ಪ್ರಧಾನ ಮಂತ್ರಿಯವರ ಕಛೇರಿ
ಕೋವಿಡ್-19 ಸಮಯದಲ್ಲಿ ಬದುಕು
Posted On:
19 APR 2020 6:32PM by PIB Bengaluru
ಕೋವಿಡ್-19 ಸಮಯದಲ್ಲಿ ಬದುಕು
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಯುವಕರು ಮತ್ತು ವೃತ್ತಿಪರರಿಗೆ ಆಸಕ್ತಿಯನ್ನು ಹುಟ್ಟಿಸುವ ಕೆಲವು ಆಲೋಚನೆಗಳನ್ನು ಲಿಂಕ್ಡ್ಇನ್ ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಧಾನ ಮಂತ್ರಿಯವರು ಲಿಂಕ್ಡಿನ್ನಲ್ಲಿ ಹಂಚಿಕೊಂಡಿರುವ ಆಲೋಚನೆಗಳ ಪೂರ್ಣಪಾಠ ಇಲ್ಲಿದೆ.
"ಇದು ಈ ಶತಮಾನದ ಮೂರನೇ ದಶಕದ ಏರು-ತಗ್ಗುಗಳ ಆರಂಭವಾಗಿದೆ. ಕೋವಿಡ್-19 ಇದಕ್ಕೆ ಅನೇಕ ಅಡೆತಡೆಗಳನ್ನು ತಂದೊಡ್ಡಿದೆ. ಕೊರೊನಾವೈರಸ್ ವೃತ್ತಿಪರ ಜೀವನದ ಬಾಹ್ಯರೇಖೆಗಳನ್ನೇ ಗಮನಾರ್ಹವಾಗಿ ಬದಲಾಯಿಸಿಬಿಟ್ಟಿದೆ. ಈಗಂತೂ, ಮನೆಯೇ ಹೊಸ ಕಚೇರಿ. ಇಂಟರ್ನೆಟ್ ಹೊಸ ಮೀಟಿಂಗ್ ರೂಮಾಗಿದೆ. ಸದ್ಯಕ್ಕೆ, ಸಹೋದ್ಯೋಗಿಗಳೊಂದಿಗೆ ಕಚೇರಿಯ ವಿರಾಮದ ಸಮಯಗಳು ಇತಿಹಾಸವಾಗಿವೆ.
ನಾನೂ ಸಹ ಈ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಿದ್ದೇನೆ. ಹೆಚ್ಚಿನ ಸಭೆಗಳು, ಅದು ಸಚಿವ ಸಹೋದ್ಯೋಗಿಗಳೊಂದಿಗಿರಲಿ, ಅಧಿಕಾರಿಗಳು ಮತ್ತು ವಿಶ್ವ ನಾಯಕರೊಂದಿಗೇ ಇರಲಿ, ಈಗ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾತ್ರ ನಡೆಯುತ್ತಿವೆ. ವಿವಿಧ ಪಾಲುದಾರರಿಂದ ತಳಮಟ್ಟದ ಪ್ರತಿಕ್ರಿಯೆಯನ್ನು ಪಡೆಯುವ ಸಲುವಾಗಿ, ಸಮಾಜದ ಹಲವಾರು ವರ್ಗಗಳೊಂದಿಗೆ ವೀಡಿಯೊಕಾನ್ಫರೆನ್ಸ್ ಸಭೆಗಳು ನಡೆದಿವೆ. ಎನ್ಜಿಒಗಳು, ನಾಗರಿಕ ಸಾಮಾಜಿಕ ಗುಂಪುಗಳು ಮತ್ತು ಸಮುದಾಯ ಸಂಸ್ಥೆಗಳೊಂದಿಗೆ ವ್ಯಾಪಕವಾದ ಸಂವಾದಗಳು ನಡೆದವು. ರೇಡಿಯೋ ಜಾಕಿಗಳೊಂದಿಗೂ ಸಂವಾದವಿತ್ತು.
ಇದಲ್ಲದೆ, ನಾನು ಪ್ರತಿದಿನ ಹಲವಾರು ಫೋನ್ ಕರೆಗಳನ್ನು ಮಾಡುತ್ತಿದ್ದೇನೆ, ಸಮಾಜದ ವಿವಿಧ ವರ್ಗಗಳಿಂದ ಪ್ರತಿಕ್ರಿಯೆ ಪಡೆಯುತ್ತಿದ್ದೇನೆ.
ಇಂತಹ ಸಮಯದಲ್ಲಿ ಜನರು ತಮ್ಮ ಕೆಲಸವನ್ನು ಮುಂದುವರೆಸಲು ಕಂಡುಕೊಂಡಿರುವ ಹಾದಿಗಳನ್ನು ನೋಡುತ್ತಿದ್ದೇವೆ. ನಮ್ಮ ಚಲನಚಿತ್ರ ತಾರೆಯರು ಮನೆಯಲ್ಲಿಯೇ ಇರಬೇಕು ಎಂಬ ಸಂದೇಶವನ್ನು ನೀಡುವ ಸೃಜನಶೀಲ ವೀಡಿಯೊಗಳು ಬಂದಿವೆ. ನಮ್ಮ ಗಾಯಕರು ಆನ್ಲೈನ್ ಸಂಗೀತ ಕಚೇರಿ ಮಾಡಿದರು. ಚೆಸ್ ಆಟಗಾರರು ಚೆಸ್ ಅನ್ನು ಡಿಜಿಟಲ್ ರೀತಿಯಲ್ಲಿ ಆಡಿದರು ಮತ್ತು ಅದರ ಮೂಲಕ ಕೋವಿಡ್-19 ವಿರುದ್ಧದ ಹೋರಾಟಕ್ಕೆ ಸಹಕರಿಸಿದರು. ಇವೆಲ್ಲಾ ಸಾಕಷ್ಟು ನವೀನವಲ್ಲವೇ!
ಕೆಲಸದ ಸ್ಥಳವು ಡಿಜಿಟಲ್ ಫಸ್ಟ್ ಆಗುತ್ತಿದೆ. ಯಾಕಾಗಬಾರದು?
ಎಲ್ಲಾ ನಂತರ, ತಂತ್ರಜ್ಞಾನದ ಪರಿವರ್ತನೆಯ ಪರಿಣಾಮವು ಬಡವರ ಜೀವನದಲ್ಲಿ ಹೆಚ್ಚಾಗಿ ಸಂಭವಿಸುತ್ತದೆ. ಅಧಿಕಾರಶಾಹಿಯ ಶ್ರೇಣಿಗಳನ್ನು ಕೆಡವುವುದು, ಮಧ್ಯವರ್ತಿಗಳನ್ನು ನಿರ್ಮೂಲನೆ ಮಾಡುವುದು ಮತ್ತು ಕಲ್ಯಾಣ ಕ್ರಮಗಳನ್ನು ವೇಗಗೊಳಿಸುವ ತಂತ್ರಜ್ಞಾನ ಇದು.
ನಾನು ನಿಮಗೊಂದು ಉದಾಹರಣೆ ಕೊಡುತ್ತೇನೆ. 2014 ರಲ್ಲಿ ಸೇವೆ ಸಲ್ಲಿಸಲು ನಮಗೆ ಅವಕಾಶ ಸಿಕ್ಕಾಗ, ನಾವು ಭಾರತೀಯರನ್ನು, ವಿಶೇಷವಾಗಿ ಬಡವರನ್ನು ಅವರ ಜನ ಧನ್ ಖಾತೆ, ಆಧಾರ್ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಸಂಪರ್ಕಿಸಲು ಪ್ರಾರಂಭಿಸಿದೆವು.
ಈ ಸರಳ ಸಂಪರ್ಕವು ದಶಕಗಳಿಂದ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಕಮಿಷನ್ ಪದ್ಧತಿಯನ್ನು ನಿಲ್ಲಿಸಿದ್ದಷ್ಟೇ ಅಲ್ಲ, ಒಂದು ಗುಂಡಿಯನ್ನು ಕ್ಲಿಕ್ ಮಾಡುವ ಮೂಲಕ ಹಣವನ್ನು ವರ್ಗಾಯಿಸಲು ಸರ್ಕಾರಕ್ಕೆ ಅನುವು ಮಾಡಿಕೊಟ್ಟಿತು. ಗುಂಡಿಯ ಈ ಕ್ಲಿಕ್ ಫೈಲ್ಗಳ ಅನೇಕ ಹಂತದ ದಾಟುವಿಕೆಗಳನ್ನು ಬದಲಾಯಿಸಿದೆ ಮತ್ತು ವಾರಗಟ್ಟಲೆಯ ವಿಳಂಬವನ್ನು ತಡೆದಿದೆ.
ಭಾರತವು ಬಹುಶಃ ವಿಶ್ವದ ಅತಿದೊಡ್ಡ ಇಂತಹ ಮೂಲಸೌಕರ್ಯವನ್ನು ಹೊಂದಿರುವ ದೇಶ. ಈ ಮೂಲಸೌಕರ್ಯವು ಕೋವಿಡ್-19 ಪರಿಸ್ಥಿತಿಯಲ್ಲಿ ಹಣವನ್ನು ನೇರವಾಗಿ ಮತ್ತು ತಕ್ಷಣವೇ ಬಡವರಿಗೆ ಮತ್ತು ನಿರ್ಗತಿಕರಿಗೆ ವರ್ಗಾಯಿಸಲು, ಕೋಟ್ಯಂತರ ಕುಟುಂಬಗಳಿಗೆ ಪ್ರಯೋಜನವನ್ನು ನೀಡಲು ಮಹತ್ತರವಾಗಿ ಸಹಾಯ ಮಾಡಿದೆ.
ಮತ್ತೊಂದು ಶಿಕ್ಷಣ ಕ್ಷೇತ್ರ. ಈ ವಲಯದಲ್ಲಿ ಈಗಾಗಲೇ ಅನೇಕ ಹೊಸ ವೃತ್ತಿಪರರು ಹೊಸತನವನ್ನು ಹೊಂದಿದ್ದಾರೆ. ಈ ವಲಯದಲ್ಲಿ ತಂತ್ರಜ್ಞಾನವು ಅದರ ಪ್ರಯೋಜನಗಳನ್ನು ನೀಡಿದೆ. ಶಿಕ್ಷಕರಿಗೆ ಸಹಾಯ ಮಾಡಲು ಮತ್ತು ಇ-ಕಲಿಕೆಯನ್ನು ಹೆಚ್ಚಿಸಲು ಭಾರತ ಸರ್ಕಾರವು DIKSHA ಪೋರ್ಟಲ್ ನಂತಹ ಪ್ರಯತ್ನಗಳನ್ನು ಕೈಗೊಂಡಿದೆ. ಲಭ್ಯತೆ, ಇಕ್ವಿಟಿ ಮತ್ತು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ SWAYAM ಇದೆ. ಅನೇಕ ಭಾಷೆಗಳಲ್ಲಿ ಲಭ್ಯವಿರುವ ಇ-ಪಾಠಶಾಲೆಯು ವಿವಿಧ ಇ-ಪುಸ್ತಕಗಳು ಮತ್ತು ಅಂತಹ ಕಲಿಕಾ ಸಾಮಗ್ರಿಗಳಿಗೆ ಪ್ರವೇಶವನ್ನು ನೀಡಿದೆ.
ಇಂದು, ಜಗತ್ತು ಹೊಸ ವ್ಯವಹಾರ ಮಾದರಿಗಳ ಅನ್ವೇಷಣೆಯಲ್ಲಿದೆ.
ನಾವೀನ್ಯೆತೆ ಉತ್ಸಾಹಕ್ಕೆ ಹೆಸರುವಾಸಿಯಾದ ಯುವ ಭಾರತವು ಹೊಸ ಕೆಲಸದ ಸಂಸ್ಕೃತಿಯನ್ನು ಒದಗಿಸುವಲ್ಲಿ ಮುಂದಾಗಬಹುದು.
ಈ ಹೊಸ ವ್ಯವಹಾರ ಮತ್ತು ಕೆಲಸದ ಸಂಸ್ಕೃತಿಯನ್ನು ಈ ಕೆಳಗಿನ ಸ್ವರಾಕ್ಷರಗಳ ಮೇಲೆ ಮರು ವ್ಯಾಖ್ಯಾನಿಸಲಾಗಿದೆ ಎಂದು ನಾನು ಭಾವಿಸುತ್ತೇನೆ.
ನಾನು ಅವುಗಳನ್ನು ಹೊಸ ಸಾಮಾನ್ಯ ಸ್ವರಗಳು ಎಂದು ಕರೆಯುತ್ತೇನೆ. ಏಕೆಂದರೆ ಇಂಗ್ಲಿಷ್ ಭಾಷೆಯಲ್ಲಿನ ಸ್ವರಗಳಂತೆ, ಇವು ಕೋವಿಡ್ ನಂತರದ ಪ್ರಪಂಚದ ಯಾವುದೇ ವ್ಯವಹಾರಕ್ಕೆ ಅಗತ್ಯವಾಗಿವೆ.
ಹೊಂದಿಕೊಳ್ಳುವಿಕೆ:
ಸುಲಭವಾಗಿ ಹೊಂದಿಕೊಳ್ಳಬಲ್ಲ ವ್ಯವಹಾರ ಮತ್ತು ಜೀವನಶೈಲಿಯ ಮಾದರಿಗಳನ್ನು ಯೋಚಿಸುವುದು ಇಂದಿನ ಅವಶ್ಯಕತೆಯಾಗಿದೆ.
ಹಾಗೆ ಮಾಡುವುದರಿಂದ ಬಿಕ್ಕಟ್ಟಿನ ಸಮಯದಲ್ಲಿಯೂ ಸಹ ಯಾವುದೇ ಪ್ರಾಣಹಾನಿಯಿಲ್ಲದೇ ನಮ್ಮ ಕಚೇರಿಗಳು, ವ್ಯವಹಾರಗಳು ಮತ್ತು ವಾಣಿಜ್ಯವು ವೇಗವಾಗಿ ಚಲಿಸಬಹುದು.
ಡಿಜಿಟಲ್ ಪಾವತಿಗಳನ್ನು ಸ್ವೀಕರಿಸುವುದು ಹೊಂದಾಣಿಕೆಯ ಒಂದು ಪ್ರಮುಖ ಉದಾಹರಣೆಯಾಗಿದೆ. ದೊಡ್ಡ ಮತ್ತು ಸಣ್ಣ ಅಂಗಡಿ ಮಾಲೀಕರು ಡಿಜಿಟಲ್ ಪರಿಕರಗಳಲ್ಲಿ ಹೂಡಿಕೆ ಮಾಡಬೇಕು. ಭಾರತವು ಈಗಾಗಲೇ ಡಿಜಿಟಲ್ ವಹಿವಾಟಿನಲ್ಲಿ ಉತ್ತೇಜನೆಯ ಏರಿಕೆಗೆ ಸಾಕ್ಷಿಯಾಗಿದೆ.
ಮತ್ತೊಂದು ಉದಾಹರಣೆ ಟೆಲಿಮೆಡಿಸಿನ್. ಕ್ಲಿನಿಕ್ ಅಥವಾ ಆಸ್ಪತ್ರೆಗೆ ಹೋಗದೆ ನಾವು ಈಗಾಗಲೇ ಹಲವಾರು ಸಮಾಲೋಚನೆಗಳನ್ನು ನೋಡುತ್ತಿದ್ದೇವೆ. ಇದೊಂದು ಸಕಾರಾತ್ಮಕ ಚಿಹ್ನೆ. ಪ್ರಪಂಚದಾದ್ಯಂತ ಟೆಲಿಮೆಡಿಸಿನ್ಗೆ ಸಹಾಯ ಮಾಡಲು ನಾವು ಮತ್ತಷ್ಟು ವ್ಯವಹಾರ ಮಾದರಿಗಳ ಬಗ್ಗೆ ಯೋಚಿಸಬಹುದೇ?
ದಕ್ಷತೆ:
ಬಹುಶಃ, ನಾವು ಪರಿಣಾಮಕಾರಿಯಾಗಿರುವುದನ್ನು ಮರುರೂಪಿಸುವ ಬಗ್ಗೆ ಯೋಚಿಸುವ ಸಮಯ ಇದು. ದಕ್ಷತೆಯು ನಾವು ಕಚೇರಿಯಲ್ಲಿ ಎಷ್ಟು ಸಮಯ ಕಳೆದೆವು ಎನ್ನುವುದಷ್ಟೇ ಆಗಿರಬಾರದು. ಉತ್ಪಾದನೆ ಮತ್ತು ದಕ್ಷತೆಯು ನಾವು ಮಾಡಿದ ಪ್ರಯತ್ನಕ್ಕಿಂತ ಹೆಚ್ಚು ಪ್ರಾಮುಖ್ಯತೆ ಪಡೆಯುವ ಬಗ್ಗೆ ನಾವು ಯೋಚಿಸಬೇಕು. ನಿಗದಿತ ಸಮಯದ ಚೌಕಟ್ಟಿನಲ್ಲಿ ಕೆಲಸವನ್ನು ಪೂರ್ಣಗೊಳಿಸುವತ್ತ ಒತ್ತು ನೀಡಬೇಕು.
ಒಳಗೊಳ್ಳುವಿಕೆ:
ಬಡವರನ್ನು, ದುರ್ಬಲರು ಮತ್ತು ನಮ್ಮ ಭೂಮಿಯ ಬಗ್ಗೆ ಕಾಳಜಿ ಇರುವ ವ್ಯವಹಾರ ಮಾದರಿಗಳನ್ನು ನಾವು ಅಭಿವೃದ್ಧಿಪಡಿಸೋಣ.
ಹವಾಮಾನ ಬದಲಾವಣೆಯನ್ನು ಎದುರಿಸುವಲ್ಲಿ ನಾವು ಪ್ರಮುಖ ಪ್ರಗತಿ ಸಾಧಿಸಿದ್ದೇವೆ. ಮಾನವನ ಚಟುವಟಿಕೆ ನಿಧಾನವಾಗಿದ್ದಾಗ ಅದು ಎಷ್ಟು ಬೇಗನೆ ಅಭಿವೃದ್ಧಿ ಹೊಂದುತ್ತದೆ ಎಂಬುದನ್ನು ಪ್ರಕೃತಿ ಮಾತೆಯು ತನ್ನ ಭವ್ಯತೆಯ ಮೂಲಕ ನಮಗೆ ತೋರಿಸಿಕೊಟ್ಟಿದ್ದಾಳೆ. ಗ್ರಹಗಳ ಮೇಲೆ ನಮ್ಮ ಪ್ರಭಾವವನ್ನು ಕಡಿಮೆ ಮಾಡುವ ತಂತ್ರಜ್ಞಾನಗಳು ಮತ್ತು ಅಭ್ಯಾಸಗಳನ್ನು ಅಭಿವೃದ್ಧಿಪಡಿಸುವಲ್ಲಿ ಮಹತ್ವದ ಭವಿಷ್ಯವಿದೆ. ಕಡಿಮೆಯಿಂದಲೇ ಹೆಚ್ಚು ಮಾಡಬೇಕು.
ಕೋವಿಡ್-19 ಕಡಿಮೆ ವೆಚ್ಚದಲ್ಲಿ ಮತ್ತು ದೊಡ್ಡ ಪ್ರಮಾಣದಲ್ಲಿ ಆರೋಗ್ಯ ಪರಿಹಾರಗಳ ಬಗ್ಗೆ ಕೆಲಸ ಮಾಡುವ ಅಗತ್ಯವನ್ನು ನಮಗೆ ಮನಗಾಣಿಸಿದೆ. ಮಾನವೀಯತೆಯ ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಜಾಗತಿಕ ಪ್ರಯತ್ನಗಳಿಗೆ ನಾವು ಮಾರ್ಗದರ್ಶಕ ಬೆಳಕಾಗಬಹುದು.
ಯಾವುದೇ ಪರಿಸ್ಥಿತಿಯಲ್ಲೂ ನಮ್ಮ ರೈತರಿಗೆ ಮಾಹಿತಿ, ಯಂತ್ರೋಪಕರಣಗಳು ಮತ್ತು ಮಾರುಕಟ್ಟೆಗಳ ಲಭ್ಯತೆಯಿದೆ, ನಮ್ಮ ನಾಗರಿಕರಿಗೆ ಅಗತ್ಯ ವಸ್ತುಗಳ ಲಭ್ಯತೆಯಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ನಾವೀನ್ಯತೆಗಳಲ್ಲಿ ಹೂಡಿಕೆ ಮಾಡಬೇಕು.
ಅವಕಾಶ:
ಪ್ರತಿಯೊಂದು ಬಿಕ್ಕಟ್ಟು ಒಂದು ಅವಕಾಶವನ್ನೂ ಸೃಷ್ಟಿಸುತ್ತದೆ. ಕೋವಿಡ್-19 ಕೂಡ ಇದರಿಂದ ಭಿನ್ನವಾಗಿಲ್ಲ. ಈಗ ಹೊರಹೊಮ್ಮುವ ಹೊಸ ಅವಕಾಶಗಳು / ಬೆಳವಣಿಗೆಯ ಕ್ಷೇತ್ರಗಳು ಏನೆಂದು ಮೌಲ್ಯಮಾಪನ ಮಾಡೋಣ.
ಕೋವಿಡ್ ನಂತರದ ಜಗತ್ತಿನಲ್ಲಿ ಭಾರತವು ಇತರರ ಹಿಂದೆ ಓಡುವುದಕ್ಕಿಂತ, ತಾನೇ ಮುಂದೆ ಇರಬೇಕು. ಹಾಗೆ ಮಾಡಲು ನಮ್ಮ ಜನರು, ನಮ್ಮ ಕೌಶಲ್ಯಗಳು, ನಮ್ಮ ಪ್ರಮುಖ ಸಾಮರ್ಥ್ಯಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಯೋಚಿಸೋಣ.
ಸಾರ್ವತ್ರಿಕತೆ:
ಕೋವಿಡ್-19 ಜನಾಂಗ, ಧರ್ಮ, ಬಣ್ಣ, ಜಾತಿ, ಮತ, ಭಾಷೆ ಅಥವಾ ಗಡಿಯನ್ನು ನೋಡುವುದಿಲ್ಲ. ಅದರ ನಂತರದ ನಮ್ಮ ಪ್ರತಿಕ್ರಿಯೆ ಮತ್ತು ನಡವಳಿಕೆಯು ಏಕತೆ ಮತ್ತು ಸಹೋದರತ್ವಕ್ಕೆ ಪ್ರಾಮುಖ್ಯತೆ ನೀಡಬೇಕು. ಇದರಲ್ಲಿ ನಾವು ಒಟ್ಟಿಗೆ ಇದ್ದೇವೆ.
ಇತಿಹಾಸದಲ್ಲಿ ಪರಸ್ಪರ ವಿರುದ್ಧವಾಗಿ ಹೋರಾಡಿರುವ ದೇಶಗಳು ಅಥವಾ ಸಮಾಜಗಳು, ಇಂದು ಒಟ್ಟಾಗಿ ಒಂದು ಸಾಮಾನ್ಯ ಸವಾಲನ್ನು ಎದುರಿಸುತ್ತಿದ್ದೇವೆ. ಭವಿಷ್ಯವು ಒಗ್ಗೂಡಿಸುವಿಕೆ ಮತ್ತು ಸ್ಥಿತಿಸ್ಥಾಪಕತ್ವದಲ್ಲಿ ಇದೆ.
ಭಾರತದಿಂದ ಮುಂದಿನ ದೊಡ್ಡ ಆಲೋಚನೆಗಳು ಜಾಗತಿಕ ಪ್ರಸ್ತುತತೆ ಮತ್ತು ಅನ್ವಯವನ್ನು ಕಂಡುಹಿಡಿಯಬೇಕು. ಅವುಗಳು ಕೇವಲ ಭಾರತಕ್ಕೆ ಮಾತ್ರವಲ್ಲ ಇಡೀ ಮಾನವಕುಲಕ್ಕೂ ಸಕಾರಾತ್ಮಕ ಬದಲಾವಣೆಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿರಬೇಕು.
ರಸ್ತೆಗಳು, ಗೋದಾಮುಗಳು, ಬಂದರುಗಳಂತಹ- ಭೌತಿಕ ಮೂಲಸೌಕರ್ಯಗಳ ಮೂಲಕ ಮಾತ್ರ ಲಾಜಿಸ್ಟಿಕ್ಸ್ ಅನ್ನು ಹಿಂದೆ ನೋಡಲಾಗುತ್ತಿತ್ತು. ಆದರೆ ಇಂದು ಲಾಜಿಸ್ಟಿಕ್ಸ್ ತಜ್ಞರು ತಮ್ಮ ಸ್ವಂತ ಮನೆಯಿಂದಲೇ ಮೂಲಕವೇ ಜಾಗತಿಕ ಪೂರೈಕೆ ಸರಪಳಿಗಳನ್ನು ನಿಯಂತ್ರಿಸಬಹುದು.
ಕೋವಿಡ್-19 ರ ನಂತರದ ಜಗತ್ತಿನಲ್ಲಿ ಸಂಕೀರ್ಣ ಆಧುನಿಕ ಬಹುರಾಷ್ಟ್ರೀಯ ಪೂರೈಕೆ ಸರಪಳಿಗಳ ಜಾಗತಿಕ ಜಾಲದ ಕೇಂದ್ರವಾಗಿ ಭಾರತ ಹೊರಹೊಮ್ಮಬಹುದು. ನಾವು ಆ ಸಂದರ್ಭಕ್ಕೆ ಏರಿ ಈ ಅವಕಾಶವನ್ನು ಬಳಸಿಕೊಳ್ಳೋಣ.
ಈ ಬಗ್ಗೆ ಯೋಚಿಸಲು ಮತ್ತು ಇದಕ್ಕೆ ಕೊಡುಗೆ ನೀಡಲು ನಾನು ನಿಮ್ಮೆಲ್ಲರನ್ನೂ ಕೋರುತ್ತೇನೆ.
BYOD ಯಿಂದ WFH ಗೆ ಬದಲಾವಣೆಯು ಅಧಿಕೃತ ಮತ್ತು ವೈಯಕ್ತಿಕ ಸಮತೋಲನಕ್ಕೆ ಹೊಸ ಸವಾಲುಗಳನ್ನು ಒಡ್ಡುತ್ತದೆ. ಏನೇ ಆಗಲಿ, ಫಿಟ್ನೆಸ್ ಮತ್ತು ವ್ಯಾಯಾಮಕ್ಕೆ ಸಮಯವನ್ನು ಮೀಸಲಿಡಿ. ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಸುಧಾರಿಸುವ ಸಾಧನವಾಗಿ ಯೋಗವನ್ನು ಪ್ರಯತ್ನಿಸಿ.
ಭಾರತದ ಸಾಂಪ್ರದಾಯಿಕ ಔಷಧಿ ವ್ಯವಸ್ಥೆಗಳು ದೇಹವನ್ನು ಸದೃಢವಾಗಿಡಲು ಸಹಾಯ ಮಾಡುತ್ತವೆ. ಆಯುಷ್ ಸಚಿವಾಲಯವು ಆರೋಗ್ಯವಾಗಿರಲು ಸಹಾಯ ಮಾಡುವ ಶಿಷ್ಟಾವಾರವನ್ನು ಹೊರತಂದಿದೆ. ಇವುಗಳ ಬಗ್ಗೆಯೂ ಗಮನ ಕೊಡಿ.
ಕೊನೆಯದಾಗಿ, ಮತ್ತು ಪ್ರಮುಖವಾಗಿ, ದಯವಿಟ್ಟು ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ. ಇದು ಫ್ಯೂಚರಿಸ್ಟಿಕ್ ಅಪ್ಲಿಕೇಶನ್ ಆಗಿದ್ದು, ಇದು ಕೋವಿಡ್-19 ಹರಡುವಿಕೆಯನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಹೆಚ್ಚು ಡೌನ್ಲೋಡ್ಗಳದಷ್ಟೂ ಅದರ ಪರಿಣಾಮಕಾರಿತ್ವ ಹೆಚ್ಚಾಗಿರುತ್ತದೆ.
ನಿಮ್ಮಿಂದ ಅಭಿಪ್ರಾಯಗಳನ್ನು ಕೇಳಲು ಕಾಯುತ್ತಿರುವೆ. ”
(Release ID: 1616295)
Visitor Counter : 398
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam