸ್ & ಟಿ) ದಿಂದ ಸಶಕ್ತಗೊಂಡ ಸರ್ಕಾರೇತರ ಸಂಸ್ಥೆಗಳ ಜಾಲದಿಂದಾಗಿ, ಜಾರಿಗೆ ತರಲಾದ ಕ್ರಮಗಳಿಂದ ಸಾಂಕ್ರಾಮಿಕದಿಂದಾಗಿ ಗ್ರಾಮೀಣ ಜನರ ಮೇಲೆ ಉಂಟಾಗುವ ಹೆಚ್ಚಿನ ಆರ್ಥಿಕ ಹೊರೆ ಮತ್ತು ಪ್ರಭಾವವನ್ನು ಕಡಿಮೆ ಮಾಡಲಾಗಿದೆ.

 

IMG-20200422-WA0017                 IMG-20200422-WA0016

ತಕ್ಷಣದ, ಮಧ್ಯಂತರ ಮತ್ತು ದೀರ್ಘಾವಧಿಯ ವಿಜ್ಞಾನ ಮತ್ತು ತಂತ್ರಜ್ಞಾನ ಮಧ್ಯಸ್ಥಿಕೆಗಳ ಅಗತ್ಯವನ್ನು ವಿವರಿಸುವಾಗ ಡಿಎಸ್ ಟಿ ಕಾರ್ಯದರ್ಶಿ ಪ್ರೊಫೆಸರ್ ಅಶುತೋಷ್ ಶರ್ಮಾ, “ಸ್ಪಷ್ಟವಾಗಿ ಎನ್ ಜಿ ಒಗಳು ಸಮಾಜದ ವ್ಯಾಪಕ ಭಾಗವನ್ನು ತಲುಪುತ್ತವೆ, ವಿಶೇಷವಾಗಿ ಕಡಿಮೆ ಸಬಲೀಕೃತ ವಿಭಾಗಗಳು, ಕೋವಿಡ್-19 ಪರಿಹಾರವನ್ನು ಒದಗಿಸುವಲ್ಲಿ ,ಸಾಮೂಹಿಕ ಅರಿವಿನಿಂದ ಪರಿಹಾರಗಳು, ರಕ್ಷಣಾತ್ಮಕ ಸಾಧನಗಳ ವಿತರಣೆ ಮತ್ತು ತಯಾರಿಕೆ, ತರಬೇತುದಾರರಿಗೆ ತರಬೇತಿ ನೀಡುವುದು ಇತ್ಯಾದಿಗಳಲ್ಲಿ ಭಾರಿ ಶಕ್ತವಾಗಿದೆ.. ಡಿಎಸ್ಟಿಯಿಂದ ನೆರವು ಪಡೆಯುವ ಸುಮಾರು 30 ಎನ್ಜಿಒಗಳು ಪುನಶ್ಚೇತನ ಮತ್ತು ಪುನರ್ನಿರ್ಮಾಣದ ಉತ್ತೇಜನಕ್ಕೆ ಶೀಘ್ರವಾಗಿ ಕಾರ್ಯರೂಪಕ್ಕೆ ಬಂದಿರುವುದನ್ನು ನೋಡುವುದು ಬಹಳ ಸಂತೋಷ ತಂದಿದೆ ಎಂದು ಹೇಳಿದರು

ಡಿಎಸ್ ಟಿ ತನ್ನ ಸರ್ಕಾರೇತರ ಸಂಸ್ಥೆಗೆ ಸಲಹೆಯನ್ನು ನೀಡಿತು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನಗಳ ಮಧ್ಯಸ್ಥಿಕೆಗಳ ಮೂಲಕ ಸಮುದಾಯ ಮಟ್ಟದಲ್ಲಿ ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸಲು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಾಮಾಜಿಕ ಅಂತರ, ಸಂಪರ್ಕತಡೆಯನ್ನು, ಮುಖಗವಸುಗಳ ಬಳಕೆ, ಸಾನಿಟೈಸರ್, ಶಿಫಾರಸು ಮಾಡಿದ ಆರೋಗ್ಯ ಮತ್ತು ನೈರ್ಮಲ್ಯ ಅಭ್ಯಾಸಗಳು, ಮಾನಸಿಕ ಆರೋಗ್ಯ, ರೋಗನಿರೋಧಕ ಶಕ್ತಿ ಮತ್ತು ಯೋಗಕ್ಷೇಮದ ಬಗ್ಗೆ ತಿಳಿಸಿತು. ಕೋವಿಡ್-19 ಹರಡುವಿಕೆಯ ನಿಯಂತ್ರಣವು ಸ್ಥಳೀಯ ಜೀವನೋಪಾಯ, ಪೌಷ್ಠಿಕಾಂಶ ಮತ್ತು ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳೊಂದಿಗೆ ನಿಕಟವಾಗಿ ಜೋಡಿಣೆಯಾಗಿದೆ ಎಂದು ಅರಿತುಕೊಂಡು ತಳಮಟ್ಟದ ಸಾಮಾಜಿಕ ಜಾಲದ ಎಸ್ & ಟಿ ಸಾಮರ್ಥ್ಯವನ್ನು ಬಲಪಡಿಸಲು ಪ್ರಯತ್ನಗಳು ನಡೆದಿವೆ.

(ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಡಾ. ಸುನಿಲ್ ಕೆ ಅಗರ್ವಾಲ್, ವಿಜ್ಞಾನಿ ’, ಅವರನ್ನು ಸಂಪರ್ಕಿಸಿ sunilag[at]nic[dot]in, ಮೋಬೈಲ್: 9999689732)

***



(Release ID: 1617614) Visitor Counter : 201