ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ

ಸಾಂಕ್ರಾಮಿಕದ ಸಮಯದಲ್ಲಿ ಅಗತ್ಯ ಸೇವೆಗಳ ಅಡಿಯಲ್ಲಿ ಅಗತ್ಯತೆಗಳನ್ನು ಪೂರೈಸಲು ಸ್ಕಿಲ್ ಇಂಡಿಯಾ 900 ಪ್ರಮಾಣೀಕೃತ ಕೊಳಾಯಿಗಾರರ ಪಟ್ಟಿಯನ್ನು ಒದಗಿಸಿದೆ

Posted On: 22 APR 2020 1:50PM by PIB Bengaluru

ಸಾಂಕ್ರಾಮಿಕದ ಸಮಯದಲ್ಲಿ ಅಗತ್ಯ ಸೇವೆಗಳ ಅಡಿಯಲ್ಲಿ ಅಗತ್ಯತೆಗಳನ್ನು ಪೂರೈಸಲು ಸ್ಕಿಲ್ ಇಂಡಿಯಾ 900 ಪ್ರಮಾಣೀಕೃತ ಕೊಳಾಯಿಗಾರರ ಪಟ್ಟಿಯನ್ನು ಒದಗಿಸಿದೆ

ಭಾರತೀಯ ಕೊಳಾಯಿ ಕೌಶಲ್ಯ ಮಂಡಳಿ (ಐಪಿಎಸ್ಸಿ) ಅಗತ್ಯ ಸೇವೆಗಳನ್ನು ಒದಗಿಸಲು ಸಿದ್ಧವಾಗಿರುವ ನುರಿತ ಮತ್ತು ಪ್ರಮಾಣೀಕೃತ ಕೊಳಾಯಿಗಾರರ ಪಟ್ಟಿಯನ್ನು ಒದಗಿಸಿದೆ

70 ಕ್ಕೂ ಹೆಚ್ಚು ಅಂಗಸಂಸ್ಥೆಯ ತರಬೇತಿ ಪಾಲುದಾರ ಸಂಸ್ಥೆಗಳು ಅಗತ್ಯವಿರುವವರಿಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಒದಗಿಸುತ್ತಿದ್ದಾರೆ

ಭಾರತೀಯ ಕೊಳಾಯಿ ಕೆಲಸಗಾರರಿಗೆ ಆರೋಗ್ಯ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ

 

ಈಗಿರುವ ಕೋವಿಡ್ 19 ಬಿಕ್ಕಟ್ಟಿನ ಸಂದರ್ಭದಲ್ಲಿ ಕೊಳಾಯಿ, ಪ್ಲಂಬಿಂಗ್ ಗಳಂತಹ ಅಗತ್ಯ ಸೇವೆಗಳ ಅಗತ್ಯವನ್ನು ಅರಿತುಕೊಂಡು, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ (ಎಂಎಸ್ಡಿಇ) ಆಶ್ರಯದಲ್ಲಿ ಸ್ಕಿಲ್ ಇಂಡಿಯಾ ಕಾರ್ಯಕ್ರಮಕ್ಕೆ ಹೊಂದಿಕೊಂಡಿರುವ ಭಾರತೀಯ ಕೊಳಾಯಿ ಕೌಶಲ್ಯ ಮಂಡಳಿ (ಐಪಿಎಸ್ಸಿ) ದೇಶಾದ್ಯಂತ ಲಾಕ್ ಡೌನ್ ಅವಧಿಯಲ್ಲಿ ತಮ್ಮ ಸೇವೆಗಳನ್ನು ಒದಗಿಸಲು ಸಿದ್ಧವಾಗಿರುವ 900 ಕ್ಕೂ ಹೆಚ್ಚು ಕೊಳಾಯಿಗಾರರ (ಪ್ಲಂಬರ್ ಗಳ) ದತ್ತಾಂಶವನ್ನು ಸಿದ್ಧಪಡಿಸಿದೆ. ಐಪಿಎಸ್ ಸಿ ತನ್ನ ಅಂಗಸಂಸ್ಥೆ ತರಬೇತಿ ಪಾಲುದಾರರಿಗೆ ಆಹಾರ ಮತ್ತು ಅಗತ್ಯ ಸಾಮಗ್ರಿಗಳ ವಿತರಣಾ ಕಾರ್ಯಕ್ರಮಗಳನ್ನು , ಅಗತ್ಯವಿರುವವರಿಗೆ ಮತ್ತು ತಯಾರಿಕೆ ಮತ್ತು ವಿತರಣಾ ಚಟುವಟಿಕೆಗಳಲ್ಲಿ ಅಗತ್ಯವಾದ ಬೆಂಬಲವನ್ನು ನೀಡುವಂತೆ ಕೋರಿದೆ. 70 ಕ್ಕೂ ಹೆಚ್ಚು ತರಬೇತಿ ಕೇಂದ್ರಗಳನ್ನು ಆಹಾರ ವಿತರಣೆ / ಪ್ರತ್ಯೇಕ ಕೇಂದ್ರಗಳಾಗಿ ಪರಿವರ್ತಿಸಲು ನಾಮನಿರ್ದೇಶನ ಮಾಡಲಾಗಿದೆ.

ಕಟ್ಟುನಿಟ್ಟಾದ ಆರೋಗ್ಯ ಮತ್ತು ಸುರಕ್ಷತಾ ಮಾನದಂಡಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಐಪಿಎಸ್ಸಿ ಪ್ಲಂಬಿಂಗ್ ಕಾರ್ಯಪಡೆಗೆ ಗಮನಹರಿಸಲು ಮಾರ್ಗಸೂಚಿಗಳನ್ನು ರೂಪಿಸಿದೆ. ವಿಶೇಷ ಐಪಿಎಸ್ಸಿ ತಾಂತ್ರಿಕ ಕಾರ್ಯಪಡೆಯಿಂದ ಮಾರ್ಗಸೂಚಿಗಳನ್ನು ಒಟ್ಟುಗೂಡಿಸಲಾಯಿತು. ವಸತಿ ಕಟ್ಟಡಗಳು ಮತ್ತು ಅಪಾರ್ಟ್ಮೆಂಟ್ಗಳು, ಆಸ್ಪತ್ರೆಗಳು, ಪ್ರತ್ಯೇಕ ಕೇಂದ್ರಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಇತರ ಸಂಸ್ಥೆಗಳು ಸೇರಿದಂತೆ ಪ್ರಮುಖ ಮಾಡಬೇಕಾದ ಮತ್ತು ಮಾಡಬಾರದ ಪಟ್ಟಿಯನ್ನು ಮತ್ತು ಸ್ಥಳಗಳಿಗೆ ಅನುಗುಣವಾಗುವಂತಹ ನಿರ್ದಿಷ್ಟ ಮುನ್ನೆಚ್ಚರಿಕೆ ಕ್ರಮಗಳನ್ನು ಮಾರ್ಗಸೂಚಿಗಳು ಒಳಗೊಂಡಿವೆ.

 

ಸಲಹೆಯ ಕೆಲವು ಪ್ರಮುಖ ಮುಖ್ಯಾಂಶಗಳು:

  1. ಸಾಮಾಜಿಕ ಅಂತರವನ್ನು ಅನುಸರಿಸಿ
  2. ಉಪಕರಣಗಳು, ಟಚ್ ಪಾಯಿಂಟ್ಗಳನ್ನು ಸೋಂಕುರಹಿತಗೊಳಿಸಿ - ಬಳಸಬೇಕಾದ ಸೊಲ್ಯೂಷನ್ಗಳ ಪ್ರಮಾಣ
  3. ನಗದುರಹಿತ ವಹಿವಾಟಿಗೆ ಆದ್ಯತೆ ನೀಡಿ
  4. ಬಳಸಿದ ವಸ್ತುಗಳನ್ನು ವಿಲೇವಾರಿ ಮಾಡುವುದು
  5. ಬಿಕ್ಕಟ್ಟಿನಲ್ಲಿ ಸ್ವ-ಸಹಾಯಕ್ಕಾಗಿ ಗ್ರಾಹಕರಿಗೆ ಶಿಕ್ಷಣ ನೀಡುವುದು
  6. ಅಗತ್ಯವಿದ್ದಲ್ಲಿ ಬ್ಯಾಕ್ಟ್ರಾಕಿಂಗ್ಗಾಗಿ ಲಾಗ್ ಅನ್ನು ನಿರ್ವಹಿಸುವುದು

15 ಏಪ್ರಿಲ್ 2020 ರಂದು ಗೃಹ ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ 20 ಏಪ್ರಿಲ್ 2020ರಿಂದ ಪ್ಲಂಬರ್ ಗಳಿಗೆ ತಮ್ಮ ಸೇವೆಗಳನ್ನು ಒದಗಿಸಲು ಅನುಮತಿ ನೀಡಲಾಗಿದೆ.

ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವರಾಧ ಡಾ.ಮಹೇಂದ್ರ ನಾಥ್ ಪಾಂಡೆ, “ ಮಾರ್ಗಸೂಚಿಗಳನ್ನು ರಚಿಸುವಲ್ಲಿ ಐಪಿಎಸ್ಸಿಯ ಪೂರ್ವಭಾವಿ ಪ್ರಯತ್ನಗಳು ಶ್ಲಾಘನೀಯ ಮತ್ತು ಕೊರೊನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಹೋರಾಟದ ಸ್ವಾಗತಾರ್ಹ ಹೆಜ್ಜೆ. ನಾವು ಒಟ್ಟಾಗಿ ಕೆಲಸ ಮಾಡಬೇಕು ಮತ್ತು ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಮುಂಚೂಣಿಯಲ್ಲಿ ಹೋರಾಡುತ್ತಿರುವ ಎಲ್ಲಾ ಆರೋಗ್ಯ ಕಾರ್ಯಕರ್ತರನ್ನು ಬೆಂಬಲಿಸಬೇಕು. ಗೌರವಾನ್ವಿತ ಪ್ರಧಾನ ಮಂತ್ರಿಯವರು ರಾಷ್ಟ್ರಕ್ಕೆ ನೀಡಿದ ಕಳೆದ ಭಾಷಣದಲ್ಲಿ ಹಂಚಿಕೊಂಡ ಏಳು ಹೆಜ್ಜೆಗಳನ್ನು ಪ್ರತಿಯೊಬ್ಬ ನಾಗರಿಕರು ಅನುಸರಿಸಬೇಕು ಮತ್ತು ಮಾರಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಇದು ವ್ಯಾಪಕವಾಗಿ ಸಹಾಯ ಮಾಡುತ್ತದೆ. ಐಪಿಎಸ್ ಸಿ ಯು ಸ್ವಯಂಸೇವಕರಿಂದ ರಾಷ್ಟ್ರಕ್ಕೆ ತಮ್ಮ ಸೇವೆಯ ಮೂಲಕ ಕೊಡುಗೆ ನೀಡಲು ನಿರಂತರವಾಗಿ ಕೋರಿಕೆಗಳನ್ನು ಪಡೆಯುತ್ತಿದೆ, ಆದ್ದರಿಂದ 900 ಸಂಖ್ಯೆಯು ಹೆಚ್ಚುತ್ತಲೇ ಇರುತ್ತದೆ.

ಭಾರತೀಯ ಪ್ರಂಬಿಂಗ್ ಕೌಶಲ್ಯ ಮಂಡಳಿಯ ಅಧ್ಯಕ್ಷ ಡಾ.ರಾಜೇಂದ್ರ ಕೆ ಸೋಮನಿ ಮಾತನಾಡಿ, “ಭಾರತೀಯ ನಾಗರಿಕರ ಆರೋಗ್ಯ ಮತ್ತು ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ. ರಾಷ್ಟ್ರದ ಆರೋಗ್ಯವನ್ನು ಕಾಪಾಡುವಲ್ಲಿ ಪ್ಲಂಬಿಂಗ್ ಕಾರ್ಯಪಡೆಯು ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಮಾರ್ಗಸೂಚಿಗಳನ್ನು ಶ್ರೀ ಎಂ.ಕೆ. ಗುಪ್ತಾ ನೇತೃತ್ವದ ತಾಂತ್ರಿಕ ಕಾರ್ಯಪಡೆಯಿಂದ ರಚಿಸಲಾಗಿದೆ, ಕೋವಿಡ್-19 ಸಾಂಕ್ರಾಮಿಕ ರೋಗದ ಮತ್ತಷ್ಟು ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಉದ್ಯೋಗಿಗಳು ಅನುಸರಿಸಬೇಕಾದ ಹೆಚ್ಚುವರಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು.

ಭಾರತದಲ್ಲಿ ಕೊಳಾಯಿ, ಪ್ಲಂಬಿಂಗ್ ಕ್ಷೇತ್ರವು ಹೆಚ್ಚು ಅಸಂಘಟಿತವಾಗಿದೆ ಮತ್ತು ಗುತ್ತಿಗೆ ಮತ್ತು ವಲಸೆ ಕೆಲಸಗಾರರ ಮೇಲೆ ಅವಲಂಬಿತವಾಗಿದೆ ಮತ್ತು ಅದರ ವಿವಿಧ ವೈವಿಧ್ಯಮಯ ಉಪ-ವಿಭಾಗಗಳಾದ ಗುತ್ತಿಗೆದಾರರು, ತಯಾರಕರು ಮತ್ತು ಸಲಹೆಗಾರರನ್ನು ಯಾವುದೇ ಸಂಸ್ಥೆ ಪ್ರತಿನಿಧಿಸಲಿಲ್ಲ. ನುರಿತ ಮಾನವಶಕ್ತಿಯ ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವನ್ನು ನಿವಾರಿಸಲು ಐಪಿಎಸ್ಸಿಯನ್ನು ಪ್ರಾರಂಭಿಸಲಾಯಿತು ಮತ್ತು ಕೌಶಲ್ಯ ಕೊರತೆಯನ್ನು ಕಡಿಮೆ ಮಾಡಲು ಸಹಾಯ ಮಾಡಲು ಪ್ಲಂಬಿಂಗ್ ಸಮುದಾಯಕ್ಕೆ ಸಮಗ್ರ ಕೌಶಲ್ಯ ಅಭಿವೃದ್ಧಿಯ ಬೆಂಬಲದೊಂದಿಗೆ ವೃತ್ತಿಪರ ಪ್ರಾವೀಣ್ಯತೆಯಲ್ಲಿ ನಿರಂತರವಾಗಿ ಶ್ರೇಷ್ಠತೆಯನ್ನು ನೀಡುತ್ತಿದೆ. ಪ್ರಸ್ತುತ, ಐಪಿಎಸ್ ಸಿ ಸುಮಾರು 230 ತರಬೇತಿ ಕೇಂದ್ರಗಳು, 250 ಪ್ರಮಾಣೀಕೃತ ತರಬೇತುದಾರರು ಮತ್ತು 85 ಪ್ರಮಾಣೀಕೃತ ಮೌಲ್ಯಮಾಪಕರನ್ನು ಹೊಂದಿದೆ. ಭಾರತದಾದ್ಯಂತ,. ಭಾರತೀಯ ಪ್ಲಂಬಿಂಗ್ ವಲಯದಲ್ಲಿ ಪರಿಸರ ವ್ಯವಸ್ಥೆಯನ್ನು ಔಪಚಾರಿಕಗೊಳಿಸಲು ಸಂಬಂಧಿಸಿದ ಇತರ ಪ್ರಮುಖ ಚಟುವಟಿಕೆಗಳಲ್ಲಿ ಸ್ಕಿಲ್ ಇಂಡಿಯಾ ಮಿಷನ್ ಕಡೆಗೆ ಉದ್ಯಮವನ್ನು ತೊಡಗಿಸಿಕೊಳ್ಳಲು ಐಪಿಎಸ್ಸಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.

ಎಂಎಸ್ಡಿಇ ಕೌಶಲ್ಯಗಳ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. 2014 ರಲ್ಲಿ ಪ್ರಾರಂಭವಾದಾಗಿನಿಂದ, ನೀತಿ, ಚೌಕಟ್ಟು ಮತ್ತು ಮಾನದಂಡಗಳನ್ನು ಔಪಚಾರಿಕಗೊಳಿಸುವ ದೃಷ್ಟಿಯಿಂದ ಎಂಎಸ್ಡಿಇ ಮಹತ್ವದ ಉಪಕ್ರಮಗಳು ಮತ್ತು ಸುಧಾರಣೆಗಳನ್ನು ಕೈಗೊಂಡಿದೆ; ಹೊಸ ಕಾರ್ಯಕ್ರಮಗಳು ಮತ್ತು ಯೋಜನೆಗಳ ಪ್ರಾರಂಭ; ಹೊಸ ಮೂಲಸೌಕರ್ಯಗಳನ್ನು ರಚಿಸುವುದು ಮತ್ತು ಅಸ್ತಿತ್ವದಲ್ಲಿರುವ ಸಂಸ್ಥೆಗಳನ್ನು ನವೀಕರಿಸುವುದು; ರಾಜ್ಯಗಳೊಂದಿಗೆ ಸಹಭಾಗಿತ್ವ; ಕೈಗಾರಿಕೆಗಳೊಂದಿಗೆ ತೊಡಗಿಸಿಕೊಳ್ಳುವುದು ಮತ್ತು ಸಾಮಾಜಿಕ ಸ್ವೀಕಾರ ಮತ್ತು ಕೌಶಲ್ಯಗಳ ಆಕಾಂಕ್ಷೆಗಳನ್ನು ನಿರ್ಮಿಸುವುದು. ಅಸ್ತಿತ್ವದಲ್ಲಿರುವ ಉದ್ಯೋಗಗಳಿಗೆ ಮಾತ್ರವಲ್ಲದೆ ರಚಿಸಬೇಕಾದ ಉದ್ಯೋಗಗಳಿಗೂ ಹೊಸ ಕೌಶಲ್ಯ ಮತ್ತು ನಾವೀನ್ಯತೆಗಳನ್ನು ನಿರ್ಮಿಸಲು ನುರಿತ ಮಾನವಶಕ್ತಿಯ ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವನ್ನು ಕಡಿಮೆ ಮಾಡಲು ಸಚಿವಾಲಯ ಉದ್ದೇಶಿಸಿದೆ. ಇಲ್ಲಿಯವರೆಗೆ, ಸ್ಕಿಲ್ ಇಂಡಿಯಾ ಅಡಿಯಲ್ಲಿ ಮೂರು ಕೋಟಿಗೂ ಹೆಚ್ಚು ಜನರಿಗೆ ತರಬೇತಿ ನೀಡಲಾಗಿದೆ. ತನ್ನ ಪ್ರಮುಖ ಕಾರ್ಯಕ್ರಮ, ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ (ಪಿಎಂಕೆವಿವೈ) 2016-2020 ಅಡಿಯಲ್ಲಿ ಸಚಿವಾಲಯವು ಈವರೆಗೆ 92 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ತರಬೇತಿ ನೀಡಿದೆ.

***



(Release ID: 1617339) Visitor Counter : 162