ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಭಾರತದಲ್ಲಿ ನವೀಕರಿಸಬಹುದಾದ ಇಂಧನ (ಆರ್‌ಇ) ಸಲಕರಣೆಗಳ ಉತ್ಪಾದನಾ ಉದ್ಯಾನವನಗಳ ಸ್ಥಾಪನೆಗೆ ಎಂಎನ್‌ಆರ್‌ಇ ಪ್ರಮುಖ ಬೆಂಬಲ
Posted On:
18 APR 2020 10:55AM by PIB Bengaluru
ಭಾರತದಲ್ಲಿ ನವೀಕರಿಸಬಹುದಾದ ಇಂಧನ (ಆರ್‌ಇ) ಸಲಕರಣೆಗಳ ಉತ್ಪಾದನಾ ಉದ್ಯಾನವನಗಳ ಸ್ಥಾಪನೆಗೆ ಎಂಎನ್‌ಆರ್‌ಇ ಪ್ರಮುಖ ಬೆಂಬಲ
ಟ್ಯುಟಿಕೋರಿನ್ ಪೋರ್ಟ್ ಟ್ರಸ್ಟ್, (ತೂತುಕ್ಕುಡಿ ಬಂದರು) ಮಧ್ಯಪ್ರದೇಶ ಮತ್ತು ಒಡಿಸ್ಸಾ ಸರ್ಕಾರಗಳು ಆಸಕ್ತಿ ವ್ಯಕ್ತಪಡಿಸಿವೆ
ಚೀನಾದಿಂದ ಸ್ಥಳಾಂತರಗೊಳ್ಳುವ ಸಂಸ್ಥೆಗಳ ಹೂಡಿಕೆಗಳನ್ನು ಆಕರ್ಷಿಸುವ ಕ್ರಮಗಳನ್ನು ಆರಂಭಿಸಿದ ಸಚಿವಾಲಯ
ದೇಶೀಯ ಬಳಕೆ ಮತ್ತು ರಫ್ತಿಗಾಗಿ ಆರ್ ಇ ಉಪಕರಣಗಳ ತಯಾರಿಕೆಯನ್ನು ಉತ್ತೇಜಿಸಲು ಪ್ರಮುಖ ನೀತಿ ಬದಲಾವಣೆ
ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು (ಎಂಎನ್‌ಆರ್‌ಇ) ದೇಶದಲ್ಲಿ ನವೀಕರಿಸಬಹುದಾದ ಇಂಧನ ಸಾಧನಗಳನ್ನು ತಯಾರಿಸಲು ಹೊಸ ಕೇಂದ್ರ (ಹಬ್) ಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ದೊಡ್ಡ ಪ್ರಮಾಣದಲ್ಲಿ ಕ್ರಮ ಕೈಗೊಂಡಿದೆ. ಈ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು, ಇಂತಹ ಉದ್ಯಾನವನಗಳನ್ನು ಸ್ಥಾಪಿಸಲು 50-500 ಎಕರೆ ವಿಸ್ತೀರ್ಣದ ಭೂಮಿಯನ್ನು ಗುರುತಿಸಲು ಸಚಿವಾಲಯವು ವಿವಿಧ ರಾಜ್ಯ ಸರ್ಕಾರಗಳು ಮತ್ತು ವಿವಿಧ ಬಂದರು ಪ್ರಾಧಿಕಾರಗಳಿಗೆ ಪತ್ರ ಬರೆದಿದೆ. ಟ್ಯುಟಿಕೋರಿನ್ ಪೋರ್ಟ್ ಟ್ರಸ್ಟ್ (ತುತುಕುಡಿ ಬಂದರು), ಮಧ್ಯಪ್ರದೇಶ ಮತ್ತು ಒಡಿಶಾ ರಾಜ್ಯಗಳು ಈಗಾಗಲೇ ನವೀಕರಿಸಬಹುದಾದ ಇಂಧನ ಉತ್ಪಾದನಾ ಉದ್ಯಾನವನಗಳನ್ನು ಸ್ಥಾಪಿಸಲು ತೀವ್ರ ಆಸಕ್ತಿಯನ್ನು ವ್ಯಕ್ತಪಡಿಸಿವೆ.
ಎಂಎನ್‌ಆರ್‌ಇ ಕಾರ್ಯದರ್ಶಿಯಾದ ಶ್ರೀ ಆನಂದ್ ಕುಮಾರ್ ರವರು ಈಗಾಗಲೇ ನವೀಕರಿಸಬಹುದಾದ ಇಂಧನ ಉತ್ಪಾದನಾ ಕಂಪನಿಗಳೊಂದಿಗೆ ಕಳೆದ ವಾರ ಸಭೆ ನಡೆಸಿದ್ದಾರೆ. ಭಾರತದಲ್ಲಿನ ಈ ಭರವಸೆಯ ಅವಕಾಶದಲ್ಲಿ ಹೂಡಿಕೆ ಮಾಡಲು ಆಹ್ವಾನಿಸಿರುವ ವಿವಿಧ ದೇಶಗಳ ವಾಣಿಜ್ಯ ಆಯುಕ್ತರು / ಪ್ರತಿನಿಧಿಗಳೊಂದಿಗೆ ಸಚಿವಾಲಯವು ಸಂಪರ್ಕದಲ್ಲಿದೆ. ಮುಂದೆ, ಎಂಎನ್‌ಆರ್‌ಇ ಕಾರ್ಯದರ್ಶಿಯವರು ಈ ವಾರದ ಆರಂಭದಲ್ಲಿ ಯುಎಸ್ ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಫೋರಂ ಅನ್ನು ಉದ್ದೇಶಿಸಿ ವೆಬಿನಾರ್ ಮೂಲಕ ಮಾತನಾಡಿದರು ಮತ್ತು ಅಮೆರಿಕದ ಸಂಸ್ಥೆಗಳ ಸಹಯೋಗ ಮತ್ತು ಹೂಡಿಕೆಯನ್ನು ಕೋರಿದರು.
ಈ ಸೌಲಭ್ಯಗಳು ಸಿಲಿಕಾನ್ ಲೋಹದ ಗಟ್ಟಿ ಮತ್ತು ಬಿಲ್ಲೆಗಳು, ಸೌರ ಕೋಶಗಳು ಮತ್ತು ಮಾಡ್ಯೂಲ್ಗಳು, ಪವನ ಉಪಕರಣಗಳು ಮತ್ತು ಬ್ಯಾಕ್ ಶೀಟ್, ಗ್ಲಾಸ್, ಸ್ಟೀಲ್ ಫ್ರೇಮ್ಗಳು, ಇನ್ವರ್ಟರ್ಗಳು, ಬ್ಯಾಟರಿಗಳಂತಹ ಪೂರಕ ವಸ್ತುಗಳನ್ನು ತಯಾರಿಸುತ್ತವೆ. ಹಬ್ಗಳು ಆರ್‌ಇ ವಲಯದಲ್ಲಿ ಉಪಕರಣಗಳು ಮತ್ತು ಸೇವೆಗಳನ್ನು ರಫ್ತು ಮಾಡುತ್ತವೆ. ಪ್ರಸ್ತುತ ಸುಮಾರು 10 ಜಿ.ಡಬ್ಲ್ಯೂ ವಿಂಡ್ ಉಪಕರಣಗಳ ಉತ್ಪಾದನಾ ಸಾಮರ್ಥ್ಯ ಇದೆ. ಸೌರ ಕೋಶಗಳ ಮತ್ತು ಭಾರತ ಮಾಡ್ಯೂಲ್ಸ್ ವಿಷಯದಲ್ಲಿ ಭಾರತವು ವಿದೇಶದಿಂದ ಸುಮಾರು 85% ಆಮದು ಮಾಡಿಕೊಳ್ಳುತ್ತದೆ. ಭಾರತದಲ್ಲಿ ಸೌರ ಉತ್ಪಾದನಾ ಉದ್ಯಮವನ್ನು ರಕ್ಷಿಸಲು ಭಾರತ ಸರ್ಕಾರವು ಈಗಾಗಲೇ ಮೂಲ ಕಸ್ಟಮ್ಸ್ ಸುಂಕವನ್ನು ವಿಧಿಸಿದೆ.
ಅನೇಕ ಕಂಪನಿಗಳು ತಮ್ಮ ಉತ್ಪಾದನಾ ಸಂಸ್ಥೆಗಳನ್ನು ಚೀನಾದಿಂದ ಸ್ಥಳಾಂತರಿಸುತ್ತಿರುವ ಸಂದರ್ಭದಲ್ಲಿ, ಭಾರತದಲ್ಲಿ ಉತ್ಪಾದನೆಗೆ ಅನುಕೂಲವಾಗುವಂತೆ ಇದು ಭಾರತವು ನೀತಿ ಬದಲಾವಣೆಗಳನ್ನು ತರುವ ಸಮಯ ಎಂದು ಹೇಳಬಹುದು. ಇದರೊಂದಿಗೆ, ಎಂಎನ್‌ಆರ್‌ಇ ಈಗಾಗಲೇ ವಲಯದಲ್ಲಿ ಹೂಡಿಕೆ ಮಾಡಲು ಅನುಕೂಲವಾಗುವಂತೆ ಆರ್‌ಇ ಇಂಡಸ್ಟ್ರಿ ಫೆಸಿಲಿಟೇಶನ್ & ಪ್ರಮೋಷನ್ ಬೋರ್ಡ್ ಅನ್ನು ಸ್ಥಾಪಿಸಿದೆ. ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಲು ಸಚಿವಾಲಯವು ವಿದ್ಯುತ್ ಖರೀದಿ ಒಪ್ಪಂದಗಳಲ್ಲಿನ (ಪಿಪಿಎ) ಷರತ್ತುಗಳನ್ನು ಬಲಪಡಿಸಿದೆ. ಮೂರು ಪವರ್ ಮತ್ತು ಆರ್‌ಇ ವಲಯದ ಎನ್ಬಿಎಫ್ಸಿಗಳಾದ ಪಿಎಫ್ಸಿ, ಆರ್ಇಸಿ ಮತ್ತು ಐ ಆರ್ ಇ ಡಿ ಎ ಈ ವಲಯದಲ್ಲಿ ಹೊಸ ಯೋಜನೆಗಳಿಗೆ ಲಭ್ಯವಿರುವ ಹಣವನ್ನು ಹೆಚ್ಚಿಸಲು ತಮ್ಮ ಮರುಪಾವತಿ ಶುಲ್ಕವನ್ನು 2% ಕ್ಕೆ ಇಳಿಸಿದೆ. ಇದಲ್ಲದೆ, ಐ ಆರ್ ಇ ಡಿ ಎ ಭಾರತದಲ್ಲಿ ಹೊಸ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಉತ್ತೇಜಿಸಲು ಯೋಜನೆಗಳ ನಿರ್ದಿಷ್ಟ ನಿಧಿಗೆ ಹೊಸ ಯೋಜನೆಯನ್ನು ಹೊರತಂದಿದೆ.
***
(Release ID: 1615920)
Visitor Counter : 228