ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ಮರುಬಳಕೆ ಮಾಡಬಹುದಾದ 50,000 ಮಾಸ್ಕ್ ಗಳನ್ನು ಸರಬರಾಜು ಮಾಡಿದ ದೆಹಲಿಯ ಆರ್ ಸಿ ಡಿ

Posted On: 17 APR 2020 6:02PM by PIB Bengaluru

ಮರುಬಳಕೆ ಮಾಡಬಹುದಾದ 50,000 ಮಾಸ್ಕ್ ಗಳನ್ನು ಸರಬರಾಜು ಮಾಡಿದ ದೆಹಲಿಯ ಆರ್ ಸಿ ಡಿ

ಲಾಕ್ ಡೌನ್ ಅವಧಿಯಲ್ಲಿ ಮನೆಯಲ್ಲಿ ತಯಾರಿಸಲಾದ ಮಾಸ್ಕ್ ಗಳು

 

ಕೊವಿಡ್–19 ಬಿಕ್ಕಟ್ಟಿನ ಪ್ರಸ್ತುತ ಸಂದರ್ಭದಲ್ಲಿ, ದೇಶವಾಸಿಗಳಿಗೆ ಪರಿಹಾರ ಸಾಮಗ್ರಿಗಳನ್ನು ಒದಗಿಸಿ ಸಹಾಯಮಾಡುವಂತೆ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿರುವ ಕರೆಗೆ ಸ್ಪಂದಿಸಿ, ಭಾರತ ಸರ್ಕಾರದ ವಾರ್ತಾ ಶಾಖೆಯ ಸಹಯೋಗದೊಂದಿಗೆ ರೊಟರಿ ಕ್ಲಬ್ ಆಫ್ ಡೆಲ್ಲಿ ಹೆರಿಟೇಜ್ ಸುಮಾರು 50,000 ಮರುಬಳಕೆ ಮಾಡಬಹುದಾದ ಮಾಸ್ಕ್ ಗಳನ್ನು ಸರಬರಾಜು ಮಾಡುತ್ತಿದೆ.

https://ci3.googleusercontent.com/proxy/ZHdtLXXYmpGjYrcf3UrFGIrPzVdKG_Vq5CHLt7JUe-eN1AoL0lQHEjxKRxR3JM4-xa-Zc_9juv5CVQQ01RGZWBR3xGIDZrINPiGnuGPEMl4fxFEEwNG8=s0-d-e1-ft#https://static.pib.gov.in/WriteReadData/userfiles/image/image0017YR4.jpg

ಲಾಕ್ ಡೌನ್ ಅವಧಿಯಲ್ಲಿ ದರ್ಜಿಗಳು ತಮ್ಮ ಮನೆಯಿಂದಲೇ ಕೆಲಸ ಮಾಡಿ ಮಾಸ್ಕ್ ಗಳನ್ನು ತಯಾರಿಸಿದ್ದಾರೆ. ಪಿಐಬಿ ಪ್ರಧಾನ ಮಹಾನಿರ್ದೇಶಕರಾದ ಶ್ರೀ. ಕುಲ್ ದೀಪ್ ಸಿಂಗ್ ಧತ್ವಾಲಿಯಾ ಅವರು ಇಂದು ವಿತರಣೆ ಮಾಡಿದರು. ರೊಟರಿ ಕ್ಲಬ್ ಆಫ್ ಡೆಲ್ಲಿ ಹೆರಿಟೇಜ್ ಪರವಾಗಿ ಪಿಐಬಿ ಹೆಚ್ಚುವರಿ ಮಹಾನಿರ್ದೇಶಕರು ಶ್ರೀ. ರಾಜೀವ್ ಜೈನ್ ಅವರು ಈ ಕಾರ್ಯದ ಸಂಪೂರ್ಣ ಪ್ರಯತ್ನವನ್ನು ಸಂಘಟಿಸಿದ್ದಾರೆ.

https://ci4.googleusercontent.com/proxy/_niHWzEis1h60pugdjxgbDvBhpZYlb9iy45kaErAE4Nj5MTsS5lqKIYV8j6CIJgkAkitrWnWnZpe5L2JQOBK_T5uB_PTzzpe-Tf4vU50FqwU50FqlJvO=s0-d-e1-ft#https://static.pib.gov.in/WriteReadData/userfiles/image/image002UJT8.jpg

ಭಾರತೀಯ ಪ್ರೆಸ್ ಕ್ಲಬ್ ನ ಮಹಾ ಕಾರ್ಯದರ್ಶಿ, ಶ್ರೀ. ಆನಂದ್ ಕುಮಾರ್, ಪತ್ರಿಕಾ ಸಂಘದ ಮಹಾ ಕಾರ್ಯದರ್ಶಿ, ಶ್ರೀ ಸಿ ಕೆ ನಾಯಕ್ ಮತ್ತು ಸಿ ಐ ಎಸ್ ಎಫ್ ನ ಉಪ-ಕಮಾಂಡಂಟ್ ಶ್ರೀ. ಸಂದೀಪ್ ಮನ್ಹಾಸ್ ಅವರಿಗೆ ಇಂದು ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಈ ಮಾಸ್ಕ್ ಗಳನ್ನು ಹಸ್ತಾಂತರಿಸಲಾಯಿತು. ಮುಂದಿನ ದಿನಗಳಲ್ಲಿ ದೆಹಲಿ ಪೋಲಿಸರು, ಆರೋಗ್ಯ ಸಚಿವಾಲಯ ಮತ್ತು ಇತರ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ರೊಟರಿ ಡೆಲ್ಲಿ ಹೆರಿಟೇಜ್ ಪೂರಕವಾಗಿ ಮಾಸ್ಕ್ ಗಳ ವಿತರಣೆಗೆ ಸಹಕಾರ ನೀಡಲಿದೆ. ಗ್ರೇಟ್ ಇಂಡಿಯನ್ ಫೌಂಡೇಶನ್ ನ ಅಧ್ಯಕ್ಷರಾದ ಶ್ರೀ. ನವೀನ್ ಕುಮಾರ್ ಅವರು ಮೇಲಿನ ಮೂರು ಸಂಸ್ಥೆಗಳಿಗೆ 40,000 ಲೀಟರ್ ಗಳ ತಂಪು ಪಾನೀಯಗಳನ್ನು ವಿತರಿಸಿದರು.

***



(Release ID: 1615572) Visitor Counter : 192